For Quick Alerts
ALLOW NOTIFICATIONS  
For Daily Alerts

ಗೃಹ ಸಾಲದ ಕಂತು ತುಂಬದಿದ್ದರೆ ಪರಿಣಾಮ ಏನು?

|

ಗೃಹ ಸಾಲಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ. ನಿಮ್ಮ ಜೀವವದಲ್ಲಿ ಸುಂದರ ಮನೆಯ ನಿರ್ಮಾಣ ಕನಸನ್ನು ಸಾಕಾರ ಮಾಡಿಕೊಳ್ಳಲು ಗೃಹ ಸಾಲವನ್ನು ತೆಗೆದುಕೊಳ್ಳುವ ಸಂದರ್ಭ ಒದಗಿ ಬರಬಹುದು. ಸಾಲವನ್ನೇನೋ ಮಾಡಿಬಿಡುತ್ತೀರಿ, ಆದರೆ ನಂತರ ಕಂತು ತುಂಬುವುದನ್ನು ಹೊಂದಾಣಿಕೆ ಮಾಡಿಕೊಳ್ಳಬೇಕಲ್ಲವೇ?

ಕೆಲವೊಂದು ಸಂದರ್ಭ ಗೃಹ ಸಾಲ ನಿಮ್ಮನ್ನು ಆತಂಕದ ಮಡುವಿಗೆ ದೂಡುವ ಸಂದರ್ಭವೂ ಇದೆ. ಇಎಂಐ ತುಂಬಲು ಸಾಧ್ಯವಿಲ್ಲವಾದಾಗ ಚಡಪಡಿಕೆ ಆರಂಭವಾಗುತ್ತದೆ.

ಗೃಹ ಸಾಲದ ಕಂತು ತುಂಬದಿದ್ದರೆ ಪರಿಣಾಮ ಏನು?

 

10, 15 ಅಥವಾ 20 ವರ್ಷದ ಅವಧಿಗೆ ಸಾಮಲ ತೆಗೆದುಕೊಂಡಿರುತ್ತೀರಿ, ಮಧ್ಯದಲ್ಲೇ ಯಾವುದೋ ಕಾರಣದಿಂದ ಕಂತು ತುಂಬಲು ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭ ಯಾವ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಅರಿತುಕೊಂಡಿರಬೇಕಾಗುತ್ತದೆ. [ಯಾವ ಯಾವ ರೀತಿ ಗೃಹಸಾಲ ಸಿಗುತ್ತೆ?]

* ನಿಮ್ಮ ಸಿಐಬಿಐಎಲ್ ಸ್ಕೋರ್ ಮೇಲೆ ಪರಿಣಾಮ

ಗೃಹ ಸಾಲಗಳು ನಿಮ್ಮ ಸಿಐಬಿಐಎಲ್ ಕ್ರೆಡಿಟ್ ಸ್ಕೋರ್ ನ ಮೇಲೆ ನೇರ ಪರಿಣಾಮ ಬೀರುತ್ತದೆ. ಅಲ್ಪಾವಧಿಯ ಕೆಲ ಕಂತುಗಳನ್ನು ತುಂಬಲು ವಿಫಲರಾದರೆ ನೀವು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ. ಅವಧಿಗೆ ಮುನ್ನವೇ ಇಎಂಐ ತುಂಬುವುದು ಉತ್ತಮ.

* ದಂಡ

ಕಂತು ತುಂಬುವುದನ್ನು ನಿಲ್ಲಿಸಿ ಸುಮ್ಮನೆ ಕುಳಿತಿದ್ದರೆ ಬಡ್ಡಿ ಅದರಷ್ಟಕ್ಕೆ ಅದು ಏರುತ್ತಲೇ ಇರುತ್ತದೆ, ಒಂದು ವೇಳೆ ನಿಮಗೆ ಹಣ ತುಂಬಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದರೆ ಬ್ಯಾಂಕ್ ನ್ನು ಸಂಪರ್ಕ ಮಾಡಿ ವಿನಂತಿ ಮಾಡಿಕೊಳ್ಳುವುದು ಉತ್ತಮ. ಆಗ ಕೆಲ ಪ್ರಮಾಣದ ರಿಯಾಯಿತಿ ಅಥವಾ ಅವಧಿ ದೊರೆಯಬಹುದು.

ಸಾಲ ಪಡೆಯಲು ಸಮಸ್ಯೆ

ನಿಮ್ಮ ಖಾತೆಯ ಇತಿಹಾಸ ನಿಮ್ಮ ವ್ಯವಹಾರದ ಆಗು ಹೋಗುಗಳನ್ನು ತಿಳಿಸುತ್ತದೆ. ಮರುಪಾವತಿಯ ದಿನಾಂಕಗಳು ಸರಿಯಾಗಿರದಿದ್ದರೆ ಮುಂದೆ ಬೇರೆಡೆಯಲ್ಲೂ ನಿಮಗೆ ಸಾಲ ಸಿಗದೇ ಹೋಗಬಹುದು.[ಅತಿ ಹೆಚ್ಚು ಗೃಹ ಸಾಲ ಪಡೆಯಲು ಏನು ಮಾಡಬೇಕು?]

ಕೊನೆ ಮಾತು

ಯಾವ ಪ್ರಮಾಣದಲ್ಲಿ ನೀವು ಸಾಲ ಮರುಪಾವತಿ ಮಾಡುತ್ತಿದ್ದೀರಿ ಎಂಬ ಆಧಾರದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ನಿಗದಿಯಾಗುತ್ತದೆ. ಯಾವುದು ಕಳಪೆ ಸ್ಕೋರ್ ಎಂಬುದನ್ನು ಮೇಲು ನೋಟಕ್ಕೆ ಹೇಳಲು ಸಾಧ್ಯವಿಲ್ಲವಾದರೂ ಉತ್ತಮ ಕ್ರಡಿಟ್ ಹಿಸ್ಟರಿ ಕಾಪಾಡಿಕೊಳ್ಳುವತ್ತ ನಿಮ್ಮ ಗಮನ ಇರಬೇಕಾದದ್ದು ಮುಖ್ಯ, ನಿಗದಿತ ಆದಾಯದ ಮೂಲವನ್ನು ನೆಚ್ಚಿಕೊಂಡೇ ದೊಡ್ಡ ಪ್ರಮಾಣದ ಸಾಲ ತೆಗೆದುಕೊಳ್ಳಬೇಕು.(ಗುಡ್ ರಿಟರ್ನ್ಸ್.ಇನ್)

English summary

What Happens When You Default On A Home Loan EMI?

Home Loan is one of the most important set of loans that could have a significant impact on your Cibil Credit Score. It is also one of the most painful loans to pay as the EMI is high and the loan has to be paid for several years at a stretch.
Story first published: Tuesday, August 11, 2015, 13:15 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more