ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ ಷೇರು: ಖರೀದಿಸಬೇಕೇ, ಮಾರಾಟ ಮಾಡಬೇಕೇ?
ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ ಷೇರುಗಳು ಇಂದು (ಸೆಪ್ಟೆಂಬರ್ 15) ಷೇರು ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದೆ. ಕಂಪನಿಯ ಷೇರುಗಳು ಎನ್‌ಎಸ್‌ಇಯಲ್ಲಿ 495 ರೂಪಾಯಿಗೆ ಲೀಸ್ಟಿಂಗ್ ಮಾಡಲಾಗಿದೆ. ಮೂಲ ಬೆಲೆ 510 ರೂಪಾಯಿ ಆಗಿದೆ. ಆದರೆ ಮೂರು ಶೇಕಡ ರಿಯಾಯಿತಿಯಲ್ಲಿ ಲೀಸ್ಟಿಂಗ್ ಆಗಿದೆ.
ಇನ್ನು ಬಾಂಬೆ ಸ್ಟಾಕ್ ಮಾರುಕಟ್ಟೆಯಲ್ಲಿ ಮೂಲಬೆಲೆಯಲ್ಲೇ ಲೀಸ್ಟಿಂಗ್ ಆಗಿದೆ. ಕಂಪನಿಯು 8,075.92 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿತ್ತು. ಕಂಪನಿಯು ತನ್ನ 831 ಕೋಟಿ ರೂಪಾಯಿಯ ಐಪಿಒ ಅನ್ನು ಸೆಪ್ಟೆಂಬರ್ 5-7ರವರಗೆ ನಡೆಸಿದೆ. ಇಂದು ಸೆಪ್ಟೆಂಬರ್ 15ರಂದು ಷೇರು ಮಾರುಕಟ್ಟೆಯಲ್ಲಿ ಲೀಸ್ಟಿಂಗ್ ಆಗಿದೆ.
ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಚಂದಾದಾರಿಕೆಯ ಕೊನೆಯ ದಿನದಂದು 2.86 ಬಾರಿ ಸಬ್‌ಸ್ಕ್ರೈಬ್ ಆಗಿದೆ. 831.6 ಕೋಟಿ ಸಾರ್ವಜನಿಕ ಕೊಡುಗೆಯು 87,12,000 ಷೇರುಗಳ ವಿರುದ್ಧ 2,49,39,292 ಷೇರುಗಳಿಗೆ ಬಿಡ್‌ಗಳನ್ನು ಸ್ವೀಕರಿಸಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ ಐಪಿಒ ಚಂದಾದಾರಿಕೆ
ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ ಐಪಿಒದಲ್ಲಿ ಅರ್ಹ ಸಾಂಸ್ಥಿಕ ಖರೀದಿದಾರರು (QIBs) ವರ್ಗವು 1.62 ಬಾರಿ ಚಂದಾದಾರರಾಗಿದ್ದಾರೆ. ಸಾಂಸ್ಥಿಕವಲ್ಲದ ಹೂಡಿಕೆದಾರರ (NIIs) ವರ್ಗವು 2.94 ಬಾರಿ ಚಂದಾದಾರಿಕೆಯಾಗಿದ್ದಾರೆ. ರಿಟೇಲ್ ವೈಯಕ್ತಿಕ ಹೂಡಿಕೆದಾರರ (RIIs) ವರ್ಗವು 6.48 ಬಾರಿ ಚಂದಾದಾರಿಕೆಯಾಗಿದೆ. ಆನಂದ್ ರಾಠಿ ಷೇರುಗಳು ಮತ್ತು ಸ್ಟಾಕ್ ಬ್ರೋಕರ್‌ಗಳು ಐಪಿಒಗೆ "ಚಂದಾದಾರರಾಗಿ-ದೀರ್ಘಾವಧಿಯ" ರೇಟಿಂಗ್ ಅನ್ನು ಶಿಫಾರಸು ಮಾಡಿದ್ದಾರೆ. ಕಾರ್ಯಕ್ಷಮತೆ ಮತ್ತು ಆರೋಗ್ಯಕರ ಆದಾಯವನ್ನು ನೋಡಿಕೊಂಡು ಮುಖ್ಯಸ್ಥ (ಇಕ್ವಿಟಿ ರಿಸರ್ಚ್) ನರೇಂದ್ರ ಸೋಲಂಕಿ ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ ಶಿಫಾರಸು ಮಾಡಿದ್ದಾರೆ.

ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ ಬಗ್ಗೆ
ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ ತಮಿಳುನಾಡಿನ ತೂತುಕುಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬ್ಯಾಂಕ್ ಆಗಿದೆ. ಇದು 100 ವರ್ಷಗಳಷ್ಟು ಹಳೆಯದಾದ ಖಾಸಗಿ ವಲಯದ ಬ್ಯಾಂಕ್ ಆಗಿದೆ. ಬ್ಯಾಂಕ್ 509 ಶಾಖೆಗಳು, 12 ಆಡಳಿತ ಕಚೇರಿಗಳು, 1,141 ಎಟಿಎಂಗಳು, 282 ಸಿಆರ್‌ಎಂ, 101 ಇ-ಲಾಬಿಗಳನ್ನು ಹೊಂದಿದೆ. ಈ 509 ಶಾಖೆಗಳಲ್ಲಿ 76 ಶಾಖೆಗಳು ಮಹಾನಗರಗಳಲ್ಲಿ, 80 ಶಾಖೆಗಳು ನಗರ ಪ್ರದೇಶಗಳಲ್ಲಿ, 247 ಶಾಖೆಗಳು ಅರೆ ನಗರ ಪ್ರದೇಶಗಳಲ್ಲಿ ಮತ್ತು 106 ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಬ್ಯಾಂಕ್ ದಕ್ಷಿಣ ಭಾರತದಲ್ಲಿ ವ್ಯಾಪಕ ಅಸ್ತಿತ್ವವನ್ನು ಹೊಂದಿದೆ. ಭಾರತದ ಇತರ ರಾಜ್ಯಗಳಲ್ಲಿ ಮತ್ತಷ್ಟು ಶಾಖೆಗಳನ್ನು ಹೊಂದಿದೆ. ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ 90 ಶಾಖೆಗಳನ್ನು ಹೊಂದಿದೆ.

ಹೂಡಿಕೆದಾರರು ಈಗ ಏನು ಮಾಡಬೇಕು?
ಸ್ವಸ್ತಿಕ ಇನ್ವೆಸ್ಟ್‌ಮಾರ್ಟ್ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ ಸಂತೋಷ್ ಮೀನಾ ಈ ಬಗ್ಗೆ ಮಾತನಾಡಿ, "ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ ರೂ. 495 ಅಂದರೆ ಅದರ ಮೂಲ ಬೆಲೆಗಿಂತ ಶೇಕಡಾ 6 ರಷ್ಟು ಕಡಿಮೆ ಇದೆ. ಅನಿಶ್ಚಿತ ಕಾನೂನು ಸವಾಲು, ದೀರ್ಘಾವಧಿಯ ಕಾರ್ಯಕ್ಷಮತೆಯ ಸಂಪೂರ್ಣ ಸ್ಪಷ್ಟತೆಯ ಕೊರತೆ, ಚಂದಾದಾರಿಕೆ ಬೆಲೆಗಿಂತ ಕಡಿಮೆಗೆ ಇಳಿಯಲು ಕೆಲವು ಕಾರಣಗಳು ಆಗಿದೆ. ಲಿಸ್ಟಿಂಗ್ ಗೇನ್‌ಗಳಿಗಾಗಿ ಅರ್ಜಿ ಸಲ್ಲಿಸಿದವರು ರೂ 470 ಸ್ಟಾಪ್ ಲಾಸ್ ಅನ್ನು ನಿರ್ವಹಿಸಬಹುದು. ದೀರ್ಘಾವಧಿಯ ಹೂಡಿಕೆದಾರರು ಕೆಲವು ತ್ರೈಮಾಸಿಕಗಳವರೆಗೆ ಕಾಯಬೇಕು. ಹೂಡಿಕೆದಾರರು ಅಸ್ತಿತ್ವದಲ್ಲಿರುವ ಲೀಸ್ಟ್ ಮಾಡಲಾದ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ನಮ್ಮ ಸಲಹೆಯಾಗಿದೆ. ಮುಂದಿನ ದಿನದಲ್ಲಿ ಬರುವ ಸವಾಲನ್ನು ಎದುರಿಸಬೇಕಾದರೆ ದೊಡ್ಡ ಗಾತ್ರದ ಬ್ಯಾಂಕುಗಳು ಮತ್ತು ಕೆಲವು ಮಧ್ಯಮ ಗಾತ್ರದ ಬ್ಯಾಂಕುಗಳು ಉತ್ತಮವಾಗಿದೆ.