For Quick Alerts
ALLOW NOTIFICATIONS  
For Daily Alerts

Home Loan EMIs : ಗೃಹ ಸಾಲದ ಇಎಂಐ ಕಟ್ಟಿಲ್ಲವೇ: ಮುಂದೇನು ಮಾಡುವುದು?

|

ಈ ದುಬಾರಿ ದುನಿಯಾದಲ್ಲಿ ಪ್ರತಿ ಸಣ್ಣ ಪುಟ್ಟ ವಸ್ತು ಖರೀದಿ ಮಾಡಿದರೂ ನಾವು ಸಾಲ ಪಡೆದು ಅಥವಾ ಇಎಂಐ ಮೂಲಕವೇ ಪಾವತಿ ಮಾಡಬೇಕಾದ ಸ್ಥಿತಿ ಇದೆ. ಹಾಗಿರುವಾಗ ಮನೆಯನ್ನು ಯಾವುದೇ ಸಾಲವಿಲ್ಲದೇ ಕಟ್ಟಲು ಸಾಧ್ಯವೇ?. ಸಾಮಾನ್ಯವಾಗಿ ಮನೆಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ನಾವು ಗೃಹ ಸಾಲವನ್ನು ಪಡೆಯುತ್ತೇವೆ. ಆದರೆ ಆ ಸಾಲದ ಇಎಂಐ ಕಟ್ಟುವುದನ್ನೇ ನಾವು ಮರೆತುಬಿಟ್ಟರೆ ಮುಂದೇನು?

ಗೃಹ ಸಾಲದ ಇಎಂಐ ಅನ್ನು ಕಟ್ಟುವುದು ಅತೀ ದೊಡ್ಡ ಜವಾಬ್ದಾರಿಯಾಗಿದೆ. ನಮ್ಮ ಬ್ಯಾಂಕಿನಿಂದ ನೇರವಾಗಿ ಇಎಂಐ ಕಡಿತವಾಗುವುದಾದರೂ ಬ್ಯಾಂಕ್ ಖಾತೆಯಲ್ಲಿ ಅಷ್ಟು ಮೊತ್ತವಿದೆಯೇ ಎಂದು ನಾವು ನೋಡಿಕೊಳ್ಳಬೇಕಾಗುತ್ತದೆ. ಗೃಹ ಸಾಲವನ್ನು ನಾವು ಪಡೆದಿರುವಾಗ ಯಾವುದೇ ಕಂತನ್ನು ಮಿಸ್ ಮಾಡದೆ ಪಾವತಿ ಮಾಡಬೇಕಾಗುತ್ತದೆ. ಒಂದು ಇಎಂಐ ಮಿಸ್ ಆದರೂ ಅದು ನೇರವಾಗಿ ನಮ್ಮ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.

ಗೃಹ ಸಾಲ, ಗೃಹ ನವೀಕರಣ ಸಾಲಕ್ಕೂ ಏನು ವ್ಯತ್ಯಾಸ?ಗೃಹ ಸಾಲ, ಗೃಹ ನವೀಕರಣ ಸಾಲಕ್ಕೂ ಏನು ವ್ಯತ್ಯಾಸ?

ಗೃಹ ಸಾಲದ ಇಎಂಐ ಸರಿಯಾದ ಸಮಯಕ್ಕೆ ಪಾವತಿಸುವುದು ಮುಖ್ಯವಾದರೂ ಕೂಡಾ ಆ ದೀರ್ಘಾವಧಿಯಲ್ಲಿ ಒಂದೆರಡು ಕಂತುಗಳು ಮಿಸ್ ಆಗಬಹುದು. ಆದರೆ ಇದರಿಂದಾಗಿ ನಿಮಗೆ ಏನು ಪರಿಣಾಮ ಉಂಟಾಗುತ್ತದೆ, ನೀವು ಏನು ಮಾಡಬೇಕು, ಮುಂದೇನು, ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಇಎಂಐ ಮಿಸ್: ಪರಿಣಾಮವೇನು?

ಇಎಂಐ ಮಿಸ್: ಪರಿಣಾಮವೇನು?

ನೀವು ಒಂದೆರಡು ಇಎಂಐ ಮಿಸ್ ಮಾಡಿ ಆ ಬಳಿಕ ಅದನ್ನು ಮೂರು ತಿಂಗಳ ಒಳಗೆ ಮರುಪಾವತಿ ಮಾಡಿದರೆ ಅದು ಸಣ್ಣ ಡಿಫಾಲ್ಟ್ ಆಗಿ ಪರಿಗಣಿಸಲಾಗುತ್ತದೆ. ಆದರೆ ನೀವು ಇಎಂಐ ಪಾವತಿ ಮಾಡುವುದನ್ನು ಮಿಸ್ ಮಾಡಿದರೆ, ಮೂರು ತಿಂಗಳ ಒಳಗಾಗಿ ಪಾವತಿ ಮಾಡಿಬಿಡಿ. ಮೂರು ತಿಂಗಳು ಕಳೆದು ಕೂಡಾ ಪಾವತಿ ಮಾಡದಿದ್ದರೆ ಅದು ದೊಡ್ಡ ಡಿಫಾಲ್ಟ್ ಆಗಿ ಪರಿಗಣಿಸಲಾಗುತ್ತದೆ. ನೀವು ಇಎಂಐ ಸಮಯಕ್ಕೆ ಸರಿಯಾಗಿ ಪಾವತಿ ಮಾಡದೆ ಬಳಿಕ ಮೂರು ತಿಂಗಳ ಒಳಗೆ ಪಾವತಿ ಮಾಡಿದರೆ ಸಣ್ಣ ಡಿಫಾಲ್ಟ್ ಆಗಿ ಪರಿಗಣಿಸಲಾದರೂ ಅದು ನೇರವಾಗಿ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಒಂದು ಕಂತು ಮಿಸ್ ಆದರೂ ನಿಮ್ಮ ಸಿಬಿಲ್ ಸ್ಕೋರ್‌ನಲ್ಲಿ 40ರಿಂದ 80 ಅಂಕ ಕುಸಿತ ಕಾಣಲಿದೆ. ಹಾಗೆಯೇ ತಡವಾಗಿ ಇಎಂಐ ಪಾವತಿ ಮಾಡಿದ್ದಕ್ಕಾಗಿ ಶೇಕಡ 2ರಷ್ಟು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಅದಕ್ಕೂ ಕೂಡಾ ಷರತ್ತುಗಳು ಇದೆ. ಮುಖ್ಯವಾಗಿ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ನೀವು ಭವಿಷ್ಯದಲ್ಲಿ ಪಡೆಯುವ ಬೇರೆ ಸಾಲಗಳ ಮೇಲೆ ಪರಿಣಾಮ ಬೀರುತ್ತದೆ.

 ಹಾಗಾದರೆ ನಾವು ಮಾಡುವುದು ಏನು?

ಹಾಗಾದರೆ ನಾವು ಮಾಡುವುದು ಏನು?

ನೀವು ಗೃಹ ಸಾಲದ ಇಎಂಐ ಅನ್ನು ಪಾವತಿ ಮಾಡುವುದನ್ನು ಮಿಸ್ ಮಾಡಿದ್ದೀರಿ ಎಂಬುವುದು ತಿಳಿದ ಕೂಡಾ ನಿಮ್ಮ ಬ್ಯಾಂಕ್‌ಗೆ ಭೇಟಿ ನೀಡಿ. ಬ್ಯಾಂಕ್‌ಗೆ ಈ ಬಗ್ಗೆ ಮಾಹಿತಿ ನೀಡಿ ಕಾರಣವನ್ನು ವಿವರಿಸಿ. ಕೂಡಲೇ ಇಎಂಐ ಅನ್ನು ಪಾವತಿ ಮಾಡಿಬಿಡಿ. ನೀವು ಇಎಂಐ ಪಾವತಿ ಮಾಡುವುದನ್ನು ಮರೆತಿದ್ದರೆ ಕೂಡಲೇ ಬ್ಯಾಂಕ್‌ಗೆ ಹೋಗಿ ಮನವಿ ಮಾಡಿ ಇಎಂಐ ಪಾವತಿ ಮಾಡಿಬಿಡಿ. ನಿಮ್ಮ ಖಾತೆಯಿಂದಲೇ ಹಣ ಕಡಿತವಾಗುವ ಆಯ್ಕೆಯನ್ನು ಮಾಡಿಕೊಂಡರೆ ಉತ್ತಮ. ಆದರೆ ಸಮಯಕ್ಕೆ ಸರಿಯಾಗಿ ಖಾತೆಯಲ್ಲಿ ಹಣವಿರುವಂತೆ ನೋಡಿಕೊಳ್ಳಬೇಕು. ನಿಮ್ಮ ವೇತನ ಬೀಳುವ ಖಾತೆಯಲ್ಲೇ ಈ ಇಎಂಐ ಕಡಿತವಾಗುವಂತೆ ಮಾಡಿದರೆ ಇನ್ನು ಕೂಡಾ ಉತ್ತಮ.

 ಉದ್ಯೋಗವೇ ಇಲ್ಲವಾದರೆ ಏನು ಮಾಡುವುದು?

ಉದ್ಯೋಗವೇ ಇಲ್ಲವಾದರೆ ಏನು ಮಾಡುವುದು?

ಇನ್ನು ನಿಮ್ಮ ಉದ್ಯೋಗದಲ್ಲಿ ಯಾವುದೇ ತೊಂದರೆ ಉಂಟಾಗಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ ಕೂಡಲೇ ನಿಮ್ಮ ಇಎಂಐ ಅವಧಿಯನ್ನು ವಿಸ್ತರಣೆ ಮಾಡಿಕೊಳ್ಳಿ. ಇದರಿಂದದಾಗಿ ಮಾಸಿಕ ಪಾವತಿ ಮೊತ್ತ ಕಡಿಮೆಯಾಗುತ್ತದೆ. ಇನ್ನು ನಿಮ್ಮ ಬ್ಯಾಂಕ್‌ನಿಂದ ಆರು ತಿಂಗಳ ಅವಧಿ ಸಾಲ ಮರುಪಾವತಿಯನ್ನು ಸ್ಥಗಿತ ಮಾಡಲು ಅವಕಾಶಕ್ಕಾಗಿ ಮನವಿ ಸಲ್ಲಿಕೆ ಮಾಡಬಹುದು. ಅಷ್ಟರಲ್ಲಿ ಹೊಸ ಉದ್ಯೋಗ ಹುಡುಕಿಕೊಳ್ಳಬೇಕಾಗುತ್ತದೆ. ನಿಮ್ಮ ಮನೆಯನ್ನು ಬಾಡಿಗೆಗೆ ನೀಡಿ ನೀವು ತಾತ್ಕಾಲಿಕವಾಗಿ ಕಡಿಮೆ ಬಾಡಿಗೆಯ ಮನೆಯಲ್ಲಿ ವಾಸ ಮಾಡುವ ಮೂಲಕ ಕೊಂಚ ಲಾಭದ ಹಣದಲ್ಲಿ ಇಎಂಐ ಪಾವತಿ ಮಾಡಬಹುದು.

 ನಿಮ್ಮ ಸಾಲ ಪಾವತಿಯನ್ನು ಮರಳಿ ಟ್ರ್ಯಾಕ್‌ಗೆ ತನ್ನಿ

ನಿಮ್ಮ ಸಾಲ ಪಾವತಿಯನ್ನು ಮರಳಿ ಟ್ರ್ಯಾಕ್‌ಗೆ ತನ್ನಿ

ನೀವು ಸಾಲದ ಇಎಂಐ ಅನ್ನು ಪಾವತಿ ಮಾಡಲು ಇರುವಾಗ ಬೇರೆ ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕಿ. ಸರಿಯಾದ ಸಮಯಕ್ಕೆ ಇಎಂಐ ಅನ್ನು ಪಾವತಿ ಮಾಡುವುದರ ಬಗ್ಗೆ ನಿಮ್ಮ ಗಮನವಿರಲಿ. ನಿಮ್ಮ ಹಣಕಾಸು ನಿರ್ವಹಣೆಗಾಗಿ ಬಜೆಟ್ ಅನ್ನು ಮಾಡಿಕೊಳ್ಳಿ. ಬಜೆಟ್ ಪ್ರಕಾರವೇ ಎಲ್ಲ ಖರ್ಚು ನಿಭಾಯಿಸಿ. ನೀವು ಮೂರು ಇಎಂಐ ಅನ್ನು ಕಟ್ಟದಿದ್ದರೆ ಆ ಬಳಿಕ ಸಾಲವನ್ನು ಪಡೆಯುವುದು ಕಷ್ಟವಾಗಲಿದೆ. ನೀವು ಕೆಟ್ಟ ಹಣಕಾಸು ಸ್ಥಿತಿಗೆ ಬಂದು ನಿಲ್ಲುವ ಮುನ್ನವೇ ಸರಿಯಾದ ಪ್ಲ್ಯಾನ್ ಮಾಡಿಕೊಳ್ಳುವುದು ಉತ್ತಮ. ಉತ್ತಮ ಪ್ಲ್ಯಾನ್ ನಿಮ್ಮ ಹಣಕಾಸು ಸ್ಥಿತಿಯನ್ನು ಟ್ರ್ಯಾಕ್‌ಗೆ ತರಲು ಸಹಾಯಕವಾಗಲಿದೆ.

ರೆಪೋ ದರ ಏರಿಕೆ: ಗೃಹ ಸಾಲದ ಇಎಂಐ ಎಷ್ಟಾಗಲಿದೆ?ರೆಪೋ ದರ ಏರಿಕೆ: ಗೃಹ ಸಾಲದ ಇಎಂಐ ಎಷ್ಟಾಗಲಿದೆ?

English summary

Missed Paying Home Loan EMI?, What Can You Do, Details Here

Missing out on a home loan EMI payment can impact your credit score immediately. What Can You Do, Details Here. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X