For Quick Alerts
ALLOW NOTIFICATIONS  
For Daily Alerts

ಪಿಂಚಣಿದಾರರಿಗೆ ರಿಲೀಫ್: ಯಾವುದೇ ಸಂದರ್ಭದಲ್ಲಿ ಸಲ್ಲಿಸಿ ಜೀವನ ಪ್ರಮಾಣ ಪತ್ರ

|

ಇಪಿಎಸ್-95 ಪಿಂಚಣಿದಾರರು ವರ್ಷದ ಯಾವುದೇ ಸಮಯದಲ್ಲಿ ತಮ್ಮ ಜೀವನ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಎಂದು ನಿವೃತ್ತಿ ನಿಧಿ ಸಂಸ್ಥೆಯಾದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಹೇಳಿದೆ. ಈ ಮೂಲಕ ಪಿಂಚಣಿದಾರರಿಗೆ ದೊಡ್ಡ ರಿಲೀಫ್ ನೀಡಿದ್ದಂತಾಗಿದೆ. ಈ ಹಿಂದೆ ಪಿಂಚಣಿದಾರರು ತಾವು ಸರಿಯಾದ ಸಮಯಕ್ಕೆ ಪಿಂಚಣಿಯನ್ನು ಪಡೆಯಬೇಕಾದರೆ ವಾರ್ಷಿಕವಾಗಿ ಜೀವನ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಕೆ ಮಾಡಬೇಕಾಗಿತ್ತು.

ಜೀವನ ಪ್ರಮಾಣ ಪತ್ರವು ಪಿಂಚಣಿ ಪಡೆಯುವ ವ್ಯಕ್ತಿಯು ಜೀವಂತವಾಗಿ ಇದ್ದಾರೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ಪ್ರತಿ ವರ್ಷ ನವೆಂಬರ್ 1 ಮತ್ತು ನವೆಂಬರ್ 30 ರ ನಡುವೆ ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬೇಕಾಗಿತ್ತು. ಕಳೆದ ವರ್ಷ ಗಡುವನ್ನು ಎರಡು ಬಾರಿ ಮುಂದೂಡಿಕೆ ಮಾಡಲಾಗಿದೆ. ನವೆಂಬರ್ 30 ರಿಂದ ಡಿಸೆಂಬರ್ 31 ರವರೆಗೆ ಮತ್ತು ನಂತರ ಫೆಬ್ರವರಿ 28, 2022 ರವರೆಗೆ ವಿಸ್ತರಣೆ ಮಾಡಲಾಗಿತ್ತು.

ಅಡೆತಡೆಯಿಲ್ಲದೆ ಪಿಂಚಣಿ ಪಡೆಯಲು ಮನೆಯಿಂದಲೇ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ?ಅಡೆತಡೆಯಿಲ್ಲದೆ ಪಿಂಚಣಿ ಪಡೆಯಲು ಮನೆಯಿಂದಲೇ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ?

ಕೋವಿಡ್ ಕಾರಣದಿಂದಾಗಿ ಪ್ರಸ್ತುತ ಎಲ್ಲವೂ ಡಿಜಿಟಲ್ ಆಗಿದೆ. ಜೀವನ ಪ್ರಮಾಣ ಪತ್ರವನ್ನು ಕೂಡ ಡಿಜಿಟಲ್ ರೂಪದಲ್ಲಿ ಸಲ್ಲಿಕೆ ಮಾಡಬೇಕಾಗಿದೆ. ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಸರ್ಟಿಫಿಕೇಟ್‌ಗಳನ್ನು ಸಲ್ಲಿಸಲು ಬಹಳ ಸಮಯ ಕಾಯಬೇಕಾದ ಕಾರಣದಿಂದಾಗಿ ಎರಡು ಬಾರಿ ಕೊನೆಯ ದಿನವನ್ನು ವಿಸ್ತರಣೆ ಮಾಡಲಾಗಿದೆ. ಆದರೆ ಈ ಗಡುವನ್ನೇ ತೆಗೆದುಹಾಕಲಾಗಿದೆ ಎಂದು ವರದಿಯು ಉಲ್ಲೇಖ ಮಾಡಲಾಗಿದೆ. ಯಾರೆಲ್ಲ ಯಾವ ಸಂದರ್ಭದಲ್ಲೂ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬಹುದು ಎಂದು ತಿಳಿಯಲು ಮುಂದೆ ಓದಿ...

 ಇಪಿಎಫ್‌ಒ ಟ್ವೀಟ್ ಏನು ಹೇಳುತ್ತದೆ?

ಇಪಿಎಫ್‌ಒ ಟ್ವೀಟ್ ಏನು ಹೇಳುತ್ತದೆ?

ಇತ್ತೀಚಿನ ಇಪಿಎಫ್‌ಒ ಟ್ವೀಟ್ ಪ್ರಕಾರ, "EPS-95 ಪಿಂಚಣಿದಾರರು ಈಗ ಯಾವುದೇ ಸಮಯದಲ್ಲಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. EPS-95 ಪಿಂಚಣಿದಾರರು ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಿದ ಒಂದು ವರ್ಷದವರೆಗೆ ಅದು ಮಾನ್ಯವಾಗಿರುತ್ತದೆ."

EPS-95 ನವೆಂಬರ್ 19, 1995 ರಂದು ಜಾರಿಗೆ ಬಂದಿತು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಇಪಿಎಸ್ ಪಿಂಚಣಿದಾರರಿಗೆ ಅವರ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಸಲ್ಲಿಸಲು ಹಲವಾರು ಆಯ್ಕೆಗಳನ್ನು ನೀಡಿದೆ. ಮನೆಯಿಂದಲೇ ಕುಳಿತು ಅಥವಾ ಮನೆ ಬಾಗಿಲಿಗೆ ತಲುಪುವ ಸೇವೆಯನ್ನು ಬಳಸಿಕೊಂಡು ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬಹುದಾಗಿದೆ. ಡಿಜಿಟಲ್ ಜೀವನ ಪ್ರಮಾಣ ಪತ್ರವು ಕೂಡಾ ಕಾನೂನುಬದ್ಧವಾಗಿದೆ.

 

 ಜೀವನ ಪ್ರಮಾಣ ಪತ್ರವನ್ನು ಡಿಜಿಟಲ್ ಆಗಿ ಪಡೆಯುವುದು ಹೇಗೆ?
 

ಜೀವನ ಪ್ರಮಾಣ ಪತ್ರವನ್ನು ಡಿಜಿಟಲ್ ಆಗಿ ಪಡೆಯುವುದು ಹೇಗೆ?

ಜೀವನ ಪ್ರಮಾಣ ಪತ್ರಕ್ಕೆ ನೋಂದಾಯಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ

ಹಂತ 1: ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಜೀವನ ಪ್ರಮಾಣ ಅಪ್ಲಿಕೇಶನ್ ತೆರೆಯಿರಿ.
ಹಂತ 2: ಡ್ರಾಪ್-ಡೌನ್ ಮೆನುವಿನಿಂದ "new registration" ಆಯ್ಕೆಮಾಡಿ
ಹಂತ 3: ನಿಮ್ಮ ಆಧಾರ್ ಸಂಖ್ಯೆ, ಪಿಂಚಣಿ ಪಾವತಿ ಆದೇಶ, ಬ್ಯಾಂಕ್ ಖಾತೆ, ಬ್ಯಾಂಕ್ ಹೆಸರು ಮತ್ತು ಫೋನ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
ಹಂತ 4: ಒಟಿಪಿ ಅನ್ನು ರಚಿಸಲು ಮತ್ತು ನಿರ್ದಿಷ್ಟಪಡಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸಲು, send OTP ಮೇಲೆ ಕ್ಲಿಕ್‌ ಮಾಡಿ
ಹಂತ 5: ಮುಂದುವರಿಸಲು ಒಟಿಪಿ ಅನ್ನು ನಮೂದಿಸಿ
ಹಂತ 6: ಆಧಾರ್ ಬಳಸಿ, ಬಯೋಮೆಟ್ರಿಕ್ ಪರಿಶೀಲನೆ (ಫಿಂಗರ್‌ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್) ಬಳಸಿಕೊಂಡು ನಿಮ್ಮ ವಿವರಗಳನ್ನು ಪರಿಶೀಲಿಸಿ.

submit ಕ್ಲಿಕ್ ಮಾಡಿದಾಗ ನಿಮ್ಮ ವಿವರಗಳನ್ನು UIDAI ಪರಿಶೀಲಿಸುತ್ತದೆ ಮತ್ತು ಯಶಸ್ವಿ ನೋಂದಣಿಯ ನಂತರ ನಿಮ್ಮ ವಿವರಗಳನ್ನು ಬಳಸಿ ಜೀವನ ಪ್ರಮಾಣ ಪತ್ರ ಡಿಜಿಟಲ್‌ ರೂಪದಲ್ಲಿ ದೊರೆಯಲಿದೆ. ಜೀವನ ಪ್ರಮಾಣ ಐಡಿ ಬಳಕೆ ಬಳಕೆ ಮಾಡಿ ಆಪ್‌ಗೆ ಲಾಗಿನ್‌ ಆಗಿ ನಿವು ಜೀವನ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.

 

 ಮನೆಯಲ್ಲಿಯೇ ಕುಳಿತು ಜೀವನ ಪ್ರಮಾಣ ಪತ್ರ ಹೀಗೆ ಪಡೆಯಿರಿ

ಮನೆಯಲ್ಲಿಯೇ ಕುಳಿತು ಜೀವನ ಪ್ರಮಾಣ ಪತ್ರ ಹೀಗೆ ಪಡೆಯಿರಿ

doorstepbanks.com or www.dsb.imfast.co.in ವೆಬ್‌ಸೈಟ್‌ ಮೂಲಕ ಅಥವಾ Doorstep Banking ಮೊಬೈಲ್‌ ಆಪ್‌ ಮೂಲಕ ಅಥವಾ ಟಾಲ್‌ ಫ್ರೀ ಸಂಖ್ಯೆ 18001213721/18001037188 ಗೆ ಕರೆ ಮಾಡುವ ಮೂಲಕ ನೀವು ಡೋರ್‌ಸ್ಟೆಪ್ ಬ್ಯಾಂಕಿಂಗ್ ಸೇವೆಯನ್ನು ಪಡೆಯಬಹುದು ಆಗಿದೆ. ಇದರಲ್ಲಿ ನಿಗದಿ ಪಡಿಸಿದ ದಿನ ಹಾಗೂ ಸಮಯಕ್ಕೆ ಸರಿಯಾಗಿ ನಿಮ್ಮ ಮನೆಗೆ ಏಜೆಂಟ್‌ ಒಬ್ಬರು ಬರುತ್ತಾರೆ. ಬಳಿಕ ನಿಮಗೆ ಆನ್‌ಲೈನ್‌ನಲ್ಲಿ ಜೀವನ ಪ್ರಮಾಣ ಆಪ್‌ ಮೂಲಕ ಜೀವನ ಪ್ರಮಾಣ ಪತ್ರವನ್ನು ನೀಡಲಿದ್ದಾರೆ. ಆದರೆ ಬ್ಯಾಂಕುಗಳು ಇದಕ್ಕಾಗಿ ನಿಮ್ಮಲ್ಲಿ ಸೇವಾ ಶುಲ್ಕವನ್ನು ಪಡೆಯಬಹುದು. ಆದರೆ ಈ ಬಗ್ಗೆ ವೆಬ್‌ಸೈಟ್‌ನಲ್ಲಿ ಯಾವುದೇ ಉಲ್ಲೇಖ ಮಾಡಲಾಗಿಲ್ಲ. ಎಸ್‌ಬಿಐ 75 ರೂಪಾಯಿ ಹಾಗೂ ಜಿಎಸ್‌ಟಿಯನ್ನು ಪಡೆಯುತ್ತದೆ.

English summary

Pensioners can submit life certificate any time, Steps Explained in Kannada

Pensioners can submit life certificate any time, How Can You Submit Life Certificate, Explained in Kannada. Read on.
Story first published: Thursday, September 1, 2022, 21:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X