For Quick Alerts
ALLOW NOTIFICATIONS  
For Daily Alerts

ಬ್ಯಾಂಕುಗಳಿಂದ ಬಡ್ಡಿದರ ಇಳಿಕೆ, ಸಾಲ ಮಾಡಿ ಮನೆ ಕೊಳ್ಳಿ

By Mahesh
|

ಬೆಂಗಳೂರು, ಅ.08: ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಎಚ್ ಡಿಎಫ್ ಸಿ ಸೇರಿದಂತೆ ಹಲವು ಬ್ಯಾಂಕುಗಳು ನಿರೀಕ್ಷೆಯಂತೆ ಬಡ್ಡಿದರ ಇಳಿಕೆ ಸಮರಕ್ಕೆ ಕೈಜೋಡಿಸಿವೆ. ಆರ್ ಬಿಐ ನೀತಿ ಪ್ರಕಟವಾದ ಬೆನ್ನಲ್ಲೇ ಈ ಎಲ್ಲಾ ಬ್ಯಾಂಕುಗಳು ಮೂಲಾಂಶದ ಶೇ 0.25ರಷ್ಟು ಇಳಿಕೆ ಘೋಷಿಸಿದ್ದು, ಗೃಹ, ವಾಹನ ಹಾಗೂ ಇನ್ನಿತರ ಸಾಲದ ಇಎಂಐ ಹಾಗೂ ಬಡ್ಡಿದರ ಕಡಿತಗೊಳ್ಳಲಿದ್ದು ಗ್ರಾಹಕರಿಗೆ ಸಂತಸದ ಸಮಯ ಮೊದಲಾಗಿದೆ.

 

ಮಹಿಳಾ ಹಾಗೂ ಪುರುಷ ಗ್ರಾಹಕರಿಗೆ ಪ್ರತ್ಯೇಕವಾದ ಬಡ್ಡಿದರವನ್ನು ಎಚ್ ಡಿಎಫ್ ಸಿ ನೀಡುತ್ತಿದೆ. ಮನೆ ಸಾಲದ ಬಡ್ಡಿ ದರ ಹೊಸ ಗ್ರಾಹಕರಿಗೆ ಶೇ 9.65ರಂತೆ ಸಿಗುತ್ತಿದೆ. ಮಹಿಳಾ ಗ್ರಾಹಕರಿಗೆ ಶೇ 9.60ರ ಬಡ್ಡಿದರ ವಿಧಿಸಲಾಗಿದೆ. ಇದಕ್ಕೂ ಮುನ್ನ ಶೇ 9.9 ಹಾಗೂ ಮಹಿಳೆಯರಿಗೆ ಶೇ 9.85ರಷ್ಟು ಬಡ್ಡಿದರ ಇತ್ತು.[ಎಸ್ ಬಿಐನಿಂದ ಬಡ್ಡಿದರ ಕಡಿತ, ಸಾಲ ಮಾಡಿ ತುಪ್ಪ ತಿನ್ನಿ!]

 

ಇತ್ತೀಚೆಗೆ ನಾಲ್ಕನೇ ದ್ವೈಮಾಸಿಕ ಆರ್ಥಿಕ ನೀತಿ ಪ್ರಕಟಿಸಿದ್ದ ಆರ್ ಬಿಐ ಕಡಿಮೆ ಬಡ್ಡಿದರ ಇಳಿಕೆ ಅಕ್ಟೋಬರ್ 07ರಿಂದಲೇ ಜಾರಿಗೆ ಬಂದಿದೆ.

ಬ್ಯಾಂಕುಗಳಿಂದ ಬಡ್ಡಿದರ ಇಳಿಕೆ, ಸಾಲ ಮಾಡಿ ಮನೆ ಕೊಳ್ಳಿ

* ಕೆನರಾ ಬ್ಯಾಂಕ್ ಕೂಡಾ ಮೂಲಾಂಶದ ಶೇ 25ರಷ್ಟು ಇಳಿಕೆ ಘೋಷಿಸಿದ್ದು, ಶೇ 9.90ರಿಂದ ಶೇ 9.65ಕ್ಕೆ ಬಡ್ಡಿದರ ಇಳಿಕೆಗೊಂಡಿದೆ.
* ಕಾರ್ಪೋರೇಷನ್ ಬ್ಯಾಂಕ್ ಕೂಡಾ ಬಡ್ಡಿದರ ಪರಿಷ್ಕರಣೆ ಮಾಡಿದ್ದು ಶೇ 9.9 ರಿಂದ ಶೇ 9.7ಕ್ಕೆ ಇಳಿಕೆ ಮಾಡಲಾಗಿದ್ದು,ಅಕ್ಟೋಬರ್ 08ರಿಂದ ಜಾರಿಗೆ ಬರಲಿದೆ.[ರೆಪೋ 50 ಮೂಲಾಂಶ ದರ ಕಡಿತ: ಬಡ್ಡಿದರ ಇಳಿಕೆ ಕಾಲವಯ್ಯ]
* ಮೂಲಸೌಕರ್ಯ ಆರ್ಥಿಕ ಸಂಸ್ಥೆ ಐಐಎಫ್ ಸಿಎಲ್ ಕೂಡಾ ಸಾಲದ ಮೇಲಿನ ಬಡ್ಡಿದರವನ್ನು ಶೇ 9.9 ರಿಂದ ಶೇ 9.7ಕ್ಕೆ ಇಳಿಕೆ ಮಾಡಿದೆ.
* ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶೇ 10ರಿಂದ ಶೇ 9.9ಕ್ಕೆ ಇಳಿಕೆ ಮಾಡಿದ್ದು ಸೆಪ್ಟೆಂಬರ್ 21ರಿಂದಲೇ ಜಾರಿಯಲ್ಲಿದೆ.

* ಉಳಿದಂತೆ ಎಸ್ ಬಿಐ, ಐಸಿಐಸಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಆಕ್ಸಿಸ್ ಬ್ಯಾಂಕ್ ಕೂಡಾ ಬಡ್ಡಿದರ ಇಳಿಕೆಯನ್ನು ಘೋಷಿಸಿವೆ.

BanksBase Rate CutPresent Rate
Axis Bank0.35 per cent9.50 per cent
State Bank of India0.40 per cent9.30 per cent
Punjab National Bank0.40 per cent9.60 per cent
Bank of Baroda0.25 per cent9.60 per cent
Oriental Bank of Commerce0.20 per cent9.70 per cent
Bank of India0.25 per cent9.70 per cent
Andhra Bank0.25 per cent9.75 per cent
IDBI Bank0.25 per cent9.75 per cent
Punjab and Sind Bank0.25 per cent9.75 per cent

English summary

HDFC, Canara Bank And Others Cut Lending Rate

Country's largest mortgage lender HDFC and four other lenders, including Canara Bank and StanChart, cut their base rates by up to 0.25 per cent, a move that will make home, auto and other loans cheaper.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X