For Quick Alerts
ALLOW NOTIFICATIONS  
For Daily Alerts

ಐಫೋನ್ ಬಳಕೆದಾರರಿಗೆ ಟ್ವಿಟ್ಟರ್‌ ಬ್ಲ್ಯೂ ಟಿಕ್ ವೆಚ್ಚ ದುಬಾರಿ!

|

ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್ ಕಳೆದ ತಿಂಗಳಲ್ಲೇ ಟ್ವಿಟ್ಟರ್ ಬ್ಲ್ಯೂ ಸಬ್‌ಸ್ಕ್ರಿಪ್‌ಷನ್‌ಗೆ 8 ಡಾಲರ್ ಮೊತ್ತ ಎಂದು ಘೋಷಣೆ ಮಾಡಿದ್ದಾರೆ. ಉತ್ತಮ ಸಂಸ್ಥೆ, ಜನಪ್ರಿಯ ವ್ಯಕ್ತಿ ಎಂಬಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಕೆಲವರು ಬ್ಲ್ಯೂ ವೆರಿಫಿಕೇಷನ್ ಅನ್ನು ಪಡೆಯುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಈ ಬದಲಾವಣೆ ಮಾಡಲಾಗಿದೆ.

ಟ್ವಿಟ್ಟರ್ ಬ್ಲ್ಯೂ ಟಿಕ್ ಸ್ಥಗಿತವಾದ ಬಳಿಕ ಎಲಾನ್ ಮಸ್ಕ್ ಆ್ಯಪಲ್ ಬಗ್ಗೆ ವ್ಯಂಗ್ಯವಾಡಿದ್ದರು. ಆ್ಯಪಲ್‌ಗೆ ಶೇಕಡ 30ರಷ್ಟು ತೆರಿಗೆ ವಿಧಿಸುವ ವಿಚಾರವೂ ಕೂಡಾ ಬಂದಿತ್ತು. ಈಗ ಟ್ವಿಟ್ಟರ್ ತನ್ನ ಬ್ಲ್ಯೂ ಟಿಕ್‌ಗೆ ಎಷ್ಟು ವೆಚ್ಚ ವಿಧಿಸಲಾಗುತ್ತದೆ ಎಂಬುವುದನ್ನು ಗೊತ್ತುಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವೆರಿಫೈಡ್ ಟ್ವಿಟ್ಟರ್ ಖಾತೆಗೆ ಬ್ಲೂ ಅಲ್ಲ ಹೊಸ ಬಣ್ಣ, ಯಾವುದು?ವೆರಿಫೈಡ್ ಟ್ವಿಟ್ಟರ್ ಖಾತೆಗೆ ಬ್ಲೂ ಅಲ್ಲ ಹೊಸ ಬಣ್ಣ, ಯಾವುದು?

ಟ್ವಿಟ್ಟರ್‌ ಬ್ಲ್ಯೂ ಟಿಕ್‌ಗಾಗಿ ಮಾಸಿಕ ಶುಲ್ಕ 7 ಡಾಲರ್ ಆಗಿದೆ. ಆದರೆ ನೀವು ಐಫೋನ್‌ನಲ್ಲಿ ಟ್ವಿಟ್ಟರ್ ಅಪ್ಲಿಕೇಷನ್ ಅನ್ನು ಹೊಂದಿದ್ದರೆ ಮಾಸಿಕವಾಗಿ 11 ಡಾಲರ್ ಪಾವತಿ ಮಾಡಬೇಕಾಗುತ್ತದೆ. ಆಪಲ್ ತನ್ನ ಪ್ಲಾಟ್‌ಫಾರ್ಮ್ ಮೂಲಕ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ವಿಧಿಸುವ ಶೇಕಡ 30ರಷ್ಟು ಶುಲ್ಕವನ್ನು ಈ ಹೆಚ್ಚಿನ ಬೆಲೆಯಿಂದ ಸರಿದೂಗಿಸಲಾಗುತ್ತದೆ.

ಐಫೋನ್ ಬಳಕೆದಾರರಿಗೆ ಟ್ವಿಟ್ಟರ್‌ ಬ್ಲ್ಯೂ ಟಿಕ್  ವೆಚ್ಚ ದುಬಾರಿ!

ಟ್ವಿಟ್ಟರ್‌ನ ಬ್ಲ್ಯೂ ಟಿಕ್‌ ಅನ್ನು ಮತ್ತೆ ಪ್ರಾರಂಭಿಸಲು ಈ ಹಿಂದೆಯೇ ನಿಗದಿಪಡಿಸಲಾಗಿತ್ತು. ಆದರೆ ಹಲವಾರು ಬಾರಿ ವಿಳಂಬವಾಗಿತ್ತು. ಇತ್ತೀಚಿನವರೆಗೂ ಈ ಬಗ್ಗೆ ಹಲವಾರು ಗೊಂದಲಗಳು ಇದೆ. ಟ್ವಿಟ್ಟರ್ ಮತ್ತು ಆ್ಯಪಲ್‌ನ ಸಿಇಒಗಳಾದ ಎಲಾನ್ ಮಸ್ಕ್ ಮತ್ತು ಟಿಮ್ ಕುಕ್ ಶೇಕಡ 30ರಷ್ಟು ತೆರಿಗೆಯ ಗೊಂದಲ ಬಗ್ಗೆ ಭೇಟಿಯಾಗಿ ಮಾತನಾಡಿದ್ದರು ಎಂದು ಕೂಡಾ ವರದಿಯಾಗಿದೆ.

ಇನ್ಮುಂದೆ ಟ್ವಿಟ್ಟರ್ ಉದ್ಯೋಗಿಗಳಿಗೆ ವಾರದಲ್ಲಿ 80 ಗಂಟೆ ಕೆಲಸದ ಅವಧಿಯೇ?ಇನ್ಮುಂದೆ ಟ್ವಿಟ್ಟರ್ ಉದ್ಯೋಗಿಗಳಿಗೆ ವಾರದಲ್ಲಿ 80 ಗಂಟೆ ಕೆಲಸದ ಅವಧಿಯೇ?

ವೆರಿಫೈಡ್ ಖಾತೆಗೆ ಹಲವಾರು ಬಣ್ಣಗಳು

ಯಾವ ಸಂಸ್ಥೆಯ ಖಾತೆಯನ್ನು ಅಧಿಕೃತ ಅಥವಾ ಟ್ವಿಟ್ಟರ್ ವೆರಿಫೈಡ್ ಖಾತೆಯನ್ನಾಗಿಸಲಾಗುತ್ತದೆಯೋ ಆ ಖಾತೆಯಲ್ಲಿ ಗೋಲ್ಡ್ ಟಿಕ್ ಇರುತ್ತದೆ. ಇನ್ನು ಯಾರು ತಮ್ಮ ಖಾತೆಯನ್ನು ವೆರಿಫೈ ಆಗಿರಿಸಲು ಬಯಸುತ್ತಾರೋ ಅವರ ಖಾತೆಯಲ್ಲಿ ಬ್ಲ್ಯೂ ಟಿಕ್ ಕಾಣಬಹುದು. ಸೆಲೆಬ್ರಿಟಿಗಳ ಖಾತೆಯು ಬ್ಲ್ಯೂ ಟಿಕ್‌ ಆಗಿರುತ್ತದೆ. ಇನ್ನುಳಿದಂತೆ ಗ್ರೇ ಟಿಕ್ ಇರಲಿದೆ. ಇದು ಸರ್ಕಾರದ ಖಾತೆಯನ್ನು ಪ್ರತಿನಿಧಿಸುತ್ತದೆ. ಸರ್ಕಾರಕ್ಕೆ ಸಂಬಂಧಿಸಿದ ಟ್ವಿಟ್ಟರ್ ಖಾತೆಗಳಲ್ಲಿ ನಾವು ಇನ್ಮುಂದೆ ಗ್ರೇ ಟಿಕ್ ಕಾಣಬಹುದು. ಆದರೆ ಸಚಿವರುಗಳು ಕೂಡಾ ಸರ್ಕಾರದ ಭಾಗವಾಗಿರುವುದರಿಂದ ಅವರ ಟ್ವಿಟ್ಟರ್ ಖಾತೆಯಲ್ಲೂ ಗ್ರೇ ಟಿಕ್ ಇರುತ್ತದೆಯೇ ಎಂಬ ಬಗ್ಗೆ ಸ್ಪಷ್ಟಣೆ ದೊರೆತಿಲ್ಲ.

English summary

Twitter blue subscription to cost more for iPhone users, Details here

Twitter blue subscription to cost more for iPhone users. Twitter CEO, Elon Musk launched an $8 blue subscription label last month.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X