ಪಿಎಂ ಕಿಸಾನ್ 12ನೇ ಕಂತು: ಶೀಘ್ರ ಈ ಕಾರ್ಯ ಮಾಡಿ
ಪಿಎಂ ಕಿಸಾನ್ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಶೇಕಡ ನೂರರಷ್ಟು ಭಾರತ ಸರ್ಕಾರವೇ ಇದಕ್ಕೆ ಬಂಡವಾಳ ಹಾಕುತ್ತದೆ. 2018ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ವಾರ್ಷಿಕವಾಗಿ ರೈತರಿಗೆ ಆರು ಸಾವಿರ ರೂಪಾಯಿ ನೀಡಲಾಗುತ್ತದೆ.
ಈ ಆರು ಸಾವಿರ ರೂಪಾಯಿಯನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಪ್ರತಿ ನಾಲ್ಕು ತಿಂಗಳಿಗೆ ಒಂದು ಕಂತಿನಂತೆ ಪ್ರತಿ ಕಂತಿನಲ್ಲಿ ಎರಡು ಸಾವಿರ ರೂಪಾಯಿಯನ್ನು ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳಾದ ರೈತರ ಖಾತೆಗೆ ಹೂಡಿಕೆ ಮಾಡಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಒಂದು ಕುಟುಂಬವೆಂದರೆ ತಂದೆ, ತಾಯಿ ಹಾಗೂ ಅಪ್ರಾಪ್ತ ಮಕ್ಕಳು ಆಗಿದ್ದಾರೆ.
ಪಿಎಂ ಕಿಸಾನ್: ರೂ 2000 ಕಂತು ಬಂದಿಲ್ಲವೇ?, ದೂರು ಹೀಗೆ ಸಲ್ಲಿಸಿ
ಈ ವೆಬ್‌ಸೈಟ್ ಪ್ರಕಾರ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶದ ರೈತರು ಈ ಯೋಜನೆಯ ಫಲಾನುಭವವನ್ನು ಪಡೆಯಬಹುದಾಗಿದೆ. ಈ ಯೋಜನೆಯ ಮಾರ್ಗಸೂಚಿ ಪ್ರಕಾರ ಯಾರು ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವೋ ಅವರಿಗೆ ಮಾತ್ರ ಮೂರು ಕಂತಿನಲ್ಲಿ ಹಣ ನೀಡಲಾಗುತ್ತದೆ. ಹಾಗಾದರೆ ಮುಂದಿನ ಕಂತು ಯಾವಾಗ ಬರಲಿದೆ, ನೀವು ಅದಕ್ಕೂ ಮುನ್ನ ಮಾಡಬೇಕಾದ ಕೆಲಸ ಏನಿದೆ ಎಂಬ ಬಗ್ಗೆ ತಿಳಿಯಲು ಮುಂದೆ ಓದಿ....

ಮುಂದಿನ ಕಂತು ಯಾವಾಗ?
ಸಾಮಾನ್ಯವಾಗಿ ಪಿಎಂ ಕಿಸಾನ್ ಯೋಜನೆಯ ಮೊದಲ ಕಂತು ಏಪ್ರಿಲ್‌ನಿಂದ ಜುಲೈ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಎರಡನೇ ಕಂತನ್ನು ಆಗಸ್ಟ್‌ನಿಂದ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇನ್ನು ಮೂರನೇ ಕಂತನ್ನು ಡಿಸೆಂಬರ್‌ನಿಂದ ಮುಂದಿನ ವರ್ಷದ ಮಾರ್ಚ್‌ವರೆಗೆ ಜಮೆ ಆಗಲಿದೆ. ಇದರ ಪ್ರಕಾರ ಹನ್ನೊಂದನೇ ಕಂತಿನ ಕೊನೆಯ ದಿನಾಂಕ ಮಾರ್ಚ್ 31 ಆಗಿದೆ. ಜುಲೈ ಒಂದರಂದು ಮುಂದಿನ ಕಂತು ಜಮೆ ಆಗುವ ಸಾಧ್ಯತೆ ಇದೆ. ಜುಲೈ ಬಳಿಕ ನಿಮ್ಮ ಖಾತೆಗೆ ಹನ್ನೆರಡನೇ ಕಂತಿನ ಹಣ ಜಮೆ ಆಗಲಿದೆ.

ಪಿಎಂ ಇಕೆವೈಸಿ ಕಡ್ಡಾಯ
ಪಿಎಂ ಕಿಸಾನ್ ವೆಬ್‌ಸೈಟ್ ಪ್ರಕಾರ ಪ್ರಸ್ತುತ ಇಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನೀವು ಇಕೆವೈಸಿ ಮಾಡಿಕೊಂಡಿಲ್ಲದಿದ್ದರೆ, ನಿಮ್ಮ ಖಾತೆಗೆ ಕಂತಿನ ಹಣ ಜಮೆ ಆಗದೆ ಇರಬಹುದು. ಆದ್ದರಿಂದ ಶೀಘ್ರವೇ ಇಕೆವೈಸಿ ಮಾಡಿಕೊಳ್ಳುವುದು ಉತ್ತಮ. ಇತ್ತೀಚೆಗೆ ಇಕೆವೈಸಿ ಗಡುವನ್ನು ಜುಲೈ 31, 2022ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಗಡುವನ್ನು ಮೇ 31, 2022 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಬಳಿಕ ವಿಸ್ತರಣೆ ಮಾಡಲಾಗಿದೆ. ಎರಡು ಬಾರಿಗೆ ಗಡುವನ್ನು ವಿಸ್ತರಣೆ ಮಾಡಲಾಗಿದೆ.

ಇಕೆವೈಸಿ ಹೇಗೆ ಮಾಡುವುದು?
* ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್ ಗೆ ಭೇಟಿ ನೀಡಿ
* ಬಲಭಾಗದಲ್ಲಿ, ಮುಖಪುಟದ ಕೆಳಗೆ, ಇಕೆವೈಸಿ ಕಾಣಲಿದೆ.
* ಫಾರ್ಮರ್ಸ್ ಕಾರ್ನರ್‌ನ ಕೆಳಗೆ ಇಕೆವೈಸಿ ನಮೂದಿಸುವ ಬಾಕ್ಸ್ ಇದೆ
* ಅಲ್ಲಿ ನೀವು e-kyc ಅನ್ನು ಕ್ಲಿಕ್ ಮಾಡಿ
* ಆಧಾರ್ Ekyc ಯ ಪುಟ ತೆರೆಯಲಿದೆ
* ಈಗ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು
* ನಂತರ ತೋರಿಸಿರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು
* ಬಳಿಕ search ಬಟನ್ ಕ್ಲಿಕ್ ಮಾಡಬೇಕು
* ಅದರ ನಂತರ, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕು
* ಬಳಿಕ Get OTP ಅನ್ನು ಕ್ಲಿಕ್ ಮಾಡಿ
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ
* ಒಟಿಪಿಯನ್ನು ನಮೂದಿಸಿ, Submit ಮಾಡಿ
* ನೀವು Submit ಬಟನ್ ಕ್ಲಿಕ್ ಮಾಡಿದ ಬಳಿಕ ನಿಮ್ಮ ಪಿಎಂ ಕಿಸಾನ್ ಇ-ಕೆವೈಸಿ ಯಶಸ್ವಿಯಾಗುತ್ತದೆ