For Quick Alerts
ALLOW NOTIFICATIONS  
For Daily Alerts

ಪೇಟಿಎಂ, ಫೋನ್ ಪೇ, ಗೂಗಲ್ ಪೇನಲ್ಲಿ ಕನ್ನಡ ಇತ್ಯಾದಿ ಭಾಷೆಗೆ ಸೆಟ್ ಮಾಡುವುದು ಹೇಗೆ?

|

ಸ್ಮಾರ್ಟ್‌ಫೋನ್ ಬಹಳ ವ್ಯಾಪಿಸುತ್ತಿದ್ದು, ಬೆಂಗಳೂರಿನಂಥ ಮಹಾನಗರಿಯಿಂದ ಹೊರಗೆ ಸೆಕೆಂಡ್ ಟಯರ್, ಥರ್ಡ್ ಟಯರ್ ಸಿಟಿಗಳಲ್ಲಿ ಬಹಳ ಹೆಚ್ಚಾಗಿದೆ. ಗ್ರಾಮೀಣ ಭಾಗದಲ್ಲೂ ಬಹಳ ಮಂದಿ ಕೈಗೆ ಸ್ಮಾರ್ಟ್‌ಫೋನ್ ಬಂದಿದೆ. ಸ್ಮಾರ್ಟ್‌ಫೋನ್ ಹೊಂದಿರುವವರಲ್ಲಿ ಕನ್ನಡ ಬಳಕೆಗೆ ಅಸಕ್ತಿ ಇರುವವರ ಸಂಖ್ಯೆ ಹೆಚ್ಚುತ್ತಿದೆ. ಕನ್ನಡಕ್ಕೆ ಮಾತ್ರವಲ್ಲ ದೇಶದ ವಿವಿಧ ಭಾಗಗಳಲ್ಲಿ ಆಯಾ ಪ್ರದೇಶದ ಭಾಷೆಗಳನ್ನು ಬಳಸುವವರ ಸಂಖ್ಯೆ ಹೆಚ್ಚುತ್ತಿದೆ.

ಗೂಗಲ್ ಇತ್ಯಾದಿ ಹಲವು ತಂತ್ರಜ್ಞಾನ ಸಂಸ್ಥೆಗಳು ಇಂಗ್ಲೀಷ್ ಜೊತೆಗೆ ಸ್ಥಳೀಯ ಭಾಷೆಗಳಿಗೂ ಅವಕಾಶ ಕೊಡುತ್ತವೆ. ಹಲವು ಮೊಬೈಲ್‌ಗಳ ಯೂಸರ್ ಇಂಟರ್ಫೇಸ್ ಕನ್ನಡದಲ್ಲಿಯೂ ಲಭ್ಯ ಇರುವಂತಾಗಿದೆ.

ಇಂಟರ್‌ನೆಟ್ ಇಲ್ಲದೆಯೇ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ?ಇಂಟರ್‌ನೆಟ್ ಇಲ್ಲದೆಯೇ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ?

ಈಗ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು ಹಣ ಪಾವತಿಗೆ ಯುಪಿಐ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಪೇಟಿಎಂ, ಗೂಗಲ್ ಪೇ, ಫೋನ್ ಪೇ ಮುಂತಾದ ಪೇಮೆಂಟ್ ಆ್ಯಪ್‌ಗಳನ್ನು ಹಲವು ಬಳಸುತ್ತಾರೆ. ಈ ಆ್ಯಪ್‌ಗಳು ಕನ್ನಡದಲ್ಲಿಯೂ ಲಭ್ಯ ಇರುತ್ತವೆ. ಕನ್ನಡ ಅಲ್ಲದೇ ಹಿಂದಿ, ತೆಲುಗು, ತಮಿಳು ಇತ್ಯಾದಿ ಕೆಲ ಭಾರತೀಯ ಭಾಷೆಗಳಲ್ಲಿ ಪೇಮೆಂಟ್ ಆ್ಯಪ್‌ಗಳನ್ನು ಬಳಸಬಹುದು. ನೀವು ಈ ಆ್ಯಪ್‌ಗಳನ್ನು ಇನ್ಸ್‌ಟಾಲ್ ಮಾಡಿದಾಗ ಯೂಸರ್ ಇಂಟರ್ಫೇಸ್‌ನಲ್ಲಿ ಡೀಫಾಲ್ಟ್ ಆಗಿ ಇಂಗ್ಲೀಷ್ ಬರುತ್ತದೆಯಾದರೂ ನೀವು ಸೆಟಿಂಗ್‌ನಲ್ಲಿ ಭಾಷೆಯನ್ನು ಬದಲಾಯಿಸಿಕೊಳ್ಳಬಹುದು. ಅದರ ವಿವರ ಈ ಕೆಳಕಂಡಂತಿದೆ.

ಪೇಟಿಎಂನಲ್ಲಿ ಭಾಷೆ ಬದಲಿಸುವುದು

ಪೇಟಿಎಂನಲ್ಲಿ ಭಾಷೆ ಬದಲಿಸುವುದು

* ಮೊಬೈಲ್‌ನಲ್ಲಿ ಪೇಟಿಎಂ ಆ್ಯಪ್ ತೆರೆದು ಮೇಲಿನ ಎಡಬದಿಯಲ್ಲಿರುವ ನಿಮ್ಮ ಪ್ರೊಫೈಲ್ ಒತ್ತಿ, ಕೆಳಗೆ 'ಪ್ರೊಫೈಲ್ ಸೆಟಿಂಗ್' ಟ್ಯಾಬ್‌ಗೆ ಹೋಗಿರಿ.
* ಇಲ್ಲಿ 'ಚೇಂಜ್ ಲಾಂಗ್ವೇಜ್' ಆಯ್ಕೆ ಕಾಣಿಸುತ್ತದೆ.
* ಅಲ್ಲಿಗೆ ಹೋಗಿ ಭಾಷೆಯನ್ನು ಕನ್ನಡವಾಗಿ ಬದಲಾಯಿಸಿಕೊಳ್ಳಬಹುದು.
* ಆ ಪುಟದಲ್ಲಿ ಇಂಗ್ಲೀಷ್, ಬಂಗಾಳಿ, ಹಿಂದಿ, ಒಡಿಯಾ, ಮರಾಠಿ, ಗುಜರಾತಿ, ಪಂಜಾಬಿ, ಕನ್ನಡ, ಮಲಯಾಳಂ, ತಮಿಳು, ತೆಲುಗು ಭಾಷೆಗಳ ಆಯ್ಕೆ ಸಿಗುತ್ತದೆ.

ಫೋನ್ ಪೇಯಲ್ಲಿ ಭಾಷೆ ಬದಲಿಸುವುದು

ಫೋನ್ ಪೇಯಲ್ಲಿ ಭಾಷೆ ಬದಲಿಸುವುದು

* ಮೊಬೈಲ್‌ನಲ್ಲಿ ಫೋನ್‌ಪೇ ಆ್ಯಪ್ ತೆರೆಯಿರಿ. ಮೇಲಿನ ಎಡಭಾಗದಲ್ಲಿರುವ ಪ್ರೊಫೈಲ್‌ಗೆ ಹೋಗಿರಿ.
* ಸೆಟಿಂಗ್ಸ್ ಅಂಡ್ ಪ್ರಿಫರೆನ್ಸ್ ಟ್ಯಾಬ್‌ಗೆ ಹೋಗಿ
* ಲ್ಯಾಂಗ್ವೇಜಸ್ ಆಯ್ಕೆ ಆಯ್ದುಕೊಳ್ಳಿ
* ಅಲ್ಲಿ ಕಾಣಿಸುವ ಪಟ್ಟಿಯಲ್ಲಿ ಇಂಗ್ಲೀಷ್ ಜೊತೆ ಕನ್ನಡ ಮೊದಲಾದ ಕೆಲ ಭಾಷೆಗಳಿವೆ. ಮರಾಠಿ, ಬಂಗಾಳಿ, ಹಿಂದಿ, ತಮಿಳು, ಕನ್ನಡ, ಗುಜರಾತಿ, ತೆಲುಗು, ತಮಿಳು, ಮಲಯಾಳಂ, ಒಡಿಯಾ, ಅಸ್ಸಾಮಿ ಭಾಷೆಗಳ ಆಯ್ಕೆ ಸಿಗುತ್ತದೆ. ನಿಮಗೆ ಬೇಕಾದ್ದನ್ನು ಆರಿಸಿ 'ಕಂಟಿನ್ಯೂ' ಒತ್ತಿರಿ.

ಗೂಗಲ್ ಪೇಯಲ್ಲಿ ಕನ್ನಡ ಆಯ್ಕೆ

ಗೂಗಲ್ ಪೇಯಲ್ಲಿ ಕನ್ನಡ ಆಯ್ಕೆ

* ಮೊಬೈಲ್‌ನಲ್ಲಿ ಜಿಪೇ ಆ್ಯಪ್ ಓಪನ್ ಮಾಡಿ.
* ಬಲಗಡೆಯ ಮೇಲ್ಭಾಗದಲ್ಲಿ ನಿಮ್ಮ ಖಾತೆಯ ಐಕಾನ್ ಒತ್ತಿ ಸೆಟಿಂಗ್ ಟ್ಯಾಬ್ ತೆರೆಯಿರಿ.
* ಇಲ್ಲಿ 'ಪರ್ಸನ್ ಇನ್ಫೋ' ಆಯ್ಕೆ ಒತ್ತಿರಿ
* ಇಲ್ಲಿ 'ಲ್ಯಾಂಗ್ವೇಜ್' ಆಯ್ಕೆಯಲ್ಲಿ 'ಚೇಂಜ್' ಬಟನ್ ಒತ್ತಿರಿ.
* ಇಲ್ಲಿ ನೀವು ಕನ್ನಡ ಆಯ್ಕೆ ಮಾಡಿಕೊಳ್ಳಬಹುದು.
* ಇಂಗ್ಲೀಷ್, ಹಿಂದಿ, ಬಂಗಾಳಿ, ಗುಜರಾತಿ, ಕನ್ನಡ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳ ಆಯ್ಕೆ ಇರುತ್ತದೆ. ಹಿಂಗ್ಲೀಷ್ ಎಂಬ ವಿನೂತನ ಆಯ್ಕೆಯೂ ಇದೆ. ಕನ್ನಡ ಮತ್ತು ಇಂಗ್ಲೀಷ್ ಬೆರೆಕೆಯ ಕಂಗ್ಲೀಷ್ ಹೇಗೋ ಹಾಗೆ ಹಿಂದಿ ಮತ್ತು ಇಂಗ್ಲೀಷ್‌ನ ಬೆರೆಕೆ ಹಿಂಗ್ಲೀಷ್ ಇದೆ. ಇದರಲ್ಲಿ ಯೂಸರ್ ಇಂಟರ್ಫೇಸ್‌ನಲ್ಲಿ ಅಗತ್ಯ ಇರುವ ಕೆಲವೆಡೆ ಇಂಗ್ಲೀಷ್ ಪದಗಳು ಇರುತ್ತವೆ.

ಕಳೆದುಹೋದ ಎಸ್‌ಬಿಐ ಕ್ರೆಡಿಟ್, ಡೆಬಿಟ್ ಕಾರ್ಡ್ ಆಫ್‌ಲೈನ್ ಮೂಲಕ ಬ್ಲಾಕ್ ಮಾಡಿಕಳೆದುಹೋದ ಎಸ್‌ಬಿಐ ಕ್ರೆಡಿಟ್, ಡೆಬಿಟ್ ಕಾರ್ಡ್ ಆಫ್‌ಲೈನ್ ಮೂಲಕ ಬ್ಲಾಕ್ ಮಾಡಿ

English summary

How To Make Kannada UI In Paytm, Gpay and PhonePe, Through Language Settings

Many apps and tech companies have their user interface in local languagues. Know how to change the language settings in Paytm, Google pay and phone pe apps.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X