For Quick Alerts
ALLOW NOTIFICATIONS  
For Daily Alerts

ಹಂದಿ ಸಾಕಣೆ ಮೂಲಕ ಲಕ್ಷ ಲಕ್ಷ ಗಳಿಸುವುದು ಹೇಗೆ?

|

ಸೋಮಣ್ಣ ಭೀಮಪ್ಪ ಭಾಸಗಿ ಇದು ಅವರ ಹೆಸರು. ಕೃಷಿಕರು. ವಯಸ್ಸು 40 ವರ್ಷ. ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಆಲಮೇಲದವರು. ದೊಡ್ಡ ಪ್ರಮಾಣದಲ್ಲಿ ಹಂದಿ ಸಾಕಣೆಯನ್ನು ಮಾಡುತ್ತಿರುವ ಅವರು, ಪ್ರತಿ ವರ್ಷ ಅದರಿಂದ ಲಕ್ಷಗಟ್ಟಲೆ ಆದಾಯ ಪಡೆಯುತ್ತಿದ್ದಾರೆ. ನೆನಪಿರಲಿ, ಸೋಮಣ್ಣ ಅವರಿಗೆ ಹಂದಿ ಸಾಕಣೆ ಮುಖ್ಯ ಕಸುಬಲ್ಲ. ಕೃಷಿಯ ಜತೆಗೆ ಅವರು ಹಂದಿ ಸಾಕಣೆ ಮಾಡುತ್ತಿದ್ದಾರೆ.

ಸದ್ಯಕ್ಕೆ ಸೋಮಣ್ಣ ಅವರು 200 ಹಂದಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಅವರು ಸಾಕಣೆ ಆರಂಭಿಸಿದ್ದು 2017ರಲ್ಲಿ. ಬೆಂಗಳೂರಿನ ಹೆಸರಘಟ್ಟದಲ್ಲಿ ಹಂದಿ ಸಾಕಣೆ ತರಬೇತಿ ಪಡೆದಿರುವ ಸೋಮಣ್ಣ, ಮೊದಲಿಗೆ ಈ ಪ್ರಯತ್ನಕ್ಕೆ ಕೈ ಹಾಕಿದ್ದು 2014ರಲ್ಲಿ. ಅದು ಕೂಡ ಸಣ್ಣ ಪ್ರಮಾಣದಲ್ಲಿ.

ಸಾವಯವ ಬೆಲ್ಲದ ಬಿಜಿನೆಸ್ ಹೇಗಿದೆ, ಎಷ್ಟು ಬೇಕು ಬಂಡವಾಳ?ಸಾವಯವ ಬೆಲ್ಲದ ಬಿಜಿನೆಸ್ ಹೇಗಿದೆ, ಎಷ್ಟು ಬೇಕು ಬಂಡವಾಳ?

ಆಡು, ಕೋಳಿ ಮತ್ಯಾವುದಾದರೂ ಸಾಕಣೆ ಮಾಡಬಹುದಿತ್ತು. ಆದರೆ ಹಂದಿ ಸಾಕಣೆ ಮಾಡಬೇಕು ಎಂದು ನಿರ್ಧರಿಸಿದ್ದೇಕೆ ಎಂಬ ಪ್ರಶ್ನೆಗೆ, ಹಂದಿ ಸಾಕಣೆಯಲ್ಲಿ ಮುಖ್ಯವಾಗಿ ಬರುವ ಖರ್ಚು ಆಹಾರದ್ದು. ನಾನು ಎಷ್ಟೋ ಕಾರ್ಯಕ್ರಮಗಳಲ್ಲಿ ನೋಡಿದ್ದೇನೆ: ಬಹಳ ಆಹಾರ ವ್ಯರ್ಥವಾಗುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಅನಿಸಿದ್ದರಿಂದ ಹಂದಿ ಸಾಕಣೆ ಮಾಡುವುದಕ್ಕೆ ನಿಶ್ಚಯ ಮಾಡಿದೆ ಎನ್ನುತ್ತಾರೆ.

ಹಂದಿ ಸಾಕಣೆಗೆ ಬೇಕಾದ ಮೂಲಸೌಕರ್ಯ

ಹಂದಿ ಸಾಕಣೆಗೆ ಬೇಕಾದ ಮೂಲಸೌಕರ್ಯ

ಹಂದಿ ಸಾಕಣೆಗೆ ಎಂಟರಿಂದ ಹತ್ತು ಗುಂಟೆಯಷ್ಟು ಜಾಗ ಬೇಕಾಗುತ್ತದೆ. ಅದರಲ್ಲಿ ಅವುಗಳ ಡೆಲಿವರಿಗೆ, ಮರಿಗಳನ್ನು ಬೇರ್ಪಡಿಸುವುದಕ್ಕೆ, ಕೊಬ್ಬಿಸುವುದಕ್ಕೆ ಇತ್ಯಾದಿಗೆ ಪ್ರತ್ಯೇಕ ವ್ಯವಸ್ಥೆಯನ್ನು ನಾನು ಮಾಡಿದ್ದೇನೆ. ಕಳೆದ ವರ್ಷದ ಲೆಕ್ಕವೇ ಹೇಳಬೇಕು ಅಂದರೆ, ನನಗೆ 8 ಲಕ್ಷದ ತನಕ ಒಂದು ವರ್ಷಕ್ಕೆ ಖರ್ಚು ಬಂದರೆ, ಆದಾಯ 15ರಿಂದ 16 ಲಕ್ಷ ಬರುತ್ತದೆ. ಇನ್ನು ಖರ್ಚಿನ ವಿಚಾರಕ್ಕೆ ಬಂದರೆ ವಿಜಯಪುರ ನಗರದಿಂದ ಆಹಾರವನ್ನು ತರಿಸಿಕೊಳ್ಳುತ್ತೇನೆ. ಆಹಾರ ಅಂದರೆ, ಹೋಟೆಲ್- ಡಾಬಾಗಳು ಮತ್ತಿತರ ಕಡೆ ಉಳಿಯುವ ಆಹಾರಗಳವು. ಇನ್ನು ಔಷಧಿಗೆ ಕೂಡ ಖರ್ಚು ಬರುತ್ತದೆ. ದಿನಕ್ಕೆ ಎರಡು ಬಾರಿ ಹಂದಿಗಳ ಷೆಡ್ ಅನ್ನು ಸ್ವಚ್ಛ ಮಾಡುತ್ತೇನೆ. ತಂಪಾದ ಪ್ರದೇಶಗಳಾದರೆ ಒಮ್ಮೆ ಸ್ವಚ್ಛ ಮಾಡಿದರೆ ಸಾಕು. ಆದರೆ ನಮ್ಮ ಕಡೆ ಬಿಸಿಲು ಹೆಚ್ಚು. ಆ ಕಾರಣಕ್ಕೆ ಎರಡು ಬಾರಿ ಸ್ವಚ್ಛ ಮಾಡುತ್ತೇನೆ ಎಂದರು ಸೋಮಣ್ಣ.

ಮರಿ ಬೆಳೆಯಲು ಎಷ್ಟು ಸಮಯ? ಎಷ್ಟು ತೂಕ ಇರುತ್ತವೆ? ಕೇಜಿಗೆ ಎಷ್ಟು?

ಮರಿ ಬೆಳೆಯಲು ಎಷ್ಟು ಸಮಯ? ಎಷ್ಟು ತೂಕ ಇರುತ್ತವೆ? ಕೇಜಿಗೆ ಎಷ್ಟು?

ಹಂದಿ ಮರಿಗಳು ಬೆಳೆಯುವುದಕ್ಕೆ 8ರಿಂದ 9 ತಿಂಗಳು ಸಮಯ ಹಿಡಿಯುತ್ತದೆ. ತಲಾ 100ರಿಂದ 120 ಕೇಜಿ ತನಕ ತೂಗುತ್ತದೆ. ಒಂದು ಕೇಜಿಗೆ ಸರಾಸರಿ ನೂರು ರುಪಾಯಿ ರೇಟ್ ಸಿಗುತ್ತದೆ. ಇನ್ನು ಎಂಟು- ಒಂಬತ್ತು ತಿಂಗಳು ಅವುಗಳನ್ನು ಸಾಕುವುದಕ್ಕೆ ಮೂರು ಸಾವಿರ ರುಪಾಯಿ ಖರ್ಚು ಬರುತ್ತದೆ. ಆದರೆ ಮರಿ ಹಾಕಿದಾಗ ತಾಯಿ ಹಂದಿ- ಮರಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದೇ ರೀತಿ ಕೊಬ್ಬಿಸುವಾಗ ಕೂಡ ಚೆನ್ನಾಗಿ ಆಹಾರ ಕೊಡಬೇಕು. ಸಂತಾನೋತ್ಪತ್ತಿ ಸಂದರ್ಭದಲ್ಲಿ ಜೋಳ, ಹಿಂಡಿ, ಅಕ್ಕಿ ಅಥವಾ ಗೋಧಿ ತೌಡನ್ನು ನೀಡುತ್ತೇನೆ. ಆಗ ಬಹಳ ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಒಮ್ಮೆಗೆ ಎಂಟರಿಂದ ಹದಿನಾಲ್ಕು ಮರಿಗಳನ್ನು ಹಾಕುತ್ತವೆ. ತಾಯಿ ಹಂದಿಯನ್ನು ನಾಲ್ಕು ತಿಂಗಳ ತನಕ ಇಟ್ಟುಕೊಂಡು ಆಮೇಲೆ ಮಾರಿಬಿಡ್ತೀನಿ.

ಎಷ್ಟು ಮಂದಿ ತೊಡಗಿಕೊಂಡಿದ್ದಾರೆ?

ಎಷ್ಟು ಮಂದಿ ತೊಡಗಿಕೊಂಡಿದ್ದಾರೆ?

ತಾಯಿ ಹಂದಿಗೆ ಒಳ್ಳೆ ಆಹಾರ ನೀಡುವುದು ಬಹಳ ಮುಖ್ಯ. ಅದಕ್ಕಾಗಿ ಗಿರಣಿ ಹಾಕಿದ್ದೇನೆ, ಜತೆಗೆ ಜನರೇಟರ್ ಇದೆ. ನಾನು, ನನ್ನ ಹೆಂಡತಿ, ಮಕ್ಕಳು ಎಲ್ಲರೂ ಈ ಕೃಷಿ ಹಾಗೂ ಹಂದಿ ಸಾಕಣೆಯಲ್ಲಿ ತೊಡಗಿಕೊಂಡಿದ್ದೇವೆ. ಜತೆಗೆ ಮೂವರು ಕೂಲಿ ಕಾರ್ಮಿಕರು ಕೂಡ ಕೆಲಸ ಮಾಡುತ್ತಿದ್ದಾರೆ. ಇನ್ನು ಹಂದಿ ಸಾಕಣೆಗಾಗಿಯೇ ಏಳು ಸಾವಿರ ಚದರಡಿ ಜಾಗದಲ್ಲಿ ನಾನು ಷೆಡ್ ಹಾಕಿದ್ದೇನೆ. ಕಡಿಮೆ ಜಾಗದಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಿದ್ದೇನೆ. ಮೊದಲೇ ಹೇಳಿದಂತೆ ನಗರ ಪ್ರದೇಶಕ್ಕೆ ಷೆಡ್ ಹತ್ತಿರ ಇದ್ದಲ್ಲಿ ಖರ್ಚು ಸ್ವಲ್ಪ ಕಡಿಮೆ ಬರುತ್ತದೆ. ಏಕೆಂದರೆ ಆಹಾರ ಪೂರೈಕೆ ಸಲೀಸಾಗುತ್ತದೆ.

ಏನು ಕೃಷಿ ಮಾಡುತ್ತಿದ್ದಾರೆ, ಎಷ್ಟು ಭೂಮಿ?

ಏನು ಕೃಷಿ ಮಾಡುತ್ತಿದ್ದಾರೆ, ಎಷ್ಟು ಭೂಮಿ?

ಸೋಮಣ್ಣ ಅವರ ಮುಖ್ಯ ಕಸುಬು ಕೃಷಿ. ಒಂದು ವೇಳೆ ಕೃಷಿ ಕೈ ಹಿಡಿಯಲಿಲ್ಲ ಅಂದಲ್ಲಿ ಹಂದಿ ಸಾಕಣೆ ಇರಲಿ ಎಂಬುದು ಅವರ ಉದ್ದೇಶ ಆಗಿತ್ತು. ಜತೆಗೆ ಹಂದಿ ಸಾಕಣೆ ಮೂಲಕ ಒಳ್ಳೆ ಗೊಬ್ಬರ ಕೂಡ ಸಿಗುತ್ತಿದೆ. 2.05 ಎಕರೆ ಸ್ವಂತ ಜಾಗ ಇದೆ. ಪತ್ನಿ ಹೆಸರಲ್ಲಿ 4.5 ಎಕರೆ ಜಾಗ ಈಚೆಗೆ ಖರೀದಿಸಿದ್ದರೆ, 9 ಎಕರೆ ಭೂಮಿ ಭೋಗ್ಯಕ್ಕೆ ಪಡೆದಿದ್ದಾರೆ. ತಮ್ಮ 2.05 ಎಕರೆ ಜಾಗದಲ್ಲಿ ನಾನೂರೈವತ್ತು ಸೀಬೆ ಮರ, ನೂರಾ ಮೂವತ್ತು ನಿಂಬೆ, ನೂರು ಮಾವು ಹಾಗೂ ಜಮೀನಿನ ಗಡಿಯಲ್ಲಿ ನೂರು ತೆಂಗಿನ ಮರ ನೆಟ್ಟಿದ್ದಾರೆ. ಎಲ್ಲದರಿಂದಲೂ ಇಳುವರಿ ಬರುತ್ತಿದೆ. ಇನ್ನು ಭೋಗ್ಯದ ಒಂಬತ್ತು ಎಕರೆ ಜಾಗದಲ್ಲಿ ಎರಡೂವರೆ ಎಕರೆ ಕಬ್ಬು, ಒಂದು- ಒಂದೂವರೆ ಎಕರೆಯಲ್ಲಿ ಕುಂಬಳ ಅಥವಾ ಕಲ್ಲಂಗಡಿ, ಒಂದೂವರೆ ಎಕರೆ ಜೋಳ, ಒಂದು- ಒಂದೂವರೆ ಎಕರೆ ತರಕಾರಿ ಮತ್ತು ಇನ್ನೆರಡು ಎಕರೆಯಲ್ಲಿ ತೊಗರಿ ಬೆಳೆದಿದ್ದಾರೆ.

ಹೆಚ್ಚಿನ ಮಾಹಿತಿ, ಮಾರ್ಗದರ್ಶನ ಬೇಕಿದ್ದಲ್ಲಿ ಸೋಮಣ್ಣ ಭೀಮಪ್ಪ ಭಾಸಗಿ ಅವರ ಮೊಬೈಲ್ ನಂಬರ್‌ 9845075311 ಸಂಪರ್ಕಿಸಬಹುದು.

English summary

Pig Breeding: How To Make Lakhs Of Rupees

How to make lakhs of rupees through pig breeding. Here is the experience shared by farmer.
Story first published: Sunday, February 9, 2020, 14:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X