For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಲಿಮಿಟ್ ಹೆಚ್ಚಿಸುವುದು ಹೇಗೆ? ಅನುಕೂಲ ಹಾಗೂ ಅಪಾಯಗಳೇನು?

By ಸುಶಾಂತ ಕಾಳಗಿ
|

ವ್ಯಕ್ತಿಯೊಬ್ಬ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಬೇಕಾದರೆ ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವುದು ಬಹಳೇ ಅಗತ್ಯ. ಪಡೆದ ಸಾಲದ ಹಣವನ್ನು ಸದುಪಯೋಗಪಡಿಸಿಕೊಂಡಿದ್ದು, ಸಮಯಕ್ಕೆ ಸರಿಯಾಗಿ ಕಂತು ಪಾವತಿಸಿದ್ದು ಹೀಗೆ ಹಲವಾರು ಮಾಹಿತಿಗಳು ಈ ಕ್ರೆಡಿಟ್ ಸ್ಕೋರ್‌ನಲ್ಲಿ ಇರುತ್ತವೆ.

ಕ್ರೆಡಿಟ್ ಸ್ಕೋರ್ ಹೆಚ್ಚು ಇದ್ದಷ್ಟೂ ನಿಮಗೆ ಸಾಲ ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತವೆ ಹಾಗೂ ಬಡ್ಡಿದರವೂ ಕಡಿಮೆ ಇರುತ್ತದೆ. ಹೀಗಾಗಿ ಕ್ರೆಡಿಟ್ ಸ್ಕೋರ್ ಚೆನ್ನಾಗಿಟ್ಟುಕೊಳ್ಳಲು ನೀವು ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು. ಅಂಥ ಕೆಲ ಉಪಯುಕ್ತ ಕ್ರಮಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಕ್ರೆಡಿಟ್ ಸ್ಕೋರ್ ಪರಿಶೀಲಿಸಿ ಹಾಗೂ ಸರಿಪಡಿಸಿ: ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸುವ ಮೂಲಕ ಕ್ರೆಡಿಟ್ ರಿಪೋರ್ಟ್‌ನಲ್ಲಿ ಇರಬಹುದಾದ ನ್ಯೂನತೆಗಳನ್ನು ಪರಿಹರಿಸಲು ಪ್ರಯತ್ನಿಸಬಹುದು. ಕ್ರೆಡಿಟ್ ಕಾರ್ಡ್ ಲಿಮಿಟ್ ನಿರ್ಧರಿಸುವುದು ಸೇರಿದಂತೆ ಯಾವುದೇ ಸಾಲ ನೀಡಬೇಕಾದರೆ ಎಷ್ಟು ಸಾಲ ನೀಡಬಹುದು ಎಂಬುದನ್ನು ಇದೇ ಕ್ರೆಡಿಟ್ ರಿಪೋರ್ಟ್ ಆಧರಿಸಿ ಹಣಕಾಸು ಸಂಸ್ಥೆಗಳು ನಿರ್ಧರಿಸುತ್ತವೆ.

ನಿಮ್ಮ ಎಲ್ಲ ಬಿಲ್‌ಗಳು ಹಾಗೂ ಇಎಂಐ ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವಂತೆ ಜಾಗ್ರತೆ ವಹಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಖರ್ಚುಗಳನ್ನು ಮಿತಿಯಲ್ಲಿಟ್ಟುಕೊಂಡರೆ ಹಣಕಾಸು ಸ್ಥಿತಿ ಸಹಜವಾಗಿಯೇ ಉತ್ತಮವಾಗಿರುತ್ತದೆ.

ಸಮಯಕ್ಕೆ ಸರಿಯಾಗಿ ಬಾಕಿ ಪಾವತಿಸಿ

ಸಮಯಕ್ಕೆ ಸರಿಯಾಗಿ ಬಾಕಿ ಪಾವತಿಸಿ

ಸಮಯಕ್ಕೆ ಸರಿಯಾಗಿ ಬಾಕಿ ಪಾವತಿಸುವುದು ಕ್ರೆಡಿಟ್ ಸ್ಕೋರ್ ಉತ್ತಮವಾಗಿಟ್ಟುಕೊಳ್ಳುವ ಉತ್ತಮ ಮಾರ್ಗವಾಗಿದೆ. ಕ್ರೆಡಿಟ್ ಕಾರ್ಡಿನ ಸಂಪೂರ್ಣ ಬಾಕಿಯನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದರಿಂದ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತದೆ. ಇದರಿಂದ ಬ್ಯಾಂಕುಗಳು ನಿಮ್ಮನ್ನು ಓರ್ವ ಜವಾಬ್ದಾರಿಯುತ ವ್ಯಕ್ತಿಯಾಗಿ ಪರಿಗಣಿಸುತ್ತವೆ ಹಾಗೂ ಅಧಿಕ ಮೊತ್ತದ ಸಾಲ ನೀಡಲು ಮುಂದಾಗುತ್ತವೆ. ಒಟ್ಟಾರೆಯಾಗಿ ಹೊಸ ಸಾಲ ಪಡೆಯುವ ಮುಂಚೆ ಹಳೆಯ ಸಾಲಗಳನ್ನು ತೀರಿಸುವುದು ಸೂಕ್ತ.

ಹೊಸ ಆದಾಯ ದಾಖಲೆ ನೀಡಿ

ಹೊಸ ಆದಾಯ ದಾಖಲೆ ನೀಡಿ

ಕ್ರೆಡಿಟ್ ಕಾರ್ಡ್ ನೀಡಿದ ಬ್ಯಾಂಕಿಗೆ ನಿಮ್ಮ ಇತ್ತೀಚಿನ ಆದಾಯ ದೃಢೀಕರಿಸುವ ದಾಖಲೆಯನ್ನು ನೀಡಿ ಹಾಗೂ ಲಿಮಿಟ್ ಹೆಚ್ಚಿಸುವಂತೆ ಮನವಿ ಸಲ್ಲಿಸಿ. ನಿಮ್ಮ ಗಳಿಕೆಯ ಸಾಮರ್ಥ್ಯ ಹಾಗೂ ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸುವ ಸಾಮರ್ಥ್ಯ ಈ ಎರಡು ಅಂಶಗಳನ್ನು ಹಣಕಾಸು ಸಂಸ್ಥೆಗಳ ಬಹುಮುಖ್ಯವಾಗಿ ನೋಡುತ್ತವೆ. ಹೀಗಾಗಿ ನಿಮ್ಮ ಸಂಬಳ ಹೆಚ್ಚಾಗಿದ್ದರೆ ಅದನ್ನು ಕ್ರೆಡಿಟ್ ಕಾರ್ಡ್ ಕಂಪನಿಗೆ ತಿಳಿಸಿ ಕ್ರೆಡಿಟ್ ಲಿಮಿಟ್ ಹೆಚ್ಚಿಸುವಂತೆ ಕೇಳಬಹುದು.

ಸಾಲದ ಹಣದ ಸದುಪಯೋಗ

ಸಾಲದ ಹಣದ ಸದುಪಯೋಗ

ನಿಮಗೆ ಎಷ್ಟು ಕ್ರೆಡಿಟ್ ಲಿಮಿಟ್ ನೀಡಲಾಗಿದೆ ಹಾಗೂ ಅದರಲ್ಲಿ ನೀವು ಎಷ್ಟನ್ನು ಉಪಯೋಗಿಸಿರುವಿರಿ ಎಂಬುದರ ಮೇಲೆ ಇದು ನಿರ್ಧರಿಸಲ್ಪಡುತ್ತದೆ. ನೀವು ಪ್ರಸ್ತುತ ಎಷ್ಟು ಸಾಲ ಹೊಂದಿದ್ದೀರಿ ಹಾಗೂ ಇನ್ನೆಷ್ಟು ಪ್ರತಿಶತ ಸಾಲ ನೀಡಬಹುದು ಎಂಬುದು ಸಹ ಇದರಿಂದಲೇ ನಿರ್ಧರಿಸಲ್ಪಡುತ್ತದೆ.

ಕ್ರೆಡಿಟ್ ಯುಟಿಲೈಸೇಶನ್ ಅನುಪಾತವು ನಿಮಗೆ ನೀಡಲಾದ ಗರಿಷ್ಠ ಮೊತ್ತಕ್ಕೆ ಹೋಲಿಸಿದರೆ ನೀವು ಎಷ್ಟು ಕ್ರೆಡಿಟ್ ಮಿತಿಯನ್ನು ಬಳಸುತ್ತಿರುವಿರಿ ಎಂಬುದರ ಅಳತೆಯಾಗಿದೆ. ಈ ಅನುಪಾತವನ್ನು ಶೇಕಡಾ 30 ಕ್ಕಿಂತ ಕಡಿಮೆ ಅಥವಾ ಅದಕ್ಕೆ ಸಮಾನಾಂತರವಾಗಿ ನಿರ್ವಹಿಸಬೇಕೆಂದು ತಜ್ಞರು ಶಿಫಾರಸು ಮಾಡುತ್ತಾರೆ.

ಕ್ರೆಡಿಟ್ ಲಿಮಿಟ್ ಹೆಚ್ಚಳದ ಪ್ರಯೋಜನಗಳು

ಕ್ರೆಡಿಟ್ ಲಿಮಿಟ್ ಹೆಚ್ಚಳದ ಪ್ರಯೋಜನಗಳು

ಕ್ರೆಡಿಟ್ ಸ್ಕೋರ್‌ಗಳ ಬಗ್ಗೆ ನೀವು ಹೆಚ್ಚು ತಿಳಿದುಕೊಂಡಷ್ಟು ಅದನ್ನು ಹೆಚ್ಚು ಸುಧಾರಿಸಬಹುದು.

ಕ್ರೆಡಿಟ್ ಲಿಮಿಟ್ ಹೆಚ್ಚಳದ 4 ಪ್ರಯೋಜನಗಳು:

1. ನೀವು ಬಳಸುವ ಕ್ರೆಡಿಟ್ ಮೊತ್ತ ಕಡಿಮೆಯಾಗುತ್ತದೆ.

2. ಸಾಲಗಳು ಕಡಿಮೆ ವೆಚ್ಚದಾಯಕವಾಗುತ್ತವೆ ಮತ್ತು ಸುಲಭವಾಗಿ ಸಿಗುತ್ತವೆ.

3. ತುರ್ತು ಪರಿಸ್ಥಿತಿಯಲ್ಲಿ ಹೆಚ್ಚಾದ ಕ್ರೆಡಿಟ್ ಲಿಮಿಟ್ ಉಪಯೋಗಕ್ಕೆ ಬರುತ್ತದೆ.

4. ದೊಡ್ಡ ಮೊತ್ತದ ವಹಿವಾಟುಗಳನ್ನು ಶೀಘ್ರವಾಗಿ ಮಾಡಲು ಸಾಧ್ಯವಾಗುತ್ತದೆ.

ಕ್ರೆಡಿಟ್ ಲಿಮಿಟ್ ಹೆಚ್ಚಳದ ಅಪಾಯಗಳು

ಕ್ರೆಡಿಟ್ ಲಿಮಿಟ್ ಹೆಚ್ಚಳದ ಅಪಾಯಗಳು

ನಿಮ್ಮ ಕ್ರೆಡಿಟ್ ಲಿಮಿಟ್ ಹೆಚ್ಚಿಸುವುದು ಸಹ ಅದರದೇ ಆದ ನ್ಯೂನತೆಗಳನ್ನು ಹೊಂದಿದೆ. ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದು ಗೊತ್ತಿರಲಿ. ನಿಮ್ಮ ಸಾಲದ ಮೊತ್ತ ಹೆಚ್ಚಾದಂತೆ ಪಾವತಿಸುವ ಬಡ್ಡಿಯೂ ಜಾಸ್ತಿಯಾಗುತ್ತದೆ. ಹೆಚ್ಚಿನ ಕ್ರೆಡಿಟ್ ಲಿಮಿಟ್ ನಿಮ್ಮಲ್ಲಿ ಸುಳ್ಳು ಸುಳ್ಳೇ ಒಂದು ರೀತಿಯ ಭದ್ರತೆಯ ಭಾವನೆಯನ್ನು ಮೂಡಿಸಬಹುದು. ಈ ಮೂಲಕ ನೀವು ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಿ ಅಪಾಯಕ್ಕೆ ಸಿಲುಕಬಹುದು.

ಕೊನೆಯ ಮಾತು

ಕೊನೆಯ ಮಾತು

ನೀವು ಕ್ರೆಡಿಟ್ ಮಿತಿ ಹೆಚ್ಚಳಕ್ಕೆ ಅರ್ಜಿ ಸಲ್ಲಿಸಿದಾಗ, ಬ್ಯಾಂಕುಗಳು ಅಥವಾ ಕ್ರೆಡಿಟ್ ಕಾರ್ಡ್ ಕಂಪನಿಗಳು ನೀವು ಈಗ ಪಾವತಿಸಬೇಕಾದ ಸಾಲದ ಮೊತ್ತವನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ನೀವು ಈಗಾಗಲೇ ಹೆಚ್ಚಿನ ಸಾಲ ಮರುಪಾವತಿ ಹೊಂದಿದ್ದರೆ ಕ್ರೆಡಿಟ್ ಲಿಮಿಟ್ ಹೆಚ್ಚಳಕ್ಕೆ ವಿನಂತಿಸುವ ಮೊದಲು ಅವುಗಳನ್ನು ಕಡಿಮೆ ಮಾಡಬೇಕು. ಕ್ರೆಡಿಟ್ ಕಾರ್ಡ್ ಬಳಸುವಾಗ ಕ್ರೆಡಿಟ್ ಲಿಮಿಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನೀವು ಕಡಿಮೆ ಕ್ರೆಡಿಟ್ ಲಿಮಿಟ್ ಹೊಂದಿದ್ದರೆ, ಅದನ್ನು ಹೆಚ್ಚಿಸಲು ಪ್ರಯತ್ನಿಸಬೇಕು.

English summary

How To Increase Credit Limit? Benefits And Risks in Kannada

How To Increase Credit Limit? Benefits And Risks - Here is a detailed guide in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X