For Quick Alerts
ALLOW NOTIFICATIONS  
For Daily Alerts

ಗಮನಿಸಿ: ಗೂಗಲ್‌ನಲ್ಲಿ ಈ ವಿಚಾರಗಳನ್ನು ಸರ್ಚ್ ಮಾಡುವಾಗ ಎಚ್ಚರ

|

ನಮಗೆ ಯಾವುದೇ ವಿಚಾರದ ಬಗ್ಗೆ ಮಾಹಿತಿ ಬೇಕು ಎಂದು ಆದಾಗ ಮೊದಲಿಗೆ ನಮ್ಮ ತಲೆಗೆ ಬರುವುದು ಗೂಗಲ್‌. ಹೌದಲ್ವ?. ನಾವು ಯಾವುದೇ ವಿಚಾರದ ಬಗ್ಗೆ ಮಾಹಿತಿ ತಿಳಿಯಬೇಕಾದರೂ ಗೂಗಲ್‌ನಲ್ಲಿ ಮೊದಲು ಗೂಗಲ್‌ನಲ್ಲಿ ಸರ್ಚ್ ಮಾಡಿ ಆ ಬಗ್ಗೆ ಮಾಹಿತಿಯನ್ನು ಓದಿ ತಿಳಿದುಕೊಳ್ಳುತ್ತೇವೆ. ನಾವು ಸಾಮಾನ್ಯವಾಗಿ ಮನರಂಜನೆ, ಬ್ಯಾಂಕ್‌ ವಿಚಾರ, ಯಾವುದಾದರೂ ಫೋಟೋಗಳು, ಸುದ್ದಿಗಳು, ಆರೋಗ್ಯ, ರಾಜಕೀಯ ವಿಚಾರಗಳನ್ನು ಗೂಗಲ್‌ ಮೂಲಕ ಸರ್ಚ್ ಮಾಡಿ ಮಾಹಿತಿ ಪಡೆಯುತ್ತೇವೆ.

ಆದರೆ ನಾವು ಹಲವಾರು ವಿಚಾರಗಳನ್ನು ಗೂಗಲ್‌ನಲ್ಲಿ ಸರ್ಚ್ ಮಾಡುವುದು ನಮಗೆ ಅಪಾಯವೂ ಹೌದು. ನಾವು ಗೂಗಲ್‌ನಲ್ಲಿ ಸರ್ಚ್ ಮಾಡುವ ಸಂದರ್ಭದಲ್ಲಿ ಹಲವಾರು ವಿಚಾರಗಳನ್ನು ಹುಡುಕಲೇ ಬಾರದು ಎಂದು ತಜ್ಞರುಗಳು ಹೇಳುತ್ತಾರೆ. ಅದರಲ್ಲೂ ಮುಖ್ಯವಾಗಿ ಬ್ಯಾಂಕುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಾವು ಗೂಗಲ್‌ನಲ್ಲಿ ಸರ್ಚ್ ಮಾಡುವುದು ಅಪಾಯಕಾರಿ ಎಂದು ತಜ್ಞರು ಪ್ರಮುಖವಾಗಿ ಒತ್ತಿ ಹೇಳುತ್ತಾರೆ.

 ನವೆಂಬರ್‌ 7 ರಂದು ಕೂಡಾ ಏರಿಕೆಯಾಗಿಲ್ಲ ಪೆಟ್ರೋಲ್‌, ಡೀಸೆಲ್‌ ದರ ನವೆಂಬರ್‌ 7 ರಂದು ಕೂಡಾ ಏರಿಕೆಯಾಗಿಲ್ಲ ಪೆಟ್ರೋಲ್‌, ಡೀಸೆಲ್‌ ದರ

ಹೀಗಿರುವಾಗ ಯಾವೆಲ್ಲಾ ವಿಚಾರವನ್ನು ನಾವು ಗೂಗಲ್‌ನಲ್ಲಿ ಸರ್ಚ್ ಮಾಡಬಾರದು ಎಂಬ ಬಗ್ಗೆ ನಮಗೆ ಮಾಹಿತಿ ಇರುವುದು ಅತ್ಯಗತ್ಯ. ಈ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ ಮುಂದೆ ಓದಿ.

 ಯಾವುದೇ ಸಾಫ್ಟ್‌ವೇರ್‌/ ಅಪ್ಲಿಕೇಶನ್‌ನ ಹುಡುಕಾಟ ಗೂಗಲ್‌ನಲ್ಲಿ ಬೇಡ

ಯಾವುದೇ ಸಾಫ್ಟ್‌ವೇರ್‌/ ಅಪ್ಲಿಕೇಶನ್‌ನ ಹುಡುಕಾಟ ಗೂಗಲ್‌ನಲ್ಲಿ ಬೇಡ

ನಾವು ಅಧಿಕವಾಗಿ ಸಾಫ್ಟ್‌ವೇರ್‌/ ಅಪ್ಲಿಕೇಶನ್‌ ಅನ್ನು ಗೂಗಲ್‌ನಲ್ಲಿ ಹುಡುಕುತ್ತೇವೆ. ಯಾವುದೇ ಹೊಸ ಅಪ್ಲಿಕೇಶನ್‌ಗಳು ಬಂದ ಸಂದರ್ಭದಲ್ಲಿ ನಾವು ಅದನ್ನು ಗೂಗಲ್‌ ಮೂಲಕ ಹುಡುಕುತ್ತೇವೆ. ಆದರೆ ಗೂಗಲ್‌ನಲ್ಲಿ ನಾವು ಹುಡುಕುವಾಗ ಕೆಲವೊಮ್ಮೆ ಫಿಶಿಂಗ್‌ ಅಥವಾ ನಕಲಿ ಅಪ್ಲಿಕೇಶನ್‌ಗಳು ಸಾಫ್ಟ್‌ವೇರ್‌ಗಳು ನಮಗೆ ಲಭ್ಯವಾಗಬಹುದು. ಇದರಿಂದಾಗಿ ನಿಮ್ಮ ಮೊಬೈಲ್‌ ಫೋನ್‌ ಅಥವಾ ಲ್ಯಾಪ್‌ಟಾಪ್‌ಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಇದೆ. ನಮ್ಮ ವಿವರಗಳು ಕೂಡಾ ಸೋರಿಕೆ ಆಗಬಹುದು. ಆದ್ದರಿಂದ ನಾವು ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆಪಲ್‌ ಆಪ್‌ ಸ್ಟೋರ್‌ನಿಂದಲೇ ಆಪ್‌, ಸಾಫ್ಟ್‌ವೇರ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಉತ್ತಮ.

 ಸಹಾಯವಾಣಿಗಳ ಹುಡುಕಾಟ ಮಾಡುವಾಗ ಜಾಗರೂಕ

ಸಹಾಯವಾಣಿಗಳ ಹುಡುಕಾಟ ಮಾಡುವಾಗ ಜಾಗರೂಕ

ನಮ್ಮ ಮೊಬೈಲ್‌ ಸಂಖ್ಯೆ ಅಥವಾ ಬ್ಯಾಂಕ್‌ನಲ್ಲಿ ಯಾವುದೇ ಸಮಸ್ಯೆ ಉಂಟಾದರೂ ನಾವು ಗೂಗಲ್‌ನಲ್ಲಿ ಆ ಬ್ಯಾಂಕ್‌ ಅಥವಾ ಆ ಕಂಪನಿಯ ಸಹಾಯವಾಣಿಯನ್ನು ಹುಡುಕಾಡುತ್ತೇವೆ. ಈ ಸಂದರ್ಭದಲ್ಲಿ ನಾವು ಬಹಳ ಜಾಗರೂಕರಾಗಿರಬೇಕಾಗುತ್ತದೆ. ಯಾಕೆಂದರೆ ಪ್ರಸ್ತುತ ಆನ್‌ಲೈನ್ ತಾಣವೇ ಒಂದು ಹಗರಣಗಳ ಸೂತ್ರವಾಗಿದೆ. ಹಲವಾರು ಮಂದಿ ಆನ್‌ಲೈನ್‌ನಲ್ಲಿ ದೊರೆತ ಕಸ್ಟಮರ್‌ ಕೇರ್‌ ಸಂಖ್ಯೆ ಅಥವಾ ಸಹಾಯವಾಣಿಗೆ ಕರೆ ಮಾಡಿ ಬಳಿಕ ವಂಚನೆಗೆ ಒಳಗಾಗಿರುವ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇದೆ. ಇನ್ನು ಕೆಲವು ತಾಣಗಳಲ್ಲಿ ಲಿಂಕ್‌ಗಳನ್ನು ಹಾಕಿರುತ್ತಾರೆ. ಅದನ್ನು ಕ್ಲಿಕ್‌ ಮಾಡುವಾಗ ಕೂಡಾ ನಾವು ಜಾಗರೂಕರಾಗಿರಬೇಕಾಗುತ್ತದೆ.

 ಔಷಧಿಗಳ ಬಗ್ಗೆ ಮಾಹಿತಿ ನುರಿತ ವೈದ್ಯರಿಂದ ಪಡೆಯಿರಿ, ಗೂಗಲ್‌ನಿಂದ ಅಲ್ಲ

ಔಷಧಿಗಳ ಬಗ್ಗೆ ಮಾಹಿತಿ ನುರಿತ ವೈದ್ಯರಿಂದ ಪಡೆಯಿರಿ, ಗೂಗಲ್‌ನಿಂದ ಅಲ್ಲ

ಈ ಆನ್‌ಲೈನ್‌ ಯುಗದಲ್ಲಿ ಎಲ್ಲವೂ ಕುಡಾ ಆನ್‌ಲೈನ್‌ ಆಗಿದೆ. ನಮಗೆ ಆರೋಗ್ಯದ ಯಾವುದೇ ಸಮಸ್ಯೆಗಳು ಉಂಟಾದರೂ ಕೂಡಾ ಅದರ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿಕೊಂಡು ನಮಗೆ ಎಲ್ಲಾ ಮಾಹಿತಿ ಲಭಿಸಿದೆ ಎಂಬಂತೆ ವರ್ತನೆ ಮಾಡುತ್ತೇವೆ. ಆನ್‌ಲೈನ್‌ ಹುಡುಕಿ ಬಳಿಕ ತಾವಾಗಿಯೇ ಔಷಧಿಯನ್ನು ಸೇವಿಸುವವರೂ ಕೂಡಾ ಇದ್ದಾರೆ. ಆದರೆ ಇದರಿಂದ ಅಪಾಯ ಉಂಟಾಗುವ ಸಾದ್ಯತೆಗಳು ಅಧಿಕವಾಗಿದೆ. ಇನ್ನು ಕೆಲವರು ತಮಗೆ ಏನೇ ಆದರೂ ಗೂಗಲ್‌ನಲ್ಲಿ ಗುಣಲಕ್ಷಣಗಳನ್ನು ಹುಡುಕಿ ತಮಗೆ ಇಂತಹುದ್ದೆ ಕಾಯಿಲೆ ಎಂದು ಮಾನಸಿಕವಾಗಿ ನೊಂದು ಕೊಳ್ಳುವವರೂ ಇದ್ದಾರೆ. ಗೂಗಲ್‌ನಲ್ಲಿ ನಿಮಗೆ ಯಾವ ಆರೋಗ್ಯ ಸಮಸ್ಯೆ ಇದೆ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇರುವುದಿಲ್ಲ. ಆದ್ದರಿಂದ ನೀವು ವೈದ್ಯರ ಪರೀಕ್ಷೆಗೆ ಒಳಗಾಗಿ ಔಷಧಿಯನ್ನು ಪಡೆದುಕೊಳ್ಳುವುದು ಉತ್ತಮ.

 ನಿಮ್ಮ ಹೆಸರು ಹುಡುಕಿ ಅಪಾಯ ಮೈ ಮೇಲೆ ಎಳೆದು ಕೊಳ್ಳಬೇಡಿ

ನಿಮ್ಮ ಹೆಸರು ಹುಡುಕಿ ಅಪಾಯ ಮೈ ಮೇಲೆ ಎಳೆದು ಕೊಳ್ಳಬೇಡಿ

ಗೂಗಲ್‌ನಲ್ಲಿ ನಾವು ಯಾವುದೇ ವಿಚಾರವನ್ನು ಸರ್ಚ್ ಮಾಡಿದಾಗ ಅದು ಖಾಸಗಿಯಾಗಿ ಇರುವುದಿಲ್ಲ. ಈ ಇಂಟರ್‌ನೆಟ್‌ ಯುಗದಲ್ಲಿ ನಮ್ಮ ಖಾಸಗೀತನವೇ ಒಂದು ಸಮಸ್ಯೆಯಾಗಿ ಪರಿಣಮಿಸಿದೆ. ನೀವು ನಿಮ್ಮ ಹೆಸರನ್ನು ಸರ್ಚ್ ಮಾಡುವುದರಿಂದಾಗಿ ನಿಮ್ಮ ಖಾಸಗಿ ಮಾಹಿತಿಯು ಬೇರೆಯವರಿಗೆ ದೊರೆಯುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

 ಆನ್‌ಲೈನ್‌ ಬ್ಯಾಂಕಿಂಗ್‌ ವೆಬ್‌ಸೈಟ್‌ ಸರ್ಚ್ ಮಾಡುತ್ತೀರೆ?, ಎಚ್ಚರ

ಆನ್‌ಲೈನ್‌ ಬ್ಯಾಂಕಿಂಗ್‌ ವೆಬ್‌ಸೈಟ್‌ ಸರ್ಚ್ ಮಾಡುತ್ತೀರೆ?, ಎಚ್ಚರ

ಹಲವಾರು ಮಂದಿ ಗೂಗಲ್‌ನಲ್ಲೇ ಬ್ಯಾಂಕಿನ ವೆ‌‌ಬ್‌ಸೈಟ್‌ ಹಾಗೂ ಯುಆರ್‌ಎಲ್‌ ಅನ್ನು ಸರ್ಚ್ ಮಾಡಿಕೊಳ್ಳುತ್ತಾರೆ. ಆದರೆ ನಾವು ಈ ಸಂದರ್ಭದಲ್ಲಿ ತೀವ್ರ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ರೀತಿ ಗೂಗಲ್‌ನಲ್ಲಿ ಬ್ಯಾಂಕಿನ ವೆಬ್‌ಸೈಟ್‌ ಹುಡುಕುವುದು ಅಪಾಯಕಾರಿ. ನಿಮ್ಮ ಬ್ಯಾಂಕಿನ ವಿವರವೂ ಹ್ಯಾಕರ್‌ಗಳಿಗೆ ಲಭ್ಯವಾಗುವ ಸಾಧ್ಯತೆಗಳು ಇರುತ್ತದೆ. ಆದ್ದರಿಂದ ನೀವು ಗೂಗಲ್‌ನಲ್ಲಿ ಬ್ಯಾಂಕಿಂಗ್‌ ಸೈಟ್‌ಗಳ ಹುಡುಕಾಟ ಮಾಡಿ ಫಿಶಿಂಗ್‌ ವೆಬ್‌ಸೈಟ್‌ಗಳನ್ನು ತೆರೆಯಬಹುದು. ತಪ್ಪಿ ಈ ಫಿಶಿಂಗ್‌ ವೆಬ್‌ಸೈಟ್‌ಗಳನ್ನು ನೀವು ತೆರೆದರೆ, ಹ್ಯಾಕರ್‌ಗಳು ನಿಮ್ಮ ಬ್ಯಾಂಕ್‌ನಲ್ಲಿಯುವ ಹಣವನ್ನು ಸುಲಭವಾಗಿ ದೋಚಬಹುದು. ಆದ್ದರಿಂದ ನೀವು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ ಯುಆರ್‌ಎಲ್‌ ಅನ್ನು ನೇರವಾಗಿ ನಮೂದಿಸಿ ಸರ್ಚ್ ಮಾಡಿ.

 ನವೆಂಬರ್‌ 7 ರ ಚಿನ್ನ, ಬೆಳ್ಳಿಯ ದರದ ಬಗ್ಗೆ ಇಲ್ಲಿದೆ ಮಾಹಿತಿ ನವೆಂಬರ್‌ 7 ರ ಚಿನ್ನ, ಬೆಳ್ಳಿಯ ದರದ ಬಗ್ಗೆ ಇಲ್ಲಿದೆ ಮಾಹಿತಿ

English summary

What you should never search on Google? Explained in Kannada

What you should never search on Google? Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X