For Quick Alerts
ALLOW NOTIFICATIONS  
For Daily Alerts

ಆನ್‌ಲೈನ್‌ ಮೂಲಕ ಪಿಎಫ್ ಖಾತೆಯಲ್ಲಿ ಜನ್ಮ ದಿನ ಅಪ್‌ಡೇಟ್‌ ಮಾಡುವುದು ಹೇಗೆ?

|

ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಪಿಎಫ್‌ ಸದಸ್ಯರು ತಮ್ಮ ಖಾತೆಯಲ್ಲಿ ಜನನ ದಿನಾಂಕವನ್ನು ಬದಲಾವಣೆ ಮಾಡಲು ಸುಲಭವಾಗುವಂತೆ ಕಳೆದ ವರ್ಷ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.

ಆನ್‌ಲೈನ್‌ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ಈ ಆನ್‌ಲೈನ್‌ ಅಪ್‌ಡೇಟ್‌ ಅವಕಾಶವನ್ನು ನೀಡಲಾಗಿದೆ. ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಯುಎಎನ್ ಕೆವೈಸಿ ಮಾಡಲಾಗಿದೆಯೇ ಎಂದು ಪರಿಶೀಲನೆ ಮಾಡಲು ಈ ಸೂಚನೆಯನ್ನು ನೀಡಲಾಗಿದೆ. ಇನ್ನು ಪಿಎಫ್‌ ಅಪ್‌ಡೇಟ್‌ ಮಾಡಲು, ಎರಡು ದಿನಾಂಕಗಳ ನಡುವಿನ ವ್ಯತ್ಯಾಸವು ಮೂರು ವರ್ಷಗಳಿಗಿಂತ ಕಡಿಮೆಯಿದ್ದರೆ, ಆಧಾರ್‌ನಲ್ಲಿ ನೋಂದಾಯಿಸಿದ ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡುವ ಉದ್ದೇಶದಿಂದ ಹುಟ್ಟಿದ ದಿನಾಂಕದ ಮಾನ್ಯ ಪುರಾವೆಯಾಗಿ ಪರಿಗಣಿಸಲಾಗುತ್ತದೆ.

ಇನ್ಮುಂದೆ ಎರಡು ಇಪಿಎಫ್‌ ಖಾತೆ: ಯಾರಿಗೆ ಅನ್ವಯ?ಇನ್ಮುಂದೆ ಎರಡು ಇಪಿಎಫ್‌ ಖಾತೆ: ಯಾರಿಗೆ ಅನ್ವಯ?

ಆನ್‌ಲೈನ್‌ನಲ್ಲಿ ಹುಟ್ಟಿದ ದಿನಾಂಕವನ್ನು ಬದಲಾಯಿಸಲು ಮೊದಲು ವಿನಂತಿಯನ್ನು ಸಲ್ಲಿಸಬೇಕಾಗುತ್ತದೆ. ಬಳಿಕ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಐಎ) ದೊಂದಿಗೆ ಇಪಿಎಫ್‌ಒ ಆನ್‌ಲೈನ್‌ನಲ್ಲಿ ಚಂದಾದಾರರ ಹುಟ್ಟಿದ ದಿನಾಂಕವನ್ನು ಮಾನ್ಯ ಮಾಡುತ್ತದೆ. ತಮ್ಮ ಜನ್ಮ ದಿನಾಂಕವನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಲು ಬಯಸುವ ಪಿಎಫ್ ಸದಸ್ಯರ ಅನುಕೂಲಕ್ಕಾಗಿ ಇಪಿಎಫ್‌ಒ ಇತ್ತೀಚೆಗೆ ಒಂದು ವಿಡಿಯೋ ಟ್ವೀಟ್ ಅನ್ನು ಪ್ರಕಟಿಸಿದೆ.

 ಪಿಎಫ್ ಖಾತೆಯಲ್ಲಿ ಜನ್ಮ ದಿನ ಅಪ್‌ಡೇಟ್‌ ಮಾಡುವುದು ಹೇಗೆ?

ಇಪಿಎಫ್‌ ಖಾತೆಯಲ್ಲಿ ಜನ್ಮ ದಿನ ಬದಲಾಯಿಸಲು ಬೇಕಾದ ದಾಖಲೆಗಳು

ಪಿಎಫ್‌ ಖಾತೆಯಲ್ಲಿರುವ ಜನ್ಮ ದಿನಾಂಕದ ನಡುವಿನ ಅಂತರ ಮೂರು ವರ್ಷಕ್ಕಿಂತ ಕಡಿಮೆ ಆಗಿದ್ದರೆ, ಪಿಎಫ್‌ ಖಾತೆದಾರರು ಆಧಾರ್‌/ಇ-ಆಧಾರ್‌ ಅನ್ನು ಪೋರ್ಟಲ್‌ ಮೂಲಕ ಸಲ್ಲಿಸಬೇಕಾಗುತ್ತದೆ. ಪಿಎಫ್‌ ಖಾತೆಯಲ್ಲಿರುವ ಜನ್ಮ ದಿನಾಂಕದ ನಡುವಿನ ಅಂತರ ಮೂರು ವರ್ಷಕ್ಕಿಂತ ಹೆಚ್ಚಾಗಿದ್ದರೆ, ಪಿಎಫ್‌ ಖಾತೆದಾರರು ಆಧಾರ್‌/ಇ-ಆಧಾರ್‌ ಜೊತೆ ತಮ್ಮ ಜನ್ಮ ದಿನಾಂಕವನ್ನು ಹೊಂದಿರುವ ಬೇರೆ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ.

* ಶಾಲೆಯ ಪ್ರಮಾಣ ಪತ್ರ
* ಜನನ ಪ್ರಮಾಣ ಪತ್ರ
* ಪಾಸ್‌ಪೋರ್ಟ್
* ಕೇಂದ್ರ/ರಾಜ್ಯ ಸರ್ಕಾರಿ ಸಂಸ್ಥೆಗಳ ಸೇವಾ ದಾಖಲೆಗಳನ್ನು ಆಧರಿಸಿದ ಪ್ರಮಾಣಪತ್ರ
* ಚಾಲನಾ ಪರವಾನಗಿ, ಇಎಸ್‌ಐಸಿ ಕಾರ್ಡ್ ಮುಂತಾದ ಸರ್ಕಾರಿ ಇಲಾಖೆಯಿಂದ ನೀಡಲಾದ ಯಾವುದೇ ವಿಶ್ವಾಸಾರ್ಹ ದಾಖಲೆಗಳು
* ಸಿವಿಲ್ ಸರ್ಜನ್ ನೀಡಿದ ವೈದ್ಯಕೀಯ ಪ್ರಮಾಣಪತ್ರ

 ಪಿಎಫ್ ಖಾತೆಯಲ್ಲಿ ಜನ್ಮ ದಿನ ಅಪ್‌ಡೇಟ್‌ ಮಾಡುವುದು ಹೇಗೆ?

ಇಪಿಎಫ್‌ ಖಾತೆಯನ್ನು ಆನ್‌ಲೈನ್‌ ಮೂಲಕ ಅಪ್‌ಡೇಟ್‌ ಮಾಡುವುದು ಹೇಗೆ?

ನೀವು ಯುನಿಫೈಡ್‌ ಮೆಂಬರ್‌ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಚಂದಾದಾರರು ಈ ಕೆಳಗಿನ ಹಂತಗಳನ್ನು ಪಾಲಿಸಿ ಪಿಎಫ್‌ ಖಾತೆಯಲ್ಲಿ ಆನ್‌ಲೈನ್‌ ಅಪ್‌ಡೇಟ್‌ ಮಾಡಬಹುದು.

* https://unifiedportal-emp.epfindia.gov.in/epfo/ ಗೆ ಭೇಟಿ ನೀಡಬೇಕು
* ಯೂಸರ್‌ ನೇಮ್‌ ಹಾಗೂ ಪಾಸ್‌ವರ್ಡ್ ಮೂಲಕ ನಿಮ್ಮ ಪಿಎಫ್‌ ಖಾತೆಗೆ ಲಾಗಿನ್‌ ಆಗಿ
* ನೀವು ಲಾಗಿನ್‌ ಆದ ಮೇಲೆ, Manage ಅನ್ನು ಕ್ಲಿಕ್‌ ಮಾಡಿ
* ಬಳಿಕ Modify Basic Details ಅನ್ನು ಕ್ಲಿಕ್‌ ಮಾಡಿ
* ಬಳಿಕ ನಂತರದ ಪೇಜ್‌ನಲ್ಲಿ ಆಧಾರ್‌ನಲ್ಲಿ ಇರುವ ಜನನ ದಿನವನ್ನು ಉಲ್ಲೇಖ ಮಾಡಿ
* ನಂತರ ನಿಮ್ಮ ಲಿಂಗವನ್ನು ಉಲ್ಲೇಖ ಮಾಡಿ, ಎಲ್ಲಾ ಮಾಹಿತಿಯನ್ನು ದೃಢೀಕರಣ ಮಾಡಿ
* ಆ ನಂತರ Update ಅನ್ನು ಕ್ಲಿಕ್‌ ಮಾಡಿ
* ನಿಮಗೆ ಈಗ Pending by Employer ಎಂಬುವುದು ಕಾಣಿಸಿಕೊಳ್ಳಲಿದೆ
* ಅದರಲ್ಲಿ ಇರುವ ರೆಫೆರೆನ್ಸ್‌ ನಂಬರ್‌ ಅನ್ನು ನೋಟ್‌ ಮಾಡಿಕೊಳ್ಳಿ

ಇತ್ತೀಚೆಗೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಕೊಡುಗೆ ವಿಚಾರವಾಗಿ ಅದರಲ್ಲೂ ತೆರಿಗೆ ನಿಯಮಗಳ ಕುರಿತಾಗಿ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ಈ ಮೊದಲು, ಇಪಿಎಫ್‌ಗೆ ಕೊಡುಗೆ ಮತ್ತು ಅದರಿಂದ ಬರುವ ಆದಾಯವು ಇಇಇ (ವಿನಾಯಿತಿ-ವಿನಾಯಿತಿ-ವಿನಾಯಿತಿ) ವರ್ಗದಲ್ಲಿ ಬರುತ್ತಿತ್ತು. ಆದರೆ ಈಗ ಕೆಲವು ಷರತ್ತುಗಳ ಬದಲಾವಣೆ ಕಾಣಬಹುದು. ಹಣಕಾಸು ಕಾಯಿದೆ, 2020 ಮತ್ತು ಹಣಕಾಸು ಕಾಯ್ದೆ 2021 ರ ತಿದ್ದುಪಡಿಗಳು ಕೊಡುಗೆ ಮತ್ತು ಆದಾಯವನ್ನು ತೆರಿಗೆ ವ್ಯಾಪ್ತಿಗೆ ತಂದಿದೆ.

English summary

How To Update Date of Birth In PF Account Online?, Explained in Kannada

How To Update Date of Birth In PF Account Online?, Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X