For Quick Alerts
ALLOW NOTIFICATIONS  
For Daily Alerts

ದೇಶದ ಪ್ರಮುಖ ಬ್ಯಾಂಕ್‌ನಲ್ಲಿ ಯುಪಿಐ ವಹಿವಾಟಿನ ಮಿತಿ ಎಷ್ಟಿದೆ?

|

ಯುಪಿಐ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಏಕೀಕೃತ ಪಾವತಿಗಳ ಇಂಟರ್ಫೇಸ್ ಭಾರತದಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಇದು ಅಸ್ತಿತ್ವಕ್ಕೆ ಬಂದ ಬಳಿಕ ಹೆಚ್ಚು ಬಳಸಿದ ವಹಿವಾಟು ವಿಧಾನಗಳಲ್ಲಿ ಒಂದಾಗಿದೆ.

ಯುಪಿಐ ವಹಿವಾಟುಗಳು ಸರಳವಾಗಿದ್ದು ಮಾತ್ರವಲ್ಲದೇ ಸೆಕೆಂಡುಗಳಲ್ಲಿ ವಹಿವಾಟುಗಳನ್ನು ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಯುಪಿಐ ಮೂಲಕ ನಾವು ಸರಳವಾಗಿ, ಸುಲಭವಾಗಿ ಪಾವತಿಯನ್ನು ಮಾಡಬಹುದು. ಈ ಕಾರಣದಿಂದಾಗಿಯೇ ಯುಪಿಐ ಪಾವತಿ ಜನಪ್ರಿಯತೆಯನ್ನು ಗಳಿಸಿದೆ. ನೀವು ಸ್ಮಾರ್ಟ್‌ಫೋನ್ ಮತ್ತು ವಿಶ್ವಾಸಾರ್ಹ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೆ, ನೀವು ವಹಿವಾಟು ಮಾಡುವ ಯುಪಿಐ ವಿಧಾನವನ್ನು ಬಳಸಲು ಸಾಧ್ಯವಾಗಲಿದೆ. ಹಾಗಾದರೆ ಈ ಯುಪಿಐ ಎಂದರೇನು, ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಯುಪಿಐ ವಹಿವಾಟು ಮಿತಿ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ...

ಆನ್‌ಲೈನ್‌ ಯುಪಿಐ ವಂಚನೆಯಿಂದ ತಪ್ಪಿಸಿಕೊಳ್ಳಬೇಕಾ? ಇಲ್ಲಿದೆ 5 ಟಿಪ್ಸ್ಆನ್‌ಲೈನ್‌ ಯುಪಿಐ ವಂಚನೆಯಿಂದ ತಪ್ಪಿಸಿಕೊಳ್ಳಬೇಕಾ? ಇಲ್ಲಿದೆ 5 ಟಿಪ್ಸ್

 ಯುಪಿಐ ಎಂದರೇನು?

ಯುಪಿಐ ಎಂದರೇನು?

ಯುಪಿಐ ಎಂಬುದು ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮ ಅಥವಾ ಎನ್‌ಪಿಸಿಐನಿಂದ ರಚಿಸಲಾದ ಅತೀ ವೇಗದ ಪಾವತಿ ವಿಧಾನವಾಗಿದೆ. ಎನ್‌ಪಿಸಿಎಲ್‌ ಅನ್ನು ಆರ್‌ಬಿಐ ನಿಯಂತ್ರಣ ಮಾಡುತ್ತದೆ. ಯುಪಿಐ ಅನ್ನು ಐಎಂಪಿಎಸ್ ಮೂಲಸೌಕರ್ಯದಲ್ಲಿ ನಿರ್ಮಿಸಲಾಗಿದೆ. ಯಾವುದೇ ಎರಡು ಬ್ಯಾಂಕ್‌ಗಳ ನಡುವೆ ತಕ್ಷಣವೇ ಹಣವನ್ನು ವರ್ಗಾಯಿಸಲು ನಿಮಗೆ ಅವಕಾಶವನ್ನು ಯುಪಿಐ ನೀಡುತ್ತದೆ. ನಾವು ಬಹುಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್‌ ಅಡಿಯಲ್ಲಿ ನಿಯಂತ್ರಣ ಮಾಡಬಹುದು.

 ವಹಿವಾಟಿನ ಮಿತಿಗಳು

ವಹಿವಾಟಿನ ಮಿತಿಗಳು

ಆರ್‌ಬಿಐ ಮತ್ತು ಎನ್‌ಪಿಸಿಎಲ್ ದೈನಂದಿನ ವಹಿವಾಟಿನ ಮಿತಿಯನ್ನು ಪ್ರತಿ ಬಳಕೆದಾರರಿಗೆ 2 ಲಕ್ಷ ರೂಪಾಯಿ ಎಂದು ನಿಗದಿ ಮಾಡಿದೆ. ಆದರೆ ಎಸ್‌ಬಿಐ, ಪಿಎನ್‌ಬಿ, ಐಸಿಐಸಿಐ ಬ್ಯಾಂಕ್‌ಗಳಂತಹ ವಿವಿಧ ಬ್ಯಾಂಕ್‌ಗಳು ವಿಭಿನ್ನ ವಹಿವಾಟು ಮಿತಿಗಳನ್ನು ಹೊಂದಿದೆ. ಆದರೆ ಬಹುತೇಕ ಬ್ಯಾಂಕಗಳಲ್ಲಿ ವಹಿವಾಟು ಮಿತಿ ಒಂದು ಲಕ್ಷ ರೂಪಾಯಿ ಆಗಿದೆ.

 ಪ್ರಮುಖ ಬ್ಯಾಂಕುಗಳಲ್ಲಿ ಯುಪಿಐ ವಹಿವಾಟಿನ ಮಿತಿ

ಪ್ರಮುಖ ಬ್ಯಾಂಕುಗಳಲ್ಲಿ ಯುಪಿಐ ವಹಿವಾಟಿನ ಮಿತಿ

ಎಸ್‌ಬಿಐ: ಪ್ರಮುಖ ಸಾರ್ವಜನಿಕ ಬ್ಯಾಂಕ್ ಯುಪಿಐ ವಹಿವಾಟಿನ ಮಿತಿಯನ್ನು ಪ್ರತಿ ಬಳಕೆದಾರರಿಗೆ 1 ಲಕ್ಷ ರೂಪಾಯಿ ಎಂದು ನಿಗದಿಪಡಿಸಿದೆ. ಹಾಗೆಯೇ ದೈನಂದಿನ ಯುಪಿಐ ಮಿತಿಯನ್ನು 1 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್: ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಕೂಡ ತನ್ನ ದೈನಂದಿನ ವಹಿವಾಟಿನ ಮಿತಿಯನ್ನು ಪ್ರತಿ ಬಳಕೆದಾರರಿಗೆ 1 ಲಕ್ಷಕ್ಕೆ ನಿಗದಿಪಡಿಸಿದೆ. ಹಾಗೆಯೇ ದೈನಂದಿನ ಮಿತಿಯನ್ನು 1 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ನೀವು ಹೊಸ ಬಳಕೆದಾರರಾಗಿದ್ದರೆ, ಮೊದಲ 24 ಗಂಟೆಗಳ ವಹಿವಾಟಿನ ಮಿತಿಯು ರೂ 5000 ಆಗಲಿದೆ.

ಆಕ್ಸಿಸ್ ಬ್ಯಾಂಕ್: ಬ್ಯಾಂಕ್ ಪ್ರತಿ ಬಳಕೆದಾರರಿಗೆ ದೈನಂದಿನ ವಹಿವಾಟಿನ ಮಿತಿಯನ್ನು 1 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ. ದೈನಂದಿನ ಯುಪಿಐ ವಹಿವಾಟಿನ ಮಿತಿಯನ್ನು ಪ್ರತಿ ಬಳಕೆದಾರರಿಗೆ 1 ಲಕ್ಷ ರೂಪಾಯಿ ನಿಗದಿ ಮಾಡಿದೆ.

ಪಿಎನ್‌ಬಿ: ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಪಿಎನ್‌ಬಿ ಯುಪಿಐ ವಹಿವಾಟಿನ ಮಿತಿಯನ್ನು 25,000 ರೂ.ಗೆ ನಿಗದಿಪಡಿಸಿದೆ. ಇದು ಇತರ ಬ್ಯಾಂಕ್‌ಗಳಿಗಿಂತ ಅತೀ ಕಡಿಮೆಯಾಗಿದೆ. ದೈನಂದಿನ ಯುಪಿಐ ಮಿತಿಯು ಪ್ರತಿ ಬಳಕೆದಾರರಿಗೆ 50,000 ರೂಪಾಯಿ ಆಗಿದೆ.

ಬ್ಯಾಂಕ್ ಆಫ್ ಇಂಡಿಯಾ: ಈ ಬ್ಯಾಂಕಿನಲ್ಲಿ ದೈನಂದಿನ ಯುಪಿಐ ವಹಿವಾಟಿನ ಮಿತಿಯು ಪ್ರತಿ ಬಳಕೆದಾರರಿಗೆ ರೂಪಾಯಿ 1 ಲಕ್ಷವಾಗಿದೆ. ದೈನಂದಿನ ಯುಪಿಐ ಮಿತಿಯನ್ನು ರೂ 1 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಐಸಿಐಸಿಐ ಬ್ಯಾಂಕ್: ಒಟ್ಟು ಯುಪಿಐ ವಹಿವಾಟಿನ ಮಿತಿ 10,000 ರೂಪಾಯಿ ಆಗಿದೆ. ದೈನಂದಿನ ಯುಪಿಐ ಮಿತಿಯು ಪ್ರತಿ ಬಳಕೆದಾರರಿಗೆ 10,000 ರೂಪಾಯಿ ಆಗಿದೆ. ನೀವು Google Pay ಬಳಕೆದಾರರಾಗಿದ್ದರೆ, ಬ್ಯಾಂಕ್ ಪ್ರತಿ ಬಳಕೆದಾರರಿಗೆ 25,000 ರೂಪಾಯಿ ಮಿತಿಯನ್ನು ವಿಧಿಸುತ್ತದೆ.

English summary

UPI Transaction Limits of Major Banks, Here's Details

Are You Using UPI? Find UPI Transaction Limits of Major Banks, Here's Details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X