For Quick Alerts
ALLOW NOTIFICATIONS  
For Daily Alerts

SBI Salary Account: ಆನ್‌ಲೈನ್‌ನಲ್ಲಿ ಎಸ್‌ಬಿಐ ಸ್ಯಾಲರಿ ಅಕೌಂಟ್ ತೆರೆಯುವುದು ಹೇಗೆ?

|

ಸಾಮಾನ್ಯವಾಗಿ ಹಲವಾರು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸ್ಯಾಲರಿ ಅಕೌಂಟ್ ಅನ್ನು ಮಾಡಿಸುತ್ತದೆ. ಇದು ಉದ್ಯೋಗಿಗಳಿಗೆ ಸಹಾಯಕವಾಗುತ್ತದೆ. ವೇತನ ಪಡೆಯುವ ವರ್ಗಕ್ಕೆ ಲಭ್ಯವಿರುವ ಸ್ಯಾಲರಿ ಅಕೌಂಟ್, ವಿಶೇಷ ಉಳಿತಾಯ ಖಾತೆಯಾಗಿದೆ. ಈ ಖಾತೆಯು ವೇತನ ಪಡೆಯುವ ವರ್ಗಕ್ಕೆ ಹಲವಾರು ಪ್ರಯೋಜನಗಳನ್ನು ಸೇವೆಗಳನ್ನು ನೀಡುತ್ತದೆ.

ಸ್ಯಾಲರಿ ಖಾತೆಯು ಪಾರದರ್ಶಕವಾಗಿರುತ್ತದೆ ಮತ್ತು ಅತೀ ಸುರಕ್ಷಿತವಾಗಿರುತ್ತದೆ. ಹಾಗೆಯೇ ನೆಟ್‌ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಪ್ರಯೋಜನಗಳು ಕೂಡಾ ಈ ಖಾತೆಗೆ ಲಭ್ಯವಾಗುತ್ತದೆ. ಆದರೆ ನೀವು ಕೂಡಾ ಸ್ಯಾಲರಿ ಅಕೌಂಟ್ ಅನ್ನು ಮಾಡಿಸಬೇಕು ಅಂದುಕೊಂಡಿದ್ದೀರಿ, ಎಸ್‌ಬಿಐನಲ್ಲಿ ಹಲವಾರು ಸ್ಯಾಲರಿ ಅಕೌಂಟ್ ಆಯ್ಕೆಗಳಿವೆ. ಅದನ್ನು ತಿಳಿದುಕೊಳ್ಳಿ.

ಹೊಸ ಆಫರ್‌: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್‌ಬಿಐ!ಹೊಸ ಆಫರ್‌: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್‌ಬಿಐ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಲವಾರು ಸ್ಯಾಲರಿ ಖಾತೆಯ ಆಯ್ಕೆಯನ್ನು ಹೊಂದಿದೆ. ಸರ್ಕಾರಿ ಉದ್ಯೋಗಿಗಳಿಗೆ, ಕಾಪೋರೇಷನ್‌ಗಳಿಗೆ ಮತ್ತು ಇತರರಿಗೆ ಬೇರೆ ಬೇರೆ ಸ್ಯಾಲರಿ ಅಕೌಂಟ್ ಆಯ್ಕೆಯನ್ನು ಹೊಂದಿದೆ. ಹಾಗೆಯೇ ಬ್ಯಾಂಕ್ ಉತ್ತಮ ಬಡ್ಡಿದರವನ್ನು ಕೂಡಾ ನೀಡುತ್ತದೆ. ಉಚಿತ ಡೆಬಿಟ್ ಕಾರ್ಡ್, ಮೊಬೈಲ್ ಬ್ಯಾಂಕಿಂಗ್, ನೆಟ್‌ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತದೆ. ನೀವು ಎಸ್‌ಬಿಐನಲ್ಲಿ ಸ್ಯಾಲರಿ ಖಾತೆಯನ್ನು ತೆರೆಯುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ....

 ಸ್ಯಾಲರಿ ಅಕೌಂಟ್‌ನ ವಿಧಗಳಿವು

ಸ್ಯಾಲರಿ ಅಕೌಂಟ್‌ನ ವಿಧಗಳಿವು

ಕೇಂದ್ರ ಸರ್ಕಾರದ ವೇತನ ಪ್ಯಾಕೇಜ್ (ಸಿಜಿಎಸ್‌ಪಿ)
ರಾಜ್ಯ ಸರ್ಕಾರ ವೇತನ ಪ್ಯಾಕೇಜ್ (ಎಸ್‌ಜಿಎಸ್‌ಪಿ)
ರೈಲ್ವೆ ವೇತನ ಪ್ಯಾಕೇಜ್ (ಆರ್‌ಎಸ್‌ಪಿ)
ರಕ್ಷಣಾ ವೇತನ ಪ್ಯಾಕೇಜ್ (ಡಿಎಸ್‌ಪಿ)
ಕೇಂದ್ರ ಶಸ್ತ್ರಸಜ್ಜಿತ ಪೊಲೀಸ್ ತಂಡ ವೇತನ ಪ್ಯಾಕೇಜ್ (ಸಿಎಪಿಎಸ್‌ಪಿ)
ಪೊಲೀಸ್ ವೇತನ ಪ್ಯಾಕೇಜ್ (ಪಿಎಸ್‌ಪಿ)
ಇಂಡಿಯನ್ ಕೋಸ್ಟ್ ಗಾರ್ಡ್ ವೇತನ ಪ್ಯಾಕೇಜ್ (ಐಸಿಜಿಎಸ್‌ಪಿ)
ಕಾಪೋರೇಟ್ ವೇತನ ಪ್ಯಾಕೇಜ್ (ಸಿಎಸ್‌ಪಿ)
ಸ್ಟಾರ್ಟ್‌-ಅಪ್‌ ವೇತನ ಪ್ಯಾಕೇಜ್ ಖಾತೆ (ಎಸ್‌ಯುಎಸ್‌ಪಿ)

 ಸ್ಯಾಲರಿ ಅಕೌಂಟ್‌ನಿಂದ ಪ್ರಯೋಜನವೇನಿದೆ?

ಸ್ಯಾಲರಿ ಅಕೌಂಟ್‌ನಿಂದ ಪ್ರಯೋಜನವೇನಿದೆ?

* ಸ್ಯಾಲರಿ ಅಕೌಂಟ್‌ನಲ್ಲಿ ಯಾವುದೇ ಮಾಸಿಕ ಸರಾಸರಿ ಮೊತ್ತ ಶುಲ್ಕವಿಲ್ಲ.
* ಜಿರೋ ಬ್ಯಾಲೆನ್ಸ್ ಖಾತೆ ಇದಾಗಿದೆ. ಅಂದರೆ ಖಾತೆಯಲ್ಲಿ ನಿರ್ದಿಷ್ಟ ಮೊತ್ತ ಇರಲೇಬೇಕು ಎಂಬ ನಿಯಮವಿಲ್ಲ.
* ಉದ್ಯೋಗಿಯ ವೇತನ ಪಾವತಿಗಾಗಿ ಇರುವ ಖಾತೆಯಾಗಿದೆ.
* ಆಟೋ ಸ್ವೀಪ್ ಸೇವೆಯಿದೆ. ಅಂದರೆ ಮೊತ್ತ ಸಮಯಕ್ಕೆ ಸರಿಯಾಗಿ ಇಎಂಐ, ಮೊದಲಾದವುಗಳಿಗೆ ಕಡಿತವಾಗುವ ವ್ಯವಸ್ಥೆಯಿದೆ.
* ವಿಶೇಷ ಪ್ರಯೋಜನಗಳೊಂದಿಗೆ ಉಚಿತ ಡೆಬಿಟ್ ಕಾರ್ಡ್
* ಎಸ್‌ಬಿಐ ಮತ್ತು ಇತರೆ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಅನಿಯಮಿತ ವಹಿವಾಟು
* ಡಿಮ್ಯಾಂಡ್ ಡ್ರಾಫ್ಟ್ ಇಶುಯೆನ್ಸ್ ಶುಲ್ಕ ಮನ್ನಾ
* ಮಲ್ಟಿ ಸಿಟಿ ಚೆಕ್ ಶುಲ್ಕ ಮನ್ನಾ
* ವೈಯಕ್ತಿಕ ಅಪಘಾತಕ್ಕೆ ಕವರೇಜ್
* ಸ್ಪರ್ಧಾತ್ಮಕ ಬಡ್ಡಿದರದಲ್ಲಿ ವೈಯಕ್ತಿಕ ಸಾಲ, ಕಾರು ಸಾಲ, ಗೃಹ ಸಾಲ
* ಅರ್ಹತೆಗೆ ಅನುಗುಣವಾಗಿ ಓವರ್‌ಡ್ರಾಫ್ಟ್ ವ್ಯವಸ್ಥೆ
* ಅರ್ಹತೆಗೆ ಅನುಗುಣವಾಗಿ ವಾರ್ಷಿಕ ಲಾಕರ್ ಬಾಡಿಗೆ ಶುಲ್ಕ ವಿನಾಯಿತಿ

 ಬೇಕಾದ ದಾಖಲೆಗಳು ಯಾವುದು?

ಬೇಕಾದ ದಾಖಲೆಗಳು ಯಾವುದು?

* ಪಾಸ್‌ಪೋರ್ಡ್ ಗಾತ್ರದ ಪೋಟೋಗ್ರಾಫ್
* ವಿಳಾಸ ಮತ್ತು ಗುರುತು ಪುರಾವೆ
* ಉದ್ಯೋಗ ಮಾಡುತ್ತಿರುವುದನ್ನು ಖಾತರಿಪಡಿಸುವ ಪುರಾವೆ
* ಇತ್ತೀಚಿನ ಸ್ಯಾಲರಿ ಸ್ಪಿಪ್

 ಸ್ಯಾಲರಿ ಖಾತೆಯನ್ನು ತೆರೆಯುವುದು ಹೇಗೆ, ಇತರೆ ಮಾಹಿತಿ

ಸ್ಯಾಲರಿ ಖಾತೆಯನ್ನು ತೆರೆಯುವುದು ಹೇಗೆ, ಇತರೆ ಮಾಹಿತಿ

ಇನ್ನು ಸ್ಯಾಲರಿ ಅಕೌಂಟ್ ವಿಚಾರಕ್ಕೆ ಬಂದಾಗ ಹಲವಾರು ಮಂದಿಯನ್ನು ಸಾಮಾನ್ಯ ಪ್ರಶ್ನೆಯೊಂದಿರುತ್ತದೆ. ಅದುವೇ ನಮ್ಮ ಉಳಿತಾಯ ಖಾತೆಯನ್ನು ಸ್ಯಾಲರಿ ಅಕೌಂಟ್ ಆಗಿ ಪರಿವರ್ತನೆ ಮಾಡಿಕೊಳ್ಳಬಹುದೇ ಎಂಬುವುದು ಆಗಿದೆ. ಅದಕ್ಕೆ ಇರುವ ಉತ್ತರ ಹೌದು ಎಂಬುವುದಾಗಿದೆ. ಹೌದು ನಿಮ್ಮ ಉಳಿತಾಯ ಖಾತೆಯನ್ನು ನೀವು ಸ್ಯಾಲರಿ ಅಕೌಂಟ್ ಆಗಿ ಬದಲಾವಣೆ ಮಾಡಿಕೊಳ್ಳಬಹುದು. ಇನ್ನು ನೀವು ಬ್ಯಾಂಕ್‌ಗೆ ಹೋಗಿ ಸ್ಯಾಲರಿ ಅಕೌಂಟ್ ಅನ್ನು ತೆರೆಯಬಹುದು. ಆದರೆ ಆನ್‌ಲೈನ್‌ಲ್ಲಿ ಸ್ಯಾಲರಿ ಖಾತೆ ತೆರೆಯುವುದು ಹೇಗೆ ನೋಡೋಣ.

ಹಂತ 1: ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: Request a Call Back ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿಕೊಳ್ಳಿ
ಹಂತ 3: ಎಲ್ಲ ಮಾಹಿತಿಯನ್ನು ಸರಿಯಾಗಿ ನಮೂದಿಸಲಾಗಿದೆಯೇ ಎಂದು ಪರಿಶೀಲನೆ ಮಾಡಿ
ಹಂತ 4: ಪರಿಶೀಲನೆ ಮಾಡಿದ ಬಳಿಕ ಫಾರ್ಮ್ ಅನ್ನು ಸಬ್‌ಮಿಟ್ ಮಾಡಿ (submit ಕ್ಲಿಕ್ ಮಾಡಿ)
ಹಂತ 5: ಬ್ಯಾಂಕ್‌ನ ಪ್ರತಿನಿಧಿಗಳು ನಿಮ್ಮನ್ನು ಸಂಪರ್ಕ ಮಾಡುತ್ತಾರೆ
ಹಂತ 6: ಮುಂದಿನ ಪ್ರಕ್ರಿಯೆಗಳ ಬಗ್ಗೆ ನಿಮಗೆ ಮಾಹಿತಿ, ಮಾರ್ಗದರ್ಶನ ನೀಡುತ್ತಾರೆ. ಅದನ್ನು ಪಾಲಿಸಿದರೆ ಪ್ರಕ್ರಿಯೆ ಪೂರ್ಣವಾಗಲಿದೆ.

 

English summary

SBI: How to Open a Salary Account in SBI Online, Details Here

State Bank of India provides various types of salary accounts for government employees, corporations, and others. How to Open a Salary Account in SBI Online, Details Here.
Story first published: Saturday, February 4, 2023, 13:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X