For Quick Alerts
ALLOW NOTIFICATIONS  
For Daily Alerts

ಇನ್ಷೂರೆನ್ಸ್ ಕ್ಲೇಮ್ ಆಗುತ್ತಿಲ್ಲವಾ? ಎಲ್ಲಿ ದೂರು ಸಲ್ಲಿಸಬಹುದು?

|

ನಮ್ಮ ಅಪತ್ಕಾಲಕ್ಕೆಂದು ಅಥವಾ ಭವಿಷ್ಯದ ಭದ್ರತೆಗೆಂದು ಇನ್ಷೂರೆನ್ಸ್ ಪಾಲಿಸಿಗಳನ್ನು ಮಾಡಿಸಿರುತ್ತೇವೆ. ಆದರೆ, ವಿವಿಧ ಕಾರಣಗಳಿಂದ ಕೆಲವೊಮ್ಮೆ ವಿಮಾ ಕಂಪನಿಗಳು ನಮ್ಮ ಪಾಲಿಸಿಯ ಮೊತ್ತವನ್ನು ಕೊಡಲು ನಿರಾರಿಸುವುದುಂಟು. ನಮ್ಮ ಮೆಡಿಕಲ್ ಇನ್ಷೂರೆನ್ಸ್‌ನಲ್ಲಿ ಹಣ ಕ್ಲೇಮ್ ಮಾಡಲು ನಿರಾಕರಿಸುವುದುಂಟು. ಇಂಥ ಸಂದರ್ಭದಲ್ಲಿ ಇನ್ಷೂರೆನ್ಸ್ ಕಂಪನಿಗಳಿಗೆ ನಾವು ಎಷ್ಟೇ ದೂರು ಕೊಟ್ಟರೂ ಪ್ರಯೋಜನವಾಗದು. ಇಂಥ ಸಂದರ್ಭದಲ್ಲಿ ಹತಾಶೆ ಪಡುವ ಪ್ರಮೇಯ ಇಲ್ಲ. ಇನ್ಷೂರೆನ್ಸ್ ಕಂಪನಿಗಳನ್ನು ಬಗ್ಗಿಸುವ ಕಾನೂನು ಸಂಸ್ಥೆಗಳು ಮತ್ತು ವ್ಯವಸ್ಥೆ ನಮ್ಮಲ್ಲಿ ಇನ್ನೂ ಬಲವಾಗಿರುವುದುಂಟು. ಇಂಥ ಕೆಲ ಅವಕಾಶಗಳೇನು ಎಂಬುದನ್ನು ಇಲ್ಲಿ ಪ್ರಸ್ತಾಪಿಸಿದ್ದೇವೆ.

ವಿಮಾ ಕಂಪನಿಯ ನಿಯೋಜಿತ ಅಧಿಕಾರಿ

ವಿಮಾ ಕಂಪನಿಯ ನಿಯೋಜಿತ ಅಧಿಕಾರಿ

ಯಾವದೇ ಇನ್ಷೂರೆನ್ಸ್ ಕಂಪನಿಯಾದರೂ ಗ್ರಾಹಕರ ತೊಂದರೆ ಮತ್ತು ಕಷ್ಟಗಳನ್ನು ಆಲಿಸಲು ಹಾಗೂ ಪರಿಹಾರ ಒದಗಿಸಲು ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕಾಗುತ್ತದೆ. ನಿಮ್ಮ ಇನ್ಷೂರೆನ್ಸ್ ಕ್ಲೇಮ್ ಅನ್ನು ಅನ್ಯಾಯವಾಗಿ ನಿರಾಕರಿಸಲಾಗಿದೆ ಎಂದು ನಿಮಗೆ ಅನಿಸಿದಲ್ಲಿ ಈ ಗ್ರೀವೆನ್ಸ್ ರಿಡ್ರೆಸಲ್ ಆಫೀಸರ್ ಬಳಿ ದೂರು ಸಲ್ಲಿಸಬಹುದು. ನಿಮಗೆ ಸಮೀಪ ಇರುವ ಇನ್ಷೂರೆನ್ಸ್ ಕಂಪನಿಯ ಕಚೇರಿಗೆ ಹೋಗಿ ದೂರು ಕೊಡಬಹುದು, ಅಥವಾ ಆನ್‌ಲೈನ್‌ನಲ್ಲೇ ಅದನ್ನು ಸಲ್ಲಿಸಬಹುದು.

ಬಹುತೇಕ ಈ ಹಂತದಲ್ಲೇ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದಾಗ್ಯೂ ನಿಮ್ಮ ದೂರಿಗೆ ಸ್ಪಂದನೆ ಸಿಗದೇ ಇದ್ದರೆ ದೂರು ಸಲ್ಲಿಕೆಗೆ ಬೇರೆ ಮಾರ್ಗಗಳೂ ಉಂಟು.

 

ಇನ್ಷೂರೆನ್ಸ್ ಪ್ರಾಧಿಕಾರ

ಇನ್ಷೂರೆನ್ಸ್ ಪ್ರಾಧಿಕಾರ

ಇನ್ಷೂರೆನ್ಸ್ ಕಂಪನಿಯ ನಿಯೋಜಿತ ಅಧಿಕಾರಿಯು ಗ್ರಾಹಕರಿಂದ ದೂರು ಬಂದ 15 ದಿನದೊಳಗೆ ಸ್ಪಂದಿಸಬೇಕೆಂದು ಐಆರ್‌ಡಿಎಐನ ನಿಯಮಗಳು ಹೇಳುತ್ತವೆ. ಹಾಗಾದರೂ ನಿಮಗೆ ಸ್ಪಂದನೆ ಸಿಗದೇ ಹೋದಲ್ಲಿ ಐಆರ್‌ಡಿಎಐ ಬಳಿ ದೂರು ಕೊಡಬಹುದು. ಐಆರ್‌ಡಿಎಐ ಎಂದರೆ ಇನ್ಷೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ. ಇದು ಇನ್ಷೂರೆನ್ಸ್ ನಿಯಮಾವಳಿ ರೂಪಿಸುವ ಮತ್ತು ನಿಯಂತ್ರಿಸುವ ಪ್ರಾಧಿಕಾರವಾಗಿದೆ. ನೀವು ಇದರ ವೆಬ್‌ಸೈಟ್‌ಗೆ ಹೋದರೆ ಟಾಲ್ ಫ್ರೀ ನಂಬರ್ ಸಿಗುತ್ತದೆ. ಅದಕ್ಕೆ ಕರೆ ಮಾಡಿ ದೂರು ಕೊಡಬಹುದು. ಅಥವಾ ಈ ಕೆಳಗಿನ ವಿಳಾಸಕ್ಕೆ ಇಮೇಲ್ ಕಳುಹಿಸಬಹುದು: complaints@irdai.gov.in

ಕೊನೆಯ ಅಸ್ತ್ರ

ಕೊನೆಯ ಅಸ್ತ್ರ

ಇನ್ಷೂರೆನ್ಸ್ ಕಂಪನಿಯ ದೂರು ಪರಿಹಾರಕ ಅಧಿಕಾರಿಯಿಂದಾಗಲೀ ಅಥವಾ ಐಆರ್‌ಡಿಎಐನಿಂದಲಾಗಲೀ ನಿಮಗೆ ನ್ಯಾಯ ಸಿಕ್ಕಿಲ್ಲ ಎನಿಸಿದರೆ ಇನ್ಷೂರೆನ್ಸ್ ಓಂಬುಡ್ಸ್‌ಮ್ಯಾನ್ ಬಳಿ ದೂರು ಸಲ್ಲಿಸಬಹುದು. ಇದಕ್ಕಾಗಿ ದೇಶದಾದ್ಯಂತ 17 ಇನ್ಷೂರೆನ್ಸ್ ಓಂಬುಡ್ಸ್‌ಮ್ಯಾನ್‌ರನ್ನು ನಿಯೋಜಿಸಲಾಗಿದೆ. ನಮಗೆ ಸ್ಥಳೀಯವಾದ ಓಂಬುಡ್ಸ್‌ಮನ್ ಬಳಿ ದೂರು ಕೊಡಬೇಕಾಗುತ್ತದೆ.

ಅದಕ್ಕಾಗಿ ನಾವು ನಮ್ಮ ಪ್ರದೇಶಕ್ಕೆ ಸಮೀಪ ಇರುವ ಲೋಕಾಯುಕ್ತ ಕಚೇರಿಗೆ ಹೋಗಿ ಅಲ್ಲಿ ಪಿ-2 ಮತ್ತು ಪಿ-3 ಫಾರ್ಮ್‌ಗಳನ್ನು ಭರ್ತಿ ಮಾಡಬೇಕು. ಈ ಬಗ್ಗೆ ಸ್ಥಳ ಮಾಹಿತಿಯನ್ನು ಇನ್ಷೂರೆನ್ಸ್ ಕಂಪನಿಯ ಕಚೇರಿ ಅಥವಾ ವೆಬ್‌ಸೈಟ್‌ನಲ್ಲಿ ಕಾಣಬಹುದು.

 

English summary

Know Where To File Complaint If Insurance Claim Fails

Some of you might be facing problem in claiming money from your insurance policy. But, don't worry. Now Know where to file the complaint if you're not able to get the money even after making an insurance policy claim.
Story first published: Sunday, November 27, 2022, 18:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X