For Quick Alerts
ALLOW NOTIFICATIONS  
For Daily Alerts

Budget 2023: ರಾಷ್ಟ್ರಪತಿ ಭಾಷಣದೊಂದಿಗೆ ಜ.31ರಿಂದ ಬಜೆಟ್ ಅಧಿವೇಶನ ಆರಂಭ, ಈ ಮಾಹಿತಿ ತಿಳಿದಿರಿ

|

ಜನವರಿ 31ರಿಂದ (ಇಂದಿನಿಂದ) ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದೊಂದಿಗೆ ಬಜೆಟ್ ಅಧಿವೇಶನ ಶುರವಾಗಲಿದೆ. ಹಾಗೆಯೇ ದ್ರೌಪದಿ ಮುರ್ಮು ಚೊಚ್ಚಲ ಬಜೆಟ್ ಭಾಷಣ ಇದಾಗಿದೆ. ಚುನಾವಣೆಗೂ ಮುನ್ನ ಬರುವ ಬಜೆಟ್ ಇದಾದ ಕಾರಣ ಜನರ ನಿರೀಕ್ಷೆ ಅಧಿಕವಾಗಿಯೇ ಇದೆ.

 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಸತತ ಐದನೇ ಬಾರಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ರಾಷ್ಟ್ರಪತಿ ಬಜೆಟ್ ಭಾಷಣ ಆರಂಭವಾಗಲಿದ್ದು, ಬಳಿಕ ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಸರ್ಕಾರವು ಮಂಡನೆ ಮಾಡಲಿದೆ.

 

Budget 2023 Live: ಕೇಂದ್ರ ಬಜೆಟ್‌ನ ಲೈವ್‌ ಅಪ್‌ಡೇಟ್ಸ್ ಇಲ್ಲಿದೆBudget 2023 Live: ಕೇಂದ್ರ ಬಜೆಟ್‌ನ ಲೈವ್‌ ಅಪ್‌ಡೇಟ್ಸ್ ಇಲ್ಲಿದೆ

2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳು ಇದೆ. ಮುಖ್ಯವಾಗಿ ತೆರಿಗೆದಾರರು ತೆರಿಗೆ ವಿನಾಯಿತಿ, ಕಡಿತ, ಸ್ಲ್ಯಾಬ್ ಪರಿಷ್ಕರಣೆಯ ನಿರೀಕ್ಷೆಯನ್ನು ಹೊಂದಿದ್ದರೆ, ಈ ಬಾರಿ ಸರ್ಕಾರವು ಹೆಚ್ಚಾಗಿ ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಸಾಧ್ಯತೆಯಿದೆ.

 Budget 2023: ಜ.31ರಿಂದ ಬಜೆಟ್ ಅಧಿವೇಶನ ಆರಂಭ, ಈ ಮಾಹಿತಿ ತಿಳಿದಿರಿ

ಬಜೆಟ್ ಅಧಿವೇಶನದಲ್ಲಿ ಯಾವೆಲ್ಲ ಚರ್ಚೆ ಸಾಧ್ಯತೆ?

ಕಳೆದ ಬಜೆಟ್ ಅಧಿವೇಶನದಲ್ಲಿ ಪ್ರಮುಖವಾಗಿ ಕೋವಿಡ್ ಸಾಂಕ್ರಾಮಿಕದಿಂದ ಮೃತಪಟ್ಟವರಿಗೆ ಪರಿಹಾರ, ಪೆಗಾಗಸ್ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ವರ್ಷದ ಅಂದರೆ 2023-2024ನೇ ಸಾಲಿನ ಬಜೆಟ್‌ನಲ್ಲಿ ರಾಷ್ಟ್ರವ್ಯಾಪಿ ಜಾತಿ ಆಧಾರಿತ ಆರ್ಥಿಕ ಗಣತಿ, ಅದಾನಿ-ಹಿಂಡನ್‌ಬರ್ಗ್‌ ವಿವಾದ ಮತ್ತು ಮಹಿಳಾ ಮೀಸಲಾತಿ ಮಸೂದೆ ವಿಚಾರದಲ್ಲಿ ಗದ್ದಲ ಸೃಷ್ಟಿಯಾಗುವ ಸಾಧ್ಯತೆಯಿದೆ.

ಸಂಪ್ರದಾಯದಂತೆ ಬಜೆಟ್ ಅಧಿವೇಶನ ಆರಂಭಕ್ಕೂ ಒಂದು ದಿನ ಮುನ್ನ ಅಂದರೆ ಸೋಮವಾರ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ನಡೆಸಿದೆ. ಸಭೆಗೆ ಕಾಂಗ್ರೆಸ್ ಗೈರುಹಾಜಾರಾಗಿದೆ. ಉಳಿದಂತೆ ಎಡಪಕ್ಷಗಳು, ಜೆಡಿಯು, ಟಿಆರ್‌ಎಸ್‌, ಟಿಎಂಸಿ, ಆಮ್‌ ಆದ್ಮಿ ಪಕ್ಷ, ಡಿಎಂಕೆ, ಆರ್‌ಜೆಡಿ, ಬಿಜೆಡಿ ಮೊದಲಾದವು ಭಾಗಿಯಾಗಿದೆ. ಇನ್ನು ಇಂದು ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದ್ದು, ಸಮೀಕ್ಷೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಆರ್ಥಿಕ ಸಮೀಕ್ಷೆ ಎಂಬುವುದು ಒಂದು ಹಣಕಾಸು ವರ್ಷದ ಲೆಕ್ಕಾಚಾರವಾಗಿದೆ. ಸರ್ಕಾರದ ಮುಖ್ಯ ಹಣಕಾಸು ಸಲಹಗಾರ (ಸಿಇಎ) ವಿ ಅನಂತ್ ನಾಗೇಶ್ವರಮ್ ಈ ಆರ್ಥಿಕ ಸಮೀಕ್ಷೆಯನ್ನು ತಯಾರಿ ಮಾಡುತ್ತಾರೆ. ಪ್ರಸ್ತುತ ಹಣಕಾಸು ವರ್ಷ 2022-2024ರ ಭಾರತದ ಆರ್ಥಿಕ ಸ್ಥಿತಿಯ ಬಗ್ಗೆ ಈ ಸಮೀಕ್ಷೆಯಲ್ಲಿ ಉಲ್ಲೇಖ ಮಾಡಲಾಗಿರುತ್ತದೆ. http://www.indiabudget.gov.in/economicsurvey ರಲ್ಲಿ ಆರ್ಥಿಕ ಸಮೀಕ್ಷೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

English summary

Union Budget 2023: Union Budget Session to Start with president speech

Union Budget 2023: The Budget 2023 will be presented by Finance Minister Nirmala Sitharaman in the Parliament on February 1. Union Budget Session to Start with president speech.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X