ಕನ್ನಡ ರಾಜ್ಯೋತ್ಸವ: ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯಕ ಬೆಂಗಳೂರಿನ ಟಾಪ್ 10 ಸ್ಟಾರ್ಟ್‌ಅಪ್ಸ್‌

ದೇಶದ ಆರ್ಥಿಕ ಬೆಳವಣಿಗೆಗೆ ಪ್ರಮುಖವಾಗಿ ಕರ್ನಾಟಕದ ಅದರಲ್ಲೂ ಬೆಂಗಳೂರಿನ ಹಲವಾರು ಸ್ಟಾರ್ಟ್‌ಅಪ್‌ಗಳು ಸಹಾಯಕವಾಗಿದೆ. ಈ ಕನ್ನಡ ರಾಜ್ಯೋತ್ಸವ ದಿನದಂದು ನಾವು ಇಲ್ಲಿ ನಮ್ಮ ದೇಶದ ಆರ್ಥಿಕತೆ ಬೆಳವಣಿಗೆ ಸಹಕಾರಿಯಾದ ಸ್ಟಾರ್ಟ್‌ಅಪ್‌ಗಳ ಬಗ್ಗೆ ವಿವರಣೆ ನೀಡಿದ್ದೇವೆ.

ಬೆಂಗಳೂರು ಭಾರತದ ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧವಾಗಿದೆ. ದೇಶದ ಆರ್ಥಿಕತೆಗೆ ನಮ್ಮ ಕರುನಾಡಿನ ಪಾಲು ಅದರಲ್ಲೂ ಬೆಂಗಳೂರಿನ ಪಾಲು ಅಧಿಕ. ಹಾಗೆಯೇ ಅತೀ ವೇಗವಾಗಿ ಬೆಳೆಯುತ್ತಿರುವ ದೇಶದ ಪ್ರಮುಖ ಮೆಟ್ರೋ ನಗರವಾಗಿದೆ. ಬೆಂಗಳೂರನ್ನು ಜಾಗತಿಕ ಸ್ಟಾರ್ಟ್‌ಅಪ್ ಹಬ್ ಎಂದೇ ಕರೆಯಬಹುದು.

ಬೆಂಗಳೂರಿನ ಟಾಪ್ 10 ಸ್ಟಾರ್ಟ್‌ಅಪ್‌ಗಳ ಬಗ್ಗೆ ತಿಳಿಯೋಣ ಮುಂದೆ ಓದಿ....

 ಟಾಪ್ 1: ರ‍್ಯಾಪಿಡೋ

ಟಾಪ್ 1: ರ‍್ಯಾಪಿಡೋ

ರ‍್ಯಾಪಿಡೋ ಅನ್ನು 2015 ರಲ್ಲಿ ಅರವಿಂದ್ ಸಂಕ ಪ್ರಾರಂಭಿಸಿದರು. ರ‍್ಯಾಪಿಡೋ ಎಂಬುದು ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಆಗಿದೆ. ರ‍್ಯಾಪಿಡೋ ಭಾರತದ ಬೈಕ್ ಟ್ಯಾಕ್ಸಿ ಕ್ಷೇತ್ರದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಹಿಂದೆ ರಾಜ್ಯ ಸರ್ಕಾರಗಳು ಈ ರೀತಿಯ ಪರಿಕಲ್ಪನೆಗೆ ಹೆಚ್ಚಿನ ಸಹಕಾರ ನೀಡಿರಲಿಲ್ಲ. ಆದರೆ 2017 ರಲ್ಲಿ, ಕೇಂದ್ರ ಸರ್ಕಾರವು ಬೈಕ್-ಟ್ಯಾಕ್ಸಿಗಳನ್ನು ಕಾನೂನುಬದ್ಧಗೊಳಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿತು. ರ‍್ಯಾಪಿಡೋ ಇತರೆ ಟ್ಯಾಕ್ಸಿ-ಬುಕಿಂಗ್ ಅಪ್ಲಿಕೇಶನ್‌ನಂತೆ ಕಾರ್ಯನಿರ್ವಹಿಸುತ್ತದೆ. ಸೇವೆಯನ್ನು ಪಡೆಯಲು ಆಪ್‌ಗೆ ಸೈನ್‌ ಅಪ್ ಆಗಿ, ಸ್ಥಳ ನಮೂದಿಸಬೇಕು. ಇದು ಪ್ರಸ್ತುತ 100ಕ್ಕೂ ಅಧಿಕ ಸ್ಥಳದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಈ ಸಂಸ್ಥೆಯ ಮೌಲ್ಯ 830 ಮಿಲಿಯನ್ ಡಾಲರ್ ಆಗಿದೆ. ಸ್ವಿಗ್ಗಿ, ಟಿವಿಎಸ್ ಮೋಟಾರ್ ಕಂಪನಿ ಮತ್ತು ನೆಕ್ಸಸ್ ವೆಂಚರ್ಸ್ ಸೇರಿದಂತೆ ಒಟ್ಟು 37 ಹೂಡಿಕೆದಾರರನ್ನು ಈ ಸಂಸ್ಥೆ ಹೊಂದಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸುರಕ್ಷಿತವಾಗಿ ಪ್ರಯಾಣ ಮಾಡಲು ಸಹಾಯ ಮಾಡುವುದೇ ಈ ಸಂಸ್ಥೆಯ ಉದ್ದೇಶವಾಗಿದೆ.

 ಟಾಪ್ 2:  ಹ್ಯಾಕರ್ ಅರ್ಥ್

ಟಾಪ್ 2: ಹ್ಯಾಕರ್ ಅರ್ಥ್

ಹ್ಯಾಕರ್ ಅರ್ಥ್ ಅನ್ನು 2012 ರಲ್ಲಿ ಸಚಿನ್ ಗುಪ್ತಾ ಮತ್ತು ವಿವೇಕ್ ಪ್ರಕಾಶ್ ಸ್ಥಾಪಿಸಿದರು. ಹ್ಯಾಕರ್ ಅರ್ಥ್ ಬೆಂಗಳೂರು ಮೂಲದ ಉತ್ಪನ್ನ ಕಂಪನಿಯಾಗಿದ್ದು, ಇದು ನೇಮಕಾತಿಗೆ ಸಹಾಯ ಮಾಡುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ಒಂದು ಕೆಲಸಕ್ಕೆ ಸರಿಯಾದ ಅಭ್ಯರ್ಥಿಯನ್ನು ತ್ವರಿತವಾಗಿ ಪಡೆಯಲು ಬೇರೆ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ. ಈ ಸಂಸ್ಥೆಯು ಎರಡು ರೀತಿಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತದೆ. ಆನ್‌ಲೈನ್ ಪ್ರೋಗ್ರಾಮಿಂಗ್ ಚಾಲೆಂಜಿಗ್ ಬಳಸಿಕೊಂಡು ಅಭ್ಯರ್ಥಿಯ ಶ್ರೇಯಾಂಕವನ್ನು ಗುರುತು ಮಾಡಲಾಗುತ್ತದೆ. ಇದರ ಒಟ್ಟು ಮೌಲ್ಯ 11.5 ಮಿಲಿಯನ್ ಡಾಲರ್ ಆಗಿದೆ. ಈ ಸಂಸ್ಥೆಯ ಪ್ರಮುಖ ಹೂಡಿಕೆದಾರರು BEENEXT ಮತ್ತು BizReach ಆಗಿದೆ.

 ಟಾಪ್ 3: ಡೈಲಿ ನಿಂಜಾ

ಟಾಪ್ 3: ಡೈಲಿ ನಿಂಜಾ

ಡೈಲಿ ನಿಂಜಾವನ್ನು 2015 ರಲ್ಲಿ ಅನುರಾಗ್ ಗುಪ್ತಾ, ಸಾಗರ್ ಯರ್‌ನಾಲ್ಕರ್ ಸ್ಥಾಪಿಸಿದರು. ಡೈಲಿ ನಿಂಜಾ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾಗಿದೆ. ಹಾಲು, ತರಕಾರಿ, ಹಣ್ಣು, ಮೊಟ್ಟೆ, ಬ್ರೆಡ್ ಮೊದಲಾದವುಗಳನ್ನು ಡೆಲವರಿ ಮಾಡುವ ಸಂಸ್ಥೆ ಇದಾಗಿದೆ. ಡೈಲಿ ನಿಂಜಾ ಈ ಸರಕುಗಳನ್ನು ಬೆಳಗ್ಗೆ 7 ಗಂಟೆಗೆ ಮೊದಲು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತದೆ. ಬೆಳಗ್ಗೆಯೇ ಅಗತ್ಯ ವಸ್ತುಗಳು ದೊರಕಿದರೆ ಮನೆಯ ಎಲ್ಲ ಕೆಲಸವನ್ನು ಸರಾಗವಾಗಿ ಮಾಡಲು ಸಾಧ್ಯ ಎಂಬುವುದು ಈ ಸಂಸ್ಥೆಯ ಉದ್ದೇಶವಾಗಿದೆ. ಇದರ ಮೌಲ್ಯ 14.2 ಮಿಲಿಯನ್ ಡಾಲರ್ ಆಗಿದೆ. ಇದು ಒಟ್ಟು 14 ಹೂಡಿಕೆದಾರರನ್ನು ಹೊಂದಿದೆ. ಈ ಆಪ್‌ ಮೂಲಕ ಮಾಸಿಕ ಖರ್ಚಿನ ಲೆಕ್ಕಾಚಾರವನ್ನು ಕೂಡಾ ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ.

 ಟಾಪ್ 4: ಡ್ರೈವ್‌ಯು

ಟಾಪ್ 4: ಡ್ರೈವ್‌ಯು

2015ರಲ್ಲಿ ಅಮುಲ್‌ಮೀತ್ ಚಡ್ಡಾ, ಅಶೋಕ್ ಶಾಸ್ತ್ರಿ, ರಹಮ್ ಶಾಸ್ತ್ರಿ ಸ್ಥಾಪಿಸಿದ ಡ್ರೈವ್‌ಯು, ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಆಗಿದೆ. ನೀವು ಶಾಪಿಂಗ್‌ಗೆ ಹೋಗಬೇಕಾದರೆ, ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಅಥವಾ ಮನೆಗೆ ಕರೆತರಲು, ಚಾಲಕರನ್ನು ಒದಗಿಸುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಅಗತ್ಯಗಳಿಗಾಗಿ ಚಾಲಕರನ್ನು ಪಡೆಯಲು ಇದು ಸಹಾಯಕವಾಗಿದೆ.

ಬೆಂಗಳೂರಿನಾದ್ಯಂತ ಡ್ರೈವ್‌ಯು ಚಾಲಕರು ಗ್ರಾಹಕರನ್ನು ಸುರಕ್ಷಿತವಾಗಿ ಮತ್ತು ಸರಾಗವಾಗಿ ಅವರು ಬಯಸಿದ ಸ್ಥಳಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಯ ಮೌಲ್ಯ 5 ಮಿಲಿಯನ್ ಡಾಲರ್ ಆಗಿದ್ದು ಒಟ್ಟು 10 ಹೂಡಿಕೆದಾರರನ್ನು ಸಂಸ್ಥೆ ಹೊಂದಿದೆ. ಡ್ರೈವರ್‌ಗಳಿಗೆ ಡ್ರೈವಿಂಗ್ ಪರೀಕ್ಷೆಯನ್ನು ಮಾಡಿ ಬಳಿಕ ಸಂಸ್ಥೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಸಂಸ್ಥೆ ಭರವಸೆ ನೀಡಿದೆ. ಚಾಲಕರ ಹಿನ್ನೆಲೆಯನ್ನು ಕೂಡಾ ಪರಿಶೀಲನೆ ಮಾಡುತ್ತದೆ. ಅಪ್ಲಿಕೇಶನ್ ಅನ್ನು ಬಳಸಿಕೊಂಡು ಗ್ರಾಹಕರು ಡ್ರೈವರ್‌ಗಳಿಗಾಗಿ ಕರೆ ಮಾಡಬಹುದು.
 ಟಾಪ್ 5: ಸ್ಕಿಲ್ಲೆನ್ಜಾ

ಟಾಪ್ 5: ಸ್ಕಿಲ್ಲೆನ್ಜಾ

ಸ್ಕಿಲ್ಲೆನ್ಜಾ ಎಂಬುದು ಬೆಂಗಳೂರಿನ ಸ್ಟಾರ್ಟ್‌ಅಪ್ ಆಗಿದ್ದು, ನಮ್ಮ ಕೌಶಲ್ಯವನ್ನು ಹೆಚ್ಚಿಸಲು ನಮಗೆ ಸಹಾಯ ಮಾಡುವ ಆನ್‌ಲೈನ್ ವೇದಿಕೆಯಾಗಿದೆ. ಇದನ್ನು 2012 ರಲ್ಲಿ ರಾಜೇಶ್ ರೈ ಮತ್ತು ಸುಭೇಂದು ಪಾಣಿಗ್ರಾಹಿ ಅಭಿವೃದ್ಧಿಪಡಿಸಿದ್ದಾರೆ. ಪ್ರಪಂಚದಾದ್ಯಂತ ಕಲಿಕೆಯ ಕೌಶಲ್ಯಗಳನ್ನು ಹೆಚ್ಚಿಸಲು ಹೆಚ್ಚಿಸಲು ಹೊಸ-ಯುಗದ ಆನ್‌ಲೈನ್ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸುವುದು ಸ್ಟಾರ್ಟ್‌ಅಪ್‌ನ ಗುರಿಯಾಗಿದೆ. ವೇದಿಕೆಯು ವಿವಿಧ ಸ್ಪರ್ಧೆಗಳಲ್ಲಿ ನಿಮಗೆ ಭಾಗಿಯಾಗಲು ಅವಕಾಶ ನೀಡುತ್ತದೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ. Skillenza ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಮಾರ್ಗದರ್ಶನದ ವೀಡಿಯೊಗಳ ಸಹಾಯದಿಂದ ಸಮಸ್ಯೆಗಳನ್ನು ಬಗೆಹರಿಸುವ ಸಹಾಯ ಮಾಡುತ್ತದೆ. ಹಾಗೆಯೇ ಹಣ ಗಳಿಕೆಗೂ ಸಹಾಯ ಮಾಡುತ್ತದೆ. ಇದರ ಮೌಲ್ಯವು 2 ಮಿಲಿಯನ್ ಡಾಲರ್ ಆಗಿದೆ. ಒಟ್ಟು 21 ಹೂಡಿಕೆದಾರರನ್ನು ಈ ಸಂಸ್ಥೆ ಹೊಂದಿದೆ.

 ಟಾಪ್ 6: ಮೀಶೋ

ಟಾಪ್ 6: ಮೀಶೋ

ಅತೀ ಹೆಚ್ಚು ಆಫರ್‌ಗಳನ್ನು ನೀಡುವ ಮೂಲಕ ಮೀಶೋ ಪ್ರಸ್ತುತ ಹೆಚ್ಚು ಟ್ರೆಂಡಿಂಗ್‌ನಲ್ಲಿದೆ. ಇದನ್ನು 2015 ರಲ್ಲಿ ಸಂಜೀವ್ ಬರ್ನ್ವಾಲ್, ವಿದಿತ್ ಆತ್ರೆ ಸ್ಥಾಪಿಸಿದರು. ಮೀಶೋ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಆಗಿದೆ. ಇದು ಆನ್‌ಲೈನ್ ವೇದಿಕೆಯಾಗಿದೆ. ಇದು ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ನಡೆಸುವ ಹಾಗೂ ಆನ್‌ಲೈನ್ ಸೇಲಿಂಗ್ ವ್ಯಾಪಾರವನ್ನು ನಡೆಸುವ ಗೃಹಿಣಿಯರಿಗೆ ಅತೀ ಸಹಾಯಕವಾಗಿದೆ. ಹಾಗೆಯೇ ಪ್ರಸ್ತುತ ಹಲವಾರು ಮಂದಿ ಮೀಶೋನಿಂದಲೇ ಬಟ್ಟೆ, ಇತರೆ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಈ ಸಂಸ್ಥೆಯ ಒಟ್ಟು ಮೌಲ್ಯವು 1.1 ಬಿಲಿಯನ್ ಡಾಲರ್ ಆಗಿದೆ. ಮೆಟಾ, ಸಾಫ್ಟ್‌ಬ್ಯಾಂಕ್ ವಿಷನ್ ಫಂಡ್ ಮೊದಲಾದ 35 ಪ್ರಮುಖ ಹೂಡಿಕೆದಾರರನ್ನು ಹೊಂದಿದೆ. ಇನ್ನು ಹಲವಾರು ಮಂದಿ ಗೃಹಿಣಿಯರು ಈ ಆಪ್‌ ಮೂಲಕ ಬಟ್ಟೆಯನ್ನು ತರಿಸಿಕೊಂಡು ಅದನ್ನು ತಮ್ಮ ಆನ್‌ಲೈನ್ ವೇದಿಕೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಖರೀದಿ ಮಾಡಿದ ವಸ್ತುವನ್ನು ಜನರು ವಾಟ್ಸಾಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮದಲ್ಲಿ ಮಾರಾಟ ಮಾಡುತ್ತಿದ್ದಾರೆ. ಮೀಶೋ ಪ್ರಸ್ತುತ ಭಾರತದ 150 ಕ್ಕೂ ಹೆಚ್ಚು ನಗರಗಳಲ್ಲಿ ನೆಟ್‌ವರ್ಕ್ ಹೊಂದಿದೆ. ಇದಲ್ಲದೆ ವೇದಿಕೆಯು ಗೃಹಿಣಿಯರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತದೆ.

 ಟಾಪ್ 7: ಝೋಲೋ

ಟಾಪ್ 7: ಝೋಲೋ

ಝೋಲೋ ಅನ್ನು 2015ರಲ್ಲಿ ಅಖಿಲ್ ಸಿಕ್ರಿ, ಇಶಾ ಚೌಧರಿ, ನಿಖಿಲ್ ಸಿಕ್ರಿ, ಸ್ನೇಹ ಚೌಧರಿ ಸ್ಥಾಪಿಸಿದರು. co-living ಸ್ಥಳವನ್ನು ಒದಗಿಸುವ ಆಪ್ ಇದಾಗಗಿದೆ. Zolo ರಾಷ್ಟ್ರದಾದ್ಯಂತ ಈ ಸೇವೆಯನ್ನು ಒದಗಿಸುವ ಅತಿದೊಡ್ಡ ಕಂಪನಿಯಾಗಿದೆ. ಹೆಚ್ಚಿನ ಮೊತ್ತವನ್ನು ಪಾವತಿಸದೆ ಬಾಡಿಗೆಗೆ ಉತ್ತಮ ಸ್ಥಳಗಳನ್ನು ಹುಡುಕುತ್ತಿರುವ ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರಿಗೆ ಸಹಾಯಕವಾಗಲೆಂದು ಈ ಆಪ್‌ ಅನ್ನು ಪರಿಚಯಿಸಲಾಗಿದೆ. ಬಾಡಿಗೆಗೆ ಮನೆಯನ್ನು ಹುಡುಕುತ್ತಿರುವ ಜನರಿಗೆ ಇದು ಉತ್ತಮ ಆಪ್ ಆಗಿದೆ. ಈ ಸಂಸ್ಥೆಯ ಮೌಲ್ಯ 98 ಮಿಲಿಯನ್ ಡಾಲರ್ ಆಗಿದೆ. ಪ್ರಸ್ತುತ ಪುಣೆ, ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ ಎನ್‌ಸಿಆರ್, ಮತ್ತು ಕೋಟಾದಂತಹ ಮೆಟ್ರೋ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಒಟ್ಟು 7 ಹೂಡಿಕೆದಾರರನ್ನು ಹೊಂದಿದ್ದು ಇದರಲ್ಲಿ ಐಡಿಎಫ್‌ಸಿ ಕೂಡಾ ಸೇರಿದೆ.

 ಟಾಪ್ 8: ಬ್ಲೋಹಾರ್ನ್

ಟಾಪ್ 8: ಬ್ಲೋಹಾರ್ನ್

ಬ್ಲೋಹಾರ್ನ್ ಆನ್‌ಲೈನ್ ಪ್ಲಾಟ್‌ಫಾರ್ಮ್ ವಾಣಿಜ್ಯ ಕೇಂದ್ರವಾಗಿದೆ. ಇದನ್ನು 2013 ರಲ್ಲಿ ನಿಖಿಲ್ ಶಿವಪ್ರಸಾದ್, ಮಿಥುನ್ ಶ್ರೀವತ್ಸ ಆರಂಭ ಮಾಡಿದ್ದಾರೆ. ಗ್ರಾಹಕರಿಗೆ ಸರಕುಗಳನ್ನು ತ್ವರಿತವಾಗಿ ವಿತರಿಸಲು ಸಹಾಯಕವಾಗಿದೆ. ಮಿನಿ-ಟ್ರಕ್‌ಗಳ ಮಾಲೀಕರೊಂದಿಗೆ ಕ್ಲೈಂಟ್‌ಗಳನ್ನು ಸಂಪರ್ಕಿಸುವ ಮೂಲಕ ಸೇವೆಯನ್ನು ಒದಗಿಸಲಾಗುತ್ತದೆ. ಕಾರ್ಯವನ್ನು ತ್ವರಿತವಾಗಿ ನಿರ್ವಹಣೆ ಮಾಡಲಾಗುತ್ತದೆ. ಮಿನಿ-ಟ್ರಕ್‌ಗಳು ಮತ್ತು ಅದರ ಚಾಲಕರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಈ ಆಪ್ ಅನ್ನು ಆರಂಭ ಮಾಡಲಾಗಿದೆ. ಮಿನಿ ಟ್ರಕ್‌ಗಳು ಬೇಕಾದಾಗ ಜನರು ಅದರ ವ್ಯವಸ್ಥೆ ಮಾಡುವುದು ಅತೀ ಕಷ್ಟವಾದ ಸಂಗತಿಯಾಗಿದ್ದಾಗ ಅದಕ್ಕೆ ಪರಿಹಾರ ಒದಗಿಸಿದ ಬ್ಲೋಹಾರ್ನ್ ಬೆಂಗಳೂರಿನ ಅತ್ಯುತ್ತಮ ಸ್ಟಾರ್ಟ್‌ಅಪ್‌ ಆಗಿದೆ. ಇದರ ಒಟ್ಟು ಮೌಲ್ಯ 8.8 ಮಿಲಿಯನ್ ಡಾಲರ್ ಆಗಿದೆ. ಈ ಸಂಸ್ಥೆಯಲ್ಲಿ ಒಟ್ಟು 12 ಹೂಡಿಕೆದಾರರು ಇದ್ದಾರೆ.

 ಟಾಪ್ 9: ಕ್ಲಿಯರ್ ಟ್ಯಾಕ್ಸ್

ಟಾಪ್ 9: ಕ್ಲಿಯರ್ ಟ್ಯಾಕ್ಸ್

ಕ್ಲಿಯರ್ ಟ್ಯಾಕ್ಸ್ ಅನ್ನು ಅಂಕಿತ್ ಸೋಲಂಕಿ, ಅರ್ಚಿತ್ ಗುಪ್ತಾ, ಶ್ರೀವತ್ಸನ್ ಚಾರಿ 2011 ರಲ್ಲಿ ಸ್ಥಾಪಿಸಿದರು. ಈ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಜನರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ತ್ವರಿತವಾಗಿ ಮತ್ತು ಅತ್ಯಂತ ಅನುಕೂಲಕರವಾಗಿ ದಾಖಲಿಸಲು ಸಹಾಯ ಮಾಡುತ್ತದೆ. ಹಾಗೆಯೇ ಯಾವೆಲ್ಲ ಮೂಲಗಳಿಂದ ತೆರಿಗೆ ವಿನಾಯಿತಿ ಪಡೆಯಬಹುದು ಎಂದು ಕೂಡಾ ನೋಡುತ್ತದೆ. ತೆರಿಗೆ ವಿನಾಯಿತಿಗಳನ್ನು ಗರಿಷ್ಠಗೊಳಿಸಲು ಸಹಾಯ ಮಾಡುತ್ತದೆ. ಈ ಸಂಸ್ಥೆಯ ಮೌಲ್ಯ 140.2 ಮಿಲಿಯನ್ ಡಾಲರ್ ಆಗಿದೆ. ಸುರೋಜಿತ್ ಚಟರ್ಜಿ, ಬಾಲಾಜಿ ಶ್ರೀನಿವಾಸನ್ ಮತ್ತು ಅಪರ್ಣಾ ಚೆನ್ನಪ್ರಗಡ ಸೇರಿದಂತೆ 21 ಹೂಡಿಕೆದಾರರನ್ನು ಈ ಸಂಸ್ಥೆ ಹೊಂದಿದೆ. ಜನರಿಗೆ ಐಟಿಆರ್ ಫೈಲ್ ಮಾಡಲು ತೊಂದರೆ, ಗೊಂದಲ ಉಂಟಾದಾಗ ಈ ಆಪ್ ಸಹಾಯಕವಾಗಲಿದೆ. ಈ ಸಂಸ್ಥೆಯಲ್ಲಿ ತೆರಿಗೆ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಚಾರ್ಟರ್ಡ್ ಅಕೌಂಟೆಂಟ್‌ಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

 ಟಾಪ್ 10: ಬೈಹಟ್ಕೆ

ಟಾಪ್ 10: ಬೈಹಟ್ಕೆ

ಬೈಹಟ್ಕೆ ಬೆಂಗಳೂರಿನಲ್ಲಿ 2011 ರಲ್ಲಿ ಅಂಕಿತ್ ಸೋಲಂಕಿ, ಅರ್ಚಿತ್ ಗುಪ್ತಾ ಮತ್ತು ಶ್ರೀವತ್ಸನ್ ಚಾರಿ ಸ್ಥಾಪಿಸಿದ ಪ್ರಸಿದ್ಧ ಸ್ಟಾರ್ಟ್ಅಪ್ ಆಗಿದೆ. ಆನ್‌ಲೈನ್ ಖರೀದಿಗಾಗಿ ಈ ಸ್ಟಾರ್ಟ್ಅಪ್ ಸಹಾಯಕವಾಗಿದೆ. ಆನ್‌ಲೈನ್‌ನಲ್ಲಿ ಉತ್ಪನ್ನಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಇದು ಯಾವುದು ಉತ್ತಮ ಎಂದು ತಿಳಿಸುವ ಆಪ್ ಆಗಿದೆ. ಇದರ ಒಟ್ಟು ಮೌಲ್ಯ 1 ಮಿಲಿಯನ್ ಡಾಲರ್ ಆಗಿದೆ. 2 ಹೂಡಿಕೆದಾರರಾದ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಬೀನೋಸ್ ಈ ಸಂಸ್ಥೆಯಲ್ಲಿ ಪಾಲುದಾರಿಕೆಯನ್ನು ಹೊಂದಿದ್ದಾರೆ. 2.5 ಕೋಟಿಗೂ ಹೆಚ್ಚು ಉತ್ಪನ್ನಗಳನ್ನು ಜನರು ಇದರಲ್ಲಿ ಅನ್ವೇಷನ್ ಮಾಡಿದ್ದಾರೆ. ಇದು ಗ್ರಾಹಕರಿಗೆ ಉತ್ತಮ ವೆಚ್ಚಗಳು ಮತ್ತು ಕೊಡುಗೆಗಳನ್ನು ನೀಡುತ್ತದೆ ಎಂದು ತಿಳಿದುಬಂದಿದೆ. ಈ ಆಪ್ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ತಿಂಗಳಿಗೆ 30 ಲಕ್ಷಕ್ಕೂ ಹೆಚ್ಚು ವಿಸಿಟರ್‌ಗಳನ್ನು ಈ ಆಪ್ ಪಡೆಯುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+