For Quick Alerts
ALLOW NOTIFICATIONS  
For Daily Alerts

ಇಂಟರ್ನೆಟ್ ಸಂಪರ್ಕವಿಲ್ಲದೆ UPI ಪಾವತಿ ಮಾಡುವುದು ಹೇಗೆ?

|

ಈಗಿನ ಡಿಜಿಟಲ್ ಯುಗದಲ್ಲಿ ಬಹುತೇಕ ಜನರು ಯುಪಿಐ ಪಾವತಿಗಳನ್ನು ಮಾಡುವುದು ಸಾಮಾನ್ಯ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ವಹಿವಾಟುಗಳಲ್ಲಿ ಹಣದ ವಹಿವಾಟು ಮಾಡುವುದು ಸಾಮಾನ್ಯ. ಒಟ್ಟಾರೆ ಯುಪಿಐ ವ್ಯವಸ್ಥೆಯಲ್ಲಿ ಫೋನ್‌ಪೇ, ಗೂಗಲ್ ಪೇ ಮತ್ತು ಪೇಟಿಎಂ ಶೇಕಡಾ 90ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ನಿಯಂತ್ರಿಸುತ್ತವೆ.

 

UPI ಪಾವತಿಗಳನ್ನು ಮಾಡಲು ನಿಮಗೆ ಯಾವಾಗಲೂ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ ಎಂದು ನಿಮಗೆ ತಿಳಿದಿದೆಯೇ? ಹಲವು ಬಾರಿ ಯುಪಿಐ ಬಳಕೆದಾರರು ಯುಪಿಐ ಪಾವತಿ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ . ಏಕೆಂದರೆ ನಿಧಾನಗತಿಯ ಇಂಟರ್ನೆಟ್, ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ. ಆದರೆ UPI ಮೂಲಕ ಪಾವತಿ ಮಾಡಲು ಆಫ್‌ಲೈನ್ ಮೋಡ್ ಕೂಡ ಇದೆ.

 

Google Pay ಆ್ಯಪ್‌ನಲ್ಲಿ FD ತೆರೆಯುವುದು ಹೇಗೆ? ಇಲ್ಲಿ ತಿಳಿಯಿರಿGoogle Pay ಆ್ಯಪ್‌ನಲ್ಲಿ FD ತೆರೆಯುವುದು ಹೇಗೆ? ಇಲ್ಲಿ ತಿಳಿಯಿರಿ

UPI ಬಳಕೆದಾರರು *99# USSD ಕೋಡ್ ಬಳಸಿ ತಮ್ಮ ಫೋನ್‌ಗಳ ಮೂಲಕ ಆಫ್‌ಲೈನ್ ಮೋಡ್‌ನಲ್ಲಿ ಪಾವತಿ ಮಾಡಬಹುದು. ಆದಾಗ್ಯೂ, *99#ಮೂಲಕ ಮೊಬೈಲ್ ಮೂಲಕ UPI ಪಾವತಿಗಳನ್ನು ಮಾಡಲು, ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಅವರ ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಮಾಡಬೇಕು ಎನ್ನುವುದನ್ನು ಗಮನಿಸಬೇಕು.

ಇಂಟರ್ನೆಟ್ ಸಂಪರ್ಕವಿಲ್ಲದೆ UPI ಪಾವತಿ ಮಾಡುವುದು ಹೇಗೆ?

UPI ಪಾವತಿಗಳನ್ನು ಆಫ್‌ಲೈನ್ ಮೋಡ್‌ನಲ್ಲಿ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಿ:

* ನಿಮ್ಮ ಫೋನಿನ ಡಯಲರ್ ತೆರೆಯಿರಿ ಮತ್ತು *99# ಗೆ ಕರೆ ಮಾಡಿ

* ನಂತರ ಒಂದು ಭಾಷೆಯನ್ನು ಆಯ್ಕೆ ಮಾಡಿ, ನಿಮಗೆ ಇಂಗ್ಲಿಷ್ ಬೇಕಿದ್ದರೆ ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಿ, 1 ಅನ್ನು ಒತ್ತಿ ಎಂದು ಸಂದೇಶ ಬರುತ್ತದೆ.

* ನಂತರ ಹಲವು ಆಯ್ಕೆಗಳೊಂದಿಗೆ ಮೆನು ಕಾಣಿಸುತ್ತದೆ. ನಾವು ಹಣವನ್ನು ಮಾತ್ರ ಕಳುಹಿಸಬೇಕಾಗಿರುವುದರಿಂದ, 1 ಅನ್ನು ಒತ್ತಿ ಮತ್ತು ಕಳುಹಿಸಿ

* ಈಗ, ನೀವು UPI ಬಳಸಿ ರಿಸೀವರ್‌ಗೆ ಹಣ ಪಾವತಿಸಲು ಬಯಸುವ ಆಯ್ಕೆಯನ್ನು ಆರಿಸಿ. ನೀವು ಮೊಬೈಲ್ ಸಂಖ್ಯೆಯನ್ನು ಬಳಸಿ ಇದನ್ನು ಮಾಡಲು ಬಯಸಿದರೆ, ಆಯ್ಕೆ 1 ಅನ್ನು ಆಯ್ಕೆ ಮಾಡಿ

* ಇದರ ನಂತರ, ಸ್ವೀಕರಿಸುವವರ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ

* ಈಗ ನೀವು ಕಳುಹಿಸಲು ಬಯಸುವ ಮೊತ್ತವನ್ನು ಬರೆಯಿರಿ ಮತ್ತು ಕಳುಹಿಸು(Send) ಒತ್ತಿ ಮತ್ತು ಪಾವತಿಯ ಕುರಿತು ಬರೆಯಿರಿ

* ಅಂತಿಮ ಹಂತಕ್ಕಾಗಿ, ನಿಮ್ಮ UPI ಪಿನ್ ನಮೂದಿಸಿ , ಇದರ ನಂತರ, ನಿಮ್ಮ ವಹಿವಾಟು ಇಂಟರ್ನೆಟ್ ಸಂಪರ್ಕವಿಲ್ಲದೆ ಪೂರ್ಣಗೊಳ್ಳುತ್ತದೆ.

*99# ಆಯ್ಕೆಯನ್ನು ಬಳಸಿಕೊಂಡು ನಿಮ್ಮ UPI ಅನ್ನು ಸಹ ನೀವು ನಿಷ್ಕ್ರಿಯಗೊಳಿಸಬಹುದು.

English summary

UPI Payment can be done even without internet connection, know the complete process in kannada

Here the step by step process for to do UPI Payments in offline mode
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X