For Quick Alerts
ALLOW NOTIFICATIONS  
For Daily Alerts

ECLGS ಅಡಿಯಲ್ಲಿ MSMEಗಳಿಗೆ 1 ಲಕ್ಷ ಕೋಟಿಗೂ ಹೆಚ್ಚು ಸಾಲ ವಿತರಣೆ

|

ಕೇಂದ್ರ ಸರ್ಕಾರದ ಸಹಕಾರ ಇರುವ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಅಡಿಯಲ್ಲಿ 1 ಲಕ್ಷ ಕೋಟಿ ರುಪಾಯಿಗೂ ಅಧಿಕ ಮೊತ್ತದ ಸಾಲವನ್ನು ವಿತರಿಸಲಾಗಿದೆ. ಇದು ಮಂಗಳವಾರ (ಆಗಸ್ಟ್ 18, 2020) ತನಕದ ಮಾಹಿತಿ ಎಂದು ವಿತ್ತ ಸಚಿವಾಲಯದ ಅಂಕಿ- ಅಂಶ ತಿಳಿಸಿದೆ.

 

ಸಾರ್ವಜನಿಕ ವಲಯದ ಬ್ಯಾಂಕ್ ಗಳು (PSBs) 56,483 ಕೋಟಿ ರುಪಾಯಿ ಹಾಗೂ ಖಾಸಗಿ ಬ್ಯಾಂಕ್ ಗಳು 45,762 ಕೋಟಿ ಸೇರಿ, ಒಟ್ಟು 1.02 ಲಕ್ಷ ಕೋಟಿ ರುಪಾಯಿಯನ್ನು ವಿತರಿಸಿವೆ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಒಟ್ಟು 23.4 ಲಕ್ಷ ಖಾತೆಗಳಿಗೆ ಹಣ ವಿತರಿಸಿದ್ದು, ಅದರಲ್ಲಿ ಸಾರ್ವಜನಿಕ ವಲಯದಲ್ಲಿನ ಖಾತೆಗಳ ಸಂಖ್ಯೆಯೇ 20.3 ಲಕ್ಷ ಇದೆ.

ಕೊರೊನಾ ಹೊಡೆತಕ್ಕೆ ಎಂಎಸ್‌ಎಂಇಗಳಲ್ಲಿ ಆದ ಉದ್ಯೋಗ ನಷ್ಟ ಎಷ್ಟು ಗೊತ್ತಾ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 17,095 ಕೋಟಿ ರು., ಪಂಜಾಬ್ ನ್ಯಾಷನಲ್ ಬ್ಯಾಂಕ್ 7,197 ಕೋಟಿ, ಕೆನರಾ ಬ್ಯಾಂಕ್ 6556 ಕೋಟಿ ರುಪಾಯಿ ವಿತರಿಸಿದೆ. ಇನ್ನು ಖಾತೆಗಳ ಲೆಕ್ಕದಲ್ಲಿ ಹೇಳಬೇಕೆಂದರೆ, ಎಸ್ ಬಿಐ 2.99 ಲಕ್ಷ, ಪಂಜಾಬ್ ನ್ಯಾಷನಲ್ ಬ್ಯಾಂಕ್ 1.73 ಲಕ್ಷ ಹಾಗೂ ಕೆನರಾ ಬ್ಯಾಂಕ್ ನಿಂದ 3.84 ಲಕ್ಷ ಖಾತೆಗೆ ಹಣ ವಿತರಿಸಲಾಗುತ್ತಿದೆ.

ECLGS ಅಡಿಯಲ್ಲಿ MSMEಗಳಿಗೆ 1 ಲಕ್ಷ ಕೋಟಿಗೂ ಹೆಚ್ಚು ಸಾಲ ವಿತರಣೆ

ಕೇಂದ್ರ ಹಣಕಾಸು ಸಚಿವಾಲಯವು ರಾಜ್ಯವಾರು ಲೆಕ್ಕಾಚಾರವನ್ನೂ ಮುಂದಿಡಲಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು, ಅಂದರೆ 1.66 ಲಕ್ಷ ಖಾತೆಗೆ 6,007 ಕೋಟಿ ತಲುಪಿಸಲಾಗಿದೆ. ಆ ನಂತರ ತಮಿಳುನಾಡಿನಲ್ಲಿ 2.26 ಲಕ್ಷ ಖಾತೆಗೆ 5694 ಕೋಟಿ, ಉತ್ತರಪ್ರದೇಶದಲ್ಲಿ 2.28 ಲಕ್ಷ ಖಾತೆಗೆ 5554 ಕೋಟಿ ರುಪಾಯಿ ವಿತರಿಸಲಾಗಿದೆ.

English summary

Banks Disbursed More Than 1 Lakh Crore Under ECLGS

Under government backed ECLGS over 1 lakh crore disbursed by banks to MSME's. Here is the details.
Story first published: Thursday, August 20, 2020, 16:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X