For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಡೆಬಿಟ್‌ ಕಾರ್ಡ್‌ ಮೂಲಕ ಇಎಂಐ ಸೌಲಭ್ಯ ಪಡೆಯುವುದು ಹೇಗೆ?

|

ನಿಮ್ಮ ಬಳಿ ಕ್ರೆಡಿಟ್‌ ಕಾರ್ಡ್ ಇಲ್ಲವೇ? ಯಾವುದಾದರು ವಸ್ತು, ಸೇವೆ ಪಡೆಯಲು ಇಎಂಐ ಮೂಲಕ ಪಾವತಿ ಸಾಧ್ಯವಾಗುತ್ತಿಲ್ಲವೇ? ಚಿಂತಿಸಬೇಡಿ ನಿಮ್ಮ ಎಸ್‌ಬಿಐ ಡೆಬಿಟ್ ಕಾರ್ಡ್‌ನಲ್ಲಿ ನೀವು ಇನ್ನು ಇಎಂಐ ಸೌಲಭ್ಯವನ್ನು ಪಡೆಯಬಹುದು.

ಹೌದು ಆನ್‌ಲೈನ್ ಶಾಪಿಂಗ್ ಅನ್ನು ಹೆಚ್ಚು ಅನುಕೂಲಕರವಾಗಿಸಲು ಪ್ರಮುಖ ಬ್ಯಾಂಕುಗಳು ಡೆಬಿಟ್ ಕಾರ್ಡ್‌ಗಳಲ್ಲಿಯೂ ಇಎಂಐ ಸೌಲಭ್ಯವನ್ನು ನೀಡುತ್ತಿವೆ. ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್‌ಗಳ ಸಹಭಾಗಿತ್ವದಲ್ಲಿ ಈ ಹೊಸ ವೈಶಿಷ್ಟ್ಯವನ್ನು ಎಸ್‌ಬಿಐ ಹೊರತಂದಿದೆ. ಈ ಸೇವೆಯು ಮೊದಲೇ ಆರಿಸಿಕೊಂಡಿದ್ದ ಗ್ರಾಹಕರಿಗೆ ಮಾತ್ರ ಲಭ್ಯವಿದೆ.

ಬ್ಯಾಂಕ್ ಬ್ಯಾಲೆನ್ಸ್‌ ಇಲ್ಲದಿದ್ರೂ ಖರೀದಿಸುವ ಅವಕಾಶ

ಬ್ಯಾಂಕ್ ಬ್ಯಾಲೆನ್ಸ್‌ ಇಲ್ಲದಿದ್ರೂ ಖರೀದಿಸುವ ಅವಕಾಶ

ಹೌದು, ಎಸ್‌ಬಿಐ ಡೆಬಿಟ್‌ ಕಾರ್ಡ್‌ ಇಎಂಐ ಬಳಕೆದಾರರು ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಲೆಕ್ಕಿಸದೆ ಏನು ಬೇಕಾದರೂ ಖರೀದಿಸಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಗ್ರಾಹಕರು ಏನನ್ನಾದ್ರೂ ಖರೀದಿಸಲು ಬಯಸಿದರೂ, ಸಾಕಷ್ಟು ಹಣವಿಲ್ಲದಿದ್ದಾಗ, ಸುಲಭವಾದ ಕಂತುಗಳಲ್ಲಿ ನಂತರ ಪಾವತಿಸುವ ಆಯ್ಕೆಯನ್ನು ನೀಡುತ್ತದೆ.

ಯಾವೆಲ್ಲಾ ವೆಬ್‌ಸೈಟ್‌ಗಳಲ್ಲಿ ಖರೀದಿಸಬಹುದು?

ಯಾವೆಲ್ಲಾ ವೆಬ್‌ಸೈಟ್‌ಗಳಲ್ಲಿ ಖರೀದಿಸಬಹುದು?

ಪಿಒಎಸ್ ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ (ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್) ಎಸ್‌ಬಿಐ ಡೆಬಿಟ್ ಕಾರ್ಡ್ ಬಳಸಿ ನಿಮ್ಮ ವ್ಯವಹಾರಗಳನ್ನು ನೀವು ಸುಲಭವಾಗಿ ಇಎಂಐಗಳಾಗಿ ಪರಿವರ್ತಿಸಬಹುದು. ಮಾಸಿಕ ಪಾವತಿ 8,000 ರೂಪಾಯಿಗಳವರೆಗೆ ಇಎಂಐ ಆಯ್ಕೆಯನ್ನು ನೀಡುತ್ತದೆ.

ಡೆಬಿಟ್‌ ಕಾರ್ಡ್‌ ಇಎಂಐ ಅರ್ಹತೆ ಪರಿಶೀಲನೆ

ಡೆಬಿಟ್‌ ಕಾರ್ಡ್‌ ಇಎಂಐ ಅರ್ಹತೆ ಪರಿಶೀಲನೆ

* ಈ ವೆಬ್‌ಸೈಟ್‌ಗೆ ಭೇಟಿ ನೀಡಿ: https://onlineapply.sbi.co.in/personal-banking/sbi-flipkart
* ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಅಕೌಂಟ್‌ ನಂಬರ್ ನಮೂದಿಸಿ
* ಚೆಕ್‌ ಎಲಿಜಿಬಿಲಿಟಿ ಮೇಲೆ ಕ್ಲಿಕ್ ಮಾಡಿ

ಎಸ್‌ಎಂಎಸ್‌ನೊಂದಿಗೆ ಡೆಬಿಟ್‌ ಕಾರ್ಡ್‌ ಅರ್ಹತೆಯನ್ನು ಪರಿಶೀಲಿಸುವುದು ಹೇಗೆ?
* ಮೊದಲು DCEMI ಎಂದು ಟೈಪ್ ಮಾಡಿ
* 57575 ನಂಬರ್‌ಗೆ ಎಸ್‌ಎಂಎಸ್‌ ಕಳುಹಿಸಿ
* ನಿಮ್ಮ ಡೆಬಿಟ್‌ ಕಾರ್ಡ್‌ ಅರ್ಹತೆಯನ್ನು ಎಸ್‌ಎಂಎಸ್‌ ಮೂಲಕ ತಿಳಿಸಲಾಗುತ್ತದೆ

 

ಎಸ್‌ಬಿಐ ಡೆಬಿಟ್‌ ಕಾರ್ಡ್‌ ಇಎಂಐ ಇತರೆ ಸೌಲಭ್ಯಗಳು

ಎಸ್‌ಬಿಐ ಡೆಬಿಟ್‌ ಕಾರ್ಡ್‌ ಇಎಂಐ ಇತರೆ ಸೌಲಭ್ಯಗಳು

* 1 ಲಕ್ಷ ರೂಪಾಯಿವರೆಗೆ ಸಾಲ ನೀಡುವುದು
* 6/9/12/18 ತಿಂಗಳುಗಳಿಗೆ ಅನ್ವಯವಾಗುವಂತೆ ಬಡ್ಡಿದರ
* ಅನ್ವಯವಾಗುವ ಬಡ್ಡಿ ದರ: 2-ವರ್ಷ ಎಂಸಿಎಲ್ಆರ್ + 7.50%
* ಹೆಚ್ಚಿನ ಗ್ರಾಹಕ ಬಾಳಿಕೆ ಬರುವ ಉತ್ಪನ್ನಗಳು ಮೇಲೆ ಇಎಂಐ ಲಭ್ಯವಿದ್ದು, ಪ್ರೊಸೆಸಿಂಗ್ ಶುಲ್ಕವಿಲ್ಲ.
* ಮುಂಚಿತವಾಗಿ ಪಾವತಿಸಿದ ಮೊತ್ತದ 3% ಪೂರ್ವಪಾವತಿ ದಂಡ.
* ನಿಗದಿತ ಮಿತಿಯೊಳಗೆ, ಆನ್‌ಲೈನ್ ಇಎಂಐ ಮತ್ತು ಡಿಸಿ ಇಎಂಐ ಅಥವಾ ಎರಡರ ನಡುವೆ ಆಯ್ಕೆಮಾಡಿ.

English summary

How To Get EMI Facility On Your SBI Debit Card? Details Here

Here the details of how to get EMI facility on your SBI Debit card. complete details here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X