For Quick Alerts
ALLOW NOTIFICATIONS  
For Daily Alerts

Ration Card Online: ರೇಷನ್ ಕಾರ್ಡ್ ಪಡೆಯಲು ಸಾಲಿನಲ್ಲಿ ನಿಲ್ಲಬೇಕಾಗಿಲ್ಲ, ಆನ್‌ಲೈನ್‌ನಲ್ಲೇ ಪಡೆಯಿರಿ!

|

ದೇಶದಲ್ಲಿ ಆಧಾರ್ ಕಾರ್ಡ್‌ನಂತೆ ರೇಷನ್ ಕಾರ್ಡ್ ಕೂಡಾ ಒಂದು ಪ್ರಮುಖ ದಾಖಲೆ ಹೌದು. ಜನರು ಪಡಿತರ ಅಂಗಡಿಗಳಿಂದ ಕಡಿಮೆ ಬೆಲೆಗೆ ದಿನಸಿಯನ್ನು ಪಡೆಯಬೇಕಾದರೆ ರೇಷನ್ ಕಾರ್ಡ್ ಅತೀ ಮುಖ್ಯವಾಗಿದೆ. ಪ್ರಮುಖವಾಗಿ ಕಡಿಮೆ ಆದಾಯವಿರುವ ಕುಟುಂಬವು ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಪಡೆಯುತ್ತದೆ. ಆದರೆ ಇನ್ಮುಂದೆ ನೀವು ಅದಕ್ಕಾಗಿ ಆನ್‌ಲೈನ್‌ನಲ್ಲಿ ನಿಲ್ಲಬೇಕಾಗಿಲ್ಲ. ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ಪಡೆಯಬಹುದು.

 

ರೇಷನ್ ಕಾರ್ಡ್ ಕೇಂದ್ರ ಸರ್ಕಾರವು ಉಚಿತ ರೇಷನ್ ಅನ್ನು ನೀಡಲು ನಡೆಸುತ್ತಿರುವ ಯೋಜನೆಯಾಗಿದೆ. ಆದರೆ ನಿಮ್ಮಲ್ಲಿ ಈಗಲೂ ರೇಷನ್ ಕಾರ್ಡ್ ಇಲ್ಲವಾದರೆ ನೀವು ಆತಂಕ ಪಡೆಬೇಕಾಗಿಲ್ಲ. ಯಾಕೆಂದರೆ ನೀವು ಮನೆಯಲ್ಲೇ ಕುಳಿತು ಈಗ ರೇಷನ್ ಕಾರ್ಡ್ ಅನ್ನು ಪಡೆಯಬಹುದು. ಅದಕ್ಕಾಗಿ ನೀವು ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

 

ಇನ್ನು ರೇಷನ್ ಕಾರ್ಡ್ ಅನ್ನು ನಾವು ರೇಷನ್ ಪಡೆಯಲು ಮಾತ್ರ ಬಳಕೆ ಮಾಡುವುದಲ್ಲ. ಆಧಾರ್ ಕಾರ್ಡ್ ಪ್ರಸ್ತುತ ಹೇಗೆ ಪ್ರಮುಖ ದಾಖಲೆಯಾಗಿದೆಯೋ ಅದೇ ರೀತಿ ರೇಷನ್ ಕಾರ್ಡ್ ಕೂಡಾ ಒಂದು ಪ್ರಮುಖ ದಾಖಲೆಯಾಗಿದೆ. ರೇಷನ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ಹಾಗೆಯೇ ವಿಳಾಸ ಪುರಾವೆಯಾಗಿ ಬಳಕೆ ಮಾಡಲಾಗುತ್ತದೆ.

 ರೇಷನ್ ಕಾರ್ಡ್ ಪಡೆಯಲು ಸಾಲಿನಲ್ಲಿ ನಿಲ್ಲಬೇಕಾಗಿಲ್ಲ!

ಆಧಾರ್ ಕಾರ್ಡ್‌ ರಚನೆಗೂ ಬೇಕು ರೇಷನ್ ಕಾರ್ಡ್

ರೇಷನ್ ಕಾರ್ಡ್ ಅನ್ನು ನಾವು ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಬ್ಯಾಂಕ್ ಖಾತೆ, ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಲು ಕೂಡಾ ಬಳಕೆ ಮಾಡಬೇಕಾಗುತ್ತದೆ. ಯಾರು ಅರ್ಹರೋ ಅವರು ಮಾತ್ರ ರೇಷನ್ ಕಾರ್ಡ್ ಅನ್ನು ಪಡೆಯುತ್ತಾರೆ, ಎಲ್ಲ ಭಾರತೀಯ ನಾಗರಿಕರಿಗೂ ಕೂಡಾ ರೇಷನ್ ಕಾರ್ಡ್ ಲಭ್ಯವಾಗುವುದಿಲ್ಲ.

ಈ ಹಿಂದೆ ರೇಷನ್ ಕಾರ್ಡ್ ಅನ್ನು ಮಾಡಬೇಕಾದರೆ, ಜನರು ರೇಷನ್ ಕಾರ್ಡ್ ಕಚೇರಿಗೆ ಭೇಟಿ ನೀಡಬೇಕಾಗಿತ್ತು. ಆದರೆ ಈಗ ಎಲ್ಲ ರಾಜ್ಯಗಳು ತಮ್ಮ ನಾಗರಿಕರಿಗೆ ಆನ್‌ಲೈನ್ ಮೂಲಕವೇ ರೇಷನ್ ಕಾರ್ಡ್ ಪಡೆಯುವ ಅವಕಾಶವನ್ನು ನೀಡುತ್ತದೆ. ನೀವು ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಹೇಗೆ ಅರ್ಜಿ ಸಲ್ಲಿಸುವುದು ಎಂದು ಇಲ್ಲಿದೆ ವಿವರ ಮುಂದೆ ಓದಿ...

ಆನ್‌ಲೈನ್‌ನಲ್ಲಿ ರೇಷನ್ ಕಾರ್ಡ್ ಪಡೆಯುವುದು ಹೇಗೆ?

ಹಂತ 1: http://ahara.kar.nic.in, ಗೆ ಭೇಟಿ ನೀಡಿ , ಇ ಸೇವೆ ಮೆನು ಆಯ್ಕೆ ಮಾಡಿಕೊಳ್ಳಿ, ಅದರಡಿಯಲ್ಲಿ ಹೊಸ ರೇಷನ್ ಕಾರ್ಡ್ ಆಯ್ಕೆ ಮಾಡಿಕೊಳ್ಳಬೇಕು.
ಹಂತ 2: ಅರ್ಜಿಗಾಗಿ ಕನ್ನಡ ಅಥವಾ ಇಂಗ್ಲೀಷ್ ಆಯ್ಕೆ ಮಾಡಿಕೊಳ್ಳಬೇಕು.
ಹಂತ 3: New Ration Card Request ಮೇಲೆ ಕ್ಲಿಕ್ ಮಾಡಬೇಕು
ಹಂತ 4: NPHH Ration Cardಗೆ ಅರ್ಜಿ ಸಲ್ಲಿಸಲು Non-Priority Household (NPHH) ಮೇಲೆ ಕ್ಲಿಕ್ ಮಾಡಿ
ಹಂತ 5: ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ Go ಮೇಲೆ ಕ್ಲಿಕ್ ಮಾಡಿ
ಹಂತ 6: ಆಧಾರ್ ಸಂಬಂಧಿತ ಮಾಹಿತಿಯನ್ನು ಉಲ್ಲೇಖ ಮಾಡಿ, ಒಟಿಪಿ ಮೂಲಕ ವೆರಿಫಿಕೇಷನ್ ಮಾಡಿಕೊಳ್ಳಿ
ಹಂತ 7: ಒಟಿಪಿ ಉಲ್ಲೇಖಿಸಿದ ಬಳಿಕ ಕ್ಯಾಪ್ಚಾ ನಮೂದಿಸಿ Go ಮೇಲೆ ಕ್ಲಿಕ್ ಮಾಡಿ
ಹಂತ 8: ಇದಾದ ಬಳಿಕ ಹೆಸರು, ಜನನ ದಿನಾಂಕ, ಲಿಂಗ, ಛಾಯಾಚಿತ್ರ ಮೊದಲಾದವುಗಳು ಕಾಣಲಿದೆ.
ಹಂತ 9: Finger Print Verification ಮೇಲೆ ಕ್ಲಿಕ್ ಮಾಡಿ
ಹಂತ 10: Capture ಮೇಲೆ ಕ್ಲಿಕ್ ಮಾಡಿ ಫಿಂಗರ್ ಇಂಪ್ರೇಷನ್ ಮಾಡಿಕೊಳ್ಳಿ. ಅಲ್ಲಿ ಕಾಣುವ ಕ್ಯಾಪ್ಚಾ ಕೂಡಾ ನಮೂದಿಸಿ
ಹಂತ 11: Verify ಮೇಲೆ ಕ್ಲಿಕ್ ಮಾಡಿ, ಆಧಾರ್ ಮಾಹಿತಿ ಕಾಣಿಸಲಿದೆ. ಆಧಾರ್ ಮಾಹಿತಿ ಸರಿಯಾಗಿದ್ದರೆ Add ಕ್ಲಿಕ್ ಮಾಡಿ, ಅರ್ಜಿ ಸಂಖ್ಯೆ ಜನರೇಟ್ ಆಗಲಿದೆ.
ಹಂತ 12: ಕುಟುಂಬ ಸದಸ್ಯರ ಮಾಹಿತಿ, ಸಂಬಂಧವನ್ನು ಉಲ್ಲೇಖಿಸಿದ ಬಳಿಕ ಅಪ್ಲಿಕೇಷನ್ ಸಂಖ್ಯೆ ಜನರೇಟ್ ಆಗಲಿದೆ. ಬೇರೆ ಸದಸ್ಯರನ್ನು ಸೇರಿಸಲು ಈ ಸಂಖ್ಯೆಯನ್ನೇ ಬಳಕೆ ಮಾಡಬಹುದು.
ಹಂತ 13: Delete/Add again ಕ್ಲಿಕ್ ಮಾಡಿ ಈ ಕಾರ್ಯವನ್ನು ಮಾಡಬಹುದು.
ಹಂತ 14: ವಾರ್ಡ್, ಏರಿಯಾವನ್ನು ಆಯ್ಕೆ ಮಾಡಿಕೊಳ್ಳಿ, ಆಟೋ ಸೆಲೆಕ್ಟ್ ಆಯ್ಕೆ ಕೂಡಾ ಇದೆ.
ಹಂತ 15: ಎಲ್ಲ ಮಾಹಿತಿ ಹಾಕಿದ ಬಳಿಕ Save ಬಟನ್ ಕ್ಲಿಕ್, Generate RC ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣ, ಪ್ರಿಂಟ್ ಕೂಡಾ ಪಡೆಯಬಹುದು.

ಮಾಹಿತಿ ಪರಿಶೀಲನೆ ಬಳಿಕ ರೇಷನ್ ಕಾರ್ಡ್ ಪೋಸ್ಟ್ ಮೂಲಕ ಬರಲಿದೆ. ನೀವು ಸೇವಾ ಶುಲ್ಕವಾಗಿ 70 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.

English summary

No Need to Stand in Line to Get Ration Card, How to Book Online, Explained in Kannada

Ration Card: No Need to Stand in Line to Get Ration Card, Know how to get the ration cards online, step-by-step guide. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X