For Quick Alerts
ALLOW NOTIFICATIONS  
For Daily Alerts

MSME ಸಾಲ ಯಾರಿಗೆ ಸಿಗಲಿದೆ? ಸರ್ಕಾರದ ನಿಯಮಗಳು ಗೊತ್ತೆ?

|

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಂಸ್ಥೆಗಳಾಗಿ (MSME) ನೋಂದಣಿ ಮಾಡಿಸಲು ಸಣ್ಣ- ಪುಟ್ಟ ವ್ಯಾಪಾರ ಸಂಸ್ಥೆಗಳು ಹಾಗೂ ಸ್ಟಾರ್ಟ್ ಅಪ್ ಗಳು ಸಾಲುಗಟ್ಟಿ ನಿಂತಿವೆ. ಆದರೆ ಈ ಪೈಕಿ ಬಹಳ ಸಂಸ್ಥೆಗಳಿಗೆ ಸರ್ಕಾರದ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ಅನುಕೂಲ ದೊರೆಯುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ತಿಂಗಳು ಕೇಂದ್ರ ಸರ್ಕಾರವು ಅಂದಾಜು 45 ಲಕ್ಷ ಎಂಎಸ್ ಎಂಇಗಳಿಗಾಗಿ 3 ಲಕ್ಷ ಕೋಟಿ ರುಪಾಯಿ ಮೌಲ್ಯದ ಸಾಲವನ್ನು ಘೋಷಣೆ ಮಾಡಿತ್ತು. ಕಳೆದ ವರ್ಷದಿಂದ ನಗದು ಸಮಸ್ಯೆಯಿಂದ ನರಳುತ್ತಿರುವ ಎಂಎಸ್ ಎಂಇಗಳಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿತ್ತು.

ಅಕ್ಟೋಬರ್ 31, 2020ರೊಳಗೆ ಸಾಲ ಪಡೆಯಬಹುದು

ಅಕ್ಟೋಬರ್ 31, 2020ರೊಳಗೆ ಸಾಲ ಪಡೆಯಬಹುದು

ಅಂದ ಹಾಗೆ, ಸಾಲಕ್ಕೆ ಯಾವುದೇ ಶ್ಯೂರಿಟಿ ಬೇಕಾಗಿರಲಿಲ್ಲ ಮತ್ತು ಅದು ಆಟೋಮೆಟಿಕ್ ಆಗಿತ್ತು. ಅಕ್ಟೋಬರ್ 31, 2020ರೊಳಗೆ ಈ ಸಾಲವನ್ನು ಪಡೆಯಲು ಅವಕಾಶ ಇದೆ. ಆದರೆ ಆ ಸಾಲ ಪಡೆಯಬೇಕಿದ್ದಲ್ಲಿ ಈಗಾಗಲೇ ಆ ವ್ಯಾಪಾರ ಅಥವಾ ಉದ್ಯಮಕ್ಕೆ 25 ಕೋಟಿಯೊಳಗಿನ ಸಾಲ ಇರಬೇಕು. ಇದರಿಂದಾಗಿ ಸಣ್ಣ ವ್ಯಾಪಾರಗಳನ್ನು ದೇಶದಾದ್ಯಂತ ಆರಂಭಿಸಿ, ಎಂಎಸ್ ಎಂಇ ಸಚಿವಾಲಯದ ನೋಂದಣಿ ಪೋರ್ಟಲ್ ನಲ್ಲಿ ಲಾಗ್ ಇನ್ ಆಗಲು ಆರಂಭಿಸಿದರು. ಅದರಲ್ಲಿ ಉದ್ಯೋಗ ಆಧಾರ್ ಎಂಬುದಿದ್ದು, ಸಾಲದ ಮೂಲಕ ನಗದು ಸಿಗಬಹುದು, ಇತರ ಅನುಕೂಲಗಳು ಸಿಗಬಹುದು ಎಂಬುದು ನಿರೀಕ್ಷೆಯಾಗಿತ್ತು. ಆದರೆ ತಜ್ಞರು ಹೇಳುವಂತೆ, ಸಾಲ ಸಿಗುವ ಸಾಧ್ಯತೆ ಕಡಿಮೆ. ಈ ಹೊಸ ಸಾಲವನ್ನು "ಹೆಚ್ಚುವರಿ ಕಾರ್ಯ ನಿರ್ವಹಣೆ ಬಂಡವಾಳ" (ಅಡಿಷನಲ್ ವರ್ಕಿಂಗ್ ಕ್ಯಾಪಿಟಲ್) ಎಂದು ನೀಡಲಾಗುತ್ತದೆ. ಅದು ಈಗಾಗಲೇ ಸಾಲ ಪಡೆದಿರುವಂಥ ಸಂಸ್ಥೆಗಳಾಗಿರಬೇಕು. ನೂರು ಕೋಟಿ ತನಕ ವಹಿವಾಟು ಇರಬೇಕು. 2020ರ ಫೆಬ್ರವರಿ ಕೊನೆಗೆ ಆ ಸಂಸ್ಥೆಯ ಬಾಕಿ ಸಾಲದ ಗರಿಷ್ಠ 20 ಪರ್ಸೆಂಟ್ ನಷ್ಟು ಮೊತ್ತವನ್ನು ಸಾಲವಾಗಿ ನೀಡಲಾಗುತ್ತದೆ ಎನ್ನುತ್ತಾರೆ ಸರ್ಕಾರದ ಹಿರಿಯ ಅಧಿಕಾರಿಗಳು.

ಸಾಲ ಬಾಕಿ ಉಳಿಸಿಕೊಂಡ ಸಂಸ್ಥೆಗಳಷ್ಟೇ ಅರ್ಹ
 

ಸಾಲ ಬಾಕಿ ಉಳಿಸಿಕೊಂಡ ಸಂಸ್ಥೆಗಳಷ್ಟೇ ಅರ್ಹ

ಇದರ ಜತೆಗೆ ಆ ಸಾಲದ ಮೊತ್ತವು ಅರ್ಜಿ ಹಾಕುವ ದಿನಕ್ಕೆ ಕನಿಷ್ಠ ಅರವತ್ತು ದಿನಕ್ಕೆ ಮುಂಚಿತವಾಗಿ ಸಾಲ ಪಡೆದಿರಬೇಕು. ಯಾವುದೇ ಗ್ಯಾರಂಟಿ ಅಥವಾ ಅಡಮಾನದ ಅಗತ್ಯ ಇಲ್ಲ ಎಂದಾಕ್ಷಣ ದೊಡ್ಡ ಮಟ್ಟದಲ್ಲಿ ಪ್ರತಿಸ್ಪಂದನೆ ಬಂದಿದೆ. ಈ ಮೊತ್ತಕ್ಕೆ ನೂರು ಪರ್ಸೆಂಟ್ ನಷ್ಟು ಸರ್ಕಾರವೇ ಗ್ಯಾರಂಟಿ ಆಗಿರುತ್ತದೆ. ಹಾಗಿದ್ದರೆ ಸಾಲಕ್ಕೆ ಅರ್ಹತೆ ಏನು ಎಂಬ ಪ್ರಶ್ನೆ ಬರುತ್ತದೆ. ಸರ್ಕಾರದ ವೆಬ್ ಸೈಟ್ ನಲ್ಲಿ ನೋಂದಣಿ ಮಾಡುವುದಷ್ಟೇ ಅರ್ಹತೆ ಅಲ್ಲ. ಸಾಲ ಬಾಕಿ ಉಳಿಸಿಕೊಂಡ ಸಂಸ್ಥೆಗಳಷ್ಟೇ ಅರ್ಹವಾಗಿ ಇರುತ್ತವೆ. ಈ ವಾರದ ಆರಂಭದಲ್ಲಿ ಸಂಪುಟವು ಎರಡು ಲಕ್ಷದಷ್ಟಿರುವ ಎಂಎಸ್ ಎಂಇಗಳಿಗೆ (ಅವುಗಳು ಎನ್ ಪಿಎ ಒತ್ತಡದಲ್ಲಿರಬೇಕು) 20 ಸಾವಿರ ಕೋಟಿಗೆ ಸಾಲಕ್ಕೆ ಒಪ್ಪಿಗೆ ನೀಡಿತ್ತು. ಇದರ ಅಡಿಯಲ್ಲಿ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಗೆ 4000 ಕೋಟಿ ನೀಡುತ್ತದೆ. ಎಂಎಸ್ ಎಂಇಗಳು ಯಾವುದೇ ಅಡಮಾನ ಅಥವಾ ಮೂರನೇ ವ್ಯಕ್ತಿಯ ಗ್ಯಾರಂಟಿ ಅಗತ್ಯವಿಲ್ಲದೆ ಸುಲಭ ಸಾಲ ಪಡೆಯಬಹುದು. ಈ ಪೂರ್ತಿ ಮೊತ್ತಕ್ಕೆ ಸರ್ಕಾರವೇ ಗ್ಯಾರಂಟಿ ಆಗಿರುತ್ತದೆ.

ಸರ್ಕಾರದಿಂದ ಬಾಕಿ ಬಿಲ್ ಪಡೆಯಲು ನೆರವು

ಸರ್ಕಾರದಿಂದ ಬಾಕಿ ಬಿಲ್ ಪಡೆಯಲು ನೆರವು

ಈ ವಿಭಾಗದಲ್ಲಿ ಬಡ್ಡಿ ದರ ಕಡಿಮೆ ಇದೆ. ಗರಿಷ್ಠ ಎಪ್ಪತ್ತೈದು ಲಕ್ಷದ ತನಕ ಸಾಲ ಸಿಗುತ್ತದೆ. ಆದರೆ ಈಗಾಗಲೇ ನೋಂದಣಿ ಆದ ಎಂಎಸ್ ಎಂಇ ಆಗಿರಬೇಕು. ಅದು ಒತ್ತಡದಲ್ಲಿ ಇದೆ ಎಂಬ ವಿಭಾಗದ ಅಡಿಯಲ್ಲಿ ಬಂದಿರಬೇಕು. ಆ ಕಾರಣಕ್ಕೆ ವ್ಯಾಪಾರದ ಸಾಲ ಮರುಪಾವತಿಸಲು ಸಾಧ್ಯವಾಗದಂಥ ಸ್ಥಿತಿಯಲ್ಲಿ ಇರಬೇಕು ಎನ್ನುತ್ತಾರೆ ಸರ್ಕಾರದ ಅಧಿಕಾರಿಗಳು. ಇನ್ನು ಸ್ಟಾರ್ಟ್ ಅಪ್ ಗಳು ಹಾಗೂ ಹೊಸ ಎಂಎಸ್ ಎಂಇಗಳಿಗೆ ಅನುಕೂಲವೇ ಇಲ್ಲವೆ ಎಂಬ ಪ್ರಶ್ನೆ ಬರುತ್ತದೆ. ಸರ್ಕಾರವು "ಫಂಡ್ ಆಫ್ ಫಂಡ್ಸ್" ಎಂದು 50 ಸಾವಿರ ಕೋಟಿ ಘೋಷಿಸಿದೆ. ಎಂಎಸ್ ಎಂಇಗಳ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹಾಗೂ ಮಾರ್ಕೆಟ್ ನಲ್ಲಿ ಲಿಸ್ಟಿಂಗ್ ಆಗಲು ಇದರಿಂದ ಅನುಕೂಲ ಆಗುತ್ತದೆ. ಎಂಎಸ್ ಎಂಇಗಳಲ್ಲಿ ಹದಿನೈದು ಪರ್ಸೆಂಟ್ ತನಕ ಪಾಲನ್ನು ಸರ್ಕಾರ ಖರೀದಿಸುತ್ತದೆ. ಆ ನಂತರ ಅದು ಲಿಸ್ಟ್ ಆಗುತ್ತದೆ. ಒಮ್ದು ಸಲ ಆ ಸಂಸ್ಥೆಗೆ ಬಲ ಬಂದ ಮೇಲೆ ಸರ್ಕಾರ ಬಂಡವಾಳ ಹಿಂತೆಗೆದುಕೊಳ್ಳುತ್ತದೆ. ಆ ಹಣವನ್ನು ಇನ್ನೊಂದು ಎಂಎಸ್ ಎಂಇಗೆ ನೀಡಲಾಗುತ್ತದೆ. ಇನ್ನು ಎಂಎಸ್ ಎಂಇಗಳಿಗೆ ನೋಂದಣಿ ಮಾಡಿಸಲು, ಸರ್ಕಾರದ ಬಾಕಿ ಇರುವ ಬಿಲ್ ಬೇಗ ಪಡೆಯಲು ಹಾಗೂ ಸರ್ಕಾರದ ಟೆಂಡರ್ ಗಳಿಗೆ ಅರ್ಜಿ ಹಾಕಿಕೊಳ್ಳಲು ಕೆಲವು ನಾನ್ ಪ್ರಾಫಿಟ್ ಸಂಸ್ಥೆಗಳು ನೆರವು ನೀಡುತ್ತವೆ.

English summary

What Is The Eligibility Criteria For MSME's Loan?

Central government announced 3 lakh crore for MSME's loan. But what is the criteria to get loan? Hera is an explainer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X