For Quick Alerts
ALLOW NOTIFICATIONS  
For Daily Alerts

Digilocker Using WhatsApp: ವಾಟ್ಸಾಪ್ ಮೂಲಕ ಪ್ಯಾನ್, ಡ್ರೈವಿಂಗ್ ಲೈಸೆನ್ಸ್ ಡೌನ್‌ಲೋಡ್ ಮಾಡುವುದು ಹೇಗೆ?

|

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಭಾರತದ ನಾಗರಿಕರು ತಮ್ಮ ವಾಟ್ಸಾಪ್ ಮೂಲಕ ಡಿಜಿಲಾಕರ್‌ ಅನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಜನರು ಈಗ ತಮ್ಮ ಅಗತ್ಯ ದಾಖಲೆಗಳನ್ನು ಸುಲಭವಾಗಿ ವಾಟ್ಸಾಪ್ ಮೂಲಕವೇ ಡೌನ್‌ಲೋಡ್ ಮಾಡಬಹುದಾಗಿದೆ.

ಜನರು ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು MyGov ಸಹಾಯವಾಣಿಯ ಮೂಲಕ ತಮ್ಮ ದಾಖಲೆಯ ಡಿಜಿಟಲ್ ಪ್ರತಿಯನ್ನು ಪಡೆಯಬಹುದು. ಈಗ ಬಳಕೆದಾರರು ಪ್ಯಾನ್ ಕಾರ್ಡ್, ಡ್ರೈವರ್ ಲೈಸೆನ್ಸ್, ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ, ದ್ವಿತೀಯ ಪಿಯುಸಿ ಅಂಕಪಟ್ಟಿ, ವಾಹನದ ಆರ್‌ಸಿಯಂತಹ ಅಗತ್ಯ ದಾಖಲೆಗಳನ್ನು ವಾಟ್ಸಾಪ್ ಬಳಸಿಕೊಂಡು ಡೌನ್‌ಲೋಡ್ ಮಾಡಬಹುದು.

 ವಾಟ್ಸಾಪ್ ಫೋಟೋ, ಚಾಟ್ Backup ಮಾಡುವುದು ಹೇಗೆ? ವಾಟ್ಸಾಪ್ ಫೋಟೋ, ಚಾಟ್ Backup ಮಾಡುವುದು ಹೇಗೆ?

ವಾಟ್ಸಾಪ್ ಡಿಜಿಲಾಕರ್ ಎಂದರೇನು: ಮೂಲತಃ ಮಾರ್ಚ್ 2020 ರಲ್ಲಿ ಭಾರತ ಸರ್ಕಾರ ಕೊರೊನಾ ಹೆಲ್ಪ್ ಡೆಸ್ಕ್ ಅನ್ನು ಆರಂಭ ಮಾಡಿತು. ಈ ಹೆಲ್ಪ್ ಡೆಸ್ಕ್ ಮೂಲಕ ಕೊರೊನಾ ಸಾಂಕ್ರಾಮಿಕ ಕುರಿತಾದ ಅಗತ್ಯ ಮಾಹಿತಿ ಲಭ್ಯವಾಗುತ್ತಿತ್ತು. ಹಾಗೆಯೇ ಕೋವಿಡ್ ಲಸಿಕೆ ಬುಕ್ಕಿಂಗ್, ಲಸಿಕೆ ಪ್ರಮಾಣ ಪತ್ರಗಳ ವಿತರಣೆ, ಸಹ ಈ ಸಹಾಯವಾಣಿಯ ಮೂಲಕ ಮಾಡಲಾಯಿತು.

 ವಾಟ್ಸಾಪ್ ಮೂಲಕ ಅಗತ್ಯ ದಾಖಲೆ ಡೌನ್‌ಲೋಡ್ ಮಾಡುವುದು ಹೇಗೆ?

ಆದರೆ ಇತ್ತೀಚೆಗೆ ಇತರೆ ಮಾಹಿತಿ ಪಡೆಯಲು ಕೂಡಾ ಈ ಹೆಲ್ಪ್ ಡೆಸ್ಕ್ ಅನ್ನು ಬಳಕೆ ಮಾಡಲು ಸರ್ಕಾರ ಅನುವು ಮಾಡಿಕೊಟ್ಟಿದೆ. ವರದಿಗಳ ಪ್ರಕಾರ, ಡಿಜಿಲಾಕರ್ 5 ಬಿಲಿಯನ್ ದಾಖಲೆಗಳನ್ನು ಹೊಂದಿದೆ ಮತ್ತು 100 ಮಿಲಿಯನ್ ಜನರು ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಹಾಗಾದರೆ ವಾಟ್ಸಾಪ್ ಬಳಸಿ ಅಗತ್ಯ ದಾಖಲೆ ಡೌನ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ...

ವಾಟ್ಸಾಪ್ ಮೂಲಕ ದಾಖಲೆ ಡೌನ್‌ಲೋಡ್ ಹೇಗೆ?

* ನಾಗರಿಕರಿಗೆ ಅಗತ್ಯ ದಾಖಲೆ ಪಡೆಯಲು ಸುಲಭವಾಗಿಸುವ ನಿಟ್ಟಿನಲ್ಲಿ ವಾಟ್ಸಾಪ್‌ನಲ್ಲಿ ಸರ್ಕಾರವು ಚಾಟ್‌ಬಾಟ್ ಅನ್ನು ಸಕ್ರಿಯಗೊಳಿಸಿದೆ
* ಮೊದಲು 91-9013151515 ಗೆ ಹೊಸ ಸಂದೇಶವನ್ನು ಕಳುಹಿಸಬೇಕು
* Namastey'/ 'Hi'/ 'Digilocker ಎಂದು ಟೈಪ್ ಮಾಡಿ ಸೆಂಡ್ ಮಾಡಬೇಕು
* ನೀವು ಈಗ ಬಾಟ್‌ನೊಂದಿಗೆ ಚಾಟ್ ಮಾಡಲು ಅವಕಾಶ ಲಭ್ಯವಾಗಲಿದೆ
* ಬಾಟ್‌ನೊಂದಿಗೆ ಚಾಟ್ ಮಾಡಿ ಡಿಜಿಲಾಕರ್‌ನಿಂದ ಅಗತ್ಯ ದಾಖಲೆಯನ್ನು ಪಡೆದುಕೊಳ್ಳಬಹುದು.

English summary

How To Download PAN Card, Driving License and Other Documents Via WhatsApp

How To Download PAN Card, Driving License and Other Documents Via WhatsApp, Here's a details Read on..
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X