For Quick Alerts
ALLOW NOTIFICATIONS  
For Daily Alerts

ಐಟಿಆರ್‌ ದಾಖಲಿಗೂ ಮುನ್ನ ಎಐಎಸ್‌ ಮೂಲಕ ನಿಮ್ಮ ಆದಾಯ ಪರಿಶೀಲಿಸುವುದುದು ಹೇಗೆ?

|

ತೆರಿಗೆದಾರರಿಗೆ ಈಗ ಸಂತಸದ ಸುದ್ದಿಯೊಂದು ಬಂದಿದೆ. ಅದರಲ್ಲೂ ಮುಖ್ಯವಾಗಿ ಐಟಿಆರ್‌ ರಿಟರ್ನ್ ಅನ್ನು ಸಲ್ಲಿಕೆ ಮಾಡುವವರಿಗೆ ಈ ಸುದ್ದಿಯು ಹರ್ಷದಾಯಕವಾಗಲಿದೆ. ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡುತ್ತಿದ್ದರೆ, ನಿಮಗೆ ಇನ್ನು ಮುಂದೆ ವಿಶೇಷ ಸೌಲಭ್ಯಗಳು ಪಡೆಯಲು ಸಾಧ್ಯವಾಗಲಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆಯನ್ನು ಸರಳೀಕರಣ ಮಾಡುವ ನಿಟ್ಟಿನಲ್ಲಿ "ವಾರ್ಷಿಕ ಮಾಹಿತಿ ಹೇಳಿಕೆ (ಎಐಎಸ್‌) ಎಂಬ ಹೊಸ ಸೌಲಭ್ಯವನ್ನು ಆರಂಭ ಮಾಡಲಾಗಿದೆ. ತೆರಿಗೆದಾರರು ಐಎಎಸ್‌ಗಾಗಿ ದೀರ್ಘ ಕಾಲದಿಂದ ಕಾಯುತ್ತಿದ್ದರು.

ತೆರಿಗೆದಾರರು ಇದೀಗ ತಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್‌) ಅನ್ನು ಹೊಸ ವಾರ್ಷಿಕ ಮಾಹಿತಿ ಹೇಳಿಕೆಯೊಂದಿಗೆ ಸಲ್ಲಿಸುವ ಮುನ್ನ ಪರಿಶೀಲನೆ ಮಾಡಬಹುದು. ಭವಿಷ್ಯದಲ್ಲಿ ಆದಾಯ ತೆರಿಗೆ ಇಳಾಖೆಯ ಸೂಚನೆಗಳನ್ನು ಎದುರಿಸುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ವರದಿಯು ಉಲ್ಲೇಖ ಮಾಡಿದೆ.

 ಎಐಎಸ್‌ ಮೂಲಕ ನಿಮ್ಮ ಆದಾಯ ಪರಿಶೀಲಿಸುವುದು ಹೇಗೆ?

ಐಟಿ ಇಲಾಖೆಯು ಕಳೆದ ತಿಂಗಳು ಹೆಚ್ಚಿನ ಮೌಲ್ಯದ ಹಣಕಾಸು ವಹಿವಾಟುಗಳ ಪಟ್ಟಿಯನ್ನು ವಿಸ್ತರಣೆ ಮಾಡಿದೆ. ಇದರಲ್ಲಿ ಮ್ಯೂಚುವಲ್ ಫಂಡ್ (ಎಂಎಫ್) ಖರೀದಿಗಳ ವಿವರಗಳು, ವಿದೇಶಿ ರವಾನೆಗಳು ಮತ್ತು ಇತರ ತೆರಿಗೆದಾರರ ಐಟಿಆರ್‌ಗಳಲ್ಲಿನ ಮಾಹಿತಿಯನ್ನು ತೆರಿಗೆದಾರರಿಗೆ ಫಾರ್ಮ್ 26 ಎಎಸ್‌ನಲ್ಲಿ ಲಭ್ಯ ಮಾಡಲಾಗುತ್ತದೆ.

ಫಾರ್ಮ್ 26AS ವಾರ್ಷಿಕ ಏಕೀಕೃತ ತೆರಿಗೆ ಹೇಳಿಕೆಯಾಗಿದ್ದು, ತೆರಿಗೆದಾರರು ತಮ್ಮ ಪ್ಯಾನ್‌ ಸಂಖ್ಯೆಯನ್ನು ಬಳಸಿಕೊಂಡು ಆದಾಯ ತೆರಿಗೆ ವೆಬ್‌ಸೈಟ್‌ನಿಂದ ಈ ಬಗ್ಗೆ ಮಾಹಿತಿ ಪಡೆಯಬಹುದು. ಈ ಬಗ್ಗೆ ಹೇಳಿಕೆ ನೀಡಿರುವ ಐಟಿ ಇಲಾಖೆಯು, "ಈಗ ತೆರಿಗೆದಾರರು ಐಎಎಸ್‌ಗೆ ಸುಲಭವಾಗಿ ಪ್ರವೇಶ ಪಡೆಯಬಹುದು. ಇ-ಫೈಲಿಂಗ್ ಪೋರ್ಟಲ್‌ ಮೂಲಕ ಈಗ ತೆರಿಗೆದಾರರು ಪ್ರವೇಶ ಪಡೆಯಬಹುದಾಗಿದೆ. ಪಿಡಿಎಫ್‌, ಸಿಎಸ್‌ವಿ ಹಾಗೂ ಜೆಎಸ್‌ಒಎನ್‌ ಫಾರ್ಮೆಟ್‌ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. http://incometax.gov.in ನಲ್ಲಿ 'Services' ಕೆಳಗೆ ಇರುವ 'AIS' ಅನ್ನು ಕ್ಲಿಕ್‌ ಮಾಡಿ ನೀವು ನಿಮ್ಮ ಆದಾಯ ಪರಿಶೀಲನೆ ಮಾಡಬಹುದು.

ಒಂದೇ ಜಾಗದಲ್ಲಿ ಕುಳಿತು ಎಲ್ಲಾ ವಹಿವಾಟು ಪರಿಶೀಲನೆ ಮಾಡಲು ಸಾಧ್ಯ

ಇದಕ್ಕೂ ಮೊದಲು ತೆರಿಗೆ ಪಾವತಿದಾರರು ಷೇರು/ಮ್ಯೂಚುವಲ್‌ ಫಂಡ್‌ ಮಾರಾಟದ ಮೇಲೆ ಕ್ಯಾಪಿಟಲ್‌ ಗೆನ್‌, ಡಿವಿಡೆಂಟ್‌, ಎಫ್‌ಡಿ ಹಾಗೂ ಸೇವಿಂಗ್‌ ಅಕೌಂಟ್‌ ಮೇಲೆ ಗಳಿಸಿದ ಬಡ್ಡಿಗಳಂತಹ ಮಾಹಿತಿಯನ್ನು ಐಟಿಆರ್‌ ದಾಖಲು ಮಾಡುವ ವೇಳೆ ಮರೆಯುತ್ತಿದ್ದರು. ಹಾಗೆಯೇ ಇದರಿಂದಾಗಿ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆಯು ನೋಟಿಸ್‌ ಕೂಡಾ ಜಾರಿ ಮಾಡಿರುವ ಘಟನೆಗಳು ನಡೆದಿದೆ. ಆದರೆ ಈಗ ವಾರ್ಷಿಕ ಮಾಹಿತಿ ಹೇಳಿಕೆಯು ಐಟಿಆರ್‌ ಫೈಲಿಂಗ್‌ ಉದ್ಧೇಶಕ್ಕಾಗಿ ಬಡ್ಡಿ, ಲಾಭಾಂಶ, ಷೇರು, ವಹಿವಾಟುಗಳು, ಮ್ಯೂಚುವಲ್‌ ಫಂಡ್‌ ವಹಿವಾಟುಗಳು, ವಿದೇಶಿ ರವಾನೆ ಮಾಹಿತಿಯಂತಹ ಅಧಿಕ ಮಾಹಿತಿಯನ್ನು ಸಂಗ್ರಹ ಮಾಡಲಿದೆ.

ಎಐಎಸ್‌ ಡೌನ್‌ಲೋಡ್‌ ಮಾಡುವುದು ಹೇಗೆ?

* ಮೊದಲು ನಿಮ್ಮ ಪ್ಯಾನ್‌ ಹಾಗೂ ಪಾಸ್‌ವರ್ಡ್ ಮೂಲಕ ಪೋರ್ಟಲ್‌ಗೆ ಲಾಗಿನ್‌ ಆಗಿ
* ಮೆನುವಿನಲ್ಲಿ "ಸೇವೆ" ಟ್ಯಾಬ್ ಮೇಲೆ ಕ್ಲಿಕ್ ಮಾಡಿ
* ಆ ಬಳಿಕ How To Download AIS ಆಯ್ಕಯ ಮೇಲೆ ಕ್ಲಿಕ್‌ ಮಾಡಿ
* ನಂತರ ಪಾಪ್-ಅಪ್ ವಿಂಡೋ ತೆರೆದುಕೊಳ್ಳಲಿದ್ದು, ಅಲ್ಲಿ ಮುಂದುವರೆಯಿರಿ ಕ್ಲಿಕ್‌ ಮಾಡಿ
* ಈಗ ನಿಮ್ಮ ಎಐಎಸ್‌ ಮುಖಪುಟ ತೆರೆಯಲಿದೆ
* ಅಲ್ಲಿ ಸೂಚನೆ ಪರಿಶೀಲಿಸಿ ಬಳಿಕ ನೀಡಲಾದ AIS ಟ್ಯಾಬ್ ಮೇಲೆ ಕ್ಲಿಕ್ ಮಾಡಿ
* ಈಗ ನೀವು ಡೌನ್‌ಲೋಡ್‌ ಮಾಡಲು ಎರಡು ಆಯ್ಕೆಗಳು ಲಭ್ಯವಾಗಲಿದೆ
* . ಮೊದಲನೆಯದು, ತೆರಿಗೆದಾರರ ಮಾಹಿತಿ ವ್ಯವಸ್ಥೆ (TIS) ಮತ್ತು ಎರಡನೆಯದಾಗಿ, ವಾರ್ಷಿಕ ಮಾಹಿತಿ ಹೇಳಿಕೆ (AIS)
* ಬಳಿಕ ನೀವು AIS ಟ್ಯಾಬ್‌ನಲ್ಲಿ, ಡೌನ್‌ಲೋಡ್ PDF ಅನ್ನು ಕ್ಲಿಕ್ ಮಾಡಿ
* ನಿಮ್ಮ ಪಾಸ್‌ವರ್ಡ್ ಕೇಳಲಾಗುತ್ತದೆ ಅದನ್ನು ಹಾಕಿ
* ಈ ಪಾಸ್‌ವರ್ಡ್ ನಿಮ್ಮ PAN ಕಾರ್ಡ್ ಸಂಖ್ಯೆ + ಹುಟ್ಟಿದ ದಿನಾಂಕವಾಗಿರುತ್ತದೆ

English summary

Taxpayers can now access new I-T annual info statement on e-filing portal

Taxpayers can now access new I-T annual info statement on e-filing portal. Check here process.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X