For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ರಿಪೋರ್ಟ್‌ನಿಂದ ಲೇಟ್ ಪೇಮೆಂಟ್ ದಾಖಲೆ ಅಳಿಸುವುದು ಹೇಗೆ? ಇಲ್ಲಿದೆ ಮಾಹಿತಿ

By ಸುಶಾಂತ ಕಾಳಗಿ
|

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಕ್ರೆಡಿಟ್ ಕಾರ್ಡ್, ವೈಯಕ್ತಿಕ ಸಾಲ ಅಥವಾ ಇನ್ನಾವುದೋ ಸಾಲ ಪಡೆದಿರುತ್ತಾರೆ. ಹೀಗೆ ಸಾಲ ನೀಡುವಾಗ ಕಂಪನಿಗಳು ಮೊದಲಿಗೆ ನೋಡುವುದೇ ಕ್ರೆಡಿಟ್/ ಸಿಬಿಲ್ ರಿಪೋರ್ಟ್ (Credit/ CIBIL) ಅನ್ನು. ಕ್ರೆಡಿಟ್ ರಿಪೋರ್ಟ್ ಕಳೆದ 36 ತಿಂಗಳ ಅವಧಿಯಲ್ಲಿ ನೀವು ಪಡೆದ ಸಾಲ ಮತ್ತು ಮರುಪಾವತಿಯ ಸಾರಾಂಶವನ್ನು ಒಳಗೊಂಡಿರುತ್ತದೆ. ಸಾಲ ನೀಡುವ ಮುನ್ನ ಬ್ಯಾಂಕ್ ಅಥವಾ ಕಂಪನಿಗಳು ಮೊದಲಿಗೆ ಈ ರಿಪೋರ್ಟ್ ಅನ್ನು ಪರಿಶೀಲಿಸುತ್ತವೆ.

ಆದರೆ ಕೆಲ ಬಾರಿ ಕ್ರೆಡಿಟ್ ರಿಪೋರ್ಟ್ ನಲ್ಲಿನ ಕೆಲ ತಪ್ಪುಗಳಿಂದಾಗಿ ನಿಮಗೆ ಸಾಲ ಸಿಗದೇ ಇರಬಹುದು ಅಥವಾ ಸಾಲ ಪಡೆಯುವಾಗ ಯಾವುದೋ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಹೀಗಾಗಿ ಕ್ರೆಡಿಟ್ ರಿಪೋರ್ಟ್ ಕೇವಲ ಸರಿಯಾದ ಮಾಹಿತಿಯನ್ನು ಮಾತ್ರ ಒಳಗೊಂಡಿರುವಂತೆ ನೋಡಿಕೊಳ್ಳುವುದು ಅಗತ್ಯ. ಇನ್ನು ಅತ್ಯಂತ ಸರಿಯಾದ ಸಮಯಕ್ಕೆ ಸಾಲದ ಕಂತುಗಳನ್ನು ಮರುಪಾವತಿ ಮಾಡುತ್ತ, ಯಾವುದೇ ತಡ ಪಾವತಿ (ಲೇಟ್ ಪೇಮೆಂಟ್) ದಾಖಲೆಗಳು ರಿಪೋರ್ಟ್ ನಲ್ಲಿ ದಾಖಲಾಗದಂತೆ ಎಚ್ಚರಿಕೆ ವಹಿಸಬೇಕು.

ಲೇಟ್ ಪೇಮೆಂಟ್ ರಿಪೋರ್ಟ್‌ನಿಂದ ಲೋನ್ ಸಿಗದಿರಬಹುದು

ನಿಮ್ಮ ಕ್ರೆಡಿಟ್ ರಿಪೋರ್ಟ್‌ನಲ್ಲಿ ಹೆಚ್ಚಿನ ಲೇಟ್ ಪೇಮೆಂಟ್ ದಾಖಲೆಗಳಿದ್ದಲ್ಲಿ, ಕ್ರೆಡಿಟ್ ಹಿಸ್ಟರಿಯ ಸ್ಕೋರ್ ಕಡಿಮೆಯಾಗುತ್ತದೆ. ಇದರಿಂದ ಬಹುತೇಕ ಎಲ್ಲ ಹಣಕಾಸು ಸಂಸ್ಥೆಗಳು ನಿಮಗೆ ಸಾಲ ನೀಡಲು ನಿರಾಕರಿಸಬಹುದು.

ಲೇಟ್ ಪೇಮೆಂಟ್ ಹಿಸ್ಟರಿ ಇದ್ದರೂ ಕೆಲ ಕಂಪನಿಗಳು ನಿಮಗೆ ಸಾಲ ನೀಡಲು ಮುಂದೆ ಬರಬಹುದು. ಆದರೆ ಆಗ ಸಾಮಾನ್ಯಕ್ಕಿಂತ ಹೆಚ್ಚುವರಿ ಬಡ್ಡಿದರವನ್ನು ವಿಧಿಸಲಾಗುತ್ತದೆ. ಒಂದೇ ಒಂದು ಇಎಂಐ ಪಾವತಿಸಲು 30 ದಿನ ತಡ ಮಾಡಿದಲ್ಲಿ ಕ್ರೆಡಿಟ್ ಸ್ಕೋರ್ ಸುಮಾರು 100 ಅಂಕಗಳಷ್ಟು ಕುಸಿತ ಕಾಣುತ್ತದೆ.

ತಪ್ಪಾಗಿ ದಾಖಲಾದ ಮಾಹಿತಿ ಚೆಕ್ ಮಾಡಿ

ತಪ್ಪಾಗಿ ದಾಖಲಾದ ಮಾಹಿತಿ ಚೆಕ್ ಮಾಡಿ

ನಿಮ್ಮ ಕ್ರೆಡಿಟ್ ರಿರಿಪೋರ್ಟ್‌ನಲ್ಲಿ ಯಾವುದಾದರೂ ಲೇಟ್ ಪೇಮೆಂಟ್ ತಪ್ಪಾಗಿ ನಮೂದಾಗಿದೆಯಾ ಎಂದು ನೋಡಿ. ನೀವು ಸರಿಯಾದ ಸಮಯಕ್ಕೆ ಇಎಂಐ ಪಾವತಿಸಿದ್ದರೂ ಅದು ತಪ್ಪಾಗಿ ದಾಖಲಾಗಿರಬಹುದು ಅಥವಾ ಇನ್ನಾವುದೋ ಇಎಂಐ ಪಾವತಿಸಿದ್ದರೂ ಅದು ದಾಖಲಾಗಿರದೇ ಇರಬಹುದು.

ಸಮಸ್ಯೆ ಪರಿಹಾರ ವಿಧಾನ

ಸಮಸ್ಯೆ ಪರಿಹಾರ ವಿಧಾನ

ಕ್ರೆಡಿಟ್ ರಿಪೋರ್ಟ್‌ನಲ್ಲಿ ತಪ್ಪಾದ ಲೇಟ್ ಪೇಮೆಂಟ್ ದಾಖಲೆಗಳು ಕಂಡುಬಂದಲ್ಲಿ ಅದನ್ನು ತೆಗೆದುಹಾಕುವಂತೆ ದೂರು ಸಲ್ಲಿಸಬಹುದು.

ಗುಡ್ ವಿಲ್ ಹೊಂದಾಣಿಕೆ

ಗುಡ್ ವಿಲ್ ಹೊಂದಾಣಿಕೆ

ನೀವು ಯಾವಾಗಲೂ ಸರಿಯಾದ ಸಮಯಕ್ಕೆ ಇಎಂಐ ಪಾವತಿಸುತ್ತಿದ್ದು, ಯಾವಾಗಲೋ ಒಮ್ಮೆ ಮಾತ್ರ ತಡವಾಗಿದ್ದರೆ ಗುಡ್ ವಿಲ್ ಹೊಂದಾಣಿಕೆ ಎಂಬುದು ನಿಮ್ಮ ನೆರವಿಗೆ ಬರಬಹುದು. ಅನಿವಾರ್ಯ ಕಾರಣದಿಂದ ಇಎಂಐ ಪಾವತಿ ತಡವಾಗಿದ್ದನ್ನು ಸಾಲ ನೀಡಿದ ಕಂಪನಿಗೆ ತಿಳಿಸಿ, ಲೇಟ್ ಪೇಮೆಂಟ್ ದಾಖಲೆಯನ್ನು ಅಳಿಸುವಂತೆ ಮನವಿ ಮಾಡಿಕೊಳ್ಳಬಹುದು.

ಭಾಗಶಃ ಪಾವತಿ ಮಾಡುವುದು

ಭಾಗಶಃ ಪಾವತಿ ಮಾಡುವುದು

ಒಂದು ವೇಳೆ ನಿಮಗೆ ಸಾಲ ನೀಡಿದ ಕಂಪನಿಯು ಗುಡ್ ವಿಲ್ ಹೊಂದಾಣಿಕೆಗೆ ಒಪ್ಪದಿದ್ದರೆ, ಉಳಿದ ಸಾಲವನ್ನು ಭಾಗಶಃ ಪಾವತಿ ಮಾಡುವುದಾಗಿ ಒಪ್ಪಂದ ಮಾಡಿಕೊಂಡು ಲೇಟ್ ಪೇಮೆಂಟ್ ದಾಖಲೆ ಅಳಿಸುವಂತೆ ಕೋರಬಹುದು.

English summary

How To Remove Late Payments Records From Your Credit Report?

How To Remove Late Payments Records From Your Credit Report? - Here is a detailed guide in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X