For Quick Alerts
ALLOW NOTIFICATIONS  
For Daily Alerts

PAN Card History : ವಂಚನೆಯಿಂದ ತಪ್ಪಿಸಲು ಪ್ಯಾನ್ ಕಾರ್ಡ್ ಹಿಸ್ಟರಿ ಚೆಕ್ ಮಾಡಿ

|

ಪ್ರಸ್ತುತ ಆಧಾರ್ ಕಾರ್ಡ್‌ನಂತೆಯೇ ಪ್ಯಾನ್ ಕಾರ್ಡ್ ಅತೀ ಪ್ರಮುಖವಾದ ದಾಖಲೆ ಆಗಿದೆ. ಯಾವುದೇ ಬ್ಯಾಂಕ್ ಅಥವಾ ಆರ್ಥಿಕ ವಹಿವಾಟಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯವಾಗಿದೆ. ನಾವು ಬ್ಯಾಂಕ್ ಖಾತೆಯನ್ನು ತೆರೆಯಬೇಕಾದರೂ ಪ್ಯಾನ್ ಕಾರ್ಡ್ ಬೇಕಾಗುತ್ತದೆ. ಪ್ಯಾನ್ ಕಾರ್ಡ್ ಇಲ್ಲವಾದರೆ ನೀವು ಬ್ಯಾಂಕ್ ಖಾತೆಯನ್ನು ತೆರೆಯಲು ಹಾಗೂ ಸಾಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಆದಾಯ ತೆರಿಗೆ ಇಲಾಖೆಯು ಈ ಕಾರ್ಡ್ ಅನ್ನು ಜಾರಿ ಮಾಡಿದ್ದು ಜನರ ಆರ್ಥಿಕ ವಹಿವಾಟಿನ ಬಗ್ಗೆ ನಿಗಾ ವಹಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯು ಎಲ್ಲ ವಹಿವಾಟಿಗೂ ಪ್ಯಾನ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿದೆ. ನಿಮ್ಮಲ್ಲಿ ಪ್ಯಾನ್ ಕಾರ್ಡ್ ಇಲ್ಲವಾದರೆ ಕೆಲವು ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಕೂಡಾ ಪಡೆಯಲು ಸಾಧ್ಯವಾಗುವುದಿಲ್ಲ.

ಆಧಾರ್ ಕಾರ್ಡ್ ಬಯೋಮೆಟ್ರಿಕ್ ಡೇಟಾ ಲಾಕ್‌, ಅನ್‌ಲಾಕ್ ಮಾಡುವುದು ಹೇಗೆ?ಆಧಾರ್ ಕಾರ್ಡ್ ಬಯೋಮೆಟ್ರಿಕ್ ಡೇಟಾ ಲಾಕ್‌, ಅನ್‌ಲಾಕ್ ಮಾಡುವುದು ಹೇಗೆ?

ಆದರೆ ಪ್ರಸ್ತುತ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡು ವಂಚಕರು ಹಲವಾರು ವಂಚನೆಗಳನ್ನು ಮಾಡುತ್ತಿದ್ದಾರೆ. ಆದರೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ವಂಚನೆಗೆ ಬಳಸಲಾಗಿದೆ ಎಂದು ನೀವು ತಿಳಿಯುವುದಾದರೂ ಹೇಗೆ? ಅದಕ್ಕಾಗಿ ನೀವು ಪ್ಯಾನ್ ಕಾರ್ಡ್ ಹಿಸ್ಟರಿಯನ್ನು ಚೆಕ್ ಮಾಡಬೇಕಾಗುತ್ತದೆ. ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

ವಂಚನೆಯಿಂದ ತಪ್ಪಿಸಲು ಪ್ಯಾನ್ ಕಾರ್ಡ್ ಹಿಸ್ಟರಿ ಚೆಕ್ ಮಾಡಿ

ಪ್ಯಾನ್ ಕಾರ್ಡ್ ಹಿಸ್ಟರಿ ಚೆಕ್ ಮಾಡುವುದು ಹೇಗೆ?

ನೀವು ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ಮೂಲಕ ಪ್ಯಾನ್ ಕಾರ್ಡ್ ಹಿಸ್ಟರಿಯನ್ನು ಚೆಕ್ ಮಾಡಬಹುದು. ಹಾಗೆಯೇ ಆದಾಯ ತೆರಿಗೆ ಇಲಾಖೆಗೆ ನೀವು ಭೇಟಿ ನೀಡುವ ಮೂಲಕವು ಹಿಸ್ಟರಿಯನ್ನು ಚೆಕ್ ಮಾಡಬಹುದು. ಪ್ಯಾನ್ ಕಾರ್ಡ್‌ನ ಯಾವುದೇ ಅನಧಿಕೃತ ಬಳಕೆಯನ್ನು ತಪ್ಪಿಸಲು ನೀವು ಈ ಹಿಸ್ಟರಿಯನ್ನು ಚೆಕ್ ಮಾಡುವುದು ಮುಖ್ಯವಾಗಿದೆ.

ನೀವು ಆನ್‌ಲೈನ್ ಮೂಲಕ ಅಂದರೆ ಆದಾಯ ತೆರಿಗೆ ಪೋರ್ಟಲ್ ಮೂಲಕ ಹಿಸ್ಟರಿ ಚೆಕ್ ಮಾಡಬೇಕಾದರೆ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗಬೇಕಾಗುತ್ತದೆ. ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಹಾಗೂ ಬೇರೆ ಮಾಹಿತಿಯನ್ನು ಉಲ್ಲೇಖ ಮಾಡಿ ಹಿಸ್ಟರಿಯನ್ನು ಚೆಕ್ ಮಾಡಬಹುದು. ಲಾಗಿನ್ ಆದ ಬಳಿಕ ನಿಮ್ಮ ಪ್ಯಾನ್ ಕಾರ್ಡ್ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ಲಭ್ಯವಾಗಲಿದೆ. ನಿಮ್ಮ ವಹಿವಾಟು, ಶುಲ್ಕ ಎಲ್ಲ ಮಾಹಿತಿ ಲಭ್ಯವಾಗಲಿದೆ.

ವಂಚನೆಯಿಂದ ತಪ್ಪಿಸಲು ಪ್ಯಾನ್ ಕಾರ್ಡ್ ಹಿಸ್ಟರಿ ಚೆಕ್ ಮಾಡಿ

ನೀವು ಆನ್‌ಲೈನ್ ಪೋರ್ಟಲ್‌ಗೆ ಲಾಗಿನ್ ಆಗಲು ಸಾಧ್ಯವಾಗದಿದ್ದರೆ, ಆದಾಯ ತೆರಿಗೆ ಇಲಾಖೆಗೆ ಭೇಟಿ ನೀಡಿ. ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ. ಗ್ರಾಹಕರ ಸೇವಾ ಸೆಂಟರ್ ನಿಮಗೆ ಮಾಹಿತಿಯನ್ನು ನೀಡಲಿದೆ. ನಿಮ್ಮ ಪ್ಯಾನ್ ಕಾರ್ಡ್‌ನ ಹಿಸ್ಟರಿ ಲಭ್ಯವಾಗಲಿದೆ. ಹಾಗೆಯೇ ಪೋರ್ಟಲ್‌ಗೆ ಲಾಗಿನ್ ಆಗದಿರುವ ಸಮಸ್ಯೆಯನ್ನು ಕೂಡಾ ಬಗೆಹರಿಸಲಾಗುತ್ತದೆ.

ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್‌ನ ವಂಚನೆ ಹಾಗೂ ದುರ್ಬಳಕೆಯ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುತ್ತದೆ. ಪ್ರತಿಯೊಬ್ಬರ ಹಣಕಾಸು ಮಾಹಿತಿಯನ್ನು ರಕ್ಷಣೆ ಮಾಡಲು ಆದಾಯ ತೆರಿಗೆ ಇಲಾಖೆಯು ಎಲ್ಲ ಕಾರ್ಯವನ್ನು ಮಾಡುತ್ತಿದೆ ಎಂದು ಇಲಾಖೆ ತಿಳಿಸಿದೆ.

English summary

To Avoid Misuse of your PAN Card, Check PAN Card History, Follow this Steps

A Permanent Account Number (PAN) is a 10-digit alphanumeric number. To Avoid Misuse of your PAN Card, Check PAN Card History.Follow this Steps explained in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X