For Quick Alerts
ALLOW NOTIFICATIONS  
For Daily Alerts

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

|

ಭಾರತ ಕೃಷಿ ಪ್ರಧಾನವಾದ ದೇಶವಾಗಿದೆ. ರೈತರೇ ದೇಶದ ಬೆನ್ನುಲುಬು. ಆದರೆ ಪ್ರಸ್ತುತ ಹದಗೆಟ್ಟ ಹವಾಮಾನ ಸ್ಥಿತಿ, ಮಳೆಯ ಸೇರಿ ಹಲವಾರು ಕಾರಣದಿಂದಾಗಿ ಬೆಳೆಯು ನಾಶವಾಗುತ್ತಿದೆ. ಇನ್ನು ಅದೆಷ್ಟೋ ಸಂದರ್ಭದಲ್ಲಿ ರೈತನ ಬೆಳೆಗೆ ಬೆಲೆಯೇ ಇಲ್ಲದಂತಾಗಿದೆ. ಈ ನಡುವೆ ರೈತರು ಅಧಿಕ ಬಡ್ಡಿದರದಲ್ಲಿ ಸಾಲವನ್ನು ಪಡೆಯಬೇಕಾದ ಸಂಗ್ಧಿತ ಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತಾರೆ.

 

ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕೆಟ್ಟ ನಿರ್ಧಾರ ಮಾಡಿಕೊಳ್ಳುವುದು ಹೆಚ್ಚಾಗುತ್ತಿದ್ದಂತೆ ರೈತರಿಗಾಗಿ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಆರಂಭ ಮಾಡಿದೆ. ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ತಮ್ಮ ಹಣಕಾಸು ಅಗತ್ಯವನ್ನು ಸರಿದೂಗಿಸಬಹುದಾಗಿದೆ.

ಈ ಯೋಜನೆಯನ್ನು 1998ರಲ್ಲಿ ಅಂದಿನ ಕೇಂದ್ರ ಸರ್ಕಾರ ಆರಂಭ ಮಾಡಿದೆ. ನಬಾರ್ಡ್ ಅಡಿಯಲ್ಲಿ ಈ ಯೋಜನೆ ಬರುತ್ತದೆ. ಈ ಕಿಸಾನ್ ಕ್ರೆಡಿಟ್ ಕಾರ್ಡ್ ರೈತರು ಅಧಿಕ ಬಡ್ಡಿದರಕ್ಕೆ ಬಲಿಪಶುವಾಗದಂತೆ ಸಹಾಯ ಮಾಡುತ್ತದೆ. ಈ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಡೆಯುವ ಸಾಲದ ಮೇಲೆ ಕೇವಲ ಶೇಕಡ 2ರಿಂದ ಶೇಕಡ 4ರಷ್ಟು ಬಡ್ಡಿದರವನ್ನು ವಿಧಿಸಲಾಗುತ್ತದೆ. ನೀವು ಕೂಡಾ ರೈತರಾಗಿದ್ದರೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಆನ್‌ಲೈನ್ ಮೂಲಕ ಹಾಗೂ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ, ಅದಕ್ಕೆ ಬೇಕಾದ ದಾಖಲೆಗಳು ಯಾವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಕಿಸಾನ್ ಕ್ರೆಡಿಟ್ ಕಾರ್ಡ್‌ನ ಮುಖ್ಯ ಮಾಹಿತಿ

ಕಿಸಾನ್ ಕ್ರೆಡಿಟ್ ಕಾರ್ಡ್‌ನ ಮುಖ್ಯ ಮಾಹಿತಿ

* ಕೃಷಿ ಹಾಗೂ ವ್ಯವಸಾಯ ನಡೆಸಿದ ಬಳಿಕ ತಗಲುವ ಖರ್ಚುಗಳಿಗಾಗಿ ಈ ಯೋಜನೆಯಲ್ಲಿ ರೈತರಿಗೆ ಸಾಕವನ್ನು ನೀಡಲಾಗುತ್ತದೆ.
* ಕೃಷಿ ಸಂಬಂಧಿತ ಉಪಕರಣವನ್ನು ಖರೀದಿ ಮಾಡಲು ಅಥವಾ ಅದನ್ನು ಬಾಡಿಗೆಗೆ ಪಡೆಯಲು ಹಣವನ್ನು ಈ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲವಾಗಿ ಪಡೆದುಕೊಳ್ಳಬಹುದು.
* ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸುಮಾರು 3 ಲಕ್ಷ ರೂಪಾಯಿವರೆಗೆ ಸಾಲವಾಗಿ ಪಡೆಯಬಹುದು.
* ರೈತರ ಸಾವು ಅಥವಾ ರೈತರಿಗೆ ಯಾವುದೇ ಅಂಗವೈಕಲ್ಯತೆಯಾದರೆ ಈ ಯೋಜನೆಯಡಿಯಲ್ಲಿ ಸುಮಾರು 50 ಸಾವಿರ ರೂಪಾಯಿವರೆಗೆ ವಿಮೆಯನ್ನು ಪಡೆಯಬಹುದು. ಬೇರೆ ಅವಘಡಗಳಿಗೆ 25 ಸಾವಿರ ರೂಪಾಯಿವರೆಗೆ ವಿಮೆಯನ್ನು ಪಡೆಯಬಹುದು.
* ಉಳಿತಾಯ ಖಾತೆಯ ಅಡಿಯಲ್ಲಿ ಈ ಸ್ಮಾರ್ಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಅನ್ನು ನೀಡಲಾಗುತ್ತದೆ.
* ಸುಲಭವಾಗಿ ಮರುಪಾವತಿ ಮಾಡಲು ಸಾಧ್ಯವಾಗಲಿದೆ.
* 3 ವರ್ಷಗಳ ಅವಧಿಗೆ ಈ ಯೋಜನೆಯಲ್ಲಿ ಸಾಲವನ್ನು ಪಡೆಯಬಹುದು.

 ಯಾವೆಲ್ಲ ದಾಖಲೆಗಳು ಅಗತ್ಯ?
 

ಯಾವೆಲ್ಲ ದಾಖಲೆಗಳು ಅಗತ್ಯ?

* ಎಲ್ಲ ದಾಖಲೆಗಳನ್ನು ಹೊಂದಿರುವ ಹಾಗೂ ಭರ್ತಿ ಮಾಡಿ ಸಹಿ ಮಾಡಲಾದ ಅರ್ಜಿ
* ಗುರುತಿನ ಪುರಾವೆಗಾಗಿ ಆಧಾರ್ ಕಾರ್ಡ್, ವೋಟರ್ ಐಡಿ ಬೇಕಾಗುತ್ತದೆ
* ವಿಳಾಸ ಪುರಾವೆಗಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಬೇಕಾಗುತ್ತದೆ
* ಈ ದಾಖಲೆಯಲ್ಲಿ ಅರ್ಜಿದಾರರು ವಾಸ್ತವ್ಯದಲ್ಲಿ ಇರುವ ವಿಳಾಸವೇ ಇರಬೇಕಾಗುತ್ತದೆ
* ಜಾಗಕ್ಕೆ ಸಂಬಂಧಿಸಿದ ದಾಖಲೆಗಳು ಅಗತ್ಯವಾಗಿದೆ
* ಪಾಸ್‌ಪೋರ್ಟ್ ಗಾತ್ರದ ಫೋಟೋ ಕೂಡಾ ಬೇಕಾಗುತ್ತದೆ
* ಬ್ಯಾಂಕ್‌ ಕೇಳುವಂತಹ ದಾಖಲೆಗಳನ್ನು ಕೂಡಾ ಸಲ್ಲಿಕೆ ಮಾಡಬೇಕಾಗುತ್ತದೆ

 ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಹೀಗೆ ಅರ್ಜಿ ಸಲ್ಲಿಸಿ

ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಹೀಗೆ ಅರ್ಜಿ ಸಲ್ಲಿಸಿ

ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಆನ್‌ಲೈನ್ ಮೂಲಕ ಹಾಗೂ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಈ ಬಗ್ಗೆ ಇಲ್ಲಿದೆ ವಿವರ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ

ಹಂತ 1: ನೀವು ಯಾವ ಬ್ಯಾಂಕ್‌ನಿಂದ ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತೀರೋ ಆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಆಯ್ಕೆ ಮಾಡಿ
ಹಂತ 3: apply ಮೇಲೆ ಕ್ಲಿಕ್ ಮಾಡಿ
ಹಂತ 4: ಫಾರ್ಮ್ ಅನ್ನು ಭರ್ತಿ ಮಾಡಿಕೊಳ್ಳಿ
ಹಂತ 5: submit ಮೇಲೆ ಕ್ಲಿಕ್ ಮಾಡಿದರೆ ಎಲ್ಲ ಪ್ರಕ್ರಿಯೆ ಪೂರ್ಣವಾಗಲಿದೆ

ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ

ಹಂತ 1: ಬ್ಯಾಂಕ್‌ನ ಬ್ರಾಂಚ್‌ಗೆ ಭೇಟಿ ನೀಡಿ
ಹಂತ 2: ಬ್ಯಾಂಕ್‌ನ ಪ್ರತಿನಿಧಿಗಳ ಸಹಾಯದ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಿಕೊಳ್ಳಿ
ಹಂತ 3: ಎಲ್ಲ ಅಗತ್ಯ ದಾಖಲೆಗಳನ್ನು ಲಗತ್ತಿಸಿ
ಹಂತ 4: ದಾಖಲೆ ಹಾಗೂ ಫಾರ್ಮ್ ಅನ್ನು ಬ್ಯಾಂಕ್‌ಗೆ ಸಲ್ಲಿಕೆ ಮಾಡಿದರೆ ಎಲ್ಲ ಪ್ರಕ್ರಿಯೆ ಪೂರ್ಣವಾಗಲಿದೆ

English summary

Kisan Credit Card: Here’s How To Apply Online & Offline

Kisan Credit Card: Here’s How To Apply Online & Offline. Explained the steps.
Story first published: Monday, October 24, 2022, 11:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X