For Quick Alerts
ALLOW NOTIFICATIONS  
For Daily Alerts

SBI ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು?

|

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಆನ್ ಲೈನ್, ಡಿಜಿಟಲ್ ಬ್ಯಾಂಕಿಂಗ್ ಕೂಡಾ ಜನಪ್ರಿಯತೆ ಹೊಂದಿದೆ. ನಿಮ್ಮ ಎಸ್ ಬಿಐ ಕಾರ್ಡ್ ಅನ್ನು ಕಳೆದುಕೊಂಡರೆ ಅಥವಾ ಅದು ಕಳವು ಅಥವಾ ಹಾನಿಗೊಳಗಾದರೆ ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

 

ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ತಕ್ಷಣವೇ ಅದನ್ನು ನಿರ್ಬಂಧಿಸಿ ಮತ್ತು ನಂತರ ಹೊಸದನ್ನು ಪಡೆಯಲು ಅರ್ಜಿ ಸಲ್ಲಿಸಬೇಕು. SBI ಕಾರ್ಡ್ ಅನ್ನು ನಿರ್ಬಂಧಿಸಲು ಅಥವಾ ಮರುಹಂಚಿಕೆ ಮಾಡಲು ವಿನಂತಿಯನ್ನು ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಮತ್ತು IVR ಮೂಲಕ ಸುಲಭವಾಗಿ ಮಾಡಬಹುದು.

 

ಕಾರ್ಡ್ ಬ್ಲಾಕ್ ಮಾಡುವುದು ಹೇಗೆ?

'BLOCK XXXX (ನಿಮ್ಮ ಕಾರ್ಡ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳು) 5676791' ಗೆ SMS ಕಳುಹಿಸುವ ಮೂಲಕ ನೋಂದಾಯಿತ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ನಿಮ್ಮ ಕಾರ್ಡ್ ಅನ್ನು ನೀವು ಯಾವಾಗ ಬೇಕಾದರೂ ನಿರ್ಬಂಧಿಸಬಹುದು.

ಮಿಕ್ಕಂತೆ, ಕಳುವಾದ/ಹಾಳಾದ ಕ್ರೆಡಿಟ್ ಕಾರ್ಡ್ ಬಗ್ಗೆ ವರದಿ ಮಾಡಲು ಹಂತ-ಹಂತದ ಪ್ರಕ್ರಿಯೆ ಮತ್ತು ವಿವಿಧ ರೀತಿ ಅರ್ಜಿ ಸಲ್ಲಿಸಿ ಮರುಹಂಚಿಕೆ ಮಾಡಿ

SBI ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು?


ಹಂತ 1: www.sbicard.com ಗೆ ಭೇಟಿ ಕೊಟ್ಟು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ

ಹಂತ 2: 'Requests' ಟ್ಯಾಬ್ ಅಡಿಯಲ್ಲಿ, 'Report Lost/Stolen Card' ಅನ್ನು ಕ್ಲಿಕ್ ಮಾಡಿ

ಹಂತ 3: ಕಳೆದುಹೋಗಿದೆ ಎಂದು ನೀವು ವರದಿ ಮಾಡಲು ಬಯಸುವ ಕಾರ್ಡ್ ಸಂಖ್ಯೆಯನ್ನು ಆಯ್ಕೆಮಾಡಿ

ಹಂತ 4: ನೀವು ಕಾರ್ಡ್ ಅನ್ನು ಮರುಹಂಚಿಕೆ ಮಾಡಲು ಬಯಸಿದರೆ, ನಂತರ "Reissue Card" ಮೇಲೆ ಕ್ಲಿಕ್ ಮಾಡಿ

ಹಂತ 5: Sumit ಕ್ಲಿಕ್ ಮಾಡಿ

ಮೊಬೈಲ್ ಅಪ್ಲಿಕೇಶನ್ ಮೂಲಕ ಬದಲಾವಣೆ ಹೇಗೆ?

ಹಂತ 1: SBI ಕಾರ್ಡ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.

ಹಂತ 2: 'Menu' ಮೇಲೆ ಟ್ಯಾಪ್ ಮಾಡಿ ಮತ್ತು 'Service Request' ಮೇಲೆ ಕ್ಲಿಕ್ ಮಾಡಿ

ಹಂತ 3: Report Lost/Stolen ಎಂಬುದರ ಮೇಲೆ ಕ್ಲಿಕ್ ಮಾಡಿ

ಹಂತ 4: ಕಳೆದುಹೋದ ಅಥವಾ ಕದ್ದ ಕಾರ್ಡ್ ಸಂಖ್ಯೆಯನ್ನು ಆಯ್ಕೆಮಾಡಿ.

ಹಂತ 5: ನಿಮಗೆ ಇನ್ನೊಂದು ಕಾರ್ಡ್ ಬೇಕಾದರೆ, 'Reissue Card' ಅನ್ನು ಟ್ಯಾಪ್ ಮಾಡಿ

ಹಂತ 6: Submit ಬಟನ್ ಒತ್ತಿ

ಐವಿಆರ್ ಮುಖಾಂತರ ಬದಲಾವಣೆಗಾಗಿ
ಹಂತ 1: SBI ಕಾರ್ಡ್ ಸಹಾಯವಾಣಿ 1860 180 1290 ಅಥವಾ 39 02 02 02 (ಸ್ಥಳೀಯ STD ಕೋಡ್ ಬಳಸಿ) ಗೆ ಕರೆ ಮಾಡಿ ಮತ್ತು ನೀವು ಬಯಸಿದ ಭಾಷೆಯನ್ನು ಆಯ್ಕೆಮಾಡಿ.

ಹಂತ 2: ಕಳೆದುಹೋದ/ಕಳುವಾದ ಕಾರ್ಡ್ ಅನ್ನು ವರದಿ ಮಾಡಲು 2 ಅನ್ನು ಒತ್ತಿರಿ.

ಗಮನಿಸಿ: ನೀಡಿಕೆ/ಬದಲಿಗಾಗಿ ನೀವು 100+ ರೂ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ.

English summary

Lost your SBI credit card? Step-by-step guide to block lost SBI card and reissue it

If you lose your SBI card or it gets stolen or damaged, the first thing you should do is block it immediately and then reissue a new one. THere's a step-by-step guide to block and reissue it.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X