For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ಷೇರು ನೆಲಕಚ್ಚಲು 4 ಕಾರಣಗಳು?

By Mahesh
|

ಬೆಂಗಳೂರು, ಏ.24: ಇನ್ಫೋಸಿಸ್ ಸಂಸ್ಥೆ ನಾಲ್ಕನೇ ತ್ರೈಮಾಸಿಕ ಫಲಿತಾಂಶದಲ್ಲಿ ನಿವ್ವಳ ಲಾಭ ಗಳಿಸಿದರೂ ನಿರೀಕ್ಷಿತ ಮಟ್ಟ ಮುಟ್ಟಿಲ್ಲ. ಟಿಸಿಎಸ್, ಎಚ್ ಸಿಎಲ್ ಟೆಕ್, ವಿಪ್ರೋನಂತೆ ಇನ್ಫೋಸಿಸ್ ಷೇರುಗಳು ನೆಲಕಚ್ಚುತ್ತಿವೆ.

 

ನಿರೀಕ್ಷೆ ಮಟ್ಟ ಮುಟ್ಟದೆ ನಿರಾಶೆ ಮೂಡಿಸಿರುವ ಇನ್ಫೋಸಿಸ್ ಗೆ 3,097 ಕೋಟಿ ರು ನಿವ್ವಳ ಲಾಭ (ತೆರಿಗೆ ಕಡಿತ ನಂತರ) ಕಳೆದ ವರ್ಷ ಇದೇ ಅವಧಿಗೆ ಬಂದಿದ್ದ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 3.5 ರಷ್ಟುಮಾತ್ರ ಪ್ರಗತಿ ಸಾಧಿಸಿದೆ. ಅದರೆ, ಮಾರುಕಟ್ಟೆ ತಜ್ಞರ ನಿರೀಕ್ಷೆ ಮಟ್ಟ ಮುಟ್ಟಲಾಗಿಲ್ಲ.

ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟಾರೆ 13,411 ಕೋಟಿ ರು ಆದಾಯ ಸಿಕ್ಕಿದೆ. ಇದೇ ಅವಧಿಗೆ ಹೋಲಿಸಿದರೆ ಶೇ 4.2ರಷ್ಟು ಪ್ರಗತಿ ಕಂಡಿದೆ. [ಇನ್ಫೋಸಿಸ್ Q4: ನಿರೀಕ್ಷೆ ಮಟ್ಟ ಮುಟ್ಟದೆ ನಿರಾಶೆ]

ಬಿಎಸ್ಇಯಲ್ಲಿ ಶುಕ್ರವಾರ 2,131 ರು ನಂತೆ ಆರಂಭಗೊಂಡ ಇನ್ಫೋಸಿಸ್ ಷೇರುಗಳು 2,081 ರು ನಿಂದ 2,150 ರು ನಂತೆ ಏರಿಳಿತ ಕಂಡಿದೆ. ಒಟ್ಟಾರೆ ಶೇ 5ರಷ್ಟು ಕುಸಿತ ಕಂಡು ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿತು. ಷೇರುಪೇಟೆ ಏರಿಳಿತ ಕಂಡಿದ್ದೇಕೆ? ಮುಂದೆ ಓದಿ...

ಆದಾಯ ನಿರೀಕ್ಷಿತ ಮಟ್ಟ ಮುಟ್ಟಿಲ್ಲ

ಆದಾಯ ನಿರೀಕ್ಷಿತ ಮಟ್ಟ ಮುಟ್ಟಿಲ್ಲ

ಇನ್ಫೋಸಿಸ್ Q4 ಡಾಲರ್ ಆದಾಯ 2159 ಮಿಲಿಯನ್ ಡಾಲರ್ ನಷ್ಟಿದ್ದು ನಿರೀಕ್ಷಿತ ಮಟ್ಟ ಮುಟ್ಟಿಲ್ಲ. ನಿರಂತರ ಕರೆನ್ಸಿ ದರ(constant currency terms) 13,411 ರು ನಷ್ಟಿದ್ದು ಇದು ಕೂಡಾ ನಿರೀಕ್ಷಿತ ಮಟ್ಟವಾದ 13,800 ರು ಗಿಂತ ಕಡಿಮೆ ಇದೆ.

ನಿವ್ವಳ ಲಾಭ ಕೂಡಾ ನಿರೀಕ್ಷೆ ಗುರಿ ತಲುಪಿಲ್ಲ

ನಿವ್ವಳ ಲಾಭ ಕೂಡಾ ನಿರೀಕ್ಷೆ ಗುರಿ ತಲುಪಿಲ್ಲ

ನಿವ್ವಳ ಲಾಭ ಕೂಡಾ ಮಾರುಕಟ್ಟೆ ತಜ್ಞರು ನೀಡಿದ್ದ ನಿರೀಕ್ಷೆ ಗುರಿ ತಲುಪಿಲ್ಲ. 3,097 ಕೋಟಿ ರು ನಷ್ಟಿದ್ದು, ವಿಶ್ಲೇಷಕರು 3,300 ಕೋಟಿ ರು ನಿರೀಕ್ಷೆಯಿತ್ತು.

ಷೇರುಗಳ ಲೆಕ್ಕಾಚಾರ ಉಲ್ಟಾ
 

ಷೇರುಗಳ ಲೆಕ್ಕಾಚಾರ ಉಲ್ಟಾ

ಇನ್ಫೋಸಿಸ್ ತ್ರೈಮಾಸಿಕ ಫಲಿತಾಂಶದ ಆಧಾರದ ಮೇಲೆ ಷೇರುಗಳ ಲೆಕ್ಕಾಚಾರ ಮಾಡುವುದಾಗಿ ಈ ಮುಂಚಿತವಾಗಿ ಅನೇಕ ಆರ್ಥಿಕ ಸಂಸ್ಥೆಗಳು ಘೋಷಿಸಿದ್ದವು. ಷೇರುಗಳ ಕೊಳ್ಳುವಿಕೆಗಿಂತ ಮಾರಾಟ ಅಧಿಕವಾಗುವ ಲಕ್ಷಣಗಳು ಕಂಡು ಬಂದಿದೆ.

MAT ಮೇಲೂ ಪರಿಣಾಮ

MAT ಮೇಲೂ ಪರಿಣಾಮ

ಇನ್ಫೋಸಿಸ್ ಫಲಿತಾಂಶಕ್ಕೂ fii ಪಾವತಿಸಬೇಕಿರುವ MAT(Minimum Alternate Tax ) ಗೂ ನೇರ ಸಂಬಂಧವಿಲ್ಲದಿದ್ದರೂ ಪರೋಕ್ಷವಾಗಿ ಪರಿಣಾಮ ಬೀರಲಿದೆ. ಇನ್ಫೋಸಿಸ್ ಆರ್ಥಿಕ ಆದಾಯ ಮಾರ್ಗದರ್ಶಿ ಶೇ 10 ರಿಂದ 12ರಷ್ಟಿದೆ ಆದರೆ, ನಾಸ್ ಕಾಂ ಮಾರ್ಗದರ್ಶಿ ಶೇ 12-14ರಷ್ಟಿದೆ.

English summary

4 Reasons Why Infosys Stock Crashed 6% After Q4 Numbers

Infosys disappointed the street with its quarterly numbers just like other peers including TCS, HCL Tech and Wipro.Stock markets had hoped that Infosys would buck the trend, but that did not happen. Here are 4 reasons why the stock crashed 5% in trade today(Apr.24).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X