Padma Awards 2023: ವ್ಯಾಪಾರ ಕ್ಷೇತ್ರದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರು ಯಾರು?
ಗಣರಾಜ್ಯೋತ್ಸವಕ್ಕೂ ಮುನ್ನ ಜನವರಿ 25ರಂದು ದೇಶದ ಅತೀ ಉನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. 2023ರಲ್ಲಿ ಬೇರೆ ಬೇರೆ ವಲಯದಲ್ಲಿ ಸುಮಾರು 106 ಮಂದಿ ಪದ್ಮ ಪ್ರಶಸ್ತಿ ಪಡೆಯಲಿದ್ದಾರೆ.
ಆರು ಪದ್ಮ ವಿಭೂಷಣ, 9 ಪದ್ಮ ಭೂಷಣ ಹಾಗೂ 91 ಪದ್ಮ ಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. 106 ಮಂದಿಯ ಪೈಕಿ 19 ಮಂದಿ ಮಹಿಳೆಯರಾಗಿದ್ದಾರೆ. ಹಾಗೆಯೇ ಇಬ್ಬರು ವಿದೇಶಿ/ಎನ್‌ಆರ್‌ಐ/ಪಿಐಒ/ಒಸಿಐ ವಿಭಾಗದಲ್ಲಿನ ಬರುತ್ತಾರೆ. ಇನ್ನು 7 ಮಂದಿ ಮರಣೋತ್ತರ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ. ಮಾರ್ಚ್- ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಸಲಾಗುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ದೇಶದ ಅತೀ ದೊಡ್ಡ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯನ್ನು ಬೇರೆ ಬೇರೆ ಕ್ಷೇತ್ರದವರಿಗೆ ನೀಡಲಾಗಿದೆ. ಕಲೆ, ಸಾಮಾಜಿಕ ಕಾರ್ಯ, ವಿಜ್ಞಾನ ಹಾಗೂ ಇಂಜಿನಿಯರಿಂಗ್, ವ್ಯಾಪಾರ ಮತ್ಯು ಉದ್ಯಮ, ಔಷಧಿ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಮೊದಲಾದ ಕ್ಷೇತ್ರಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಹಾಗಾದರೆ ವ್ಯಾಪಾರ ಕ್ಷೇತ್ರದಲ್ಲಿ ಪದ್ಮ ಪ್ರಶಸ್ತಿ ಪಡೆದವರು ಯಾರು ತಿಳಿಯೋಣ ಮುಂದೆ ಓದಿ....

ವ್ಯಾಪಾರ ಕ್ಷೇತ್ರದಲ್ಲಿ (trade & industry) ಪದ್ಮ ಪ್ರಶಸ್ತಿ
1. ಕುಮಾರ್ ಮಂಗಳಂ ಬಿರ್ಲಾ, ಮಹಾರಾಷ್ಟ್ರ, ಪದ್ಮ ಭೂಷಣ
2. ರಾಕೇಶ್ ರಾಧೇಶ್ಯಾಮ್ ಜುಂಜುವಾಲಾ, (ಮರಣೋತ್ತರ) ಮಹಾರಾಷ್ಟ್ರ, ಪದ್ಮ ಶ್ರೀ
3. ಅರೀಜ್ ಖಂಬಟ್ಟ, (ಮರಣೋತ್ತರ), ಗುಜರಾತ್, ಪದ್ಮ ಶ್ರೀ
ಕಳೆದ ವರ್ಷ ಪದ್ಮ ಪ್ರಶಸ್ತಿ ಪಡೆದ ಉದ್ಯಮಿಗಳು
ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್, ಕೋವಾಕ್ಸಿನ್ ತಯಾರಕ ಸಂಸ್ಥೆ ಭಾರತ್ ಬಯೋಟೆಕ್‌ನ ಕೃಷ್ಣ ಎಲ್ಲ ಮತ್ತು ಸುಚಿತ್ರಾ ಎಲ್ಲ ಮತ್ತು ಕೋವಿಶೀಲ್ಡ್ ತಯಾರಕ ಸಂಸ್ಥೆ ಸೀರಮ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕ ಸೈರಸ್ ಪೂನವಾಲಾ ಅವರು 2022 ರ ವ್ಯಾಪಾರ ಕ್ಷೇತ್ರದಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸೇರಿದ್ದಾರೆ.
ಹಾಗೆಯೇ ಕಳೆದ ವರ್ಷ ಜಗಜಿತ್ ಸಿಂಗ್ ದರ್ದಿ, ಮುಕ್ತಾಮಣಿ ದೇವಿ, ಜಪಾನ್‌ನ ರ್ಯುಕೋ ಹಿರಾ ಮತ್ತು ರೂಪಾ ಮತ್ತು ಕೋನ ಪ್ರಹ್ಲಾದ್ ರೈ ಅಗರ್ವಾಲಾ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸೇರಿದ್ದಾರೆ. ಮುಖ್ಯವಾಗಿ ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚು ಸುದ್ದಿಯಾದ ಭಾರತ್ ಬಯೋಟೆಕ್, ಸೀರಮ್ ಇನ್‌ಸ್ಟಿಟ್ಯೂಟ್ ಸಂಸ್ಥೆಯ ಮುಖ್ಯಸ್ಥರಿಗೆ ಪದ್ಮಶ್ರೀ ಪ್ರಶಸ್ತಿ ದೊರಕಿದೆ. ಇನ್ನು ಈ ವರ್ಷ ವ್ಯಾಪಾರ ಕ್ಷೇತ್ರದಲ್ಲಿ ಯಾರಿಗೂ ಕೂಡಾ ಪದ್ಮ ವಿಭೂಷಣ ಪ್ರಶಸ್ತಿ ಲಭ್ಯವಾಗಿಲ್ಲ.