For Quick Alerts
ALLOW NOTIFICATIONS  
For Daily Alerts

ಹೌಸಿಂಗ್ ಲೋನ್ ಬಡ್ಡಿ ದರ ಫಿಕ್ಸೆಡ್ ಒಳ್ಳೆಯದೋ ಅಥವಾ ಫ್ಲೋಟಿಂಗ್ ಉತ್ತಮವೋ?

|

ಆಸ್ತಿಗಳ ಮೇಲೆ ಹೂಡಿಕೆ ಮಾಡಬೇಕು ಎಂದು ನಗದು ಇಟ್ಟುಕೊಂಡು ಕಾಯುತ್ತಿದ್ದವರ ಪಾಲಿಗೆ ಸಮಾಧಾನ ಪಡುವಂಥ ಸುದ್ದಿ ಇಲ್ಲಿದೆ. ರಿಯಲ್ ಎಸ್ಟೇಟ್ ಬೆಲೆಯಲ್ಲಿ ಇಳಿಕೆ ಆಗಿದೆ ಹಾಗೂ ಗೃಹ ಸಾಲ ಬಡ್ಡಿ ದರದಲ್ಲಿ ಭಾರೀ ಇಳಿಕೆ ಆಗಿದೆ. ಆದರೆ ಈ ಸನ್ನಿವೇಶಕ್ಕೆ ಗೃಹ ಸಾಲದ ಮೇಲಿನ ಬಡ್ಡಿ ದರ ಫ್ಲೋಟಿಂಗ್ ಪಡೆಯಬೇಕೆ ಅಥವಾ ಫಿಕ್ಸೆಡ್ ಪಡೆಯಬೇಕೆ ಎಂಬ ಪ್ರಶ್ನೆ ಇದ್ದೇ ಇದೆ.

 

ಹೌಸಿಂಗ್ ಲೋನ್ ಬಡ್ಡಿ 7%ಗಿಂತ ಕಡಿಮೆ ಇರುವ ಭಾರತದ ಪ್ರಮುಖ ಬ್ಯಾಂಕ್ ಗಳಿವುಹೌಸಿಂಗ್ ಲೋನ್ ಬಡ್ಡಿ 7%ಗಿಂತ ಕಡಿಮೆ ಇರುವ ಭಾರತದ ಪ್ರಮುಖ ಬ್ಯಾಂಕ್ ಗಳಿವು

ಇನ್ನು ಈಗಾಗಲೇ ಫ್ಲೋಟಿಂಗ್ ಬಡ್ಡಿ ದರದಲ್ಲಿ ಸಾಲ ಪಡೆದವರು ದಾಖಲೆಯ ಕನಿಷ್ಠ ಮಟ್ಟದ ಫಿಕ್ಸೆಡ್ ಬಡ್ಡಿ ದರಕ್ಕೆ ಬದಲಿಸಿಕೊಳ್ಳಬೇಕೆ ಎಂಬ ಗೊಂದಲದಲ್ಲಿ ಕೆಲವರಿದ್ದಾರೆ. ಎಲ್ಲ ಬ್ಯಾಂಕ್ ಗಳು ರಿಸರ್ವ್ ಬ್ಯಾಂಕ್ ಆಫ್ ಆಫ್ ಇಂಡಿಯಾದಿಂದ ಬಡ್ಡಿ ದರಕ್ಕೆ ಪಡೆಯುವುದನ್ನು 'ರೆಪೋ ದರ' ಎನ್ನಲಾಗುತ್ತದೆ.

ಎರಡು ತಿಂಗಳಿಗೊಮ್ಮೆ ರೆಪೋ ದರ ಪರಿಷ್ಕರಣೆ

ಎರಡು ತಿಂಗಳಿಗೊಮ್ಮೆ ರೆಪೋ ದರ ಪರಿಷ್ಕರಣೆ

ಈ ದರವನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡುತ್ತದೆ ಆರ್ ಬಿಐ. ರೆಪೋ ದರವನ್ನು ಆಧಾರವಾಗಿಟ್ಟುಕೊಳ್ಳುವ ಬ್ಯಾಂಕ್ ಅದರ ಮೇಲೆ ಮಾರ್ಜಿನ್ ಇಟ್ಟುಕೊಂಡು, ಸಾಲವನ್ನು ವಿತರಣೆ ಮಾಡುತ್ತವೆ. ಗೃಹ ಸಾಲದ ಮೇಲಿನ ಫ್ಲೋಟಿಂಗ್ ಬಡ್ಡಿ ದರವು ರೆಪೋ ದರಕ್ಕೆ ಜೋಡಣೆ ಆಗಿರುತ್ತದೆ. ಒಂದು ವೇಳೆ ಗೃಹ ಸಾಲವು ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ಬೇಸ್ಡ್ ರೇಟ್ (MCLR) ಜತೆಗೆ ಜೋಡಣೆ ಆಗಿದ್ದಲ್ಲಿ ರೆಪೋ ದರ ಕಡಿತವೂ ಸಂಪೂರ್ಣವಾಗಿ ಬ್ಯಾಂಕ್ ನಿಂದ ಸಾಲ ಪಡೆದವರಿಗೆ ಸಂಪೂರ್ಣವಾಗಿ ವರ್ಗಾವಣೆ ಆಗಲ್ಲ. ಒಂದು ವೇಳೆ ಗೃಹ ಸಾಲವನ್ನು ರೆಪೋ ಆಧಾರಿತ ಸಾಲ ದರದ ಮೇಲೆ ಪಡೆದುಕೊಂಡಿದ್ದರೆ ರೆಪೋ ದರ ಕಡಿತ ಸಂಪೂರ್ಣವಾಗಿ ಸಾಲಗಾರರಿಗೆ ದೊರೆಯುತ್ತದೆ. ಈ RLLR ಕಳೆದ ಅಕ್ಟೋಬರ್ ನಿಂದ ಜಾರಿಗೆ ಬಂದಿದೆ.

ಗೃಹ ಸಾಲದ ಮೇಲಿನ ಬಡ್ಡಿ ದರ 6.7% ಮುಟ್ಟಿದೆ
 

ಗೃಹ ಸಾಲದ ಮೇಲಿನ ಬಡ್ಡಿ ದರ 6.7% ಮುಟ್ಟಿದೆ

ಫಿಕ್ಸೆಡ್ ಬಡ್ಡಿ ದರದಲ್ಲಿ ಗೃಹ ಸಾಲ ಪಡೆದಿದ್ದಲ್ಲಿ ರೆಪೋ ದರದ ಜತೆಗೆ ಅದು ಬದಲಾವಣೆ ಆಗಲ್ಲ. ಈ ಪ್ರಕರಣದಲ್ಲಿ ಇಎಂಐ ಹಾಗೂ ಮರುಪಾವತಿ ಅವಧಿ ಎರಡರಲ್ಲೂ ಬದಲಾವಣೆ ಆಗಲ್ಲ. ಆದರೆ ಫ್ಲೋಟಿಂಗ್ ಬಡ್ಡಿ ದರದಲ್ಲಿ ಇಐಂಐ ಅಥವಾ ಅವಧಿ ಅಥವಾ ಎರಡೂ ರೆಪೋ ದರದ ಆಧಾರದ ಮೇಲೆ ಬದಲಾಗುತ್ತಲೇ ಇರುತ್ತದೆ. ಕಳೆದ ಕೆಲ ಸಮಯದಿಂದ ರೆಪೋ ದರ ಇಳಿಕೆ ಹಾದಿಯಲ್ಲಿದೆ. ಇದೊಂದೇ ವರ್ಷದಲ್ಲಿ ರೆಪೋ ದರ 2.5% ಕಡಿಮೆ ಆಗಿದೆ. ಈ ಕಾರಣಕ್ಕೆ ಹೋಮ್ ಲೋನ್ ಸೇರಿದಂತೆ ವಿವಿಧ ಸಾಲಗಳ ಮೇಲೆ ಬಡ್ಡಿ ದರ ಇಳಿಕೆ ಆಗಿದೆ. ಅದರ ಪರಿಣಾಮವಾಗಿ ಗೃಹ ಸಾಲ ಅತ್ಯಂತ ಕಡಿಮೆ ಬಡ್ಡಿ ದರವಾದ 6.7% ಮುಟ್ಟಿದೆ. ಈಗ ಹೊಸದಾಗಿ ಸಾಲ ಪಡೆಯುವವರಿಗೆ ಹಾಗೂ ಈಗಾಗಲೇ ಸಾಲ ಪಡೆದವರಿಗೆ ವ್ಯತ್ಯಾಸ ಆಗುತ್ತದೆ. ಇನ್ನು ಈಗಾಗಲೇ ಸಾಲ ಪಡೆದವರಲ್ಲಿಯೂ MCLR ಆಧಾರದಲ್ಲಿ ಪಡೆದವರಿಗೊಂದು ಹಾಗೂ RLLR ಮೇಲೆ ಸಾಲ ಪಡೆದವರಿಗೆ ಇನ್ನೊಂದು ದರ ಇರುತ್ತದೆ.

ಫಿಕ್ಸೆಡ್ ಬಡ್ಡಿ ದರಕ್ಕೆ ಬದಲಾಗಲು ಶುಲ್ಕ

ಫಿಕ್ಸೆಡ್ ಬಡ್ಡಿ ದರಕ್ಕೆ ಬದಲಾಗಲು ಶುಲ್ಕ

ಈಗಿನ ಆರ್ಥಿಕ ಸನ್ನಿವೇಶಕ್ಕೆ ಹೇಳುವುದಾದರೆ, ಬಹಳ ಹಿಂದಿನಿಂದ ಬಡ್ಡಿ ದರ ಇಳಿಕೆ ಆಗುತ್ತಾ ಬರುತ್ತಿದೆ. ಬಡ್ಡಿ ದರ ಅತ್ಯಂತ ಕನಿಷ್ಠ ಮಟ್ಟಕ್ಕೆ ಬಂದಾಗ ಫಿಕ್ಸೆಡ್ ದರಕ್ಕೆ ಬದಲಾಗಲು ಯತ್ನಿಸಬಹುದು. ಆದರೆ ಸದ್ಯಕ್ಕೆ ಬಡ್ಡಿ ದರ ತಳ ಮಟ್ಟವನ್ನು ಮುಟ್ಟಿಲ್ಲ ಎನಿಸುವಂತಿದೆ. ಹಾಗಿದ್ದರೆ ಫಿಕ್ಸೆಡ್ ಬಡ್ಡಿ ದರಕ್ಕೆ ಗೃಹ ಸಾಲವನ್ನು ಬದಲಿಸಿಕೊಳ್ಳುವ ಮುನ್ನ ಯಾವ ಅಂಶ ಗಮನಿಸಬೇಕು ಗೊತ್ತೆ? ಬಡ್ಡಿ ದರ ಯಾವ ದಿಕ್ಕಿನೆಡೆಗೆ ಸಾಗುತ್ತಿದೆ ಮತ್ತು ನಿಮ್ಮ ಸ್ಥಿತಿ ಏನು ಎಂಬುದನ್ನು ಗಮನಿಸಿಕೊಳ್ಳಿ. ಇನ್ನು ಈಗಾಗಲೇ ಫ್ಲೋಟಿಂಗ್ ದರದಲ್ಲಿ ಸಾಲ ಪಡೆದಿದ್ದಲ್ಲಿ ಅದನ್ನು ಫಿಕ್ಸೆಡ್ ದರಕ್ಕೆ ಬದಲಾಯಿಸಿಕೊಳ್ಳಲು ಇಂತಿಷ್ಟು ಶುಲ್ಕ ಎಂದಿದ್ದು, ಒಂದೊಂದು ಬ್ಯಾಂಕ್ ಅಥವಾ ಸಂಸ್ಥೆಯಲ್ಲಿ ಒಂದೊಂದು ಬಗೆಯ ದರವಿದೆ.

ನಿರ್ಧಾರಕ್ಕೆ ತೆಗೆದುಕೊಳ್ಳುವ ಮುನ್ನ ಇವೆಲ್ಲ ಗಮನಿಸಿ

ನಿರ್ಧಾರಕ್ಕೆ ತೆಗೆದುಕೊಳ್ಳುವ ಮುನ್ನ ಇವೆಲ್ಲ ಗಮನಿಸಿ

ಆ ಶುಲ್ಕ ಎಷ್ಟು ಎಂಬುದನ್ನು ಗಣನೆಗೆ ತೆಗೆದುಕೊಂಡು, ಬದಲಾವಣೆ ಮಾಡಿಕೊಂಡರೆ ಲಾಭವೇ ಎಂದು ಅಳೆದು- ತೂಗಿ ನೋಡಿ. ಒಂದು ವೇಳೆ ಸಾಲ ಮರುಪಾವತಿ ಅವಧಿ ಹತ್ತಿರ ಇದ್ದಲ್ಲಿ ಬಡ್ಡಿ ದರ ಪಾವತಿ ಬದಲಾವಣೆ ಮಾಡಿಕೊಳ್ಳದಿದ್ದಲ್ಲಿ ಉತ್ತಮ. ಏಕೆಂದರೆ, ಅದಕ್ಕೆ ತಗುಲುವ ವೆಚ್ಚವೇ ಹೆಚ್ಚಾಗುತ್ತದೆ. ಫಿಕ್ಸೆಡ್ ಬಡ್ಡಿ ದರ ಇದ್ದಲ್ಲಿ ನಿಶ್ಚಿತ ಇಎಂಐ ಬರುತ್ತದೆ. ತಿಂಗಳಿಗೆ ಇಂತಿಷ್ಠು ಹಣವೇ ಬೇಕಾಗಬಹುದು ಎಂಬ ಖಾತ್ರಿ ಇರುತ್ತದೆ. ಫಿಕ್ಸೆಡ್ ಬಡ್ಡಿ ದರಕ್ಕೆ ಬದಲಾಗುವುದಿದ್ದಲ್ಲಿ ಅನುಕೂಲ- ಅನನುಕೂಲಗಳನ್ನು ಅಳೆದು ನೋಡಿ, ನಿರ್ಧಾರ ಮಾಡಿ.

English summary

Is Fixed Or Floating Rate Of Interest Best On Housing Loan?

Is fixed or floating rate of interest on housing loan, which is the best? Here is an explainer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X