ಕರ್ನಾಟಕದ ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧವಾಗಿರುವ ಮೈಸೂರಿನಲ್ಲಿ ಬೆಳ್ಳಿಗಿಂತಲೂ ಚಿನ್ನಕ್ಕೇ ಹೆಚ್ಚಿನ ಬೇಡಿಕೆ. ಈ ಬೇಡಿಕೆಯ ಪರಿಣಾಮವಾಗಿಯೇ ಹಿಂದಿನ ಕೆಲವು ವರ್ಷಗಳಿಂದ ಚಿನ್ನದ ಬೆಲೆ ಏರುಗತಿಯಲ್ಲಿಯೇ ಮೇಲೇರುತ್ತಿದೆ. ಈ ಬೇಡಿಕೆಯನ್ನು ಗಮನಿಸಿದ ಹೂಡಿಕೆದಾರರು ಹೆಚ್ಚಿನ ಚಿನ್ನವನ್ನು ಈ ನಗರದಿಂದ ಕೊಳ್ಳುತ್ತಿದ್ದಾರೆ.
ಮೈಸೂರು ಕರ್ನಾಟಕ ರಾಜ್ಯದ ಎರಡನೇ ಅತ್ಯಂತ ಜನಪ್ರಿಯ ಮತ್ತು ದೊಡ್ಡ ನಗರವಾಗಿದೆ. ಇಲ್ಲಿ ಜನರು ಆಭರಣ, ಪಾತ್ರೆಗಳು ಮತ್ತು ಉಡುಗೊರೆ ವಸ್ತುಗಳನ್ನು ಬೆಳ್ಳಿಯ ರೂಪದಲ್ಲಿ ಬಳಸುತ್ತಾರೆ. ಮೈಸೂರು ನಗರದ ಬೆಳ್ಳಿ ದರಗಳು ದೇಶದಲ್ಲಿ ಚಾಲ್ತಿಯಲ್ಲಿರುವ ಬೆಳ್ಳಿ ದರಗಳಿಗೆ ಉತ್ತಮ ಸೂಚನೆಗಳಾಗಿವೆ. ಮೈಸೂರು ಬೆಳ್ಳಿಯ ಬೆಲೆ ನಿರಂತರವಾಗಿ ಬದಲಾಗುತ್ತಿದ್ದು, ದಿನನಿತ್ಯವೂ ನವೀಕರಿಸಲಾಗುತ್ತದೆ.
ಗ್ರಾಂ | 22 ಕ್ಯಾರಟ್ ಇಂದಿನ ದರ | 22 ಕ್ಯಾರಟ್ ನಿನ್ನೆಯ ದರ | 22 ಕ್ಯಾರಟ್ ಮೇಲೆ ಪ್ರತಿದಿನದ ದರ ಬದಲಾವಣೆ |
1 ಗ್ರಾಂ | ₹ 3,555 | ₹ 3,525 | ₹ 30 |
8 ಗ್ರಾಂ | ₹ 28,440 | ₹ 28,200 | ₹ 240 |
10 ಗ್ರಾಂ | ₹ 35,550 | ₹ 35,250 | ₹ 300 |
100 ಗ್ರಾಂ | ₹ 3,55,500 | ₹ 3,52,500 | ₹ 3,000 |
ಗ್ರಾಂ | 24 ಕ್ಯಾರಟ್ ಇಂದಿನ ದರ | 24 ಕ್ಯಾರಟ್ ನಿನ್ನೆಯ ದರ | 24 ಕ್ಯಾರಟ್ ಮೇಲೆ ಪ್ರತಿದಿನದ ದರ ಬದಲಾವಣೆ |
1 ಗ್ರಾಂ | ₹ 3,875 | ₹ 3,845 | ₹ 30 |
8 ಗ್ರಾಂ | ₹ 31,000 | ₹ 30,760 | ₹ 240 |
10 ಗ್ರಾಂ | ₹ 38,750 | ₹ 38,450 | ₹ 300 |
100 ಗ್ರಾಂ | ₹ 3,87,500 | ₹ 3,84,500 | ₹ 3,000 |
ದಿನಾಂಕ | 22 ಕ್ಯಾರಟ್ | 24 ಕ್ಯಾರಟ್ |
Dec 14, 2019 | ₹ 35,550 300 | ₹ 38,750 300 |
Dec 13, 2019 | ₹ 35,250 -200 | ₹ 38,450 -200 |
Dec 12, 2019 | ₹ 35,450 200 | ₹ 38,650 200 |
Dec 11, 2019 | ₹ 35,250 -50 | ₹ 38,450 -60 |
Dec 10, 2019 | ₹ 35,300 -50 | ₹ 38,510 -90 |
Dec 9, 2019 | ₹ 35,350 -100 | ₹ 38,600 -100 |
Dec 7, 2019 | ₹ 35,450 -250 | ₹ 38,700 -240 |
Dec 6, 2019 | ₹ 35,700 -100 | ₹ 38,940 -90 |
Dec 5, 2019 | ₹ 35,800 250 | ₹ 39,030 250 |
Dec 4, 2019 | ₹ 35,550 0 | ₹ 38,780 0 |
ಬೆಂಗಳೂರಿನಿಂದ ಕೇವಲ ನೂರಾನಲವತ್ತು ಕಿ.ಮೀ ದೂರವಿರುವ ಮೈಸೂರಿನಲ್ಲಿ ನೂರಾರು ಚಿನ್ನದ ಅಂಗಡಿಗಳಿವೆ.
ಇವುಗಳಲ್ಲಿ ಹೆಚ್ಚಿನ ಅಂಗಡಿಗಳು ಬೆಂಗಳೂರಿನಲ್ಲಿ ಇರುವಂತಹ ಅಂಗಡಿಗಳ ಶಾಖೆಗಳೇ ಆಗಿವೆ. ಉದಾಹರಣೆಗೆ ಖ್ಯಾತ ಕಲ್ಯಾಣ್ ಜ್ಯೂವೆಲ್ಲರ್ಸ್ ಬೆಂಗಳೂರಿನಲ್ಲಿ ಹಲವಾರು ಶಾಖೆಗಳನ್ನು ಹೊಂದಿದ್ದು ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿಯೂ ಶಾಖೆಗಳನ್ನು ಹೊಂದಿದೆ. ಇದರ ಹೊರತಾಗಿ ಮಲಬಾರ್ ಗೋಲ್ಡ್ ಅಂಡ್ ಜ್ಯುವೆಲ್ಲರಿ ಸಹಾ ಮೈಸೂರಿನಲ್ಲಿ ಉತ್ತಮ ಗುಣಮಟ್ಟದ ಆಭರಣಗಳನ್ನು ಒದಗಿಸುತ್ತದೆ. ಚಿನ್ನ ಕೊಳ್ಳುವ ಮುನ್ನ ಖರೀದಿದಾರರು ಆದಷ್ಟು ಹೆಚ್ಚಿನ ಅಂಗಡಿಗಳಲ್ಲಿ ಚಿನ್ನದ ಬೆಲೆ ಹಾಗೂ ತಮಗೆ ಒಪ್ಪುವ ಆಭರಣಗಳ ಲಭ್ಯತೆಯನ್ನು ಪರಿಗಣಿಸುವುದನ್ನು ನಾವು ಸಲಹೆ ಮಾಡುತ್ತೇವೆ. ಒಂದು ವೇಳೆ ಚಿನ್ನದ ಬೆಲೆ ಕೊಂಚವೇ ಇಳಿಯುವ ಸೂಚನೆ ಕಂಡುಬಂದರೆ ಅಂದಿಗೇ ಕೊಳ್ಳದೇ ಕೊಂಚ ದಿವಸ ಕಾದು ನೋಡಬೇಕು. ಏಕೆಂದರೆ ಇಳಿಯುತ್ತಿರುವ ಬೆಲೆಗಳು ಇನ್ನಷ್ಟು ಇಳಿಯಬಹುದು! ಮೈಸೂರಿನಲ್ಲಿ ಚಿನ್ನವನ್ನು ಆಭರಣಗಳ ರೂಪದಲ್ಲಿಯೇ ಹೆಚ್ಚಿನ ಜನರು ಕೊಳ್ಳಲು ಇಷ್ಟಪಡುತ್ತಾರೆ. ಚಿನ್ನದ ನಾಣ್ಯ ಮತ್ತು ಆಯತಾಕಾರದ ಗಟ್ಟಿಗಳಿಗೆ ಕಡಿಮೆ ಬೇಡಿಕೆ ಇದೆ. ಕೇವಲ ಮೈಸೂರಿನಲ್ಲಿ ಮಾತ್ರವಲ್ಲ ಭಾರತದ ಎಲ್ಲಾ ನಗರಗಳಲ್ಲಿಯೂ ಇದೇ ವಿದ್ಯಮಾನವಿದೆ. ಆದರೆ ಇತರ ನಗರಗಳಿಗೆ ಹೋಲಿಸಿದರೆ ಆಭರಣಗಳ ಪ್ರಮಾಣ ಮೈಸೂರಿನಲ್ಲಿ ಶೇಖಡಾವಾರು ಹೆಚ್ಚು. ಈಗ ಚಿನ್ನವನ್ನು ನಿಜರೂಪದ ಬದಲಿಗೆ Gold ETF (exchange-traded fund) ಅಂದರೆ ಚಿನ್ನದ ತತ್ಸಮಾನ ರೂಪದ ದಾಖಲೆಗಳ ಮೂಲಕವೂ ಖರೀದಿಸಬಹುದು. (ನಮ್ಮ ಪ್ರಧಾನಮಂತ್ರಿಗಳ ಜನ್ ಧನ್ ಯೋಜನೆಯ the soverign gold bond scheme) ಸಹಾ ಇದೇ ವಿಧಾನವನ್ನು ಅನುಸರಿಸುತ್ತದೆ. ಇಂದು ಆನ್ಲೈನ್ ಮೂಲಕವೂ ಚಿನ್ನವನ್ನು ಖರೀದಿಸುವ ಅವಕಾಶವಿದೆ. ಆದರೆ ಆನ್ಲೈನ್ ನಲ್ಲಿ ಎಷ್ಟು ಮಟ್ಟಿಗೆ ಅಪ್ಪಟ ಚಿನ್ನ ದೊರಕುತ್ತದೆ ಎಂಬ ಖಾತರಿ ಇರದೇ ಇರುವ ಕಾರಣ ಆನ್ಲೈನ್ ಖರೀದಿ ಜಾಣತನವಲ್ಲ.ಮೈಸೂರಿನಲ್ಲಿ ಪ್ರಸ್ತುತ ಚಿನ್ನದ ಬೆಲೆಗಳು ಸ್ಥಿರವಾಗಿವೆ. ಇಂದಿನ ಬೆಲೆ ಇದು ಹೆಚ್ಚಾಗಿ ಚಿನ್ನದ ತೂಕವನ್ನು ಅಳೆಯುವ ಕ್ಯಾರೆಟ್ ಅನ್ನು ಅವಲಂಬಿಸಿರುತ್ತದೆ. ಅಂದರೆ ಚಿನ್ನದ ಅಪ್ಪಟತೆಯನ್ನು ಅಳೆಯುವ ಮಾನದಂಡದಿಂದ ಬೆಲೆಯೂ ಹೆಚ್ಚು ಕಡಿಮೆಯಾಗುತ್ತದೆ. ಅಪ್ಪಟ ಅಪರಂಜಿ 24 ಕ್ಯಾರೆಟ್ ಆಗಿದ್ದರೆ ಇದು ಗರಿಷ್ಟ ಬೆಲೆಯನ್ನು ಹೊಂದಿರುತ್ತದೆ. ಇದರಲ್ಲಿ ತಾಮ್ರದ ಅಂಶದ ಮಿಶ್ರಣದ ಮೇಲೆ 22, 21, 18ಕ್ಯಾರೆಟ್ ಹೀಗೆ ಇಳಿಯುತ್ತದೆ. ತಾಮ್ರ ಹೆಚ್ಚಿದ್ದಷ್ಟೂ ಕ್ಯಾರೆಟ್ ಕಡಿಮೆ. ಆ ಪ್ರಕಾರ ಹದಿನೆಂಟು ಕ್ಯಾರೆಟ್ ಚಿನ್ನದ ಬೆಲೆ ಅತಿ ಕಡಿಮೆ. ಈ ವರ್ಷದ ಭಾರತದ ಸರಾಸರಿಯಂತೆ ಬೇಡಿಕೆ 15% ಹೆಚ್ಚಿದೆ. ಇದೇ ಮೈಸೂರಿನಲ್ಲಿಯೂ ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಪರಿಗಣಿಸಿದಾಗ ಹಿಂದಿನ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂತಲೂ ಮೈಸೂರಿನಲ್ಲಿ ಬೆಲೆಗಳು ಹೆಚ್ಚು ಸ್ಥಿರವಾಗಿವೆ. ಹಿಂದೆ,22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂ ಗೆ ರೂ 27,300 ಇತ್ತು. ಹಾಗೂ 24ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂ ಗೆ 29,781 ರೂ ಇತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಪರಿಗಣಿಸಿದಾಗ ಇಂದು ಮೈಸೂರಿನಲ್ಲಿ ಬೆಲೆಗಳು 0.2 ಶೇಖಡಾ ಇಳಿದಿದೆ. ಅಂದರೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂ ಗೆ 27,250 ರೂ ಹಾಗೂ 24ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂ ಗೆ 29,727 ರೂ.ನಷ್ಟು ಕಡಿಮೆಯಾಗಿದೆ. ನಿನ್ನೆ ಹಾಗೂ ಇಂದಿನ ಬೆಲೆಗಳನ್ನು ಪರಿಗಣಿಸಿದರೆ ಮೈಸೂರಿನಲ್ಲಿ ಸುಮಾರು ಐವತ್ತು ರೂಗಳ ವ್ಯತ್ಸಾಸ ಕಂಡುಬರುತ್ತಿದೆ. ಆದ್ದರಿಂದ ಚಿನ್ನವನ್ನು ಹೂಡಿಕೆಯಾಗಿ ಪರಿಗಣಿಸಲು ಇದು ಸಕಾಲವಾಗಿದೆ. ಪ್ರಸ್ತುತ ಚಿನ್ನದ ಬೆಲೆ ಮೈಸೂರಿನಲ್ಲಿ 22ಕ್ಯಾರೆಟ್ ಪ್ರತಿ ಗ್ರಾಂ ಗೆ 27,250 ರೂ ಹಾಗೂ 24ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂ ಗೆ 29,727 ರೂ ಇದೆ. (ನವೆಂಬರ್ ೩, ೨೦೧೭)
ಟಿಪ್ಪಣಿ: ಸ್ಥಳೀಯ ಚಿನ್ನದ ಆಭರಣ ಮಳಿಗೆಗಳ ದರದ ಆಧಾರಲ್ಲಿ ಚಿನ್ನದ ಬೆಲೆಯನ್ನು ನೀಡಲಾಗಿದೆ. ಗ್ರೇನಿಯಂ ಇನ್ ಫಾರ್ ಮೇಶನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಈ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ. ಇದು ಕೇಚಲ ಮಾಹಿತಿಗೋಸ್ಕರ ನೀಡಿದ ದರ ಎಂಬುದನ್ನು ಗಮನಿಸಬೇಕು, ಮಾಹಿತಿಯನ್ನು ಓದಿ ಚಿನ್ನ ಖರೀದಿಸಿ ಎಂದು ಒತ್ತಾಯ ಅಥವಾ ವಿನಂತಿ ಮಾಡಲಾಗುತ್ತಿಲ್ಲ. ಚಿನ್ನ ಖರೀದಿ ಮಾಡಿ ಯಾವುದೇ ರೀತಿಯ ನಷ್ಟ ಮಾಡಿಕೊಂಡರೆ ನಾವು ಜವಾಬ್ದಾರರಾಗಿರುವುದಿಲ್ಲ.