For Quick Alerts
ALLOW NOTIFICATIONS  
For Daily Alerts

Year Ender 2022: 2023ರಲ್ಲಿ ಮನೆಯಲ್ಲಿಯೇ ಹಣ ಸಂಪಾದಿಸಲು 5 ವಿಧಾನ!

|

ಪ್ರಸ್ತುತ ನಾವು 2022ರ ಕೊನೆಯ ತಿಂಗಳಿನಲ್ಲಿ ಇದ್ದೇವೆ. ಕೊರೊನಾ ಸಾಂಕ್ರಾಮಿಕ ಈಗ ಮತ್ತೆ ಕೊಂಚ ಅಧಿಕವಾಗುತ್ತಿದೆ. ಈ ನಡುವೆ 2023ರಲ್ಲಿ ದೇಶದ ಸ್ಥಿತಿ ಹೇಗಿರಲಿದೆ ಎಂದು ತಿಳಿಯದು. ಹಲವಾರು ಸಂಸ್ಥೆಗಳು ಮತ್ತೆ ವರ್ಕ್ ಫ್ರಮ್ ಹೋಮ್ ನೀಡುವ ಸಾಧ್ಯತೆಯಿದೆ.

ಆದರೆ ಕೋವಿಡ್‌ನಿಂದಾಗಿ ಹಲವಾರು ಮಂದಿಗೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಕೆಲಸವನ್ನು ಕಳೆದುಕೊಂಡು ಇನ್ನೂ ಕೂಡಾ ಮನೆಯಲ್ಲಿಯೇ ಇರುವವರು ಅದೆಷ್ಟೋ ಜನರು ಇದ್ದಾರೆ. ಆದರೆ ಹೊಸ ವರ್ಷದಲ್ಲಿ ನೀವು ಹೊಸ ಆರಂಭ ಮಾಡಿದರೆ ಉತ್ತಮವಲ್ಲವೇ?

Year Ender 2022: ಈ ವರ್ಷ 5 ವಿಚಾರದಲ್ಲಿ ಹೆಡ್‌ಲೈನ್‌ನಲ್ಲಿ ಕಂಡ ಅಂಬಾನಿ ಕುಟುಂಬ!Year Ender 2022: ಈ ವರ್ಷ 5 ವಿಚಾರದಲ್ಲಿ ಹೆಡ್‌ಲೈನ್‌ನಲ್ಲಿ ಕಂಡ ಅಂಬಾನಿ ಕುಟುಂಬ!

ಹಳೆ ವರ್ಷದ ಕಹಿಯನ್ನು ಮರೆತು ಹೊಸ ವರ್ಷದಲ್ಲಿ ಹೊಸ ಆರಂಭವನ್ನು ಮಾಡಿ. ನೀವು 2023ರಲ್ಲಿ ಮನೆಯಲ್ಲಿಯೇ ಕುಳಿತು ಹಣವನ್ನು ಸಂಪಾದಿಸಿ. ನಾವಿಲ್ಲಿ 5 ವಿಧಾನವನ್ನು ವಿವರಿಸಿದ್ದೇವೆ ಮುಂದೆ ಓದಿ...

 ಫ್ರಿಲ್ಯಾನ್ಸಿಂಗ್ ಬಗ್ಗೆ ಗೊತ್ತೆ?

ಫ್ರಿಲ್ಯಾನ್ಸಿಂಗ್ ಬಗ್ಗೆ ಗೊತ್ತೆ?

ನೀವು ಯಾವುದೇ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಸ್ಕಿಲ್ ಅನ್ನು ಹೊಂದಿದ್ದರೆ, ತಜ್ಞರು ಆಗಿದ್ದರೆ ನೀವು ಫ್ರೀಲ್ಯಾನ್ಸಿಂಗ್ ಅನ್ನು ಮಾಡಬಹುದು. ಬರವಣಿಗೆ, ಗ್ರಾಫಿಕ್ ಡಿಸೈನಿಂಗ್, ಸೋಶಿಯಲ್ ಮಿಡೀಯಾ ನಿರ್ವಹಣೆ ಮೊದಲಾದವುಗಳನ್ನು ನೀವು ಮಾಡಬಹುದು. ನೀವು ಉತ್ತಮ ಬರವಣಿಗೆ ಶೈಲಿಯನ್ನು ಹೊಂದಿದ್ದರೆ, ಮಾಧ್ಯಮಗಳಲ್ಲಿ ಫ್ರಿಲ್ಯಾನ್ಸಿಂಗ್ ಕೆಲಸ ಮಾಡಬಹುದು. ಅಧಿಕ ಸಂಪಾದನೆಯನ್ನೇ ಮಾಡಲು ಸಾಧ್ಯವಿದೆ. ಫ್ರಿಲ್ಯಾನ್ಸಿಂಗ್‌ಗಾಗಿಯೇ ಕೆಲವು ಆಪ್‌ಗಳು ಇದೆ. ಅಪ್‌ವರ್ಕ್, ಫಿವರ್ರ್, ಫ್ರೀಲ್ಯಾನ್ಸರ್ ಮೊದಲಾದವುಗಳು ಈ ಆಪ್‌ಗಳು ಆಗಿದೆ.

Year Ender 2022: 2023ರಲ್ಲಿ 89 ಕಂಪನಿಗಳ ಐಪಿಒ, ಯಾವುದು ನೋಡಿYear Ender 2022: 2023ರಲ್ಲಿ 89 ಕಂಪನಿಗಳ ಐಪಿಒ, ಯಾವುದು ನೋಡಿ

 ಆನ್‌ಲೈನ್ ಟ್ಯೂಟರಿಂಗ್ ಅಥವಾ ಟೀಚಿಂಗ್

ಆನ್‌ಲೈನ್ ಟ್ಯೂಟರಿಂಗ್ ಅಥವಾ ಟೀಚಿಂಗ್

ಹಲವಾರು ಶಾಲೆಗಳು ಹಾಗೂ ಯೂನಿವರ್ಸಿಟಿಗಳು ಆನ್‌ಲೈನ್ ಕ್ಲಾಸ್‌ಗಳನ್ನು ಆರಂಭಿಸುತ್ತಿದೆ. ಹಾಗೆಯೇ ಆನ್‌ಲೈನ್ ಮೂಲಕ ಕ್ಲಾಸ್‌ ನೀಡುವವರಿಗೆ ಬೇಡಿಕೆಯು ಅಧಿಕವಾಗುತ್ತಿದೆ. ನೀವು ಶಿಕ್ಷಕರಾಗಲು ವಿಧ್ಯಾಭ್ಯಾಸ ಹೊಂದಿದ್ದರೆ ಅಥವಾ ತಜ್ಞರಾಗಿದ್ದರೆ, ನೀವು ಈ ಕೆಲಸವನ್ನು ಮಾಡುವ ಮೂಲಕ ಹಣ ಸಂಪಾದನೆ ಮಾಡಬಹುದು. ಟ್ಯೂಷನ್ ಕೂಡಾ ಕೊಡಬಹುದು. VIPKid, iTutorGroup, TutorMe ನಂತಹ ಆಪ್‌ಗಳಲ್ಲಿ ಆನ್‌ಲೈನ್ ಶಿಕ್ಷಣ ನೀಡುವ ಶಿಕ್ಷಕರಾಗಿ ಕಾರ್ಯನಿರ್ವಹಣೆ ಮಾಡಬಹುದು.

 ಆನ್‌ಲೈನ್‌ನಲ್ಲಿ ವಸ್ತು ಮಾರಾಟ

ಆನ್‌ಲೈನ್‌ನಲ್ಲಿ ವಸ್ತು ಮಾರಾಟ

ಕಳೆದ ಕೆಲವು ವರ್ಷಗಳಿಂದ ಇ-ಕಾಮರ್ಸ್ ಪಾಪ್ಯುಲರ್ ಆಗುತ್ತಿದೆ. ಹಾಗೆಯೇ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಮಾರಾಟ ಮಾಡಲು ಹಲವಾರು ವಿಧಾನಗಳಿದೆ. ನೀವು ಶಾಫಿಪೈ (Shopify) ನಂತಹ ಆಪ್‌ಗಳ ಮೂಲಕ ನಿಮ್ಮದೇ ಆದ ಆನ್‌ಲೈನ್ ಸ್ಟೋರ್ ಅನ್ನು ತೆರೆಯಬಹುದು. ಅಮೆಜಾನ್ ಅಥವಾ ಎಟ್‌ಸಿ ಮೂಲಕವೂ ನೀವು ಶಾಪಿಂಗ್ ಮಾಡಬಹುದು. ಹಾಗೆಯೇ ನೀವೇ ತಯಾರಿಸಿದ ವಸ್ತುಗಳನ್ನು ಕೂಡಾ ಸಾಮಾಜಿಕ ಜಾಲತಾಣದ ಮೂಲಕ ಮಾರಾಟ ಮಾಡಬಹುದು. ವಾಟ್ಸಾಪ್ ಮೂಲಕ ಗ್ರೂಪ್ ಮಾಡಿ ಮಾರಾಟ ಮಾಡಬಹುದು.

 ವರ್ಚುವಲ್ ಅಸಿಸ್ಟಿಂಗ್ ಏನು ಗೊತ್ತೆ?

ವರ್ಚುವಲ್ ಅಸಿಸ್ಟಿಂಗ್ ಏನು ಗೊತ್ತೆ?

ಅಪಾಯಿಂಟ್‌ಮೆಂಟ್ ನೀಡಲು, ಪ್ರವಾಸಕ್ಕೆ ವ್ಯವಸ್ಥೆ ಮಾಡಲು, ಇಮೇಲ್‌ಗಳನ್ನು ನಿರ್ವಹಣೆ ಮಾಡುವ ಕಾರ್ಯವನ್ನು ಹಲವಾರು ಸಂಸ್ಥೆಗಳು ಮಾಡುತ್ತಿದೆ. ಅದು ಈಗಲೇ ಒಂದು ಬಿಝಿನೆಸ್ ಆಗಿ ಪರಿವರ್ತನೆಯಾಗಿದೆ. ನೀವು ಸಂಘಟನೆ ನಿರ್ವಹಣೆ ಮಾಡುವಲ್ಲಿ ನುರಿತರಾಗಿದ್ದರೆ ಈ ಕಾರ್ಯ ಬಹಳ ಸುಲಭವಾಗಲಿದೆ. ಮನೆಯಲ್ಲಿಯೇ ಕುಳಿತು ಹಣ ಸಂಪಾದನೆ ಮಾಡಬಹುದಾಗಿದೆ.

 ಬ್ಲಾಗಿಂಗ್ ಅಥವಾ ಯೂಟ್ಯೂಬ್ ವಿಡಿಯೋ

ಬ್ಲಾಗಿಂಗ್ ಅಥವಾ ಯೂಟ್ಯೂಬ್ ವಿಡಿಯೋ

ನೀವು ನಿರ್ದಿಷ್ಟ ಒಂದು ವಿಚಾರದಲ್ಲಿ ಅತೀ ಆಸಕ್ತಿಯನ್ನು ಹೊಂದಿದ್ದರೆ ಅದರ ಬಗ್ಗೆ ಬರೆಯಬಹುದು ಅಂದರೆ ಬ್ಲಾಗಿಂಗ್ ಮಾಡಬಹುದು. ಹಾಗೆಯೇ ಯೂಟ್ಯೂಬ್‌ ಮೂಲಕ ಮಾಹಿತಿಯನ್ನು ಕೂಡಾ ನೀಡಬಹುದು. ಇದು ಪ್ರಸ್ತುತ ಹಲವಾರು ಮಂದಿಯ ಬಿಝಿನೆಸ್ ಆಗಿದೆ. ಯೂಟ್ಯೂಬ್ ಮೂಲಕವೇ ಹಣ ಸಂಪಾದನೆ ಮಾಡುವವರು ಹಲವಾರು ಮಂದಿ ಇದ್ದಾರೆ. ನಿಮ್ಮ ವೀವ್ಸ್ ಅಧಿಕವಾದಂತೆ ನಿಮಗೆ ಜಾಹೀರಾತು, ಸ್ಪಾನ್ಸರ್‌ಶಿಪ್‌, ಮಾರುಕಟ್ಟೆ ವ್ಯವಸ್ಥೆ ಲಭ್ಯವಾಗಲಿದೆ. ಅದರಿಂದಾಗಿ ನೀವು ಹಣ ಸಂಪಾದನೆ ಮಾಡಬಹುದು.

English summary

Year Ender 2022: Here's 5 Ways to Make Money From Home in 2023, Details in Kannada

Year Ender 2022: Want to earn money from home?, Here's 5 Ways to Make Money From Home in 2023, Check out these 5 ways. details in kannada.
Story first published: Saturday, December 24, 2022, 11:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X