For Quick Alerts
ALLOW NOTIFICATIONS  
For Daily Alerts

ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಕಡ್ಡಾಯವೇ?

|

ಹಣಕಾಸು ಕಾಯಿದೆ, 2017 ಆದಾಯ ತೆರಿಗೆ ಕಾಯಿದೆ, 1961 ರಲ್ಲಿ ಹೊಸ ಸೆಕ್ಷನ್ 139AA ಅನ್ನು ಸೇರಿಸಲಾಗಿದೆ. ಆದಾಯ ತೆರಿಗೆ ಭಾರತದ ಅಧಿಕೃತ ವೆಬ್‌ಸೈಟ್ ಪ್ರಕಾರ ಜುಲೈ 1, 2017 ರಿಂದ ಜಾರಿಗೆ ಬರುವಂತೆ ಪ್ಯಾನ್‌ಗೆ ಅರ್ಜಿ ಸಲ್ಲಿಸುವಾಗ ಅಥವಾ ಆದಾಯದ ರಿಟರ್ನ್ ಅನ್ನು ಒದಗಿಸುವಾಗ ಆಧಾರ್ ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಬೇಕು.

 

ಯಾವುದೇ ವ್ಯಕ್ತಿ ಆಧಾರ್ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ, ಆದರೆ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರೆ ಐಟಿಆರ್‌ನಲ್ಲಿ ಆಧಾರ್ ಅರ್ಜಿ ನಮೂನೆಯ ದಾಖಲಾತಿ ಐಡಿಯನ್ನು ಉಲ್ಲೇಖ ಮಾಡಬಹುದು. ಜುಲೈ 1, 2017ರ ಬಳಿಕ ಪ್ಯಾನ್ ಅನ್ನು ಪಡೆದ ವ್ಯಕ್ತಿಯು ಆಧಾರ್ ಅನ್ನು ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಈ ಹಿಂದೆಯೇ ಸುತ್ತೋಲೆಯಲ್ಲಿ ತಿಳಿಸಿದೆ. ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ವಿಫಲವಾದರೆ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯ ಮಾಡಲಾಗುತ್ತದೆ.

ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದ ಕಾರಣ ಪ್ಯಾನ್ ನಿಷ್ಕ್ರಿಯಗೊಳ್ಳುವಂತಹ ಎಲ್ಲಾ ಪರಿಣಾಮಗಳು 01-04-2023 ರಿಂದ ಜಾರಿಗೆ ಬರುತ್ತವೆ ಎಂದು ಸಿಬಿಡಿಟಿ ಸೂಚಿಸಿದೆ. ಆದರೆ ಆದಾಯ ತೆರಿಗೆ ಇಂಡಿಯಾ ವೆಬ್‌ಸೈಟ್‌ನ ಪ್ರಕಾರ 01-04-2022 ರಿಂದ 31-03-2023 ರವರೆಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಿದರೆ ತೆರಿಗೆದಾರರು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಆಧಾರ್ ಪ್ಯಾನ್ ಲಿಂಕಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ಮುಂದೆ ಓದಿ...

 ಇ-ಫೈಲಿಂಗ್ ಪೋರ್ಟಲ್ ಅನ್ನು ಬಳಸಿ ಆಧಾರ್-ಪ್ಯಾನ್ ಲಿಂಕ್ ಹೀಗೆ ಮಾಡಿ

ಇ-ಫೈಲಿಂಗ್ ಪೋರ್ಟಲ್ ಅನ್ನು ಬಳಸಿ ಆಧಾರ್-ಪ್ಯಾನ್ ಲಿಂಕ್ ಹೀಗೆ ಮಾಡಿ

ತೆರಿಗೆದಾರನು ತನ್ನ ನೋಂದಾಯಿತ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕಾಗುತ್ತದೆ. ಲಾಗಿನ್ ಆದ ನಂತರ, Profile Settings ಕೆಳಗಡೆ link Aadhaar ಆಯ್ಕೆ ಲಭ್ಯವಾಗಲಿದೆ. ಆಧಾರ್ ಹಾಗೂ ಪ್ಯಾನ್ ಎರಡರಲ್ಲೂ ಇದ್ದ ಹೆಸರು, ಹುಟ್ಟಿದ ದಿನಾಂಕ ಒಂದೇ ಆಗಿದ್ದರೆ ಲಿಂಕ್ ಮಾಡಲಾಗುತ್ತದೆ.

 ಆಧಾರ್ ಸಂಖ್ಯೆಯ ಮಾಹಿತಿಗೆ ಸಂಬಂಧಿಸಿದಂತೆ ಡೀಫಾಲ್ಟ್‌ಗೆ ಶುಲ್ಕ ಎಷ್ಟು?
 

ಆಧಾರ್ ಸಂಖ್ಯೆಯ ಮಾಹಿತಿಗೆ ಸಂಬಂಧಿಸಿದಂತೆ ಡೀಫಾಲ್ಟ್‌ಗೆ ಶುಲ್ಕ ಎಷ್ಟು?

ಹಣಕಾಸು ಕಾಯಿದೆ, 2021 ಆಧಾರ್ ಸಂಖ್ಯೆಯನ್ನು ತಿಳಿಸುವಲ್ಲಿ ಡೀಫಾಲ್ಟ್‌ ಆದಲ್ಲಿ ಶುಲ್ಕವನ್ನು ವಿಧಿಸಲು ಹೊಸ ಸೆಕ್ಷನ್ 234H ಅನ್ನು ಸೇರಿಸಲಾಗಿದೆ. ಸೆಕ್ಷನ್ 139AA ಅಡಿಯಲ್ಲಿ ಒಬ್ಬ ವ್ಯಕ್ತಿಯು ತನ್ನ ಆಧಾರ್ ಸಂಖ್ಯೆ ಅನ್ನು ಸಲ್ಲಿಕೆ ಮಾಡುವ ಅಗತ್ಯವಿದ್ದರೆ, ಆದರೆ ಸಲ್ಲಿಕೆ ಮಾಡಿಲ್ಲದಿದ್ದರೆ, ದಂಡವನ್ನು ಕಟ್ಟಬೇಕಾಗುತ್ತದೆ. ಈ ದಂಡವು 1,000 ರೂಪಾಯಿಗಿಂತ ಅಧಿಕವಾಗಿರುವುದಿಲ್ಲ. ನಿಗದಿತ ದಿನಾಂಕದೊಳಗೆ ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡಲು ವಿಫಲವಾದರೆ, ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಗರಿಷ್ಠ ಒಂದು ಸಾವಿರದವರೆಗೆ ಪಾವತಿ ಮಾಡಬೇಕಾಗುತ್ತದೆ. ಸಿಬಿಡಿಟಿ ಅಧಿಸೂಚನೆ ಸಂಖ್ಯೆ. 17/2022, ದಿನಾಂಕ 29-03-2022 ರ ಅಧಿಸೂಚನೆಯು ಪ್ಯಾನ್‌ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡದಿದ್ದರೆ ವಿಧಿಸಬೇಕಾದ ಶುಲ್ಕವನ್ನು ಸೂಚಿಸಲು ನಿಯಮ 114 ಅನ್ನು ತಿದ್ದುಪಡಿ ಮಾಡಿದೆ. ನಿಯಮ 114(5A) ಪ್ರಕಾರ, ವ್ಯಕ್ತಿಯು ತನ್ನ ಆಧಾರ್ ಸಂಖ್ಯೆಯನ್ನು ನಿಗದಿತ ದಿನಾಂಕದ ನಂತರ ಲಿಂಕ್ ಮಾಡಿದರೆ, ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

* 01-04-2022 ಮತ್ತು 30-06-2022 ರ ನಡುವೆ ಆಧಾರ್ ಲಿಂಕ್ ಮಾಡಿದ್ದರೆ 500 ರೂಪಾಯಿ ದಂಡ
* ಜುಲೈ ಬಳಿಕ 1000 ರೂಪಾಯಿಗಿಂತ ಅಧಿಕ ದಂಡ

 

 ಎಸ್‌ಎಂಎಸ್‌ ಮೂಲಕ ಆಧಾರ್ ಪ್ಯಾನ್ ಲಿಂಕ್ ಮಾಡುವುದು ಹೇಗೆ?

ಎಸ್‌ಎಂಎಸ್‌ ಮೂಲಕ ಆಧಾರ್ ಪ್ಯಾನ್ ಲಿಂಕ್ ಮಾಡುವುದು ಹೇಗೆ?

ತಮ್ಮ ಆಧಾರ್ ಸಂಖ್ಯೆಯನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಲು ಬಯಸುವ ತೆರಿಗೆದಾರರು ಈ ಕೆಳಗಿನಂತೆ 567678 ಅಥವಾ 56161 ಗೆ ಎಸ್‌ಎಂಎಸ್‌ ಕಳುಹಿಸಬೇಕಾಗುತ್ತದೆ.

567678 ಅಥವಾ 56161 ಗೆ ಎಸ್‌ಎಂಎಸ್‌ ಕಳುಹಿಸುವ ಉದಾಹರಣೆ:

UIDPAN 111122223333 AAAPA9999Q

ತೆರಿಗೆದಾರರ ಹೆಸರು ಮತ್ತು ಹುಟ್ಟಿದ ದಿನಾಂಕವು ಆಧಾರ್ ಮತ್ತು ಪ್ಯಾನ್‌ಗೆ ಒಂದೇ ಆಗಿದ್ದರೆ ಆಧಾರ್ ಸಂಖ್ಯೆಯನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.

 

English summary

Is It Mandatory To Link Aadhaar Number With PAN?, Details Here in Kannada

Is It Mandatory To Link Aadhaar Number With PAN?, what income tax Act says explained in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X