For Quick Alerts
ALLOW NOTIFICATIONS  
For Daily Alerts

ವಾಣಿಜ್ಯ ಸಂಕೀರ್ಣ ಗುತ್ತಿಗೆಗೆ ನೀಡಿದ ಸಲ್ಮಾನ್, ಮಾಸಿಕ ಬಾಡಿಗೆ ಕೇಳಿದ್ರೆ ಬೆಚ್ಚಿ ಬೀಳ್ತಿರಾ!

|

ಫ್ಯೂಚರ್ ರಿಟೇಲ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಟಿಎನ್‌ಎಸ್‌ಐ ರಿಟೇಲ್ ಪ್ರೈವೇಟ್ ಲಿಮಿಟೆಡ್‌ಗೆ ನಾಲ್ಕು ಮಹಡಿಗಳ 27,650 ಚದರ ಅಡಿ ವಿಸ್ತ್ರೀರ್ಣದ ಜಾಗವನ್ನು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಗುತ್ತಿಗೆಗೆ ನೀಡಿದ್ದಾರೆ. ಎರಡು ವರ್ಷಗಳ ಕಾಲಕ್ಕೆ ಮಾಸಿಕ ಸುಮಾರು 89.6 ಲಕ್ಷ ರೂಪಾಯಿಗಳಿಗೆ ಬಾಡಿಗೆಗೆ ನೀಡಿದ್ದಾರೆ.

 

ಸೆಪ್ಟೆಂಬರ್ 5 ರಂದು ಈ ಗುತ್ತಿಗೆಯನ್ನು ರಿನಿವಲ್ ಮಾಡಲಾಗಿದೆ ಎಂದು ಸಿಆರ್‌ಇ ಮ್ಯಾಟ್ರಿಕ್ಸ್ ಹಂಚಿಕೊಂಡ ದಾಖಲೆಗಳಲ್ಲಿ ಉಲ್ಲೇಖ ಮಾಡಲಾಗಿದೆ. ಮುಂಬೈನ ಸಾಂತಾಕ್ರೂಜ್ ವೆಸ್ಟ್‌ನಲ್ಲಿರುವ ಕೆಳ ಮಹಡಿ, ನೆಲ ಮಹಡಿ, ಮೊದಲ ಮಹಡಿ ಮತ್ತು ಎರಡನೇ ಮಹಡಿಯಲ್ಲಿರುವ ವಾಣಿಜ್ಯ ಸಂಕೀರ್ಣದ ಗುತ್ತಿಗೆ ಒಪ್ಪಂದವನ್ನು ನವೀಕರಣ ಮಾಡಲಾಗಿದೆ ಎಂದು ದಾಖಲೆಗಳು ಬಹಿರಂಗಪಡಿಸಿದೆ. ಈ ಒಪ್ಪಂದವು ಸಲ್ಮಾನ್ ಖಾನ್ ಹಾಗೂ ಟಿಎನ್‌ಎಸ್‌ಐ ರಿಟೇಲ್ ಪ್ರೈವೇಟ್ ಲಿಮಿಟೆಡ್ ನಡುವೆ ನಡೆದಿದೆ.

ಮೊದಲ ವರ್ಷದ ಮಾಸಿಕ ಬಾಡಿಗೆ 89.6 ಲಕ್ಷ ರೂಪಾಯಿ ಮತ್ತು ಎರಡನೇ ವರ್ಷದಿಂದ 94.08 ಲಕ್ಷ ರೂಪಾಯಿ ಮಾಸಿಕ ಬಾಡಿಗೆಯಾಗಲಿದೆ. ಕಂಪನಿಯು 2.68 ಕೋಟಿ ರೂಪಾಯಿಯನ್ನು ಭದ್ರತಾ ಠೇವಣಿಯಾಗಿ ಸಲ್ಮಾನ್ ಖಾನ್‌ಗೆ ಪಾವತಿ ಮಾಡಿದೆ ಎಂದು ಕೂಡಾ ದಾಖಲೆಗಳು ತೋರಿಸಿದೆ. ಈ ಒಪ್ಪಂದದ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

 2017ರಲ್ಲಿ ಮಾಡಲಾಗಿದೆ ಈ ಒಪ್ಪಂದ

2017ರಲ್ಲಿ ಮಾಡಲಾಗಿದೆ ಈ ಒಪ್ಪಂದ

ಇನ್ನು ಬಾಡಿಗೆಗೆ ಅಥವಾ ಗುತ್ತಿಗೆಗೆ ನೀಡಿರುವುದು ಸುಮಾರು 27,650 ಚದರ ಅಡಿ ಪ್ರದೇಶವಾಗಿದೆ. ಹಾಗೆಯೇ 23,042 ಚದರ ಅಡಿ ಕಾರ್ಪೆಟ್ ಪ್ರದೇಶವು ಕೂಡಾ ಬಾಡಿಗೆಗ ನೀಡಲಾಗಿದೆ. ಇನ್ನು 12 ತಿಂಗಳ ಬಳಿಕ ಮಾಸಿಕ ಬಾಡಿಗೆಯಲ್ಲಿ ಸುಮಾರು ಶೇಕಡ 5ರಷ್ಟು ಹೆಚ್ಚಳ ಮಾಡಲಾಗುವ ಷರತ್ತನ್ನು ಕೂಡಾ ಈ ಬಾಡಿಗೆ ಒಪ್ಪಂದದಲ್ಲಿ ಮಾಡಲಾಗಿದೆ. ಈ ಒಪ್ಪಂದವನ್ನು ಮೊದಲ ಬಾರಿಗೆ 2017ರಲ್ಲಿ ಮಾಡಲಾಗಿದೆ. ಇದು ಹೈ-ಸ್ಟ್ರೀಟ್ ಗುತ್ತಿಗೆ ಒಪ್ಪಂದವಾಗಿದ್ದು ಈಗ ನವೀಕರಣ ಮಾಡಲಾಗಿದೆ. ಸಾಂಟಾಕ್ರೂಜ್ ವೆಸ್ಟ್‌ನ ಲಿಂಕಿಂಗ್ ರಸ್ತೆಯಲ್ಲಿರುವ ಬ್ರಾಂಡ್ ಫುಡ್‌ಹಾಲ್‌ನಿಂದ ಗುತ್ತಿಗೆ ಪಡೆದ ಪ್ರದೇಶವು 23,042 ಚದರ ಅಡಿ ಪ್ರದೇಶದ್ದು ಆಗಿದ್ದು ನಾಲ್ಕು ಮಹಡಿಯಲ್ಲಿ ಇದೆ.

 2ನೇ ವರ್ಷಕ್ಕೆ ಎಷ್ಟು ಬಾಡಿಗೆ ಗೊತ್ತಾ?

2ನೇ ವರ್ಷಕ್ಕೆ ಎಷ್ಟು ಬಾಡಿಗೆ ಗೊತ್ತಾ?

ಜುಲೈ 2017 ರಲ್ಲಿ ಸಲ್ಮಾನ್ ಖಾನ್ ಮತ್ತು ಫ್ಯೂಚರ್ ರೀಟೇಲ್ ನಡುವೆ 60 ತಿಂಗಳಿಗೆ 80 ಲಕ್ಷ ರೂಪಾಯಿಗಳ ಮಾಸಿಕ ಬಾಡಿಗೆಗೆ ಗುತ್ತಿಗೆ ಪ್ರಾರಂಭ ಮಾಡಲಾಗಿದೆ. ಆ ಬಳಿಕ ಮಾಸಿಕ ಬಾಡಿಗೆಯನ್ನು ಜುಲೈ 2020 ರಲ್ಲಿ (ಮೂರು ವರ್ಷಗಳ ನಂತರ) ಸರಿಸುಮಾರು ಶೇಕಡಾ 12ರಷ್ಟು ಹೆಚ್ಚಳ ಮಾಡಲಾಗಿದ್ದು, ಬಾಡಿಗೆ 89.6 ಲಕ್ಷ ರೂಪಾಯಿಗೆ ಏರಿದೆ. ಈಗ ಮತ್ತೆ ಎರಡು ವರ್ಷಗಳ ಅವಧಿಗೆ ಒಪ್ಪಂದ ನವೀಕರಣ ಮಾಡಲಾಗಿದ್ದು, ಮೊದಲ ವರ್ಷಕ್ಕೆ 89.6 ಲಕ್ಷ ರೂಪಾಯಿ ಮತ್ತು ಎರಡನೇ ವರ್ಷಕ್ಕೆ 94.08 ಲಕ್ಷ ರೂಪಾಯಿಗಳ ಮಾಸಿಕ ಬಾಡಿಗೆಗೆ ಒಪ್ಪಂದ ಮಾಡಲಾಗಿದೆ.

 ಸಿಆರ್‌ಇ ಮ್ಯಾಟ್ರಿಕ್ಸ್‌ನ ಸಿಇಒ ಹೇಳುವುದು ಏನು?
 

ಸಿಆರ್‌ಇ ಮ್ಯಾಟ್ರಿಕ್ಸ್‌ನ ಸಿಇಒ ಹೇಳುವುದು ಏನು?

ಈ ಬಗ್ಗೆ ಸಲ್ಮಾನ್ ಖಾನ್ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವರ್ಷ ಜುಲೈನಲ್ಲಿ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಮುಂಬೈ ಪೀಠವು ಸಾಲದ ಸುಳಿಯಲ್ಲಿ ಸಿಲುಕಿರುವ ಫ್ಯೂಚರ್ ರಿಟೇಲ್ ಲಿಮಿಟೆಡ್ ವಿರುದ್ಧ ದಿವಾಳಿತನದ ಪ್ರಕ್ರಿಯೆಗೆ ಆದೇಶಿಸಿತ್ತು. ಈ ನಡುವೆ ಈಗ ಈ ಒಪ್ಪಂದದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಸಿಆರ್‌ಇ ಮ್ಯಾಟ್ರಿಕ್ಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಅಭಿಷೇಕ್ ಕಿರಣ್ ಗುಪ್ತಾ, "ಈ ಹೈಸ್ಟ್ರೀಟ್ ಸ್ಥಳದಲ್ಲಿ ಯಶಸ್ಸನ್ನು ಸಾಧಿಸಲಾಗಿದೆ. ಆದ್ದರಿಂದ ಗುತ್ತಿಗೆ ಉತ್ತಮವಾಗಿದೆ. ಮೊದಲ 3 ವರ್ಷಗಳ ನಂತರ 12 ಪ್ರತಿಶತ ಮತ್ತು 3 ವರ್ಷಗಳ ನಂತರ 5 ಪ್ರತಿಶತದಷ್ಟು ಹೆಚ್ಚಳ ಲಾಭವನ್ನು ಗಳಿಸಲಾಗಿದೆ. ಈ ಹಿಂದೆ ಬಾಂದ್ರಾಕ್ಕೆ ಸೀಮಿತವಾಗಿದ್ದ ಲಿಂಕಿಂಗ್ ರೋಡ್ ಹೈ ಸ್ಟ್ರೀಟ್ ಖಾರ್, ಸಾಂತಾಕ್ರೂಜ್ ಮತ್ತು ಜುಹುವರೆಗೆ ಹರಡಿದೆ," ಎಂದು ಹೇಳಿದ್ದಾರೆ.

English summary

Salman Khan leases commercial space in Mumbai to Future Retail arm for Rs 89.6 lakh per month, details here

Actor Salman Khan has leased an area of 27,650 sqft spread over four floors to TNSI Retail Private Limited, a subsidiary of Future Retail Limited, in Mumbai at a rent of around Rs 89.6 lakh per month for two years.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X