For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್ ಪ್ರಭಾವ: ಎಂಎಸ್‌ಎಂಇ ಗಳ ಆದಾಯದಲ್ಲಿ ಶೇ 21 ಕುಸಿತ

|

ನವದೆಹಲಿ, ಜೂನ್ 16: ಲಾಕ್‌ಡೌನ್ ಪ್ರಭಾವದಿಂದಾಗಿ ದೇಶದ ಅರ್ಥವ್ಯವಸ್ಥೆ ಮೇಲೆ ಒಂದಾದರ ಮೇಲೊಂದು ಹೊಡೆತಗಳು ಬೀಳುತ್ತಿವೆ. ಒಟ್ಟು ದೇಶಿಯ ಉತ್ಪನ್ನ ಈ ವರ್ಷ ಶೇ 5 ರಷ್ಟು ತಗ್ಗಬಹುದು ಎಂದು ಹಲವು ರೇಟಿಂಗ್ ಏಜೆನ್ಸಿಗಳು ಈಗಾಗಲೇ ಊಹಿಸಿವೆ.

ಇದಿರಿಂದ ಭಾರತದ ಕಾರ್ಪೋರೇಟ್ ಆದಾಯದಲ್ಲಿ ಶೇ 15 ರಷ್ಟು ಕುಸಿತವಾಗಬಹುದು. ಇದು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಸ್ತಿತ್ವಕ್ಕೆ ಅಪಾಯವನ್ನುಂಟು ಮಾಡಬಹುದಾದ ಸಂಗತಿ ಎಂದು ಕ್ರಿಸಿಲ್ ರೇಟಿಂಗ್ ಏಜೆನ್ಸಿ ತಿಳಿಸಿದೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.

ಆದಾಗ್ಯೂ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮತ್ತು ಹಣಕಾಸು ಸಚಿವಾಲಯದ ಮಧ್ಯಸ್ಥಿಕೆಗಳು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅಲ್ಪ ಭರವಸೆಯನ್ನು ನೀಡುತ್ತವೆ. ಇದು ಸಣ್ಣ ಉದ್ಯಮಗಳಿಗೆ ನಿರ್ಣಾಯಕವಾಗಿದೆ ಎಂದು ವರದಿ ತಿಳಿಸಿದೆ.

ಶೇಕಡಾ 21 ರವರೆಗೆ ಆದಾಯದಲ್ಲಿ ತೀವ್ರ ಕುಸಿತ
 

ಶೇಕಡಾ 21 ರವರೆಗೆ ಆದಾಯದಲ್ಲಿ ತೀವ್ರ ಕುಸಿತ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ವಲಯವು ಶೇಕಡಾ 21 ರವರೆಗೆ ಆದಾಯದಲ್ಲಿ ತೀವ್ರ ಕುಸಿತವನ್ನು ಎದುರಿಸಬೇಕಾಗುತ್ತದೆ. ಅದರ ಕಾರ್ಯಾಚರಣೆಯ ಲಾಭಾಂಶವು ಶೇಕಡಾ 4-5ಕ್ಕೆ ಕುಸಿಯುತ್ತದೆ ಎಂದು ದೇಶೀಯ ರೇಟಿಂಗ್ ಸಂಸ್ಥೆ ಕ್ರಿಸಿಲ್ ಸಂಶೋಧನಾ ವಿಭಾಗ ತಿಳಿಸಿದೆ.

3 ಟ್ರಿಲಿಯನ್ ಆರ್ಥಿಕ ನೆರವು ಘೋಷಣೆ

3 ಟ್ರಿಲಿಯನ್ ಆರ್ಥಿಕ ನೆರವು ಘೋಷಣೆ

ಕೊರೊನಾವೈರಸ್ ಲಾಕ್‌ಡೌನ್ ಬಿಕ್ಕಟ್ಟಿನಿಂದಾಗಿ ಕೇಂದ್ರ ಸರ್ಕಾರ ಎಂಎಸ್‌ಎಂಇಗಳಿಗೆ 3 ಟ್ರಿಲಿಯನ್ ಆರ್ಥಿಕ ನೆರವು ಘೋಷಣೆ ಮಾಡಿದೆ. ಆದರೆ, ಎಂಎಸ್‌ಎಂಇಗಳು ಬಿಕ್ಕಟ್ಟನ್ನು ಎದುರಿಸುತ್ತಿವೆ. ಆದಾಯವು ಐದನೇ ಸ್ಥಾನಕ್ಕೆ ಇಳಿಯುತ್ತದೆ. ಕಾರ್ಯಾಚರಣಾ ಮಟ್ಟದಲ್ಲಿ ತೀವ್ರ ಕುಸಿತವು ಕ್ರೆಡಿಟ್ ಅರ್ಹತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಕ್ರಿಸಿಲ್ ಸಂಸ್ಥೆ ಹೇಳಿದೆ.

ಸಾಲದ ಶೇಕಡಾ 32 ರಷ್ಟನ್ನು ಹೊಂದಿರುವ ಎಂಎಸ್‌ಎಂಇ

ಸಾಲದ ಶೇಕಡಾ 32 ರಷ್ಟನ್ನು ಹೊಂದಿರುವ ಎಂಎಸ್‌ಎಂಇ

ಒಟ್ಟಾರೆ ಸಾಲದ ಶೇಕಡಾ 32 ರಷ್ಟನ್ನು ಹೊಂದಿರುವ ಎಂಎಸ್‌ಎಂಇ ವಿಭಾಗವು ಅತ್ಯಂತ ತೊಂದರೆ ಅನುಭವಿಸುತ್ತದೆ. ಆದಾಯದ ಬೆಳವಣಿಗೆ, ನಿರ್ವಹಣಾ ಲಾಭಾಂಶ ಮತ್ತು ಕಾರ್ಯನಿರತ ಬಂಡವಾಳದ ವಿಸ್ತರಣೆಯ ವಿಷಯದಲ್ಲಿ ಒತ್ತಡವನ್ನು ಎದುರಿಸುತ್ತಿದೆ ಎಂದು ಕ್ರಿಸಿಲ್ ಹೇಳಿದೆ.

ಬೇಡಿಕೆಯೇ ದೊಡ್ಡ ಕಾಳಜಿಯಾಗಿದೆ
 

ಬೇಡಿಕೆಯೇ ದೊಡ್ಡ ಕಾಳಜಿಯಾಗಿದೆ

ಆರ್‌ಬಿಐ ಮತ್ತು ಹಣಕಾಸು ಸಚಿವಾಲಯದ ಹಸ್ತಕ್ಷೇಪವು ಹಣದ ಹರಿವಿನ ಮೇಲೆ ಎಂಎಸ್‌ಎಂಇಗಳಗೆ ಸಹಾಯ ಮಾಡುತ್ತದೆ. ಈ ನಿರ್ಣಾಯಕ ವಲಯದ ಸುಧಾರಣೆಗೆ ಪುನರುಜ್ಜೀವನಗೊಳ್ಳಬೇಕಾದ ಬೇಡಿಕೆಯೇ ದೊಡ್ಡ ಕಾಳಜಿಯಾಗಿದೆ ಎಂದು ಕ್ರಿಸಿಲ್ ಹೇಳಿದೆ.

English summary

Lockdown Impact: MSMEs Revenues Fall 21%

Lockdown Impact: MSMEs Revenues Fall 21 Per Cent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more