For Quick Alerts
ALLOW NOTIFICATIONS  
For Daily Alerts

ಗೂಗಲ್ ಪೇನಲ್ಲಿ ಒಂದಕ್ಕಿಂತ ಅಧಿಕ ಯುಪಿಐ ಐಡಿ ಸೆಟ್ ಮಾಡುವುದು ಹೇಗೆ?

|

ಈ ಡಿಜಿಟಲ್ ಯುಗದಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಹೆಚ್ಚು ಜನರು ಹಣಕಾಸು ವಹಿವಾಟಿಗಾಗಿ ಬಳಕೆ ಮಾಡುವ ಪಾವತಿ ವಿಧಾನವಾಗಿದೆ. ಇದು ಸುರಕ್ಷಿತ, ಸರಳ ಹಾಗೂ ನಂಬಿಕರ್ಹ ವಿಧಾನವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಯುಪಿಐ ಡಿಜಿಟಲ್ ಪೇಮೆಂಟ್‌ಗೆ ಬಹಳ ಉತ್ಸಾಹವನ್ನು ಸೃಷ್ಟಿ ಮಾಡಿದೆ.

ಹೆಚ್ಚು ಯುಪಿಐ ನೆಟ್‌ವರ್ಟ್ ಟ್ರಾಫಿಕ್‌ ಇರುವಾಗ ನಾವು ಒಂದಕ್ಕಿಂತ ಅಧಿಕ ಯುಪಿಐ ಐಡಿಯನ್ನು ಬಳಕೆ ಮಾಡುವುದು ನಮಗೆ ಲಾಭದಾಯಕವಾಗಿದೆ. ಇದರಿಂದಾಗಿ ಗೂಗಲ್ ಪೇನಲ್ಲಿ ಮೊದಲಾದ ಯುಪಿಐ ಸಂಬಂಧಿತ ಆಪ್‌ನಲ್ಲಿ ಒಂದಕ್ಕಿಂತ ಅಧಿಕ ಯುಪಿಐ ಐಡಿಯನ್ನು ಹಲವಾರು ಮಂಡಿ ಬಳಕೆ ಮಾಡುತ್ತಾರೆ.

ಯುಪಿಐ ಪಾವತಿ ಮಾಡುವಾಗ ಈ 5 ಅಂಶ ನೆನಪಿರಲಿಯುಪಿಐ ಪಾವತಿ ಮಾಡುವಾಗ ಈ 5 ಅಂಶ ನೆನಪಿರಲಿ

ಗೂಗಲ್ ಪೇ ಪ್ರಕಾರ ಜನರು ಗೂಗಲ್ ಪೇನಲ್ಲಿ ತಮ್ಮ ಬ್ಯಾಂಕ್ ಖಾತೆಗೆ ನಾಲ್ಕರಷ್ಟು ಯುಪಿಐ ಐಡಿಯನ್ನು ಲಿಂಕ್ ಮಾಡಿಕೊಳ್ಳಬಹುದು. ಇದು ಗೂಗಲ್ ಪೇನಲ್ಲಿ ಸುರಕ್ಷಿತವಾಗಿದೆ. ಹಾಗೆಯೇ ಪಾವತಿ ವಿಳಂಬ ಹಾಗೂ ಪಾವತಿ ವೇಳೆ ಉಂಟಾಗುವ ತಾಂತ್ರಿಕ ಸಮಸ್ಯೆಯನ್ನು ತಪ್ಪಿಸುತ್ತದೆ. ನಾವು ಗೂಗಲ್‌ ಪೇನಲ್ಲಿ ಒಂದಕ್ಕಿಂತ ಅಧಿಕ ಯುಪಿಐ ಐಡಿಯನ್ನು ಲಿಂಕ್ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಗೂಗಲ್ ಪೇನಲ್ಲಿ ಒಂದಕ್ಕಿಂತ ಅಧಿಕ ಯುಪಿಐ ಐಡಿ ಸೆಟ್ ಮಾಡುವುದು ಹೇಗೆ?

ಒಂದಕ್ಕಿಂತ ಅಧಿಕ ಯುಪಿಐ ಐಡಿ ಸೆಟ್ ಮಾಡಿ

ಹಂತ 1: ನಿಮ್ಮ ಮೊಬೈಲ್ ಫೋನ್‌ನಲ್ಲಿ ಇರುವ ಗೂಗಲ್ ಪೇ ಅನ್ನು ತೆರೆಯಿರಿ
ಹಂತ 2: ಗೂಗಲ್ ಪೇ ಆಪ್‌ಗೆ ಸೈನ್ ಇನ್ ಆಗಿ
ಹಂತ 3: ಬಲ ಭಾಗದ ಮೇಲೆ ಇರುವ ಪ್ರೋಪ್ರೈಲ್ ಇಮೇಜ್ ಮೇಲೆ ಟ್ಯಾಪ್ ಮಾಡಿ
ಹಂತ 4: ನೀವು ಯುಪಿಐ ಐಡಿ ಆಡ್ ಮಾಡಲು ಬಯಸುವ ಬ್ಯಾಂಕ್‌ನ ಖಾತೆಯನ್ನು ನಮೂದಿಸಿ
ಹಂತ 5: Manage UPI ID ಅನ್ನು ಆಯ್ಕೆ ಮಾಡಿಕೊಳ್ಳಿ
ಹಂತ 6: ಯಾವುದೇ ಸಂದರ್ಭದಲ್ಲಿ ಯುಪಿಐ ಐಡಿ ಕ್ರಿಯೇಟ ಮಾಡಲು ಬಯಸಿದರೆ + ಮೇಲೆ ಕ್ಲಿಕ್ ಮಾಡಿ
ಹಂತ 7: ನೀವು "Add Now," ಮೇಲೆ ಕ್ಲಿಕ್ ಮಾಡಿದರೆ ಯುಪಿಐ ಐಡಿ ಕ್ರಿಯೇಟ್ ಆಗಲಿದ್ದು, ನಿಮಗೆ ಎಸ್‌ಎಂಎಸ್‌ ಲಭ್ಯವಾಗಲಿದೆ

English summary

How To Set Up Multiple UPI IDs In Google Pay, Here's Details in Kannada

transactions through the Unified Payments Interface (UPI) have become common. here's How To Set Up Multiple UPI IDs In Google Pay.Read on....
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X