For Quick Alerts
ALLOW NOTIFICATIONS  
For Daily Alerts

ರುಪಾಯಿ ಮತ್ತೆ ಕುಸಿತ, ಕಣ್ಮುಚ್ಚಿ ಕುಳಿತ ಆರ್ ಬಿಐ

By Mahesh
|

ರುಪಾಯಿ ಮತ್ತೆ ಕುಸಿತ, ಕಣ್ಮುಚ್ಚಿ ಕುಳಿತ ಆರ್ ಬಿಐ
ನವದೆಹಲಿ, ಜೂ.26: ಭಾರತದ ರೂಪಾಯಿ ಮಂಗಳವಾರ ಬೆಳಗ್ಗೆ 9:10ರ ಸುಮಾರಿಗೆ ಕೊಂಚ ಚೇತರಿಕೆ ಕಂಡರೂ ಸಂಜೆ ವೇಳೆಗೆ ಡಾಲರ್ ವಿರುದ್ಧ 56.12 ರು. ದಾಖಲಿಸಿ ಕುಸಿತ ಕಂಡಿದೆ. ಸೋಮವಾರ ಎರಡು ಬಾರಿ 57.01 ರ ಗಡಿಯನ್ನು ದಾಟಿದ್ದ ರೂಪಾಯಿ ನಿನ್ನೆಯ ಕ್ಲೋಸ್ ಗಿಂತ 6 ಪೈಸೆ ಏರಿಕೆ ಮುಂಜಾನೆಯ ಆರಂಭಿಕ ಬೆಳವಣೆಗೆಯಲ್ಲಿ ದಾಖಲಿಸಲ್ಪಟ್ಟಿತ್ತು.

ರುಪಾಯಿ ಮತ್ತು ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಆರ್ ಬಿಐ ಮತ್ತು ಸರಕಾರ ಸೋಮವಾರ ಕೆಲವೊಂದು ಪರಿಹಾರಗಳನ್ನು ಘೋಷಿಸಿದ ಬಳಿಕ ರೂಪಾಯಿ ಶೇ. 1 ಪ್ರಮಾಣದಲ್ಲಿ ಮೇಲುಗೈ ಸಾಧಿಸಿತ್ತು. ಸೋಮವಾರ ಬೆಳಗ್ಗೆ ಸರ್ಕಾರದ ಘೋಷಣೆಯ ನಿರೀಕ್ಷೆಯಿಂದ ರೂಪಾಯಿ ತ್ವರಿತ ಗತಿಯಲ್ಲಿ ಚೇತರಿಕೆ ದಾಖಲಿಸಿತ್ತು.

ಆದರೆ ಸರ್ಕಾರದ ಕಠಿಣ ನಿರ್ಣಯಗಳನ್ನು ನಿರೀಕ್ಷಿಸಿದ್ದ ಮಂದಿಗೆ ಸರ್ಕಾರದ ಘೋಷಣೆಗಳು ಅಷ್ಟೇನೂ ಸಮಾಧಾನ ನೀಡದ ಹಿನ್ನೆಲೆಯಲ್ಲಿ ಅದು ಮತ್ತೆ 57ರ ಗಡಿ ಸಮೀಪದ ದಾಖಲೆ ದಾಖಲಿಸಿತ್ತು. ನಿನ್ನೆ ಡಾಲರ್ ವಿರುದ್ಧ ರುಪಾಯಿಯ ಮೌಲ್ಯ 57.01ರಲ್ಲಿ ಕ್ಲೋಸ್ ಆಗಿತ್ತು. ಅದು ಶುಕ್ರವಾರದ ದಾಖಲೆಗಿಂತ ಕೇವಲ 11 ಪೈಸೆಯಷ್ಟು ಏರಿಕೆಯಾಗಿತ್ತು. ಶುಕ್ರವಾರ ರುಪಾಯಿ ಡಾಲರ್ ವಿರುದ್ಧ 57.12ಕ್ಕೆ ಕ್ಲೋಸ್ ಆಗಿತ್ತು.

ಹೂಡಿಕೆ ಬಗ್ಗೆ ಆರ್ ಬಿಐ ಹೇಳಿಕೆ : ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಬಾಹ್ಯ ವಾಣಿಜ್ಯ ಸಾಲದ ಮಿತಿಯನ್ನು 10 ಬಿಲಿಯ ಡಾಲರ್‌ನಷ್ಟು ಹೆಚ್ಚಿಸಿದೆ.ಇದರ ಜೊತೆಗೆ ಸರ್ಕಾರಿ ಬಾಂಡ್‌ಗಳಲ್ಲಿ ಸಾಗರೋತ್ತರ ಹೂಡಿಕೆಯ ಮಿತಿಯನ್ನು 5 ಬಿಲಿಯನ್ ಡಾಲರ್‌ನಿಂದ 20 ಬಿಲಿಯನ್ ಡಾಲರ್‌ಗೆ ಹೆಚ್ಚಿಸಿದೆ.

ಉತ್ಪಾದನಾ ಹಾಗೂ ಮೂಲಸೌಕರ್ಯ ವಲಯದ ಕಂಪೆನಿಗಳು ರೂಪಾಯಿ ಸಾಲಗಳನ್ನು ಮರುಪಾವತಿಸುವುದಕ್ಕೆ ಅನುಕೂಲವಾಗುವ ಉದ್ದೇಶದಿಂದ ಅವು ಬಾಹ್ಯ ವಾಣಿಜ್ಯ ಸಾಲ (ಇಸಿಬಿ)ವನ್ನು ಪಡೆಯುವುದಕ್ಕೆ ಬೇಕಾದ ವಿದೇಶಿ ವಿನಿಮಯವನ್ನು ಹೊಂದುವುದಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ವಿದೇಶಿ ಸಾಂಸ್ಥಿಕ ಹೂಡಿಕೆದಾರರು, ಭಾರತೀಯ ಕಾರ್ಪೊರೇಟ್ ಬಾಂಡ್‌ಗಳಲ್ಲಿ 20 ಶತಕೋಟಿ ಡಾಲರ್‌ವರೆಗೆ ಹೂಡಿಕೆ ಮಾಡಬಹುದಾಗಿದೆ.

ಇಂಧನ ಬೆಲೆ ವ್ಯತ್ಯಯ? : ಕಳೆದ ತಿಂಗಳು ರುಪಾಯಿ ಮೌಲ್ಯ ಕುಸಿತವಾದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಖರೀದಿ ವೆಚ್ಚ ದುಬಾರಿಯಾಗಿತ್ತು. ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಶೇ 11 ರಷ್ಟು ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಿದ್ದವು.

ಇದರಿಂದ ಜನ ಸಾಮಾನ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ವಿಪಕ್ಷಗಳು ಶುಕ್ರವಾರ(ಜೂ.22)ದಂದು ಜೈಲು ಭರೋ ನಡೆಸಿದ್ದರು. ಈಗ ಮತ್ತೊಮ್ಮೆ ಡಾಲರ್ ಬೆಲೆ ಏರಿಕೆಯಾಗಿರುವುದರಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.ಆರ್ಥಿಕ ಮೂಲಗಳು ಇನ್ನಷ್ಟು ಕುಸಿತ ಕಂಡು ಪರಿಸ್ಥಿತಿ ಬಿಗಡಾಯಿಸುವ ಲಕ್ಷಣಗಳು ತೋರಿದೆ.

English summary

Rupee drops again; RBI measures prove futile | ಪಾತಾಳಕ್ಕಿಳಿದ ರುಪಾಯಿ ದರ| ಡಾಲರ್ ಎದುರು 57 ರು ಗೆ ಇಳಿಕೆ |

The rupee lost ground once again, trading at 56.12 against the dollar, despite a slew of measures announced by the RBI on Monday to prop up the rupee.
Story first published: Tuesday, June 26, 2012, 21:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X