For Quick Alerts
ALLOW NOTIFICATIONS  
For Daily Alerts

ಆನ್ ಲೈನ್ ಬ್ಯಾಂಕಿಂಗ್ ವಂಚನೆಯಲ್ಲಿ ಬ್ಯಾಂಕ್- ಗ್ರಾಹಕರು ಯಾರ ಹೊಣೆ ಎಷ್ಟು?

By ಅನಿಲ್ ಆಚಾರ್
|

ಇಂಟರ್ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಕಾರ್ಡ್ ನಾಟ್ ಪ್ರೆಸೆಂಟ್ (ಸಿಎನ್ ಪಿ) ವ್ಯವಹಾರಗಳು ಮುಂತಾದವನ್ನು ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರಗಳು ಎನ್ನಲಾಗುತ್ತದೆ. ಆಗಾಗ ಕಾರ್ಡ್ ಗಳ ದುರುಪಯೋಗ ಆಗುತ್ತವೆ ಮತ್ತು ವಂಚನೆ ಪ್ರಕರಣಗಳು ದಾಖಲಾಗುತ್ತವೆ ಹಾಗೂ ಜನರು ಹಣ ಕಳೆದುಕೊಳ್ಳುತ್ತಾರೆ. ಆದರೆ ಪ್ರಶ್ನೆ ಏನೆಂದರೆ, ಈ ಆನ್ ಲೈನ್ ಬ್ಯಾಂಕಿಂಗ್ ವಂಚನೆಯ ನಷ್ಟದ ಹೊಣೆಯನ್ನು ಯಾರು ಹೊರುತ್ತಾರೆ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ, ಜವಾಬ್ದಾರಿಯನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು.

* ಗ್ರಾಹಕರಿಗೆ ಯಾವುದೇ ಹೊಣೆಯಿಲ್ಲ: ವಂಚನೆ, ಬ್ಯಾಂಕ್ ಕಡೆಯಿಂದ ನಿರ್ಲಕ್ಷ್ಯ, ಬ್ಯಾಂಕ್ ನಿಂದ ಏನಾದರೂ ಕೊರತೆಯಾಗಿ ಸಮಸ್ಯೆಯಾದಲ್ಲಿ ಹಾಗೂ ಮೂರನೇ ವ್ಯಕ್ತಿಯಿಂದ ಉಲ್ಲಂಘನೆಯಾಗಿ ಅಂದರೆ, ಬ್ಯಾಂಕ್ ನಿಂದಲೂ ಅಥವಾ ಗ್ರಾಹಕರಿಂದಲೂ ತಪ್ಪಿಲ್ಲದೆ ವ್ಯವಸ್ಥೆಯಲ್ಲಿ ದೋಷವಾಗಿ, ಗ್ರಾಹಕರು ಮೂರು ದಿನಗಳ ಒಳಗಾಗಿ ಅನಧಿಕೃತ ವ್ಯವಹಾರದ ಬಗ್ಗೆ ಬ್ಯಾಂಕ್ ಗೆ ಮಾಹಿತಿ ನೀಡಬೇಕು.

 

* ಗ್ರಾಹಕರಿಗೆ ಸೀಮಿತ ಹೊಣೆ: ಗ್ರಾಹಕರ ನಿರ್ಲಕ್ಷ್ಯದಿಂದ ಆಗುವ ನಷ್ಟಗಳಿಗೆ ಅವರೇ ಹೊಣೆ ಆಗಬೇಕು. ಒಂದು ವೇಳೆ ಅನಧಿಕೃತವಾದ ವ್ಯವಹಾರ ಎಂದು ಬ್ಯಾಂಕ್ ಗೆ ವರದಿ ಮಾಡಿದ ಮೇಲೂ ನಷ್ಟವಾದಲ್ಲಿ ಅದನ್ನು ಬ್ಯಾಂಕ್ ಭರಿಸಬೇಕು.

ಭಾರತದಲ್ಲಿ ಸೈಬರ್ ಅಪರಾಧದಿಂದ 2019ರಲ್ಲಿ 1.25 ಲಕ್ಷ ಕೋಟಿ ನಷ್ಟ

ಇನ್ನು ಬ್ಯಾಂಕ್ ಅಥವಾ ಗ್ರಾಹಕರಿಂದ ಯಾವುದೇ ತಪ್ಪಿಲ್ಲದೆ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ವಂಚನೆಯಾಗಿದ್ದಲ್ಲಿ, ವ್ಯವಸ್ಥೆಯಲ್ಲಿ ದೋಷವಾಗಿ ಮತ್ತು ತಿಳಿಸಲು ಗ್ರಾಹಕರಿಂದ ವಿಳಂಬವಾಗಿದ್ದಲ್ಲಿ (ಬ್ಯಾಂಕ್ ನಿಂದ ಮಾಹಿತಿ ಬಂದು ನಾಲ್ಕರಿಂದ ಏಳು ದಿನಗಳ ನಂತರ ತಿಳಿಸಿದಲ್ಲಿ) ಆ ವ್ಯವಹಾರದ ಹೊಣೆಯ ಅಷ್ಟು ಮೊತ್ತಕ್ಕೆ ಅಥವಾ ಮಾರ್ಗದರ್ಶಿ ಸೂತ್ರಕ್ಕೆ ತಕ್ಕಂತೆ ಹಣ ದೊರೆಯುತ್ತದೆ.

ಆನ್ ಲೈನ್ ಬ್ಯಾಂಕಿಂಗ್ ವಂಚನೆಯಲ್ಲಿ ಬ್ಯಾಂಕ್- ಗ್ರಾಹಕರು ಯಾರು ಹೊಣೆ?

* ಗ್ರಾಹಕರಿಗೆ ಶೂನ್ಯ ಜವಾಬ್ದಾರಿ/ಸೀಮಿತ ಜವಾಬ್ದಾರಿ ರಿವರ್ಸಲ್ ಟೈಮ್ ಲೈನ್: ಗ್ರಾಹಕರಿಂದ ಅನಧಿಕೃತ ಎಲೆಕ್ಟ್ರಾನಿಕ್ ವ್ಯವಹಾರಗಳ ಬಗ್ಗೆ ತಿಳಿಸಿದ ಮೇಲೆ ಆ ಮೊತ್ತವನ್ನ್ನು ಬ್ಯಾಂಕ್ ನಿಂದ ಹತ್ತು ದಿನಗಳ ಒಳಗಾಗಿ (ಇನ್ಷೂರೆನ್ಸ್ ಕ್ಲೇಮ್ ತೀರುವಳಿಗಾಗಿ ಕಾಯುವ ಅಗತ್ಯ ಇಲ್ಲ) ಜಮೆ ಮಾಡಲಾಗುತ್ತದೆ. ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಅನಧಿಕೃತ ವ್ಯವಹಾರದಲ್ಲಿ ಗ್ರಾಹಕರ ನಿರ್ಲಕ್ಷ್ಯವೇ ಇದ್ದರೂ ಅವರ ಹೊಣೆಯನ್ನು ಬ್ಯಾಂಕ್ ಗಳ ವಿವೇಚನೆಯಲ್ಲಿ ಮನ್ನಾ ಮಾಡಬಹುದು. ಆ ದಿನದಂದು ಎಷ್ಟು ಮೊತ್ತಕ್ಕೆ ಅನಧಿಕೃತ ವ್ಯವಹಾರ ಆಗಿರುತ್ತದೋ ಅದೇ ಮೊತ್ತವನ್ನು ಜಮೆ ಮಾಡಲಾಗುತ್ತದೆ.

English summary

Online Banking Transaction Fraud: Who Bears Losses?

Often online banking transaction fraud reporting in India. Who bears the losses of a fraud online banking transaction? Here is an explainer.
Story first published: Sunday, November 22, 2020, 15:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X