For Quick Alerts
ALLOW NOTIFICATIONS  
For Daily Alerts

ಇಪಿಎಫ್ ಸಂಬಂಧಿತ ಸಮಸ್ಯೆ ಬಗ್ಗೆ ಆನ್‌ಲೈನ್ ಮೂಲಕ ದೂರು ಹೇಗೆ ನೀಡುವುದು?

|

ನಾವು ನಮ್ಮ ಮುಂದಿನ ಜೀವನಕ್ಕಾಗಿ ಅಥವಾ ಯಾವುದೇ ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಹಣವನ್ನು ಉಳಿತಾಯ ಮಾಡುವುದು ಅಗತ್ಯವಾಗಿದೆ. ಈ ಉಳಿತಾಯಕ್ಕೆ ಪ್ರಾವಿಡೆಂಟ್ ಫಂಡ್ ಸಹಕಾರಿಯಾಗಿದೆ. ಪಿಎಫ್‌ನಲ್ಲಿ ಹೂಡಿಕೆ ಮಾಡುವ ಮೂಲಕ ನಾವು ಬಡ್ಡಿದರವನ್ನು ಕೂಡಾ ಪಡೆಯಲು ಸಾಧ್ಯವಾಗುತ್ತದೆ. ಆದರೆ ಪಿಎಫ್‌ ಸಂಬಂಧಿತ ಸಮಸ್ಯೆ ಉಂಟಾದಾಗ ಏನು ಮಾಡುವುದು ಎಂಬುವುದು ಹಲವಾರು ಮಂದಿಗೆ ತಿಳಿದಿಲ್ಲ.

ಪಿಎಫ್ ಸಂಬಂಧಿತ ಯಾವುದೇ ಸಮಸ್ಯೆ ಉಂಟಾದಾಗ ಸಾಮಾನ್ಯವಾಗಿ ಪಿಎಫ್‌ನ ಕಾರ್ಯಗಳನ್ನು ಮಾಡು ಸೈಬರ್‌ಗೆ ಹೋಗಿ ತಿಳಿಸಿ ಅಲ್ಲಿನ ಸಿಬ್ಬಂದಿಗಳ ಸಹಾಯದಿಂದ ಸಮಸ್ಯೆಯನ್ನು ಬಗೆಹರಿಸಲು ನೋಡುತ್ತೇವೆ. ಹಾಗೆಯೇ ಟ್ರೇಡ್ ಯೂನಿಯನ್ ಸದಸ್ಯರ ಸಹಾಯವನ್ನು ಕೂಡಾ ಪಡೆಯುತ್ತೇವೆ. ಆದರೆ ನಾವು ಇದನ್ನು ಹೊರತುಪಡಿಸಿ ಆನ್‌ಲೈನ್ ಮೂಲಕವೂ ಪಿಎಫ್ ಸಮಸ್ಯೆಯ ಬಗ್ಗೆ ದೂರು ನೀಡಬಹುದು. ಅದಕ್ಕಾಗಿ ಇಪಿಎಫ್‌ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ ಇದೆ.

ಪಿಎಫ್ ಹಣ ಆನ್‌ಲೈನ್, ಆಫ್‌ಲೈನ್‌ನಲ್ಲಿ ವಿತ್‌ಡ್ರಾ ಮಾಡುವುದು ಹೇಗೆ?ಪಿಎಫ್ ಹಣ ಆನ್‌ಲೈನ್, ಆಫ್‌ಲೈನ್‌ನಲ್ಲಿ ವಿತ್‌ಡ್ರಾ ಮಾಡುವುದು ಹೇಗೆ?

ಇಪಿಎಫ್‌ಒ ಅಧಿಕೃತ ವೆಬ್‌ಸೈಟ್ ಮೂಲಕ ಪಿಎಫ್ ಸಂಬಂಧಿತ ಕಾರ್ಯವನ್ನು ಮಾಡಲು ಸಾಧ್ಯವಾಗುತ್ತದೆ. ಅದರ ಮೂಲಕವೇ ನಾವು ದೂರನ್ನು ನೀಡಲು ಕೂಡಾ ಸಾಧ್ಯವಾಗುತ್ತದೆ. ಹಾಗಾದರೆ ಆನ್‌ಲೈನ್ ಮೂಲಕ ಹೇಗೆ ದೂರು ನೀಡುವುದು ಎಂಬುವುದನ್ನು ನಾವಿಲ್ಲಿ ತಿಳಿಯೋಣ ಮುಂದೆ ಓದಿ....

 ಇಪಿಎಫ್‌ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ ಎಂದರೇನು?

ಇಪಿಎಫ್‌ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ ಎಂದರೇನು?

ಇಪಿಎಫ್ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ (EPF Grievance Management System), ಇಪಿಎಫ್‌ಒದ ಅಧಿಕೃತ ಪೋರ್ಟಲ್ ಆಗಿದೆ. ಇಪಿಎಫ್‌ಒ ಒದಗಿಸುವ ಸೇವೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳು ಮತ್ತು ದೂರುಗಳನ್ನು ಪರಿಹರಿಸುವುದು ಇದರ ಮುಖ್ಯ ಕೆಲಸವಾಗಿದೆ. ದೇಶದಲ್ಲಿ ಎಲ್ಲಿ ಬೇಕಾದರೂ ದೂರುಗಳನ್ನು ಸಲ್ಲಿಸಬಹುದು. ಅದು ಸಂಬಂಧಪಟ್ಟ ಕಚೇರಿಗೆ ಸಲ್ಲಿಕೆಯಾಗುತ್ತದೆ. ದೂರುಗಳನ್ನು ನೇರವಾಗಿ ಪ್ರಧಾನ ಕಛೇರಿ ಅಥವಾ ದೇಶಾದ್ಯಂತ ಇರುವ 135 ಕ್ಷೇತ್ರ ಕಚೇರಿಗಳಿಗೆ ಸಲ್ಲಿಸಬಹುದು.

 ಇಪಿಎಫ್ ಕುಂದುಕೊರತೆ ನಿರ್ವಹಣಾ ವ್ಯವಸ್ಥೆಯ ಫೀಚರ್

ಇಪಿಎಫ್ ಕುಂದುಕೊರತೆ ನಿರ್ವಹಣಾ ವ್ಯವಸ್ಥೆಯ ಫೀಚರ್

* ದೂರು ಅಥವಾ ಕುಂದುಕೊರತೆಗಳನ್ನು ಪಿಎಫ್ ಸದಸ್ಯರು, ಇಪಿಎಸ್ ಪಿಂಚಣಿದಾರರು, ಉದ್ಯೋಗದಾತರು ಸಲ್ಲಿಕೆ ಮಾಡಬಹುದು
* ರಿಮೈಂಡರ್ ಅನ್ನು ಸೆಂಡ್ ಮಾಡುವ ಆಯ್ಕೆ ಇದೆ
* ದೂರು ನೀಡಿದ ಬಳಿಕ ಸ್ಟೇಟಸ್ ಅನ್ನು ಚೆಕ್ ಮಾಡಬಹುದು
* ಫೀಡ್‌ಬ್ಯಾಕ್ ಅನ್ನು ಕೂಡಾ ನೀಡಬಹುದು
* ಸಮಸ್ಯೆಗೆ ಸಂಬಂಧಿತ ದಾಖಲೆಗಳನ್ನು ಕೂಡಾ ಸಲ್ಲಿಕೆ ಮಾಡಬೇಕು
* ಉಮಾಂಗ್ ಆಪ್ ಮೂಲಕವೂ ಈ ಸೇವೆಯನ್ನು ಪಡೆಯಬಹುದು

 

 

 ದೂರು ಸಲ್ಲಿಕೆ ಮಾಡುವುದು ಹೇಗೆ?
 

ದೂರು ಸಲ್ಲಿಕೆ ಮಾಡುವುದು ಹೇಗೆ?

ಹಂತ 1: ಅಧಿಕೃತ ವೆಬ್‌ಸೈಟ್‌ https://epfigms.gov.in/ ಗೆ ಭೇಟಿ ನೀಡಿ
ಹಂತ 2: register grievance ಅನ್ನು ಕ್ಲಿಕ್ ಮಾಡಿ
ಹಂತ 3: PF member, EPF pensioner ಮೊದಲಾದ ಸ್ಟೇಟಸ್ ಆಯ್ಕೆ ಮಾಡಿಕೊಳ್ಳಿ
ಹಂತ 4: ಯುಎಎನ್ ಪಾಸ್‌ವರ್ಡ್, ಸೆಕ್ಯೂರಿಟಿ ಕೋಡ್ ಅನ್ನು ನಮೂದಿಸಿ
ಹಂತ 5: Get Details ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಮಾಹಿತಿ ಲಭ್ಯವಾಗಲಿದೆ
ಹಂತ 6: Get OTP ಮೇಲೆ ಕ್ಲಿಕ್ ಮಾಡಿ, ಇಮೇಲ್ ಅಥವಾ ಮೊಬೈಲ್‌ಗೆ ಬಂದ ಒಟಿಪಿ ನಮೂದಿಸಿ submit ಕ್ಲಿಕ್ ಮಾಡಿ
ಹಂತ 7: ನಿಮ್ಮ ವೈಯಕ್ತಿಕ ದಾಖಲೆ ನಮೂದಿಸಿ ಪಿಎಫ್ ಖಾತೆ ಸಂಖ್ಯೆಯನ್ನು ಆಯ್ಕೆ ಮಾಡಿ
ಹಂತ 8: ಸಮಸ್ಯೆಯ ಕ್ಯಾಟಗರಿ ಆಯ್ಕೆ ಮಾಡಿ, ಸಮಸ್ಯೆ ಬಗ್ಗೆ ವಿವರಣೆ ನೀಡಿ
ಹಂತ 9: ದಾಖಲೆಗಳನ್ನು ಅಪ್‌ಲೋಡ್ ಮಾಡಿ, submit ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣ

 

 

 ದೂರಿನ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?

ದೂರಿನ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?

ಹಂತ 1: ಅಧಿಕೃತ ವೆಬ್‌ಸೈಟ್‌ https://epfigms.gov.in/ ಗೆ ಭೇಟಿ ನೀಡಿ
ಹಂತ 2: View Status ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 3: ರಿಜಿಸ್ಟ್ರೇಷನ್ ಸಂಖ್ಯೆಯನ್ನು ನಮೂದಿಸಿ
ಹಂತ 4: ಪಾಸ್‌ವರ್ಡ್ ಅಥವಾ ಮೊಬೈಲ್ ಸಂಖ್ಯೆ/ಇಮೇಲ್ ಐಡಿ ನಮೂದಿಸಿ
ಹಂತ 5: ಸೆಕ್ಯೂರಿಟಿ ಕೋಡ್ ಅನ್ನು ನಮೂದಿಸಿ
ಹಂತ 6: submit ಕ್ಲಿಕ್ ಮಾಡಿದರೆ ಸ್ಟೇಟಸ್ ಲಭ್ಯವಾಗಲಿದೆ

 

 

 ದೂರಿನ ಬಗ್ಗೆ ರಿಮೈಂಡರ್ ಸಲ್ಲಿಸುವುದು ಹೇಗೆ?

ದೂರಿನ ಬಗ್ಗೆ ರಿಮೈಂಡರ್ ಸಲ್ಲಿಸುವುದು ಹೇಗೆ?

ನಾವು ಯಾವುದೇ ಕಾರ್ಯವನ್ನು ಮಾಡುವುದನ್ನು ಮರೆತರೆ ಅದನ್ನು ನೆನಪಿಸಿಕೊಳ್ಳಲು ಅಲರಾಂ ಇಟ್ಟುಕೊಳ್ಳುವುದು ಅಥವಾ ಬೇರೆ ಯಾರಲ್ಲಾದರೂ ನೆನಪು ಮಾಡುವಂತೆ ಹೇಳುವುದು ಸಾಮಾನ್ಯವಾಗಿದೆ. ಇಪಿಎಫ್ ದೂರಿನಲ್ಲಿಯೂ ಇದೇ ಆಯ್ಕೆ ಇದೆ. ನೀವು ಸಲ್ಲಿಸಿ ದೂರಿಗೆ ಯಾವುದೇ ಪ್ರತಿಕ್ರಿಯೆ ಇಲ್ಲವಾದರೆ ಅಥವಾ ಸಮಸ್ಯೆ ಬಗೆಹರಿಸದಿದ್ದರೆ ನೀವು 30 ದಿನಗಳ ಬಳಿಕ ರಿಮೈಂಡರ್ ಅನ್ನು ಸಲ್ಲಿಕೆ ಮಾಡುವ ಆಯ್ಕೆ ಇದೆ.

ಹಂತ 1: ಅಧಿಕೃತ ವೆಬ್‌ಸೈಟ್‌ https://epfigms.gov.in/ ಗೆ ಭೇಟಿ ನೀಡಿ
ಹಂತ 2: reminder ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 3: ರಿಜಿಸ್ಟ್ರೇಷನ್ ಸಂಖ್ಯೆಯನ್ನು ನಮೂದಿಸಿ
ಹಂತ 4: ಪಾಸ್‌ವರ್ಡ್ ಅಥವಾ ಮೊಬೈಲ್ ಸಂಖ್ಯೆ/ಇಮೇಲ್ ಐಡಿ ನಮೂದಿಸಿ
ಹಂತ 5: ಸೆಕ್ಯೂರಿಟಿ ಕೋಡ್ ಅನ್ನು ನಮೂದಿಸಿ
ಹಂತ 6: submit ಕ್ಲಿಕ್ ಮಾಡಿದರೆ ರಿಮೈಂಡರ್ ಸಲ್ಲಿಕೆಯಾಗಲಿದೆ

 

ಹೊಸ ಕೆಲಸಕ್ಕೆ ಸೇರಿದಾಗ ಪಿಎಫ್ ಖಾತೆ ವರ್ಗಾಯಿಸದೇ ಇದ್ದರೆ ಏನಾಗುತ್ತದೆ?ಹೊಸ ಕೆಲಸಕ್ಕೆ ಸೇರಿದಾಗ ಪಿಎಫ್ ಖಾತೆ ವರ್ಗಾಯಿಸದೇ ಇದ್ದರೆ ಏನಾಗುತ್ತದೆ?

English summary

How to File a Complaint for EPF Related Problem Through Online, Here's Details in Kannada

The members of the employees provident fund organisation (EPFO) have EPF i grievance management system provided by EPFO to register their complaints.
Story first published: Wednesday, October 26, 2022, 16:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X