ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ?
ಆಧಾರ್ ಕಾರ್ಡ್ ಈಗ ದೇಶದಲ್ಲಿ ಪ್ರಮುಖ ದಾಖಲೆಯಾಗಿದೆ. ಎಲ್ಲ ಕಾರ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅದರಲ್ಲೂ ಮುಖ್ಯವಾಗಿ ನಾವು ಯಾವುದೇ ಸರ್ಕಾರಿ ಯೋಜನೆಗಳ ಸಹಾಯವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ನಮ್ಮಲ್ಲಿ ಇರಬೇಕಾಗುತ್ತದೆ. ಈ ಆಧಾರ್ ಕಾರ್ಡ್‌ಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಬೇಕು ಎಂದು ನೀವು ಬಯಸಿದ್ದೀರಾ?
ನೀವು ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಬೇಕಾದರೆ ನಿಮ್ಮ ಮೊಬೈಲ್ ಸಂಖ್ಯೆಯು ಆಧಾರ್ ಕಾರ್ಡ್‌ನೊಂದಿಗೆ ರಿಜಿಸ್ಟರ್ ಆಗಿರಬೇಕು. ನಿಮ್ಮ ಮೊಬೈಲ್ ಸಂಖ್ಯೆ ಆಧಾರ್‌ನೊಂದಿಗೆ ರಿಜಿಸ್ಟರ್ ಆಗದಿದ್ದರೆ ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡುವುದು ಕಡ್ಡಾಯವಾಗುತ್ತದೆ.
ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಅತೀ ಸರಳವಾದ ವಿಧಾನವಾಗಿದೆ. ನೀವು ಆನ್‌ಲೈನ್ ಮೂಲಕವೂ ಮಾಡಬಹುದು ಅಥವಾ ಆಫ್‌ಲೈನ್ ಅಂದರೆ ನೀವೇ ಸ್ವತಃ ಕಚೇರಿಗೆ ಭೇಟಿ ನೀಡುವ ಮೂಲಕ ಲಿಂಕ್ ಮಾಡಿಸಬಹುದು. ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆಯನ್ನು ಹೇಗೆ ಲಿಂಕ್ ಮಾಡುವುದು ಎಂದು ನಾವಿಲ್ಲಿ ಹಂತ ಹಂತವಾಗಿ ವಿವರಿಸಿದ್ದೇವೆ ಮುಂದೆ ಓದಿ...

ಮೊಬೈಲ್ ಸಂಖ್ಯೆ ಲಿಂಕ್ ಮಾಡುವುದು ಯಾಕೆ ಅಗತ್ಯ?
ಹಲವಾರು ಕಾರಣಗಳಿಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಮುಖ್ಯವಾಗಿದೆ. ಇದು ನಿಮಗೆ ಹಲವಾರು ಆನ್‌ಲೈನ್ ಸೇವೆಗಳನ್ನು ಪಡೆಯಲು ಅವಕಾಶ ನೀಡುತ್ತದೆ. ಕೆವೈಸಿ, ಇ-ಸೈನ್, ಇ-ಆಧಾರ್ ಅನ್ನು ನೀವು ನಿಮ್ಮ ಆಧಾರ್ ಲಿಂಕ್ ಆದ ಮೊಬೈಲ್ ಸಂಖ್ಯೆಯಿಂದ ಮಾಡಿಕೊಳ್ಳಬಹುದು. ಹಾಗೆಯೇ ಆಧಾರ್ ಸಂಬಂಧಿತ ಯಾವುದೇ ಕಾರ್ಯಗಳ ಬಗ್ಗೆ ಅಪ್‌ಡೇಟ್ ನಿಮಗೆ ಎಸ್‌ಎಂಎಸ್ ಮೂಲಕ ಲಭ್ಯವಾಗಲಿದೆ. ಹಾಗೆಯೇ ಸರ್ಕಾರದ ಸೇವೆಗಳಾದ ಸಬ್ಸಿಡಿ ಪಡೆಯಲು, ಬ್ಯಾಂಕ್ ಖಾತೆಯನ್ನು ತೆರೆಯಲು, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ನಿಮ್ಮ ಆಧಾರ್‌ನೊಂದಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಕಡ್ಡಾಯವಾಗಿದೆ.

ಆನ್‌ಲೈನ್‌ನಲ್ಲಿ ಲಿಂಕ್ ಮಾಡಿಕೊಳ್ಳಿ
ಹಂತ 1: ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (https://uidai.gov.in/)
ಹಂತ 2: "Aadhaar Services" ಮೇಲೆ ಕ್ಲಿಕ್ ಮಾಡಿ, "Aadhaar Linking" ಆಯ್ಕೆ ಮಾಡಿಕೊಳ್ಳಿ
ಹಂತ 3: "Mobile Number" ಅನ್ನು ಆಯ್ಕೆ ಮಾಡಿ, 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 4: ಸ್ಕ್ರೀನ್‌ನಲ್ಲಿ ಕಾಣುವ ಸೆಕ್ಯೂರಿಟಿ ಕೋಡ್ ಉಲ್ಲೇಖಿಸಿ "Send OTP" ಕ್ಲಿಕ್ ಮಾಡಿ
ಹಂತ 5: ನಿಮ್ಮ ಮೊಬೈಲ್‌ಗೆ ಒಟಿಪಿ ಬರಲಿದೆ, ಒಟಿಪಿ ನಮೂದಿಸಿ "Submit" ಕ್ಲಿಕ್ ಮಾಡಿ
ಹಂತ 6: ನೀವು ಆಧಾರ್‌ನೊಂದಿಗೆ ಲಿಂಕ್ ಮಾಡಲು ಬಯಸುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ ಪ್ರಕ್ರಿಯೆ ಪೂರ್ಣವಾಗಲಿದೆ.

ಮಾಡಿಕೊಳ್ಳಿ
ಹಂತ 1: ಸಮೀಪದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ
ಹಂತ 2: ಆಧಾರ್ ಕಾರ್ಡ್ ಹಾಗೂ ಅದರ ನಕಲಿ ಪ್ರತಿ ನಿಮ್ಮ ಜೊತೆ ಇರಲಿ
ಹಂತ 3: "Aadhaar Linking Form" ಭರ್ತಿ ಮಾಡಿ, ಮೊಬೈಲ್ ಸಂಖ್ಯೆಯನ್ನು ಉಲ್ಲೇಖಿಸಿ
ಹಂತ 4: ಕೇಂದ್ರದ ಸಿಬ್ಬಂದಿಗಳು ಮಾಹಿತಿಯನ್ನು ಪರಿಶೀಲಿಸಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುತ್ತಾರೆ.