For Quick Alerts
ALLOW NOTIFICATIONS  
For Daily Alerts

ಆನ್‌ಲೈನ್‌ನಲ್ಲಿ ಎಲೆಕ್ಟ್ರಿಸಿಟಿ ಬಿಲ್ ಹಣ ಪಾವತಿಸುವ ಸುಲಭ ವಿಧಾನಗಳು

|

ಪ್ರತೀ ತಿಂಗಳು ನಾವು ಅಗತ್ಯವಾಗಿ ಪಾವತಿಸಬೇಕಾದ ಪ್ರಮುಖ ಸೇವೆಗಳು ಹಲವಿವೆ. ಅದರಲ್ಲಿ ವಿದ್ಯುತ್ ಬಿಲ್ ಕೂಡ ಒಂದು. ಈಗ ಬಿಲ್ ಪಾವತಿಗೆ ಬಹಳ ಪರಿಣಾಮಕಾರಿ ವಿಧಾನಗಳುಂಟು. ವಿದ್ಯುತ್ ಕಂಪನಿಗಳ ಕೌಂಟರ್‌ಗೆ ಹೋಗಿ ಬಿಲ್ ಕಟ್ಟುವವರು ಈಗಲೂ ಇದ್ದಾರೆ. ಆದರೆ, ಆನ್‌ಲೈನ್‌ನಲ್ಲಿ ಸುಲಭವಾಗಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯ. ಬೆಂಗಳೂರಿನಂಥ ನಗರಗಳಲ್ಲಿ ಬೆಂಗಳೂರು ಒನ್ ಇತ್ಯಾದಿ ಸರ್ವಿಸ್ ಸೆಂಟರ್‌ಗಳಲ್ಲಿ ಬಿಲ್ ಪಾವತಿಸಬಹುದು.

ಮೀಟರ್ ರೀಡಿಂಗ್‌ನವರು ತಿಂಗಳ ಆರಂಭ ದಿನಗಳಲ್ಲಿ ಮನೆ ಮನೆಗೆ ಹೋಗಿ ರೀಡಿಂಗ್ ನೋಡಿ ಬಿಲ್ ಜನರೇಟ್ ಮಾಡಿ ಕೊಟ್ಟುಹೋಗುತ್ತಾರೆ. ನೀವು ವಿದ್ಯುತ್ ಮೀಟರ್‌ಗೆ ಮೊಬೈಲ್ ನಂಬರ್ ನೊಂದಾಯಿಸಿದ್ದರೆ ನಿಮಗೆ ಬಿಲ್ ಜನರೇಟ್ ಆದ ಬಳಿಕ ಮೆಸೇಜ್ ಕೂಡ ಬರುತ್ತದೆ. ಬಿಲ್ ಕೊಟ್ಟು 2-3 ವಾರದೊಳಗೆ ಬಿಲ್ ಪಾವತಿಗೆ ಸಮಯಾವಕಾಶ ಕೊಡಲಾಗಿರುತ್ತದೆ. ಅಷ್ಟರೊಳಗೆ ಬಿಲ್ ಕಟ್ಟದಿದ್ದರೆ ಮನೆ ಅಥವಾ ಕಟ್ಟಡಕ್ಕೆ ಪವರ್ ಕಟ್ ಮಾಡುತ್ತಾರೆ. ಹೀಗಾಗಿ, ಸಕಾಲಕ್ಕೆ ವಿದ್ಯುತ್ ಬಿಲ್ ಪಾವತಿಸುವುದು ಅತ್ಯಗತ್ಯ.

ಡಿವಿಡೆಂಡ್ ನೀಡುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಉತ್ತಮವಾ?ಡಿವಿಡೆಂಡ್ ನೀಡುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಉತ್ತಮವಾ?

ವೆಬ್‌ಸೈಟ್‌ ಮೂಲಕ:

ನಿಮಗೆ ವಿದ್ಯುತ್ ಸರಬರಾಜು ಒದಗಿಸುವ ಕಂಪನಿಗಳ ವೆಬ್‌ಸೈಟ್‌ನಲ್ಲಿ ಹೋಗಿ ಬಿಲ್ ಪಾವತಿಸಬಹುದು. ನಿಮ್ಮ ಬಿದ್ಯುತ್ ಬಿಲ್‌ನ ಆರ್ ಆರ್ ನಂಬರ್ ಇದ್ದರೆ ಸಾಕು. ಆ ನಂಬರ್ ಹಾಕಿದರೆ ವಿದ್ಯುತ್ ಬಿಲ್ ಆನ್‌ಲೈನ್‌ನಲ್ಲೇ ಕಾಣಿಸುತ್ತದೆ. ಗ್ರಾಹಕರ ಹೆಸರು, ಮೀಟರ್ ದಿನಾಂಕ, ಎಷ್ಟು ಓದಿದೆ ಇತ್ಯಾದಿ ವಿವರ ಇರುತ್ತದೆ. ಅದು ನಿಮ್ಮದೇ ಬಿಲ್ ಎಂಬುದು ಖಚಿತೊಂಡ ಬಳಿಕ ಪೇಮೆಂಟ್ ಪ್ರಕ್ರಿಯೆಗೆ ಹೋಗಬಹುದು. ಸಾಮಾನ್ಯವಾಗಿ ಇಂಥ ವೆಬ್‌ಸೈಟ್‌ನಲ್ಲಿ ಇರುವ ಪೇಮೆಂಟ್ ಆಪ್ಷನ್‌ಗಳಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಇರುತ್ತವೆ. ಕೆಲ ಸಂಸ್ಥೆಗಳು ಯುಪಿಐ ಪೇಮೆಂಟ್ ಅನ್ನೂ ಸ್ವೀಕರಿಸುತ್ತವೆ.

ಆನ್‌ಲೈನ್‌ನಲ್ಲಿ ಎಲೆಕ್ಟ್ರಿಸಿಟಿ ಬಿಲ್ ಹಣ ಪಾವತಿಸುವ ಸುಲಭ ವಿಧಾನಗಳು

ಯುಪಿಐ ಆ್ಯಪ್‌ಗಳಿಂದ

ಇದು ಇನ್ನೂ ಸರಳವಾದ ಮಾರ್ಗ. ಪೇಟಿಎಂ, ಫೋನ್‌ಪೇ, ಗೂಗಲ್ ಪೇ ಇತ್ಯಾದಿ ಯುಪಿಐ ಪೇಮೆಂಟ್ ಆ್ಯಪ್‌ಗಳು ಹಲವು ಪ್ರಮುಖ ನಗರಗಳ ವಿದ್ಯುತ್ ಕಂಪನಿಗಳ ಎಲೆಕ್ಟ್ರಿಸಿಟಿ ಬಿಲ್ ಪಾವತಿ ಸೇವೆಗಳನ್ನು ಒಳಗೊಂಡಿರುತ್ತವೆ. ಬೆಂಗಳೂರಿನ ಬೆಸ್ಕಾಂನ ಬಿಲ್ ಪಾವತಿಗೆ ಬಹುತೇಕ ಆ್ಯಪ್‌ಗಳು ವೇದಿಕೆ ಕಲ್ಪಿಸುತ್ತವೆ.

ಬಿಲ್ ಜನರೇಟ್ ಆದ ಒಂದೆರಡು ದಿನಗಳ ಬಳಿಕ ಪೇಟಿಎಂ ಇತ್ಯಾದಿ ವ್ಯಾಲಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ವಿದ್ಯುತ್ ಬಿಲ್ ಪಾವತಿಸುವ ಅವಕಾಶ ಇರುತ್ತದೆ. ಆರ್ ಆರ್ ನಂಬರ್ ಹಾಕಿದರೆ ಬಿಲ್ ಕಾಣಿಸುತ್ತದೆ. ಗ್ರಾಹಕರ ಹೆಸರು, ಬಿಲ್ ಮೊತ್ತ ಇತ್ಯಾದಿ ವಿವರ ಇದರಲ್ಲಿ ಇರುತ್ತದೆ. ಒಮ್ಮೆ ನೀವು ಒಂದು ಬಿಲ್ ಅನ್ನು ಪಾವತಿಸಿದರೆ ಪ್ರತೀ ತಿಂಗಳು ನಿಮಗೆ ರಿಮೈಂಢರ್ ರೀತಿ ನೋಟಿಫಿಕೇಶನ್ ಕಾಣಿಸುತ್ತದೆ.

ನೆಟ್ ಬ್ಯಾಂಕಿಂಗ್‌ನಿಂದಲೂ

ನೀವು ಯಾವುದೇ ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್ ಬಳಸುತ್ತಿದ್ದರೆ ಅದರ ಮೂಲಕವೂ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಿದೆ. ಬಹುತೇಕ ಎಸ್ಕಾಂಗಳು ಇಂಥ ಪೇಮೆಂಟ್‌ಗೆಲ್ಲಾ ತೆರೆದುಕೊಂಡಿವೆ. ಟೆಲಿಕಾಂ ಕಂಫನಿಗಳ ಆ್ಯಪ್‌ಗಳ ಮೂಲಕವೂ ವಿದ್ಯುತ್ ಬಿಲ್ ಪಾವತಿಸಬಹುದು.

English summary

How To View and Pay Electricity Bill Online; Steps in Kannada

The units of power used, the amount due, the consumer's name and address, and other information are typically listed on monthly electricity bills. It's important to monitor and pay your electricity account on time.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X