For Quick Alerts
ALLOW NOTIFICATIONS  
For Daily Alerts

ಸ್ಟಾಂಡ್‌ಅಪ್ ಇಂಡಿಯಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

|

ಭಾರತ ಸರ್ಕಾರವು ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಜನರು ಹೊಸ ಉದ್ಯೋಗ ಮಾಡಲು, ಸ್ಟಾರ್ಟ್‌ಅಪ್‌, ವ್ಯವಹಾರ ಆರಂಭ ಮಾಡಲು ಈ ಹಿಂದಿನ ಹಾಗೂ ಈಗಿನ ಸರ್ಕಾರ ಹಲವಾರು ಸಾಲ ಯೋಜನೆಗಳನ್ನು ಪರಿಚಯಿಸಿದೆ. ಆ ಸಾಲ ಯೋಜನೆಗಳಲ್ಲಿ ಸ್ಟಾಂಡ್‌ಅಪ್ ಇಂಡಿಯಾ ಯೋಜನೆ ಕೂಡಾ ಒಂದಾಗಿದೆ. ಈ ಯೋಜನೆಯಲ್ಲಿ ಸುಮಾರು 10 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿವರೆಗೆ ಸಾಲವನ್ನು ಪಡೆಯಬಹುದು.

ಸ್ಟಾಂಡ್‌ಅಪ್ ಯೋಜನೆಯಲ್ಲಿ ಒಂದು ಬ್ಯಾಂಕ್ ಬ್ರಾಂಚ್‌ನಿಂದ ಒಟ್ಟು ಇಬ್ಬರಿಗೆ ಮಾತ್ರ ಸಾಲ ಸೌಲಭ್ಯವನ್ನು ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಯಾವುದೇ ಬ್ಯಾಂಕ್‌ನ ಒಂದು ಬ್ರಾಂಚ್‌ನಿಂದ ಓರ್ವ ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡ (ಎಸ್‌ಸಿ/ಎಸ್‌ಟಿ) ವ್ಯಕ್ತಿಗೆ ಹಾಗೂ ಓರ್ವ ಮಹಿಳೆಗೆ ವ್ಯಾಪಾರವನ್ನು ಮಾಡಲು ಸಾಲವನ್ನು ನೀಡಬಹುದು.

ಎಲ್‌ಐಸಿ ಪಾಲಿಸಿ ಮೇಲೆ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?ಎಲ್‌ಐಸಿ ಪಾಲಿಸಿ ಮೇಲೆ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಒಬ್ಬ ವ್ಯಕ್ತಿಗಳು ಉತ್ಪಾದನೆ, ಸೇವೆ, ಕೃಷಿ, ವ್ಯಾಪಾರ ಹೀಗೆ ಯಾವುದಾದರೂ ಕಾರ್ಯಕ್ಕೆ ಆ ಹಣವನ್ನು ವಿನಿಯೋಗ ಮಾಡುವುದಾದರೆ ಮಾತ್ರ ಈ ಸಾಲವನ್ನು ಪಡೆಯಲು ಸಾಧ್ಯವಾಗಲಿದೆ. ಯಾವುದೇ ಒಂದು ಪಾಲುದಾರಿಕೆಯ ವ್ಯಾಪಾರಕ್ಕಾಗಿ ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆಯುವುದಾದರೆ ಈ ಸಾಲವನ್ನು ಪಡೆಯುವ ಎಸ್‌ಟಿ/ಎಸ್‌ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿ ಅಥವಾ ಮಹಿಳೆ ಸುಮಾರು ಶೇಕಡ 51ರಷ್ಟು ಸಂಸ್ಥೆಯ ಪಾಲುದಾರಿಕೆಯನ್ನು ಹೊಂದಿರಬೇಕು. ಹಾಗಾದರೆ ಮಾತ್ರ ಈ ಯೋಜನೆಯಡಿಯಲ್ಲಿ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

 ಈ ಯೋಜನೆಗೆ ಬೇಕಾದ ಅರ್ಹತೆ

ಈ ಯೋಜನೆಗೆ ಬೇಕಾದ ಅರ್ಹತೆ

* 18 ವರ್ಷಕ್ಕಿಂತ ಮೇಲ್ಪಟ್ಟ ಎಸ್‌ಸಿ/ಎಸ್‌ಟಿ ಅಥವಾ ಮಹಿಳಾ ಉದ್ಯೋಗಿ ಈ ಯೋಜನೆಯ ಲಾಭ ಪಡೆಯಲು ಅರ್ಹರು
* ಈ ಯೋಜನೆಯಡಿಯಲ್ಲಿ ಕೇವಲ ಗ್ರೀನ್‌ಫೀಲ್ಡ್ ಯೋಜನೆಗಳಿಗೆ ಸಾಲವನ್ನು ನೀಡಲಾಗುತ್ತದೆ. ಗ್ರೀನ್‌ಫೀಲ್ಡ್ ಎಂದರೆ, ಉತ್ಪಾದನೆ, ಸೇವೆ, ಕೃಷಿಯಲ್ಲಿ ಮೊದಲ ವ್ಯಾಪಾರ.
* ಎಸ್‌ಟಿ/ಎಸ್‌ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿ ಅಥವಾ ಮಹಿಳೆ ಸುಮಾರು ಶೇಕಡ 51ರಷ್ಟು ಸಂಸ್ಥೆಯ ಪಾಲುದಾರಿಕೆಯನ್ನು ಹೊಂದಿರಬೇಕು.
* ಸಾಲ ಪಡೆಯುವವರು ಬೇರೆ ಯಾವುದೇ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಯಲ್ಲಿ ಸಾಲವನ್ನು ಹೊಂದಿರಬಾರದು.

ಏರ್‌ಇಂಡಿಯಾಕ್ಕಾಗಿ 15,000 ಕೋಟಿ ಸಾಲಕ್ಕೆ ಮುಂದಾದ ಟಾಟಾ!ಏರ್‌ಇಂಡಿಯಾಕ್ಕಾಗಿ 15,000 ಕೋಟಿ ಸಾಲಕ್ಕೆ ಮುಂದಾದ ಟಾಟಾ!

 ಈ ಯೋಜನೆಗೆ ಎಷ್ಟು ಬಡ್ಡಿದರ?

ಈ ಯೋಜನೆಗೆ ಎಷ್ಟು ಬಡ್ಡಿದರ?

ಸಾಮಾನ್ಯವಾಗಿ ಯಾವುದೇ ಸರ್ಕಾರಿ ಸಾಲ ಸೌಲಭ್ಯ ಯೋಜನೆಗೆ ಕಡಿಮೆ ಬಡ್ಡಿದರ ಇರುತ್ತದೆ. ಜನರು ವ್ಯಾಪಾರವನ್ನು ಆರಂಭ ಮಾಡಲು ಹೆಚ್ಚು ಕಷ್ಟಪಡಬಾರದು, ಹೆಚ್ಚು ನಷ್ಟ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಸರ್ಕಾರವೇ ಹಲವಾರು ಯೋಜನೆಗಳ ಮೂಲಕ ನೀಡುತ್ತದೆ. ಸ್ಟಾಂಡ್‌ಅಪ್ ಯೋಜನೆಯ ಬಡ್ಡಿದರವು ಕೂಡಾ ಅತೀ ಕಡಿಮೆಯಾಗಿದೆ. ಬ್ಯಾಂಕ್‌ನಲ್ಲಿ ಯಾವುದು ಅತೀ ಕಡಿಮೆ ಬಡ್ಡಿದರ ಆಗಿರುತ್ತದೆಯೋ ಆ ಬಡ್ಡಿದರ ಈ ಸಾಲಕ್ಕೆ ಅನ್ವಯವಾಗಲಿದೆ. ಎಂಸಿಎಲ್‌ಆರ್ ಹಾಗೂ ಅವಧಿ ಪ್ರೀಮಿಯಂ ಇರುತ್ತದೆ.

 ಈ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?

ಈ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?

* ಸ್ಟಾಂಡ್-ಅಪ್ ಇಂಡಿಯಾ ಪೋರ್ಟಲ್ ಸಂಭಾವ್ಯ ಸಾಲಗಾರರಿಗೆ ವಿವಿಧ ಏಜೆನ್ಸಿಗಳ ಮೂಲಕ ಈ ಸಾಲದ ಮಾಹಿತಿಯನ್ನು ಒದಗಿಸುತ್ತದೆ. ಸಾಲವನ್ನು ಪಡೆಯಲು ಬ್ಯಾಂಕ್‌ ಅನ್ನು ಸಂಪರ್ಕ ಮಾಡುವ ಮಾಹಿತಿಯನ್ನು ಕೂಡಾ ನೀಡುತ್ತದೆ.
* ಪೋರ್ಟಲ್‌ನ ನೋಂದಣಿ ಪುಟದಲ್ಲಿ, ಅರ್ಜಿದಾರರು ಮೊದಲು "Register" ಕ್ಲಿಕ್ ಮಾಡಬೇಕಾಗುತ್ತದೆ.
* ಅದಾದ ಬಳಿಕ ಕೆಲವು ಸಣ್ಣ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ.
* ಉತ್ತರವನ್ನು ನೋಡಿಕೊಂಡು ಅದರ ಆಧಾರದ ಮೇಲೆ ಅಭ್ಯರ್ಥಿಯನ್ನು "ತರಬೇತಿ ಅಥವಾ ಸಿದ್ಧ ಸಾಲಗಾರ" ("Trainee or Ready Borrower") ಎಂದು ಪರಿಗಣನೆ ಮಾಡಲಾಗುತ್ತದೆ.
* ಅರ್ಜಿದಾರರಿಗೆ ಸ್ಟ್ಯಾಂಡ್-ಅಪ್ ಇಂಡಿಯಾ ಸಾಲಕ್ಕೆ ತಮ್ಮ ಅರ್ಹತೆ ಎಷ್ಟಿದೆ ಎಂದು ಕೂಡಾ ತಿಳಿಸಲಾಗುತ್ತದೆ.
* ತರಬೇತಿ ಪಡೆದ ಸಾಲಗಾರರು ನಂತರ ನೋಂದಾಯಿಸಿಕೊಳ್ಳಬಹುದು ಮತ್ತು ಪೋರ್ಟಲ್ ಮೂಲಕ ಲಾಗ್ ಇನ್ ಮಾಡಬಹುದು.
* ಪೋರ್ಟಲ್‌ಗೆ ಲಾಗ್ ಇನ್ ಮಾಡಿದ ನಂತರ ಸಾಲಗಾರರು ಡ್ಯಾಶ್‌ಬೋರ್ಡ್ ಸೈಟ್ ಕಾಣುತ್ತಾರೆ

 ಯಾವೆಲ್ಲ ದಾಖಲೆ ಬೇಕು?

ಯಾವೆಲ್ಲ ದಾಖಲೆ ಬೇಕು?

* ಅರ್ಜಿಯನ್ನು ಭರ್ತಿ ಮಾಡಿದಾಗ ಅದಕ್ಕೆ ಲಗತ್ತಿಸಲು ಪಾಸ್‌ಪೋರ್ಟ್ ಗಾತ್ರದ ಫೋಟೋ ಬೇಕಾಗುತ್ತದೆ.
* ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್‌ನಂತಹ ಗುರುತು ಪುರಾವೆ
* ವೋಟರ್ ಐಡಿ, ಪಾಸ್‌ಪೋರ್ಟ್‌ನಂತಹ ವಿಳಾಸ ಪುರಾವೆ
* ಪಾಲುದಾರಿಕೆಯ ವಿವರ
* ಬಾಡಿಗೆ ಒಪ್ಪಂದದ ಪತ್ರ
* ಕಳೆದ ಮೂರು ವರ್ಷದ ಬ್ಯಾಲೆನ್ಸ್ ಶೀಟ್
* ಆಸ್ತಿ, ಸಾಲದ ಬಗ್ಗೆ ಪೂರ್ಣ ಮಾಹಿತಿ
* ಬ್ಯಾಂಕ್‌ನಿಂದ ಬೇರೆ ದಾಖಲೆಗಳು

 ಸಾಲ ಮರುಪಾವತಿ ವಿಧಾನ ಹೇಗಿದೆ?

ಸಾಲ ಮರುಪಾವತಿ ವಿಧಾನ ಹೇಗಿದೆ?

ಸಾಮಾನ್ಯವಾಗಿ ನಾವು ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಸಾಲವನ್ನು ಪಡೆದಾಗ ಸಾಲವನ್ನು ಮರುಪಾವತಿ ಮಾಡಲು ನಿಗದಿತವಾದ ಮರುಪಾವತಿ ಅವಧಿ ಇರುತ್ತದೆ. ಹಲವಾರು ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳಲ್ಲಿ ಈ ಸಾಲ ಮರುಪಾವತಿ ಅವಧಿಯನ್ನು ಸಾಲ ಪಡೆದಿರುವವರೆ ಗೊತ್ತು ಮಾಡಬಹುದು. ನಾವು ಅಧಿಕ ಮರುಪಾವತಿ ಪಡೆಯುವುದು ಉತ್ತಮ. ಆದರೆ ಸರ್ಕಾರದ ಯೋಜನೆಗಳಿಗೆ ನಿಗದಿತ ಮರುಪಾವತಿ ಅವಧಿ ಇರುತ್ತದೆ. ಸ್ಟಾಂಡ್-ಅಪ್ ಇಂಡಿಯಾ ಯೋಜನೆಯಡಿಯಲ್ಲಿ ಪಡೆದ ಸಾಲಕ್ಕೆ ಮರುಪಾವತಿ ಅವಧಿ 7 ವರ್ಷಗಳು ಆಗಿದೆ. ಗರಿಷ್ಠ 18 ತಿಂಗಳುಗಳ ಕಾಲ ನಾವು ಸಾಲವನ್ನು ಮರುಪಾವತಿ ಮಾಡದೆ ಇರಬಹುದು.

English summary

What is Stand-Up India Scheme, Follow This Steps to Apply for it, Details in Kannada.

Stand-Up India Scheme: What is Stand-Up India Scheme, How to Apply for it, Eligibility criteria other details in kannada.
Story first published: Saturday, November 5, 2022, 11:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X