For Quick Alerts
ALLOW NOTIFICATIONS  
For Daily Alerts

ಬಂಪರ್ ಲಾಟರಿ: 25 ಕೋಟಿ ರೂಪಾಯಿ ಗೆದ್ದ ಆಟೋ ಡ್ರೈವರ್

|

ಕೇರಳದಲ್ಲಿ ಪ್ರತಿ ದಿನ ಲಾಟರಿ ಇರುತ್ತದೆ. ಪ್ರತಿ ಲಾಟರಿ ಟಿಕೆಟ್‌ಗೆ 40 ರೂಪಾಯಿ ಆಗಿದ್ದು, ಬಹುಮಾನ ಬೇರೆ ಬೇರೆ ರೀತಿಯಲ್ಲಿದೆ. ಆದರೆ ಕೇರಳದಲ್ಲಿ ಹಬ್ಬದ ಸಂದರ್ಭದಲ್ಲಿ ಬಂಪರ್ ಲಾಟರಿ ಇರುತ್ತದೆ. ಈ ಬಾರಿ ಓಣಂ ಪ್ರಯುಕ್ತ ಮಾಡಲಾಗಿದ್ದ ಬಂಪರ್ ಲಾಟರಿಯಲ್ಲಿ ಆಟೋ ಡ್ರೈವರ್ 25 ಕೋಟಿ ರೂಪಾಯಿ ಗೆಲ್ಲುವ ಮೂಲಕ ಮನೆಮಾತಾಗಿದ್ದಾರೆ.

 

ಕೇರಳದಲ್ಲಿ ಈ ವರ್ಷದ ಓಣಂ ಬಂಪರ್ ಲಾಟರಿ ಗೆದ್ದಿರುವ ಅನೂಪ್‌ಗೆ ಇದು "ಕನಸು ನನಸು" ಕೂಡಾ ಹೌದು. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಅನೂಪ್ ಶನಿವಾರ ರಾತ್ರಿ ಭಗವತಿ ಏಜೆನ್ಸಿಯಿಂದ ಅದೃಷ್ಟದ ಟಿಕೆಟ್ ಖರೀದಿಸಿದ್ದರು. ಈ ವರ್ಷದ ಓಣಂ ಬಂಪರ್ ಮೊತ್ತವು 25 ಕೋಟಿ ರೂಪಾಯಿ ಆಗಿದೆ. ಆ ಮೊತ್ತವನ್ನು ಅನೂಪ್ ಗೆದ್ದುಕೊಂಡಿದ್ದಾರೆ.

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಭಾನುವಾರದಂದು ತಿರುಓಣಂ ಬಂಪರ್ 2022ರ ಫಲಿತಾಂಶವನ್ನು ಪ್ರಕಟ ಮಾಡಿದೆ. ಮಧ್ಯಾಹ್ನ 2 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 25 ಕೋಟಿ ರೂಪಾಯಿ ದೊರೆಯಲಿದೆ. ದ್ವಿತೀಯ ಬಹುಮಾನ 5 ಕೋಟಿ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಕೋಟಿ ರೂಪಾಯಿ ಆಗಿದೆ. ಈ ಲಾಟರಿ ಗೆದ್ದವರ ಬಗ್ಗೆ, ಪ್ರಥಮ ಬಹುಮಾನ ಗೆದ್ದ ಆಟೋ ಡ್ರೈವರ್‌ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಮಲೇಷ್ಯಾದಲ್ಲಿ ಬಾಣಸಿಗನಾಗುವ ಕನಸು ಹೊತ್ತ ಅನೂಪ್

ಮಲೇಷ್ಯಾದಲ್ಲಿ ಬಾಣಸಿಗನಾಗುವ ಕನಸು ಹೊತ್ತ ಅನೂಪ್

ಈ ಹಿಂದೆ ಅನೂಪ್ ಹೋಟೆಲ್‌ನಲ್ಲಿ ಅಡುಗೆ ಮಾಡುವ ಕಾರ್ಯವನ್ನು (ಬಾಣಸಿಗ) ಮಾಡುತ್ತಿದ್ದರು. ಬಳಿಕ ತಾನು ಮಲೇಷ್ಯಾಕ್ಕೆ ಹೋಗಬೇಕು, ಅಲ್ಲಿ ಹೋಟೆಲ್ ಚೆಫ್ ಆಗಬೇಕು ಎಂಬ ಕನಸನ್ನು ಹೊತ್ತಿದ್ದರು. ಇದಕ್ಕಾಗಿ ಅನೂಪ್ ಸಾಲಕ್ಕಾಗಿ ಬ್ಯಾಂಕ್ ಮೊರೆ ಹೋಗಿದ್ದು, ಸಾಲ ಮಂಜೂರಾಗಿದೆ. ಈ ನಡುವೆ ಈಗ ಅನೂಪ್‌ಗೆ ಲಾಟರಿ ಒಳಿದಿದೆ. ಭಾನುವಾರ ಕೇರಳದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್, ಸಾರಿಗೆ ಸಚಿವ ಆಂಟನಿ ರಾಜು ಮತ್ತು ವಟ್ಟಿಯೂರ್ಕಾವು ಶಾಸಕ ವಿ.ಕೆ.ಪ್ರಶಾಂತ್ ಸಮ್ಮುಖದಲ್ಲಿ ಲಕ್ಕಿ ಡ್ರಾ ಮಾಡಿದ್ದರು.

 ಇತಿಹಾಸದಲ್ಲೇ ಅತೀ ಹೆಚ್ಚ ಮೊತ್ತವಿದು!

ಇತಿಹಾಸದಲ್ಲೇ ಅತೀ ಹೆಚ್ಚ ಮೊತ್ತವಿದು!

ಈ ವರ್ಷದ ಓಣಂ ಬಂಪರ್ ಬೆಲೆಯು ಕೇರಳ ಲಾಟರಿ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಯ ಹಣವಾಗಿದೆ. ಟಿಕೆಟ್ ಸಂಖ್ಯೆ TJ-750605ಕ್ಕೆ ಮೊದಲ ಬಹುಮಾನ ಲಭ್ಯವಾಗಿದೆ. ಅದೃಷ್ಟಶಾಲಿ ವಿಜೇತರು ಯಾರು ಎಂದು ತಿಳಿಯಲು ಎಲ್ಲರೂ ಕಾತುರರಾಗಿದ್ದರು. ನಂತರ ಅನೂಪ್ ನಾನೇ ಅದೃಷ್ಟಶಾಲಿ ಎಂದು ಹೇಳಿಕೊಂಡಿದ್ದಾರೆ. ಎಲ್ಲಾ ತೆರಿಗೆ ಕಡಿತಗಳ ನಂತರ, ಅನೂಪ್ 15 ಕೋಟಿ 75 ಲಕ್ಷ ರೂಪಾಯಿಗಳನ್ನು ಪಡೆಯಲಿದ್ದಾರೆ. ಪ್ರತಿ ಲಾಟರಿ ಟಿಕೆಟ್‌ನ ಬೆಲೆ 500 ರೂಪಾಯಿ ಆಗಿದೆ.

 ಲಾಟರಿ ಬಹುಮಾನ ವಿವರ
 

ಲಾಟರಿ ಬಹುಮಾನ ವಿವರ

67 ಲಕ್ಷ ರೂಪಾಯಿಗಳ ಓಣಂ ಬಂಪರ್ ಟಿಕೆಟ್‌ಗಳನ್ನು ಈ ವರ್ಷ ಮುದ್ರಿಸಲಾಗಿದೆ. ಈ ಲಾಟರಿ ಕೇರಳ ಸರ್ಕಾರದ ಮುಖ್ಯ ಆದಾಯದ ಮೂಲಗಳಲ್ಲಿ ಒಂದಾಗಿದೆ. ಟಿಕೆಟ್ ಮಾರಾಟ ಮಾಡಿದ ಲಾಟರಿ ಏಜೆಂಟ್ ಥಂಕರಾಜ್ ಕೂಡ ಕಮಿಷನ್ ಪಡೆಯುತ್ತಾರೆ.

ಮೊದಲ ಬಹುಮಾನ: 25 ಕೋಟಿ ರೂಪಾಯಿ (ಒಬ್ಬರಿಗೆ)
2ನೇ ಬಹುಮಾನ: 5 ಕೋಟಿ ರೂಪಾಯಿ (ಒಬ್ಬರಿಗೆ)
3ನೇ ಬಹುಮಾನ: 1 ಕೋಟಿ ರೂಪಾಯಿ (10 ಮಂದಿಗೆ)
4ನೇ ಬಹುಮಾನ: 1,00,000 ರು (90 ಮಂದಿಗೆ)
5ನೇ ಬಹುಮಾನ: 5,000ರು (72,000 ಮಂದಿಗೆ)
6ನೇ ಬಹುಮಾನ: 3,000 ರು (48,600 ಮಂದಿಗೆ)
7ನೇ ಬಹುಮಾನ: 2,000ರು (66,600 ಮಂದಿಗೆ)
8ನೇ ಬಹುಮಾನ: 1,000 ರು (210600 ಮಂದಿ)
ಸಮಾಧಾನಕರ ಬಹುಮಾನ: 5 ಲಕ್ಷರು (1 ಮಂದಿ)

 

English summary

Kerala Lottery Results: Auto Driver Wins Rs 25 Crore

Kerala lottery results: The total amount of the lottery winner (first prize) was Rs 25 crore. Rs 5 crores was the amount for the second prize and 1 crore each for 10 persons as the third prize.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X