For Quick Alerts
ALLOW NOTIFICATIONS  
For Daily Alerts

‌ಷೇರು ಮಾರುಕಟ್ಟೆ ಸಾವಿರ ಅಂಕ ಕುಸಿತಕ್ಕೆ 5 ಕಾರಣಗಳು

|

ಮುಂಬೈ ಮಾರುಕಟ್ಟೆ ಸೋಮವಾರ ಅಂತಿಮವಾಗಿ 1624 ಅಂಕಗಳ ಇಳಿಕೆ ಕಂಡು ತನ್ನ ವಹಿವಾಟು ಮುಗಿಸಿದೆ. ಚೀನಾ ಮಾರುಕಟ್ಟೆಯಲ್ಲಿನ ಬದಲಾವಣೆ ಕುಸಿತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುವ ಸತ್ಯವಾದರೂ ಘಟನಾವಳಿಗಳನ್ನು ವಿಶ್ಲೇಷಣೆ ಮಾಡಿದಾಗ ಅನೇಕ ಅಂಶಗಳು ಸಿಗುತ್ತವೆ . ಅಸಲಿ ಕತೆ ಬೇರೆಯೇ ಇದೆ.

 

ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕ ವ್ಯವಸ್ಥೆಯಲ್ಲಿ ತೆಗೆದುಕೊಂಡ ಬದಲಾವಣೆಗಳು. ಮಿಡ್ ಕ್ಯಾಪ್ ಷೇರುಗಳಲ್ಲಾದ ಸ್ಥಿತ್ಯಂತರ ಎಲ್ಲವೂ ಷೇರು ಕುಸಿಯಲು ಒಂದೆಲ್ಲಾ ಒಂದು ರೀತಿಯಲ್ಲಿ ಕಾರಣವಾಯಿತು. ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್, ಹಣಕಾಸು ಸಚಿವ ಅರುಣ್ ಜೇಟ್ಲಿ ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.[ವಿಲ್ ನಲ್ಲಿ ಸೇರಿಸಲೇಬೇಕಾದ 7 ಅಂಶಗಳು ಯಾವವು?]

ಆದರೂ ಮಾರುಕಟ್ಟೆ ಏಕಾಏಕಿ ಈ ಪ್ರಮಾಣದ ಕುಸಿತ ಕಾಣಲು ಕಾರಣವೇನು ಎಂಬುದನ್ನು ಹುಡುಕಿಕೊಂಡು ಹೋದಾಗ ಅನೇಕ ಅಂಶಗಳು ಎದುರಾಗುತ್ತವೆ. ಅದೆಲ್ಲದರ ಮೇಲೆ ಒಂದು ನೋಟ ಇಲ್ಲಿದೆ. (ಗುಡ್ ರಿಟರ್ನ್ಸ,ಇನ್)

ಹೆಚ್ಚಿನ ಬೆಲೆ ಕಟ್ಟಿದರು

ಹೆಚ್ಚಿನ ಬೆಲೆ ಕಟ್ಟಿದರು

ನಿರ್ದಿಷ್ಟ ಮುಖಬೆಲೆಯ ಷೇರೊಂದು 18 ರಿಂದ 20 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿತ್ತು. ಹಣ ಮಾಡುವ ತಂತ್ರಗಾರಿಕೆ ಹಿನ್ನೆಲೆಯಲ್ಲಿ ಕಡಿಮೆ ಮುಖಬೆಲೆಗೆ ಖರೀದಿಸಿ ಹೆಚ್ಚಿನದಕ್ಕೆ ಮಾರಾಟ ಮಾಡುವ ಸಮುದಾಯವೇ ಹುಟ್ಟಿಕೊಂಡಿತ್ತು,. ವಾರಕ್ಕಿಂತ ಹೆಚ್ಚಿನ ಕಾಲ ಯಾರೂ ಷೇರು ಇಟ್ಟುಕೊಳ್ಳುತ್ತಿರಲಿಲ್ಲ.

ಸುಳ್ಳಾದ ಮೌಲ್ಯ

ಸುಳ್ಳಾದ ಮೌಲ್ಯ

ಒಬ್ಬರ ಕೈಯಿಂದ ಒಬ್ಬರಿಗೆ ಸಂಚರಿಸುತ್ತ ಷೇರಿನ ಬೆಲೆ ಹೆಚ್ಚಾಯಿತೇ ವಿನಃ ಸಂಬಂಧಿಸಿದ ಕಂಪನಿ ಗಳಿಸಿಕೊಂಡಿದ್ದು ಅಷ್ಟಕಷ್ಟೆ. ಕಂಪನಿಗಳ ವರದಿಗಳನ್ನು ವಿಶ್ಲೇಷಣೆ ಮಾಡಿದರೆ ಈ ಅಂಶ ಕಾಣಸಿಗುತ್ತದೆ.

ಕಳಪೆ ತ್ರೈಮಾಸಿಕ ವರದಿಗಳು
 

ಕಳಪೆ ತ್ರೈಮಾಸಿಕ ವರದಿಗಳು

ಹಲವಾರು ಪ್ರಮುಖ ಕಂಪನಿಗಳಿ ಕಳೆದ ಎರಡು ತ್ರೈಮಾಸಿಕ ವರದಿಗಳು ಕಳಪೆಯಾಗಿದ್ದವು. ಎಸ್ ಬಿಐ, ಇನ್ಫೋಸಿಸ್ ನಂತವುಗಳೇ ನಿರೀಕ್ಷಿತ ಸಾಧನೆ ಮಾಡಲು ಒದ್ದಾಡಿದ್ದರು.

ಚೀನಾ ಒಂದು ನೆಪ ಅಷ್ಟೆ

ಚೀನಾ ಒಂದು ನೆಪ ಅಷ್ಟೆ

ಚೀನಾದಲ್ಲಿನ ಆರ್ಥಿಕ ಕುಸಿತ ಭಾರತದ ಮಾರುಕಟ್ಟೆ ಕುಸಿಯಲು ನೆಪವಾಯಿತು ಅಷ್ಟೆ. ಒಂದು ಹಂತಕ್ಕೆ ತಲುಪಿದ್ದ ಗೊಂದಲಗಳು ಸೋಮವಾರ ಆಸ್ಫೋಟಗೊಂಡವು ಎಂದು ಹೇಳಬಹುದು.

ಅಂತಾರಾ‌ಷ್ಟ್ರೀಯ ಮಾರುಕಟ್ಟೆ

ಅಂತಾರಾ‌ಷ್ಟ್ರೀಯ ಮಾರುಕಟ್ಟೆ

ಅಂತಾರಾ‌ಷ್ಟ್ರೀಯ ಮಾರುಕಟ್ಟೆಯಲ್ಲಿ ಬದಲಾದ ಲಿಕ್ವಿಡಿಟಿ ಮೌಲ್ಯ ಜನರಿಗೆ ತಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಿದರೆ ಒಳಿತು ಎಂಬ ಗೊಂದಲ ಹುಟ್ಟುಹಾಕಿತು. ದೇಶಿಯ ಮಾರುಕಟ್ಟೆಗಿಂತ ಅಂತಾರಾ‌ಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂಬ ಮನೋಭಾವವೂ ಎದುರಾಯಿತು.

ಕೊನೆ ಮಾತು

ಕೊನೆ ಮಾತು

ಮಾರುಕಟ್ಟೆಯಲ್ಲಿನ ಏಕಾಏಕಿ ಕುಸಿತ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ. ಈಗ ಹೂಡಿಕೆ ಮಾಡಲು ಮುಂದಾಗುವ ಬದಲು ಕಾದು ನೋಡುವ ತಂತ್ರ ಒಳ್ಳೆಯದು. ಯಾವ ಕಾರಣಕ್ಕೂ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ.

English summary

China Just An Excuse; 5 Real Reasons Why The Sensex Fell 1624 Points

For the last one and half year since the Narendra Modi government took charge there was complete over exuberance on the economic front and hence in shares. Mid cap stocks went berserk and their price to earnings multiples surpassed those of large caps. Pharma shares had astronomical price to earnings multiple, while FMCG shares were ridiculously high. Any company that showed a slight growth in shares, saw its share price go ballistic.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X