For Quick Alerts
ALLOW NOTIFICATIONS  
For Daily Alerts

ಗೃಹ ಸಾಲಕ್ಕೆ ಈ ಬ್ಯಾಂಕ್‌ಗಳಲ್ಲಿ ಬಡ್ಡಿದರ ಅಗ್ಗ!

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜಾಗತಿಕವಾಗಿ ಹಾಗೂ ದೇಶದಲ್ಲಿ ಕಾಡುತ್ತಿರುವ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸತತ ನಾಲ್ಕು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಇದರಿಂದಾಗಿ ಹಲವಾರು ಬ್ಯಾಂಕುಗಳು ಗೃಹ ಸಾಲದ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ.

ಪ್ರಸ್ತುತ ಬ್ಯಾಂಕ್‌ನಿಂದ ಸಾಲವನ್ನು ಪಡೆಯುವುದು ಅತೀ ದುಬಾರಿಯಾಗಿದೆ. ನಾಲ್ಕು ಬಾರಿ ರೆಪೋ ದರ ಹೆಚ್ಚಳವಾದ ಬೆನ್ನಲ್ಲೇ ಬ್ಯಾಂಕುಗಳು ಕೂಡಾ ಸಾಲದ ಬಡ್ಡಿದರವನ್ನು ಅಧಿಕ ಮಾಡಿದೆ. ಇದರಿಂದಾಗಿ ಇಎಂಐ ಹೊರೆ ಭಾರೀ ಅಧಿಕವಾಗಿದೆ. ಈ ನಡುವೆ ಹಲವಾರು ಮಂದಿ ಗೃಹ ಸಾಲವನ್ನು ಪಡೆಯಲು ತಯಾರಿ ನಡೆಸುತ್ತಿದ್ದಾರೆ.

ಹಬ್ಬದ ಸೀಸನ್‌: ಎಚ್‌ಡಿಎಫ್‌ಸಿ, ಎಸ್‌ಬಿಐಗಿಂತ ಕಡಿಮೆ ದರದಲ್ಲಿ ಸಾಲ ನೀಡುತ್ತೆ ಈ ಬ್ಯಾಂಕುಗಳು!ಹಬ್ಬದ ಸೀಸನ್‌: ಎಚ್‌ಡಿಎಫ್‌ಸಿ, ಎಸ್‌ಬಿಐಗಿಂತ ಕಡಿಮೆ ದರದಲ್ಲಿ ಸಾಲ ನೀಡುತ್ತೆ ಈ ಬ್ಯಾಂಕುಗಳು!

ಪ್ರಸ್ತುತ ಹಲವಾರು ಬ್ಯಾಂಕುಗಳಲ್ಲಿ ಈ ರೆಪೋ ದರದಿಂದ ಪ್ರಭಾವಿತವಾಗುವ ಗೃಹ ಸಾಲದ ಬಡ್ಡಿದರ ತೀರಾ ಹೆಚ್ಚಳವಾಗಿದೆ. ಆದರೆ ಈ ನಡುವೆಯೂ ಕೆಲವೊಂದು ಬ್ಯಾಂಕುಗಳು ಅತೀ ಅಗ್ಗದ ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತದೆ. ನೀವು ಗೃಹ ಸಾಲ ಪಡೆಯಲು ಬಯಸಿದರೆ ಈ ಸುದ್ದಿಯನ್ನು ಓದಲೇ ಬೇಕು. ಯಾಕೆಂದರೆ ನಾವಿಲ್ಲಿ, ಯಾವೆಲ್ಲ ಬ್ಯಾಂಕುಗಳು ಅತೀ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತದೆ ಎಂಬುವುದನ್ನು ವಿವರಿಸಿದ್ದೇವೆ... ಮುಂದೆ ಓದಿ...

 ಯಾವುದಕ್ಕೆಲ್ಲ ಗೃಹ ಸಾಲ?

ಯಾವುದಕ್ಕೆಲ್ಲ ಗೃಹ ಸಾಲ?

ಗೃಹ ಸಾಲ ಸಾಮಾನ್ಯವಾಗಿ ಸುರಕ್ಷಿತ ಸಾಲವಾಗಿದೆ. ನಾವು ಮನೆಯನ್ನು ಖರೀದಿ ಮಾಡಲು ಹಣಕಾಸು ಸಂಸ್ಥೆಗಳು ನೀಡುವ ಸಾಲವನ್ನು ನಾವು ಗೃಹ ಸಾಲ ಎಂದು ಕರೆಯುತ್ತೇವೆ. ನಾವು ಮನೆಯನ್ನು ಖರೀದಿ ಮಾಡಲು ಅಥವಾ ಅಪಾರ್ಟ್‌ಮೆಂಟ್‌ಗಳನ್ನು ಖರೀದಿ ಮಾಡಲು ಗೃಹ ಸಾಲವನ್ನು ಪಡೆಯಬಹುದು. ನೀವು ನಿರ್ಮಾಣ ಮಾಡಿರುವ ಮನೆ ಖರೀದಿ ಮಾಡಲು ಅಥವಾ ಮನೆ ನಿರ್ಮಾಣ ಮಾಡಲು ಈ ಗೃಹ ಸಾಲವನ್ನು ಪಡೆಯಬಹುದು. ಬ್ಯಾಂಕುಗಳು ಅಥವಾ ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಇನ್ಸ್ಟಿಟ್ಯೂಟ್‌ಗಳು (ಎನ್‌ಬಿಎಫ್‌ಸಿ) ಗೃಹ ಸಾಲವನ್ನು ನೀಡುತ್ತದೆ.

 ಯಾವೆಲ್ಲ ಬ್ಯಾಂಕ್‌ಗಳಲ್ಲಿ ಗೃಹ ಸಾಲಕ್ಕೆ ಕಡಿಮೆ ಬಡ್ಡಿದರ

ಯಾವೆಲ್ಲ ಬ್ಯಾಂಕ್‌ಗಳಲ್ಲಿ ಗೃಹ ಸಾಲಕ್ಕೆ ಕಡಿಮೆ ಬಡ್ಡಿದರ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಕನಿಷ್ಠ ಬಡ್ಡಿದರ ಶೇ.7.9, ಗರಿಷ್ಠ ಬಡ್ಡಿದರ ಶೇ.9.6
ಬ್ಯಾಂಕ್ ಆಫ್ ಇಂಡಿಯಾ: ಕನಿಷ್ಠ ಬಡ್ಡಿದರ ಶೇ.7.8, ಗರಿಷ್ಠ ಬಡ್ಡಿದರ ಶೇ.9.5
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ): ಕನಿಷ್ಠ ಬಡ್ಡಿದರ ಶೇ.8.55, ಗರಿಷ್ಠ ಬಡ್ಡಿದರ ಶೇ.12.35
ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್: ಕನಿಷ್ಠ ಬಡ್ಡಿದರ ಶೇ.7.9, ಗರಿಷ್ಠ ಬಡ್ಡಿದರ ಶೇ.11.2
ಪಂಜಾಬ್ ನ್ಯಾಷನಲ್ ಬ್ಯಾಂಕ್: ಕನಿಷ್ಠ ಬಡ್ಡಿದರ ಶೇ.7.95, ಗರಿಷ್ಠ ಬಡ್ಡಿದರ ಶೇ.8.75

Home Loan EMIs : ಗೃಹ ಸಾಲದ ಇಎಂಐ ಕಟ್ಟಿಲ್ಲವೇ: ಮುಂದೇನು ಮಾಡುವುದು?Home Loan EMIs : ಗೃಹ ಸಾಲದ ಇಎಂಐ ಕಟ್ಟಿಲ್ಲವೇ: ಮುಂದೇನು ಮಾಡುವುದು?

 ತೆರಿಗೆ ವಿನಾಯಿತಿ ಪಡೆಯಿರಿ

ತೆರಿಗೆ ವಿನಾಯಿತಿ ಪಡೆಯಿರಿ

ಇನ್ನು ಈ ಬಡ್ಡಿದರವನು ಸಂಪೂರ್ಣವಾಗಿ ಕ್ರೆಡಿಟ್ ಸ್ಕೋರ್ ಮೇಲೆ ಆಧಾರಿತವಾಗಿರುತ್ತದೆ. ನೀವು ಗೃಹ ಸಾಲವನ್ನು ಇಎಂಐ ಆಧಾರದಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಗೃಹ ಸಾಲದ ಅವಧಿಯು 30 ವರ್ಷಗಳಾಗಿರುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಹಾಗೂ 24ರಲ್ಲಿ ನೀವು ಗೃಹ ಸಾಲದ ಮೊತ್ತ ಹಾಗೂ ಬಡ್ಡಿದರದಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಿದೆ.

 ಕ್ರೆಡಿಟ್ ಸ್ಕೋರ್ ಕೂಡಾ ಪರಿಣಾಮ ಬೀರುತ್ತೆ ನೆನಪಿಡಿ

ಕ್ರೆಡಿಟ್ ಸ್ಕೋರ್ ಕೂಡಾ ಪರಿಣಾಮ ಬೀರುತ್ತೆ ನೆನಪಿಡಿ

ನೀವು ಸಾಮಾನ್ಯವಾಗಿ ಗೃಹ ಸಾಲದ ಮೇಲೆ ಕ್ರೆಡಿಟ್ ಸ್ಕೋರ್ ಪರಿಣಾಮ ಬೀರುತ್ತದೆ ಎಂದು ನೆನಪಿನಲ್ಲಿ ಇಡಿ. ಸಾಮಾನ್ಯವಾಗಿ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಅಂದರೆ 750-800ರಷ್ಟು ಕ್ರೆಡಿಟ್ ಸ್ಕೋರ್ ಅನ್ನು ಹೊಂದಿದ್ದರೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದಾಗಿ ಕ್ರೆಡಿಟ್ ಸ್ಕೋರ್ ಅತೀ ಮುಖ್ಯವಾಗಿದೆ. ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ನಿಮಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಲಭ್ಯವಾಗುವುದಿಲ್ಲ. ಆದರೆ ನೀವು ಗೃಹ ಸಾಲದ ಇಎಂಐ ಹೊರೆಯನ್ನು ಕಡಿಮೆ ಮಾಡಬೇಕಾದರೆ ಮರುಪಾವತಿ ಅವಧಿ ಅಧಿಕ ಆಯ್ಕೆ ಮಾಡುವುದು ಉತ್ತಮ.

English summary

List of Banks Offering Cheapest Rate of Interest on Home Loans

Here are the few banks offering the lowest house loan interest rates in case you are looking for a home loan or intend to apply for one.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X