For Quick Alerts
ALLOW NOTIFICATIONS  
For Daily Alerts

ಚೀನಾದಲ್ಲಿ ಅಪರಾಧಿಗಳಿಗೆ, ತಂಟೆಕೋರರಿಗೆ ರೈಲು, ವಿಮಾನದಲ್ಲಿ ಎಂಟ್ರಿ ಇಲ್ಲ!

|

ಜಗತ್ತಿನ ಎರಡನೇ ಬಹುದೊಡ್ಡ ಆರ್ಥಿಕತೆಯನ್ನು ಹೊಂದಿರುವ ಚೀನಾ ತಂತ್ರಜ್ಞಾನ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತದೆ. ವಿಶ್ವದ ಅನೇಕ ರಾಷ್ಟ್ರಗಳ ಮಾರುಕಟ್ಟೆ ಮೇಲೆ ತನ್ನ ಬಾಹುಗಳನ್ನು ಚಾಚಿರುವ ಚೀನಿಯರು ಭಾರತದ ಮಾರುಕಟ್ಟೆಯಲ್ಲೂ ಪ್ರಾಬಲ್ಯ ಹೊಂದಿದ್ದಾರೆ.

ಸುಧಾರಿತ ತಂತ್ರಜ್ಞಾನಗಳಿಗೆ ಹೆಸರುವಾಸಿಯಾದ ಚೀನಾ ಕಳೆದ ಹಲವು ವರ್ಷಗಳಿಂದ ರಾಜಕೀಯ ಮತ್ತು ಸಾಮಾಜಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ತಂತ್ರಜ್ಞಾನದ ಮೊರೆ ಹೋಗಿದೆ. ತನ್ನ ರಾಷ್ಟ್ರದಲ್ಲಿನ ಸಾಧನಗಳನ್ನು ಬಳಸುವ ಜನರ ಮೂಲಕವೇ ಮಾಹಿತಿ ತಂತ್ರಜ್ಞಾನಗಳ ಆರ್ಥಿಕ ಲಾಭವನ್ನು ಪಡೆಯಲು ದೀರ್ಘಕಾಲದಿಂದ ಪ್ರಯತ್ನಿಸುತ್ತಿದೆ.

ವ್ಯಕ್ತಿಗಳು, ಉದ್ಯಮಗಳು ಮತ್ತು ಸರ್ಕಾರವು ಎಲ್ಲರೂ ಸಮಗ್ರತೆಯಿಂದ ವರ್ತಿಸುವ ಸಮಾಜವನ್ನು ರಚಿಸಲು ದೊಡ್ಡ ದತ್ತಾಂಶ ತಂತ್ರಜ್ಞಾನಗಳ ಅಳವಡಿಕೆಗೆ ಮುಂದಾಗಿದೆ. ಈ ದತ್ತಾಂಶದ ಮೂಲಕ ಆರ್ಥಿಕತೆ ಮತ್ತು ಸ್ಥಿರ ಆಡಳಿತವು ಸಾಧ್ಯ ಎಂಬುದು ಚೀನಾ ಸರ್ಕಾರದ ನಂಬಿಕೆ. ಚೀನಾ ಪ್ರಯೋಗ ನಡೆಸಿ ಅಳವಡಿಸಿಕೊಳ್ಳಲು ಮುಂದಾಗಿರುವ ವ್ಯವಸ್ಥೆಯೇ ಸೋಶಿಯಲ್ ಕ್ರೆಡಿಟ್ ಸಿಸ್ಟಮ್ ಅಂದರೆ ಸಾಮಾಜಿಕ ಮಾನ್ಯತಾ ವ್ಯವಸ್ಥೆ.

ಹಾಗಿದ್ದರೆ ಈ ಸೋಶಿಯಲ್ ಕ್ರೆಡಿಟ್ ಸಿಸ್ಟಮ್ ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದನ್ನು ಅಳವಡಿಸಿಕೊಳ್ಳುವುದರಿಂದ ಜನರಿಗೆ, ಸಮಾಜಕ್ಕೆ ಏನು ಅನುಕೂಲ ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ ಓದಿ.

ಚೀನಾದಲ್ಲಿ ಆ್ಯಪ್ ಮೂಲಕವೇ ಪ್ರಜಾನಿಯಂತ್ರಣ ವ್ಯವಸ್ಥೆ

ಚೀನಾದಲ್ಲಿ ಆ್ಯಪ್ ಮೂಲಕವೇ ಪ್ರಜಾನಿಯಂತ್ರಣ ವ್ಯವಸ್ಥೆ

ಭಾರತೀಯರು ಹೆಚ್ಚು ಬಳಸುವ ಆ್ಯಪ್ ಅಂದ್ರೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್, ಯೂಟ್ಯೂಬ್ ಹೀಗೆ ಹಲವು ಇದೆ. ಆದರೆ ಈ ಎಲ್ಲಾ ಆ್ಯಪ್‌ಗಳಿಗಿಂತ ಚುರುಕಾಗಿರುವ ಅದೆಷ್ಟೋ ಆ್ಯಪ್‌ಗಳು ಚೀನಾ ಬಳಿ ಇವೆ.

ಚೀನಾಕ್ಕೆ ಸೀಮಿತವಾದ ಬೈದು, ವಿಚಾಟ್, ವೈಬೋ, ಕ್ಯೂಕ್ಯೂ, ಯೂಕ್ಯೂ, ರೆನ್‌ರೆನ್ ಹೀಗೆ ಸಾಮಾಜಿಕ ಮಾಧ್ಯಮಗಳ ವ್ಯವಸ್ಥೆಯನ್ನು ಹೊಂದಿದೆ. ಇವುಗಳ ಮೂಲಕವೇ ಚೀನಾ ಸರ್ಕಾರ ಸೋಶಿಯಲ್ ಕ್ರೆಡಿಟ್ ಸಿಸ್ಟಮ್ ಅಥವಾ ಸಾಮಾಜಿಕ ಮಾನ್ಯತಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

 

ನೂರಾರು ಕೋಟಿ ಜನಸಂಖ್ಯೆಯಿದ್ದರೂ ಪ್ರತಿಯೊಬ್ಬರ ಮೇಲೆ ಸರ್ಕಾರದ ಕಣ್ಣು

ನೂರಾರು ಕೋಟಿ ಜನಸಂಖ್ಯೆಯಿದ್ದರೂ ಪ್ರತಿಯೊಬ್ಬರ ಮೇಲೆ ಸರ್ಕಾರದ ಕಣ್ಣು

ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ನೂರಾರು ಕೋಟಿ ಜನಸಂಖ್ಯೆಯ ಮೇಲೆ ಕಣ್ಣಿಡುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿವ್ಯಕ್ತಿಯ ಆರ್ಥಿಕ ಸ್ಥಿತಿಗತಿ, ಧಾರ್ಮಿಕ ಹಿನ್ನೆಲೆ, ರಾಜಕೀಯ ನಿಲುವು, ಸಾಮಾಜಿಕ ನಡಾವಳಿ ಮತ್ತು ಓಡಾಟದ ಮೇಲೆ ನಿಗಾ ಇಡಲು ಸಾಧ್ಯವಾಗಿದೆ.

ದುರಭ್ಯಾಸ, ದುರ್ಬುದ್ದಿ, ಅಪರಾಧಿ ಆಗಿದ್ದರೆ ಸೌಲಭ್ಯವೆಲ್ಲ ಕಟ್

ದುರಭ್ಯಾಸ, ದುರ್ಬುದ್ದಿ, ಅಪರಾಧಿ ಆಗಿದ್ದರೆ ಸೌಲಭ್ಯವೆಲ್ಲ ಕಟ್

ದುರ್ಬುದ್ದಿಯ, ದುರಭ್ಯಾಸದ, ತಂಟೆಕೋರ ಪ್ರಜೆಯಾಗಿದ್ದರೆ ಚೀನಾ ಸರ್ಕಾರ ಅವರಿಗೆ ಶಿಕ್ಷೆ ವಿಧಿಸುವುದಿಲ್ಲ. ಬದಲಾಗಿ ಕ್ರೆಡಿಟ್ ಕಾರ್ಡ್ ಮೂಲಕ ದಂಡ ವಿಧಿಸುತ್ತದೆ. ಅದು ಹೇಗಪ್ಪಾ ಎಂದು ಯೋಚಿಸಬಹುದು, ಮುಂದೆ ಓದಿದ್ರೆ ನಿಮಗೆ ತಿಳಿಯಲಿದೆ.

ಉತ್ತಮ ನಾಗರೀಕರಿಗೆ ಹೆಚ್ಚಿನ ಸೌಲತ್ತು

ಉತ್ತಮ ನಾಗರೀಕರಿಗೆ ಹೆಚ್ಚಿನ ಸೌಲತ್ತು

ಚೀನಾದಲ್ಲಿ ಉತ್ತಮ ನಾಗರೀಕರಾಗಿದ್ರೆ ಹೆಚ್ಚಿನ ಸವಲತ್ತು ಮತ್ತು ಅವರ ಮಕ್ಕಳಿಗೆ ಉತ್ತಮ ಶಾಲೆಯಲ್ಲಿ ಶಿಕ್ಷಣ, ಸಲೀಸಾಗಿ ಜಾಗ ಖರೀದಿ, ಬ್ಯಾಂಕ್ ಸಾಲ, ವೈದ್ಯಕೀಯ, ಶಿಕ್ಷಣ ಸಾಲಗಳು ಸೇರಿದಂತೆ ಅನೇಕ ಸೌಲಭ್ಯಗಳು ಸಿಗಲಿದೆ.

ಸೊನ್ನೆಯಿಂದ ಸಾವಿರದವರೆಗೆ ಪಾಯಿಂಟ್ಸ್‌ ಸಿಸ್ಟಮ್

ಸೊನ್ನೆಯಿಂದ ಸಾವಿರದವರೆಗೆ ಪಾಯಿಂಟ್ಸ್‌ ಸಿಸ್ಟಮ್

ಚೀನಾ ಜಾರಿಗೆ ತರುತ್ತಿರುವ ಸೋಶಿಯಲ್ ಕ್ರೆಡಿಟ್ ಸಿಸ್ಟಮ್‌ನಲ್ಲಿ ಸೊನ್ನೆಯಿಂದ ಸಾವಿರದವರೆಗೆ ಪಾಯಿಂಟ್ಸ್‌ಗಳಿರುತ್ತದೆ. ಉದಾಹರಣೆಗೆ ನೀವು 450 ಅಂಕ ಗಳಿಸಿದ್ದೀರಿ ಎಂದಿಟ್ಟುಕೊಳ್ಳಿ, ನೀವು ಸಂಚಾರಿ ನಿಯಮ ಉಲ್ಲಂಘಿಸಿದರೆ 50 ಅಂಕ ಕಳೆಯಲಾಗುವುದು. ನಿಮ್ಮ ಮನೆಯ ವಿದ್ಯುತ್‌ ಶುಲ್ಕ 5 ರಿಂದ 6 ಪರ್ಸೆಂಟ್ ಹೆಚ್ಚಾಗಬಹುದು. ನೀವು ಉತ್ತಮ ಕೆಲಸಗಳನ್ನು ಮಾಡಿದರೆ ನಿಮ್ಮ ಪಾಯಿಂಟ್ಸ್‌ ಹೆಚ್ಚಾಗುವುದು, ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರವು ಕಡಿಮೆಯಾಗುತ್ತದೆ.

ಕೆಟ್ಟ ಕೆಲಸಗಳಿಗೆ ಅಂಕಗಳು ಕಟ್, ಸೌಲಭ್ಯಗಳು ಇಲ್ಲ

ಕೆಟ್ಟ ಕೆಲಸಗಳಿಗೆ ಅಂಕಗಳು ಕಟ್, ಸೌಲಭ್ಯಗಳು ಇಲ್ಲ

ಉತ್ತಮ ನಾಗರೀಕರನ್ನಾಗಿ ರೂಪಿಸಲು ಸರ್ಕಾರ ದುರ್ಬುದ್ದಿ ಹೊಂದಿರುವ ಜನರಿಗೆ ತಕ್ಕ ಪಾಠವನ್ನು ಕಲಿಸಲಿದೆ. ಉದಾಹರಣೆಗೆ ಯಾರೊಂದಿಗೂ ರಸ್ತೆಯಲ್ಲಿ ಸುಖಾಸುಮ್ಮನೆ ಜಗಳ ಆಡಿರುವುದು, ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ಮಾದಕ ದ್ರವ್ಯ ಸೇವನೆ ಇನ್ನಿತರ ಕಾರ್ಯಗಳಿಗೆ ಪಾಯಿಂಟ್ಸ್‌ಗಳು ವಜಾ ಆಗಲಿವೆ. ಸಿಸಿ ಕ್ಯಾಮೆರಾಗಳಲ್ಲಿ ವಿಡಿಯೋ ರೆಕಾರ್ಡ್ ಮಾಡುವುದರ ಮೂಲಕ ದಂಡವನ್ನು ವಿಧಿಸಲಾಗುತ್ತದೆ. ಇದರ ಜೊತೆಗೆ ವಿಮಾನ, ರೈಲ್ವೆಯಲ್ಲಿ ಟಿಕೆಟ್ ಖರೀದಿಸಲು ಅವಕಾಶವಿರುವುದಿಲ್ಲ.

ಯಾವುದೇ ಕೆಟ್ಟ ಕೆಲಸಗಳನ್ನು ಮಾಡದೆ ಉತ್ತಮ ನಾಗರೀಕರಾಗಿದ್ದರೆ ಅವರಿಗೆ ಅತ್ಯುತ್ತಮ 950 ಅಂಕಗಳು ಲಭಿಸಿದೆ. 800 ಪಾಯಿಂಟ್ಸ್ ಸಿಕ್ಕರೂ ಅತ್ಯುತ್ತಮ ಸೌಲಭ್ಯ ಸಿಗಲಿದೆ.

 

10 ವರ್ಷಗಳ ಪ್ರಾಯೋಗಿಕ ಹಂತ ಮುಗಿಸಿ ಜಾರಿಗೆ ಬಂದಿರುವ ವ್ಯವಸ್ಥೆ

10 ವರ್ಷಗಳ ಪ್ರಾಯೋಗಿಕ ಹಂತ ಮುಗಿಸಿ ಜಾರಿಗೆ ಬಂದಿರುವ ವ್ಯವಸ್ಥೆ

ಹೌದು, ಹತ್ತು ವರ್ಷಗಳು ಪ್ರಾಯೋಗಿಕ ಹಂತಗಳನ್ನು ಮುಗಿಸಿ ಜಾರಿಗೆ ಬಂದಿರುವ ವ್ಯವಸ್ಥೆ ಇದಾಗಿದೆ. ಈ ವರ್ಷ ಸರ್ಕಾರವು ಇದನ್ನು ಸಾರ್ವತ್ರಿಕಗೊಳಿಸಲಿದೆ. 137 ಕೋಟಿ ಜನರ ಮೇಲೆ ಸರ್ಕಾರ ನಿಗಾ ಇಡಲು ಸೋಶಿಯಲ್ ಕ್ರೆಡಿಟ್ ಸಿಸ್ಟಮ್ ಜಾರಿಗೆ ತರುತ್ತಿದೆ.

ಸರ್ಕಾರದ ಈ ಹೊಸ ಸಿಸ್ಟಮ್‌ಗೆ ಚೀನಾದಲ್ಲೇ ವಿರೋಧ

ಸರ್ಕಾರದ ಈ ಹೊಸ ಸಿಸ್ಟಮ್‌ಗೆ ಚೀನಾದಲ್ಲೇ ವಿರೋಧ

ಚೀನಾದ ಈ ಹೊಸ ಸಿಸ್ಟಮ್ ವಿರುದ್ಧ ಟೀಕೆಯು ಎದುರಾಗಿದೆ. ಇದಕ್ಕೆ ಕಾರಣ ಸರ್ಕಾರದ ವಿರುದ್ಧ ಪ್ರತಿಭಟಿಸುವವರು ಕೂಡ ಪಾಯಿಂಟ್ಸ್‌ಗಳನ್ನು ಕಳೆದುಕೊಳ್ಳಲಿದ್ದಾರೆ. ಈ ಮೂಲಕ ಸರ್ಕಾರ ಟೀಕೆ ಮಾಡುವ ಎಲ್ಲರನ್ನೂ ದಮನ ಮಾಡುವಂತಿದೆ ಎಂದು ದೂರಲಾಗುತ್ತಿದೆ.

ಸರ್ಕಾರದ ವಿರುದ್ಧ ಟೀಕಿಸುವವರು ಆಸ್ತಿ ಖರೀದಿಸುವುದರಿಂದ ವಂಚಿತರಾಗಿದ್ದಾರೆ. ಒಂದೇ ಕ್ಷಣದಲ್ಲಿ ಎಲ್ಲಾ ಸೌಲಭ್ಯ ಹೋದರೆ ಏನು ಗತಿ ಎಂದು ದೊಡ್ಡ ಪ್ರಶ್ನೆಯಾಗಿದೆ.

 

ಹೀಗೊಂದು ವ್ಯವಸ್ಥೆ ಇದೆ ಎಂದು ಬಹಿರಂಗಪಡಿಸಿದ್ದು ಕೊರೊನಾವೈರಸ್!

ಹೀಗೊಂದು ವ್ಯವಸ್ಥೆ ಇದೆ ಎಂದು ಬಹಿರಂಗಪಡಿಸಿದ್ದು ಕೊರೊನಾವೈರಸ್!

ಚೀನಾದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕೊರೊನಾ ವೈರಸ್‌ ಜಗತ್ತಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.ಇದರಿಂದ ಲಕ್ಷಾಂತರ ಜನರು ಪ್ರಾಣಬಿಟ್ಟಿದ್ದು, ಮಿಲಿಯನ್‌ಗಟ್ಟಲೆ ಜನರು ಸೋಂಕಿತರಾಗಿದ್ದಾರೆ.

ಆದರೆ ಈ ವರ್ಷ ಜನವರಿ ಕೊನೆಯಲ್ಲಿ ಚೀನಾದಲ್ಲಿ ಬಹುತೇಕ ಕಡೆ ರಜೆ ಇತ್ತು. ಮೊದಲಿಗೆ ಚೀನಾದ ಊಹಾನ್ ನಗರದಲ್ಲಿ ಮಾರಕ ವೈರಾಣು ಉಗಮಗೊಂಡಿತು. ಜನರು ರಜೆ ಕಾರಣ ಬೇರೆ ಬೇರೆ ಕಡೆ ತೆರಳಿದ್ದರು. ವೈರಸ್ ಕುರಿತು ತಿಳಿಯುತ್ತಿದ್ದಂತೆ ಸರ್ಕಾರವು ರೈಲು, ವಿಮಾನ, ದೋಣಿ ಸಂಚಾರ ಎಲ್ಲವನ್ನೂ ನಿಲ್ಲಿಸಿಬಿಟ್ಟಿತು. ಇಡೀ ನಗರಕ್ಕೆ ಒಂದು ರೀತಿಯಲ್ಲಿ ಬೀಗಮುದ್ರೆ ಹಾಕಲಾಯ್ತು. ಜನರು ಎಲ್ಲೇ ಹೋಗಿದ್ದರೂ ಹುಡುಕಿ ಪರೀಕ್ಷೆ ನಡೆಸಲಾಯ್ತು.

ಇಂಥ ಮಿಂಚಿನ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿದ್ದು ಹೇಗೆಂದರೆ, ಚೀನಾದಲ್ಲಿರುವ ನಾನಾ ಬಗೆಯ ಆ್ಯಪ್‌ಗಳು. ಜನರ ಮೇಲೆ ಆ್ಯಪ್‌ಗಳ ಮೂಲಕವೇ ನಿಯಂತ್ರಣ ಇಟ್ಟಿರುವ ಚೀನಾ ಸರ್ಕಾರ ಅತ್ಯಂತ ಕ್ರಮಬದ್ಧ 'ಸೋಶಿಯಲ್ ಕ್ರೆಡಿಟ್ ಸಿಸ್ಟಮ್' ಮ್ಯಾನೇಜ್ ಮಾಡಲು ಶುರುಮಾಡಿದೆ.

ಹೀಗೆ ಚೀನಾ ಹೇಗೋ ವೈರಸ್ ಕಂಟ್ರೋಲ್ ಮಾಡಿದರೂ ವಿಶ್ವದ ಉಳಿದೆಲ್ಲಾ ರಾಷ್ಟ್ರಗಳು ಚೀನಾದಿಂದ ಸಂಕಷ್ಟ ಅನುಭವಿಸುವಂತಾಯಿತು.

English summary

What is Social Credit System and How china using that

In this article explained how social credit system will work and how china is using big data collection
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X