For Quick Alerts
ALLOW NOTIFICATIONS  
For Daily Alerts

ರುಪಾಯಿ ದಾಖಲೆ ಕುಸಿತ, ಡಾಲರ್ ಕುಣಿತ

By Mahesh
|

ಬೆಂಗಳೂರು, ಜೂ.20: ಅಮೆರಿಕದ ಡಾಲರ್ ಎದುರು ರುಪಾಯಿ ಮತ್ತೊಮ್ಮೆ ದಾಖಲೆ ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳಗ್ಗೆ ವಹಿವಾಟು ಆರಂಭದಲ್ಲೇ ಡಾಲರ್ ಎದುರು ರುಪಾಯಿ ಮೌಲ್ಯ ಇಳಿಕೆಯಾಗಿ 59.70ಕ್ಕೆ ಕುಸಿಯಿತು. ಅದರೆ, ಚೇತರಿಕೆ ಕಾಣಿಸಿಕೊಳ್ಳುವ ಲಕ್ಷಣ ಕಂಡು ಬರಲಿಲ್ಲ. ಇದರ ಜೊತೆಗೆ ಯುಎಸ್ ರಿಸರ್ವ್ ಚೇರ್ಮನ್ ಬೆನ್ ಬೆರ್ನಾಂಜೆ ಹೇಳಿಕೆ ಇನ್ನಷ್ಟು ಕಂಗಾಲು ಮೂಡಿಸಿದೆ.

ಡಾಲರ್ ಬೇಡಿಕೆ ಹೆಚ್ಚಾಗಿದ್ದು, ಸಾಗರೋತ್ತರ ಕರೆನ್ಸಿ ಎದುರು ಡಾಲರ್ ಮೌಲ್ಯ ಚೇತರಿಕೆ ಕಂಡಿದ್ದು ರುಪಾಯಿ ಕುಸಿತಕ್ಕೆ ಕಾರಣವಾಯಿತು. ಯುರೋ ಎದುರು ಡಾಲರ್ ಸ್ಥಿರವಾಗಿದ್ದೆ ತಡ ಆಮದುದಾರರು ಡಾಲರ್ ಬೇಡಿಕೆ ಮುಗಿಬಿದ್ದರು ಅಲ್ಲಿಗೆ ರುಪಾಯಿ ಸ್ಥಿತಿ ಅಧೋಗತಿಗೆ ಇಳಿಯಿತು.

ಯುಎಸ್ ರಿಸರ್ವ್ ಚೇರ್ಮನ್ ಬೆರ್ನಾಂಕೆ ಪ್ರಕಾರ ಭಾರತದಲ್ಲಿನ ಈಕ್ವಿಟಿ ಹಾಗೂ ವಿದೇಶಿ ಬಾಂಡ್ ಮಾರಾಟ ಅಧಿಕವಾಗಲಿದೆ. ಡಾಲರ್ ಬೇಡಿಕೆ ಹೀಗೆ ಮುಂದುವರೆಯುವುದರಿಂದ ರುಪಾಯಿ ಮೌಲ್ಯ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ಬುಧವಾರ ದಿನದ ಅಂತ್ಯಕ್ಕೆ ರುಪಾಯಿ ಮೌಲ್ಯ 58.71 ಕ್ಕೆ ಕುಸಿದಿತ್ತು. 60 ರ ಗಡಿ ದಾಟುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಕಳೆದ ಅಕ್ಟೋಬರ್ -ಡಿಸೆಂಬರ್ 2012-13 ಅವಧಿಯಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಅಥವಾ ಜಿಡಿಪಿಯ ಚಾಲ್ತಿ ಖಾತೆ ಕೊರತೆ ಶೇ 6.7 ರಷ್ಟು ಕುಸಿದಿತ್ತು. ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ತಗ್ಗಿಸುವ ಪ್ರಯತ್ನಗಳೂ ನಿರೀಕ್ಷಿತ ಫಲ ನೀಡಿಲ್ಲ.

ವಿತ್ತೀಯಕೊರತೆ ನೀಗಿಸಲು ಚಿನ್ನದ ಆಮದು ಮೇಲೆ ನಿಯಂತ್ರಣ ಸಾಧಿಸಲೇ ಬೇಕಾಗಿದೆ. ವಿತ್ತೀಯ ಕೊರತೆ ಹೆಚ್ಚಿದ್ದಂತೆ ದೇಶದ ವಿದೇಶಿ ವಿನಿಯಮಕ್ಕೆ ಹೊಡೆತ ಬೀಳುತ್ತದೆ. ರುಪಾಯಿ ಮೌಲ್ಯ ವ್ಯತ್ಯಯವಾಗಲಿದೆ ಎಂದು ಚಿದಂಬರಂ ಹೇಳಿದ್ದರು.

ಆದರೆ, ನಂತರ ರುಪಾಯಿ ಮೌಲ್ಯ ಕುಸಿತ, ವಿತ್ತೀಯ ಕೊರತೆ ನೀಗಿಸಲು ಕೆಲವು ಕ್ರಮಗಳನ್ನು ಈಗಾಗಲೆ ತೆಗೆದುಕೊಳ್ಳಲಾಗಿದೆ. ಚಂದ್ರಶೇಖರ್ ಸಮಿತಿ ವರದಿ ಆಧಾರದ ಮೇಲೆ ಸೆಬಿ ನೀಡಿರುವ ಅಗತ್ಯ ಕ್ರಮಗಳನ್ನು ಪಾಲಿಸಲು ಮಾರ್ಗ ಸೂಚಿ ಸಿದ್ದವಾಗಿದೆ. ಅನಿಲ ದರ, ಎಫ್ ಡಿಐ ಮಿತಿ, ಕಲ್ಲಿದಲು ಗೊಂದಲ ಜೂನ್ ಅಂತ್ಯಕ್ಕೆ ಕೊನೆಗೊಳ್ಳಲಿದೆ ಎಂದು ವಿತ್ತ ಸಚಿವ ಚಿದಂಬರಂ ಭರವಸೆ ನೀಡಿದ್ದರು.

ಯುಪಿಎ ಸರ್ಕಾರ ಬೆಲೆ ಏರಿಕೆ ಬಾಂಬ್ ಮತ್ತೆ ಯಾವಾಗ ಸ್ಫೋಟಗೊಳ್ಳುತ್ತದೆ ಎಂಬುದು ಜನ ಸಾಮಾನ್ಯರನ್ನು ಕಾಡುತ್ತಿದೆ. ಪೆಟ್ರೋಲ್, ಡೀಸೆಲ್, ಆಹಾರ, ಚಿನ್ನ, ಕೊನೆಗೆ ಬ್ಯಾಂಕ್ ಸಾಲದ ಮೇಲೆ ರುಪಾಯಿ ಮೌಲ್ಯ ಕುಸಿತ ನೇರ ಪರಿಣಾಮ ಬೀರಲಿದೆ.

ಯುಎಸ್ ಡಾಲರ್ ಎದುರು ರುಪಾಯಿ ಮೌಲ್ಯ 58.96 ಸರ್ವಕಾಲಿಕ ಕುಸಿತ ಕಂಡಿರುವುದರಿಂದ ಮುಂದಿನ ದಿನಗಳಲ್ಲಿ ಎದುರಿಸಬಹುದಾದ ತೊಂದರೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ಓದಿ

English summary

Rupee sinks to 59.70 as Bernanke hints at withdrawal of stimulus | ರುಪಾಯಿ ದಾಖಲೆ ಕುಸಿತ, ಡಾಲರ್ ಕುಣಿತ

The rupee hit a lifetime low today, as global currencies tumbled against the US dollar, following Federal Reserve Chairman Ben Bernanke's comments that asset purchase programme in the US would taper off and come to an end, should the US economic recovery gather momentum.
Story first published: Thursday, June 20, 2013, 12:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X