For Quick Alerts
ALLOW NOTIFICATIONS  
For Daily Alerts

ತಿಂಗಳಿಗೆ 5000 ಹೂಡಿಕೆ ಮಾಡಿ ಮಾಸಿಕ 1.6 ಲಕ್ಷ ರೂ. ಪಿಂಚಣಿ ಪಡೆಯುವುದು ಹೇಗೆ?

|

ನಮ್ಮ ವೃದ್ಧಾಪ್ಯದಲ್ಲಿ ನಮಗೆ ಆರ್ಥಿಕವಾಗಿ ಸಹಾಯಕವಾಗುವುದು ಪಿಂಚಣಿಯಾಗಿದೆ. ಈ ಪಿಂಚಣಿಯು 2000 ರೂಪಾಯಿಯಿಂದ ಹಿಡಿದು 1 ಲಕ್ಷಕ್ಕೂ ಅಧಿಕ ರೂಪಾಯಿವರೆಗೆ ಬರಬಹುದು. ಮಾಸಿಕವಾಗಿ ನಿಮಗೆ 1 ಲಕ್ಷ ರೂಪಾಯಿ ಪಿಂಚಣಿ ಇದೆ ಎಂದು ಅಂದು ಕೊಳ್ಳಿ. ಆದರೆ ಹಣದುಬ್ಬರದಿಂದಾಗಿ ಅದೇ ಮೊತ್ತವು 20-25 ವರ್ಷಗಳ ನಿವೃತ್ತಿ ಜೀವನವನ್ನು ನಡೆಸಲು ಈ ಪಿಂಚಣಿ ಹಣವು ಸಾಕಾಗದೆ ಇರಬಹುದು.

 

ಸರಾಸರಿ ವಾರ್ಷಿಕ ಹಣದುಬ್ಬರ ದರವು ಶೇಕಡ 6 ಎಂದಾದರೆ ಒಬ್ಬ ನಿವೃತ್ತಿ ಜೀವನದಲ್ಲಿ ತಾನು ಈ ಹಿಂದೆ ಜೀವಿಸಿದಂತೆ ಜೀವನ ನಡೆಸಬೇಕಾದರೆ ಕೇವಲ ಒಂದು ಲಕ್ಷ ರೂಪಾಯಿ ಸಾಕಾಗಲಾರದು. ನಿಮಗೆ ರೂ.3.2 ಲಕ್ಷ/ತಿಂಗಳಿಗೆ ಹೆಚ್ಚು ಅಗತ್ಯವಿರಬಹುದು. ಆರೋಗ್ಯಕ್ಕಾಗಿ ವೆಚ್ಚ ಈ ವೃದ್ಧಾಪ್ಯದಲ್ಲೇ ಅಧಿಕವಾಗುವುದು. 25 ವರ್ಷಗಳ ನಂತರ ಅದೇ ಗುಣಮಟ್ಟದ ಜೀವನಕ್ಕಾಗಿ, ನಿಮಗೆ ರೂ. 4.2 ಲಕ್ಷಕ್ಕಿಂತ ಹೆಚ್ಚು ಅಗತ್ಯವಿರುತ್ತದೆ. ಯಾಕೆಂದರೆ ಹಣದುಬ್ಬರ ಅಧಿಕವಾಗುತ್ತಲೇ ಹೋಗುತ್ತಿದೆ. 30 ವರ್ಷಗಳ ನಂತರ ನಿಮಗೆ ರೂ. 5.7 ಲಕ್ಷಕ್ಕಿಂತ ಹೆಚ್ಚು ಅಗತ್ಯವಿದೆ.

ನೀವು ವಯಸ್ಸಾದಂತೆ, ಹಣದುಬ್ಬರದಿಂದಾಗಿ ಜೀವನ ವೆಚ್ಚವು ಏರುತ್ತಲೇ ಇರುತ್ತದೆ ಎಂಬುದು ಸ್ಪಷ್ಟವಾಗಿದೆ. ಅದಕ್ಕಾಗಿ ನೀವು ಈಗಲೇ ಹಣಕಾಸು ಸಲಹೆಗಾರರನ್ನು ಭೇಟಿ ಮಾಡಿ ಉತ್ತಮ ಹೂಡಿಕೆ ಮಾಡಿ ನಿವೃತ್ತಿ ಬಳಿಕ ಅಧಿಕ ಪಿಂಚಣಿ ಪಡೆಯಲು ಸಾಧ್ಯವಾಗುವಂತೆ ಮಾಡುವುದು ಒಳಿತು. ಆದರೆ ಎಷ್ಟು ಹೂಡಿಕೆ ಮಾಡಿದರೆ ಅಧಿಕ ಪಿಂಚಣಿ ಲಭ್ಯವಾಗಲಿದೆ. ಮಾಸಿಕವಾಗಿ ಐದು ಸಾವಿರ ರೂಪಾಯಿ ಹೂಡಿಕೆ ಮಾಡಿ ಮಾಸಿಕ 1 ಲಕ್ಷಕ್ಕೂ ಅಧಿಕ ಪಿಂಚಣಿಯನ್ನು ನಾವು ಪಡೆಯಲು ಹೇಗೆ ಸಾಧ್ಯ ಎಂಬ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ.....

 ಪಿಂಚಣಿಗಾಗಿ ಶೀಘ್ರವೇ ಹೂಡಿಕೆ ಉತ್ತಮ

ಪಿಂಚಣಿಗಾಗಿ ಶೀಘ್ರವೇ ಹೂಡಿಕೆ ಉತ್ತಮ

ನಿಮ್ಮ 20 ರ ದಶಕದಲ್ಲಿ ಸಾಧ್ಯವಾದಷ್ಟು ಬೇಗ ನಿವೃತ್ತಿ/ಪಿಂಚಣಿ ಹೂಡಿಕೆಯನ್ನು ಪ್ರಾರಂಭಿಸುವುದು ಉತ್ತಮವಾಗಿದೆ. ನೀವು ಮೊದಲೇ ಪ್ರಾರಂಭಿಸಿದರೆ ನಿಮ್ಮ ನಿವೃತ್ತಿ ಕಾರ್ಪಸ್ ಅಥವಾ ಪಿಂಚಣಿ ಮೊತ್ತ ವೇಗವಾಗಿ ಹೆಚ್ಚಾಗುತ್ತದೆ. ಇದಕ್ಕೆ ಉತ್ತಮ ಆಯ್ಕೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) ಆಗಿದೆ. ಇದು ನಿಮ್ಮ ನಿವೃತ್ತಿಗಾಗಿ ಉಳಿತಾಯವನ್ನು ಪ್ರಾರಂಭಿಸಲು ಮತ್ತೊಂದು ಆಯ್ಕೆಯಾಗಿದೆ. ಜನಪ್ರಿಯ, ಸರ್ಕಾರಿ ಬೆಂಬಲಿತ ನಿವೃತ್ತಿ ಯೋಜನೆಗಳಲ್ಲಿ ಎನ್‌ಪಿಎಸ್ ಒಂದಾಗಿದೆ. ಎನ್‌ಪಿಎಸ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ 25 ನೇ ವಯಸ್ಸಿನಿಂದ ಮಾಸಿಕವಾಗಿ ನೀವು ಐದು ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ರೂ. 1.6 ಲಕ್ಷಕ್ಕಿಂತ ಹೆಚ್ಚಿನ ಪಿಂಚಣಿಯನ್ನು ಪಡೆಯಲು ಸಾಧ್ಯವಾಗಲಿದೆ.

 ಊಹೆ ಏನು ಹೇಳುತ್ತದೆ?

ಊಹೆ ಏನು ಹೇಳುತ್ತದೆ?

* ನೀವು 25 ನೇ ವಯಸ್ಸಿನಲ್ಲಿ ಹೂಡಿಕೆ ಪ್ರಾರಂಭ ಮಾಡಿದರೆ 60 ವರ್ಷ ವಯಸ್ಸಿನವರೆಗೆ ಹೂಡಿಕೆ ಮಾಡುತ್ತೀರಿ.
* ನಿಮ್ಮ ಹೂಡಿಕೆಯ ಮೇಲೆ ಶೇಕಡ 12 ಲಾಭವನ್ನು ನಿರೀಕ್ಷಿಸಲಾಗಿದೆ. ನಿರೀಕ್ಷಿತ ಆದಾಯವು ಶೇಕಡ 8ಕ್ಕೆ ಕುಸಿದರೆ ನೀವು ರೂ 57,000 ಕ್ಕಿಂತ ಹೆಚ್ಚಿನ ಮಾಸಿಕ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಕ್ಯಾಲ್ಕುಲೇಟರ್ ಅಂದಾಜಿಸಿದೆ.
* ಶೇಕಡ 6 ವರ್ಷಾಶನ ದರವನ್ನು ನಿರೀಕ್ಷಿಸಲಾಗಿದೆ
* ಮುಂದಿನ 35 ವರ್ಷಗಳಲ್ಲಿ ಹೂಡಿಕೆ ಮಾಡಲಾಗುವ ನಿವೃತ್ತಿ ಆದಾಯದ ಪೂರ್ಣ ಮೊತ್ತಕ್ಕೆ ನೀವು ವರ್ಷಾಶನವನ್ನು ಪಡೆಯುತ್ತೀರಿ

 

 ರೂ 3.2 ಲಕ್ಷ ಪಿಂಚಣಿಯೂ ಪಡೆಯಬಹುದು!
 

ರೂ 3.2 ಲಕ್ಷ ಪಿಂಚಣಿಯೂ ಪಡೆಯಬಹುದು!

ನೀವು 25ನೇ ವಯಸ್ಸಿನಲ್ಲಿ ತಿಂಗಳಿಗೆ ರೂ 10,000 ಹೂಡಿಕೆ ಮಾಡಲು ಪ್ರಾರಂಭಿಸಿದರೆ ನೀವು ರೂ 3.2 ಲಕ್ಷ ಪಿಂಚಣಿ ಪಡೆಯಬಹುದು. ದೊಡ್ಡ ನಿವೃತ್ತಿ ನಿಧಿಗಾಗಿ, ಹೂಡಿಕೆ ಪ್ರಕ್ರಿಯೆಯಲ್ಲಿ ನಿಮ್ಮ ಕೊಡುಗೆಯನ್ನು ನೀವು ಸಂಗ್ರಹಿಸಬಹುದು. ಎನ್‌ಪಿಎಸ್‌ ನಿಯಮಗಳ ಪ್ರಕಾರ ಚಂದಾದಾರರು 60 ವರ್ಷವನ್ನು ತಲುಪಿದಾಗ ಅವರ ಒಟ್ಟು ಪಿಂಚಣಿ ಆಸ್ತಿಯ ಶೇಕಡ ನೂರರಷ್ಟು ವರ್ಷಾಶನವನ್ನು ಪಡೆಯಬಹುದು. ಅಂತಿಮ ಎನ್‌ಪಿಎಸ್ ಆದಾಯವು ನೀವು ಆಯ್ಕೆಮಾಡುವ ಪಿಂಚಣಿ ನಿಧಿಯ ಮೇಲೆ ಆಧಾರಿತವಾಗಿರುತ್ತದೆ.

 ಎನ್‌ಪಿಎಸ್ ಖಾತೆ ಯಾರು ತೆರೆಯಬಹುದು?

ಎನ್‌ಪಿಎಸ್ ಖಾತೆ ಯಾರು ತೆರೆಯಬಹುದು?

ಇಲ್ಲಿ ವಾಸಿಸದವರೂ ಸೇರಿದಂತೆ ಎಲ್ಲಾ ಭಾರತೀಯ ನಾಗರಿಕರಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಯಾವುದೇ ವರ್ಗದ ವ್ಯಕ್ತಿಗಳು (ನಾಗರಿಕರು), 18-60 ವರ್ಷ ವಯಸ್ಸಿನ ಭಾರತೀಯ ಮತ್ತು ಭಾರತೀಯರಲ್ಲದ ನಿವಾಸಿಗಳಾಗಿದ್ದರೂ, ರಾಜ್ಯ ಅಥವಾ ಕೇಂದ್ರ ಸರ್ಕಾರ ಅಥವಾ ಯಾವುದೇ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವವರು ಎನ್‌ಪಿಎಸ್ ಚಂದಾದಾರಾಗಲು ಅರ್ಹರಾಗಿದ್ದಾರೆ. (ಈ ಮಾಹಿತಿಯನ್ನು ಕೇವಲ ಮಾಹಿತಿ ಉದ್ದೇಶದಿಂದಾಗಿ ನೀಡಲಾಗಿದೆ. ಹೂಡಿಕೆಯಿಂದಾಗುವ ಯಾವುದೇ ಅಪಾಯಕ್ಕೆ ಲೇಖಕರು ಹೊಣೆಯಾಗುವುದಿಲ್ಲ)

English summary

How You Get a Monthly Pension of Rs. 1.6 lakh by Investing 5,000 Monthly?

NPS Calculator: Here's how you may invest just 5,000 rupees per month to get a monthly pension of Rs. 1.6 lakh.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X