ಎಂಎಸ್ ಎಂಇಗಳಿಗೆ ತುರ್ತು ಸಾಲ ಯೋಜನೆ ಅವಧಿ ಒಂದು ತಿಂಗಳು ವಿಸ್ತರಣೆ

ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಅನ್ನು ಒಂದು ತಿಂಗಳು ವಿಸ್ತರಣೆ ಮಾಡಿರುವುದಾಗಿ, ಅಂದರೆ ನವೆಂಬರ್ 30, 2020 ಅಥವಾ 3 ಲಕ್ಷ ಕೋಟಿ ಪೂರ್ತಿ ವೆಚ್ಚ ಯಾವಾಗ ಆಗುತ್ತದೋ ಆ ಎರಡರಲ್ಲಿ ಯಾವುದು ಮೊದಲಿಗೆ ಆಗುತ್ತದೋ ಅಲ್ಲಿಯ ತನಕ ಅವಧಿ ವಿಸ್ತರಣೆ ಮಾಡಿರುವುದಾಗಿ ಕೇಂದ್ರ ಹಣಕಾಸು ಸಚಿವಾಲಯವು ಹೇಳಿದೆ.

ಆರ್ಥಿಕತೆಯ ವಿವಿಧ ವಲಯಗಳು ಮತ್ತೆ ಆರಂಭವಾಗಲು ಹಾಗೂ ಈಗಿನ ಹಬ್ಬದ ಸೀಸನ್ ನಲ್ಲಿ ಬೇಡಿಕೆ ಹೆಚ್ಚಲು ಇದರಿಂದ ಸಹಾಯ ಆಗುತ್ತದೆ. ಈಗಿನ ಕಾಲಾವಧಿ ವಿಸ್ತರಣೆಯಿಂದ ಇಂಥ ಸಾಲದ ನಿರೀಕ್ಷೆಯಲ್ಲಿ ಇರುವವರಿಗೆ ಅನುಕೂಲ ಒದಗಿಸುತ್ತದೆ. ಈ ತನಕ ಸಾಲ ಸೌಲಭ್ಯ ಪಡೆಯದಿದ್ದವರು ಲಾಭ ಪಡೆಯಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಅಡಿಯಲ್ಲಿ ಕಳೆದ ಮೇ ತಿಂಗಳಲ್ಲಿ ಹಣಕಾಸು ಸಚಿವಾಲಯವು ECLGS ಘೋಷಣೆ ಮಾಡಿತು. ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಂಸ್ಥೆಗಳಿಗೆ ಸರ್ಕಾರವೇ ಖಾತ್ರಿಯಾಗಿ ನಿಂತು, ಯಾವುದೇ ಅಡಮಾನ ಪಡೆಯದೆ ನೀಡುವ ಸಾಲ ಯೋಜನೆ ಇದಾಗಿದೆ. ಇದರ ಜತೆಗೆ ಇತರ ಸಾಲ ಯೋಜನೆ ಫಲಾನುಭವಿಗಳಿಗೂ ಆನ್ವಯ ಆಗುತ್ತಿತ್ತು.

ಎಂಎಸ್ ಎಂಇಗಳಿಗೆ ತುರ್ತು ಸಾಲ ಯೋಜನೆ ಅವಧಿ ಒಂದು ತಿಂಗಳು ವಿಸ್ತರಣೆ

ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಗಳಿಂದ ಸಾಲ ಪಡೆಯುವವರಿಗೆ ಗರಿಷ್ಠ ಬಡ್ಡಿ ದರ 9.25 ಪರ್ಸೆಂಟ್ ಹಾಗೂ NBFCಗಳಿಂದ ಆದಲ್ಲಿ 14 ಪರ್ಸೆಂಟ್ ಎಂದು ನಿಗದಿ ಮಾಡಲಾಗಿದೆ. ಇನ್ನು ಸಾಲ ಮರುಪಾವತಿ ಅವಧಿ ನಾಲ್ಕು ವರ್ಷಗಳು. ಅದರಲ್ಲಿ ಅಸಲು ಮರುಪಾವತಿ ವಿನಾಯಿತಿ ಒಂದು ವರ್ಷದ ಅವಧಿ ಒಳಗೊಂಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+